ಮಸ್ಕಿ ರೈತ ಸಂಪರ್ಕ ಕೇಂದ್ರದ ಸಮಸ್ಯೆಗಳ ಪರಿಹಾರಕ್ಕೆ ರೈತ ಸಂಘ ಸಹಾಯಕ ಆಯುಕ್ತರಿಗೆ ಮನವಿ
ಮಸ್ಕಿ : ಮಸ್ಕಿ ತಾಲೂಕ ರೈತ ಸಂಪರ್ಕ ಕೇಂದ್ರ ವಿವಿಧ ಸಮಸ್ಯೆಗಳ ಪರಿಹರಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಾನ್ಯ ಸಹಾಯಕ ಆಯುಕ್ತರು ಕಾರ್ಯಾಲಯ ಲಿಂಗಸಗೂರು ಇವರಿಗೆ ತಾಲೂಕ ಅಧ್ಯಕ್ಷ ವಿಜಯ ಬಡಿಗೇರ ಮನವಿಯನ್ನು ಸಲ್ಲಿಸಲಾಯಿತು.
ನಂತರ ಮಾತನಾಡಿದ ಅವರು ಲಿಂಗಸೂರು ತಾಲೂಕಿನಲ್ಲಿ ಬಹುತೇಕ ಗೊಬ್ಬರದ ಅಂಗಡಿಗಲ್ಲಿ ರೈತರಿಗೆ ಗೋಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಮಸ್ಕಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು ಮೂರು ವಾರ ಕಳೆದರೂ ವಿವಿಧ ಬೆಳೆಗೆ ಸಮಯಕ್ಕೆ ಔಷಧಿ ಇಲ್ಲದ ಕಾರಣ ಬೇಗನೆ ಔಷಧಿಯನ್ನು ತರಿಸಿಕೊಡಿ ಎಂದು ರೈತರು ಮೇಲಾಧಿಕಾರಿಗಳಿಗೆ ಅಧಿಕಾರಿಗಳಿಗೆ ಫೋನ್ ಕರೆ ಮಾಡಿದರೆ ಹಾರಿಕೆ ಉತ್ತರವನ್ನು ಕೊಡುತ್ತಿದ್ದಾರೆ ಅಂತವರನ್ನು ಕೂಡಲೇ ಅಮಾನತ್ತು ಮಾಡಬೇಕು.
ತಾಲೂಕಿಗೆ ಕೃಷಿ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಒಂದು ವಾರದೊಳಗೆ ನೇಮಿಸಿದೆ ಹೋದರೆ ನಾವುಗಳು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು
ಮಸ್ಕಿ ರೈತ ಸಂಪರ್ಕ ಕೇಂದ್ರದ ಮುಂದೆ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಮಹಾದೇವಯ್ಯ ತಾತನವರು, ಅವಮಲ್ಲಿನಾಥ ಆಶ್ರಮ, ಲಿಂಗಸೂರು,ಮಲ್ಲನಗೌಡ ಪಾಟೀಲ್, ರಾಂಪೂರು, ರಾಜ್ಯ ಉಪಾಧ್ಯಕ್ಷ,ಅಮರೇಶ ಸರ್ಕಾರ, ತಾಲೂಕ ಅಧ್ಯಕ್ಷರು, ಲಿಂಗಸೂರು ಡಾ.ಚಂದರಶೇಖರ ಸರ್ಜಾಪೂರು, ಮೌನೇಶ ಮಸ್ಕಿ,ಬಸನಗೌಡ ಚಿಕ್ಕಹೆಸರೂರು,ವೀರೆಶಪ್ಪ ಚಿಕ್ಕಹೆಸರೂರು,ನಿಂಗಪ್ಪ,ಅನಮಪ್ಪ ಚಂದ್ರಶೇಖರ ಗೋರೆಬಾಳ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ