ಹಿರೇನಗನೂರು ಪ್ರೌಢಶಾಲೆಯಲ್ಲಿ ವಿಭಿನ್ನ ರೀತಿಯಲ್ಲಿ ಶಿಕ್ಷಕರ ದಿನಾಚರಣೆ.
ಹಟ್ಟಿ ಚಿನ್ನದ ಗಣಿ;ಪಟ್ಟಣದ ಸಮೀಪದ ಹಿರೇನಗನೂರು ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಬಹಳ ವಿಭಿನ್ನವಾಗಿ ಶಿಕ್ಷಕರ ದಿನಾಚರಣೆಯನ್ನು. ಆರ್ ಟಿ ವಿ ಕನ್ನಡ ನ್ಯೂಸ್. ವ್ಯವಸ್ಥಾಪಕರಾದ ಶ್ರೀನಿವಾಸ್ ಮಧುಶ್ರೀ ಸಮಾಜ ಸೇವಕರಾದ ಮೊನುದ್ದೀನ್ ಬೂದಿನಾಳ. ಪತ್ರಕರ್ತರಾದ ವಿಘ್ನೇಶ್ ನಗನೂರು. ಯೋಗಪ್ಪ ದೊಡ್ಮನಿ ಇವರ ನೇತೃತ್ವದಲ್ಲಿ. ಪ್ರೌಢಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಸೇರಿ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಕೇಕ್ ಕತ್ತರಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಹಾಗೂ ಶಾಲಾ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಕೋರಿದರು.ನಂತರ ಆರ್ ಟಿ ವಿ ಚಾನೆಲ್ ವ್ಯವಸ್ಥಾಪಕರು ಮಧುಶ್ರೀ ಹಾಗೂ ಹಾಗೂ ಮೌನದ್ದಿನ್ ಬೂದಿನಾಳ ಇವರಿಂದ ಮುಖ್ಯ ಗುರುಗಳಾದ ವಿಜಯಲಕ್ಷ್ಮಿ ಹಿರೇಮಠ್ ಹಾಗೂ ರಾಘವೇಂದ್ರ ಶಿಕ್ಷಕರಿಗೆ ಸನ್ಮಾನಿಸಿ ಗೌರವ ನೆನಪಿನ ಕಾಣಿಕೆ ಕೊಡಲಾಯಿತು.ನಂತರ ಎಲ್ಲಾ ಸಹ ಶಿಕ್ಷಕರಿಗೆ ಮತ್ತು ಆನ್ವರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶಂಕ್ರಪ್ಪ ಸಕ್ರಿ ಸಾರ್ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು. ಅಂತರ ಕಾರ್ಯಕ್ರಮ ಉದ್ದೇಶಿಸಿ ಮುಖ್ಯ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಹಾಗೂ ಶಿಕ್ಷಣ ಪ್ರೇಮಿಗಳಾದ ಬಸವರಾಜಪ್ಪ ಕುರುಗೋಡು ಶಿಕ್ಷಕರ ದಿನಾಚರಣೆ ಕುರಿತು ಮಾಡಿದರು.
ಪ್ರತಿಯೊಬ್ಬರ ಜೀವನವನ್ನು ರೂಪಿಸುವಲ್ಲಿ ಪರಿವರ್ತಿಸುವುದರಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ.ಅಕ್ಷರ ಕಲಿಸುವ ಗುರುವನ್ನು ಗುರುತಿಸಿ ಗೌರವ ಸಲ್ಲಿಸುವ ದಿನವಿದು. ಅಪ್ಪ ಅಮ್ಮನಾದವರು. ಮನುಷ್ಯನನ್ನು ಹೆತ್ತು ಸಾಕಿ ಸಲಹಿದರೆ.ಆ ವ್ಯಕ್ತಿ ಸಮಾಜದಲ್ಲಿ ಸಭ್ಯ ನಡೆಯುಳ್ಳ ವ್ಯಕ್ತಿಯಾಗಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ. ಅಲ್ಲದೆ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವಲ್ಲಿ ಉನ್ನತ ಸ್ಥಾನಕ್ಕೆ ಎರುವಲ್ಲಿ ಹೆಚ್ಚಿನ ಪಾಲು ಗುರುಗಳದ್ದು.ಇಂಥ ಕಾರ್ಯಕ್ರಮವನ್ನು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವನ್ನು ಭಾರತದಲ್ಲಿ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ವಿಶೇಷವೂ ಆಗಿದೆ ಮತ್ತು ಗುರು ಶಿಷ್ಯರ ಸಂಬಂಧ ಗಟ್ಟಿಯಾಗುವುದಕ್ಕೆ ಕಾರಣವೂ ಆಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶ್ರೀನಿವಾಸ್ ಮಧುಶ್ರೀ ವಿಘ್ನೇಶ್ ನಗನೂರು. ಯೋಗಪ್ಪ ದೊಡ್ಮನಿ ಹಾಗೂ ಶಿಕ್ಷಣ ಪ್ರೇಮಿಗಳಾದ ಬಸವರಾಜಪ್ಪ ಕುರುಗೋಡ.ನಮ್ಮೂರಿನ ಸಮಾಜ ಸೇವಕರಾದ ಮೌನದ್ದೀನ್ ಬೂದಿನಾಳ ಶರಣು ವಿಶ್ವವಚನ ಫೌಂಡೇಶನ್ ಮೈಸೂರ್ ರಾಯಚೂರು ತಾಲೂಕ್ ಗೌರವಾಧ್ಯಕ್ಷರು.ನಿಂಗಪ್ಪ ಹುಬ್ಬಳ್ಳಿ.ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ