ನುಡಿ ನಮನ ಕಾರ್ಯಕ್ರಮದಲ್ಲಿ ದಿ ಚಂದ್ರಶೇಖರ್ ಅವರನ್ನು : ಹಸಿರು ಹೊನಲು ಸೇವಾ ಸಂಸ್ಥೆಯ ತಂಡ ಸ್ಮರಿಸಿದರು

ಭೌತಿಕವಾಗಿ ಇಲ್ಲದಿದ್ದರೂ ಅವರು ಬಿಟ್ಟು ಹೋದ ಒಳ್ಳೆ ಕೆಲಸಗಳ ಮಾಡುವ ಮೂಲಕ ಸ್ಮರಿಸಿಕೊಳ್ಳುತ್ತಾ ದಿ. ಚಂದ್ರು ರವರು ಸಮಾಜ ಸೇವೆ ಮಾಡುತ್ತಾ  ಹಾಗೂ  ಹಸಿರು ಹೊನಲು ಸೇವಾ ಸಂಸ್ಥೆ ಹೆಮ್ಮೆಯ ಸದಸ್ಯರಾಗಿದ್ದರು ಎಂದು ಹಸಿರು ಹೊನಲು ತಂಡದ ಅಧ್ಯಕ್ಷರಾದ ಗುರುರಾಜ್ ಹೇಳಿದರು

ಕೊಟ್ಟೂರು : ಪಟ್ಟಣದ ಗಂಗೋತ್ರಿ ಶಾಲೆಯಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ವತಿಯಿಂದ ಭಾನುವಾರದಂದು ಇತ್ತೀಚಿಗೆ ನಿಧನ ಹೊಂದಿದ ದಿವಂಗತ ಚಂದ್ರಶೇಖರ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗಂಗೋತ್ರಿ ಶಾಲೆಯ ಮುಖ್ಯಸ್ಥರಾದ ಚಟ್ರಿ ಕಿ   ಬಸವರಾಜ್  ಹಾಗೂ ಹಸಿರು ಹೊನಲು ಸೇವಾ ಸಂಸ್ಥೆ ಗೌರವಾಧ್ಯಕ್ಷರಾದ ಸಿ ಬಸವರಾಜ್ ಅವರು ದಿವಂಗತ ಚಂದ್ರು ರವರ ಭಾವಚಿತ್ರಕ್ಕೆ ಪುಷ್ಪ ನಮನ  ಸಲ್ಲಿಸುವ ಮೂಲಕ  ಚಾಲನೆ ನೀಡಿದರು.

ನಂತರ  ಹಸಿರು ಹೊನಲು  ಸಂಸ್ಥೆಯ ಸದಸ್ಯರಾದ ಬಿ. ಆರ್  ವಿಕ್ರಂ ಕುಮಾರ್  ಮಾತನಾಡಿದರು ದಿ.ಚಂದ್ರು ರವರು  ದೈಹಿಕವಾಗಿ  ಇಲ್ಲದಿದ್ದರೂ  ಅವರು ಬಿಟ್ಟು ಹೋದ  ಒಳ್ಳೆ ಕೆಲಸಗಳನ್ನು  ಮಾಡುವ ಮೂಲಕ ಅವರನ್ನು ಸ್ಮರಿಸಿಕೊಳ್ಳೋಣ.  ಹಾಗೂ  ಸಮಾಜ ಸೇವೆ, ರಾಜಕೀಯ ರಂಗದಲ್ಲೂ ಸಕ್ರಿಯವಾಗಿ  ಪಾಲ್ಗೊಳ್ಳುತ್ತಿದ್ದರು. ಚಂದ್ರು ಅವರಿಗೆ ಒಂದು ಒಳ್ಳೆಯ ಹವ್ಯಾಸ ಹೊಂದಿದ್ದರು  ಏನು ಎಂದರೆ ಎಲ್ಲರಿಗೂ ಪುಸ್ತಕವನ್ನು ನೀಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ   ದುಃಖ ಭರಿಸುವ ಶಕ್ತಿ ನೀಡಲಿ  ಎಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.

ಮತ್ತೋರ್ವ  ಹಸಿರು ಹೊನಲು  ತಂಡದ ಸದಸ್ಯರಾಗಿದ್ದ  ದಿ. ತೆಗ್ಗಿನಕೇರಿ ಹುಲಿಗೇಶ್ ನಮ್ಮನ್ನು ಬಿಟ್ಟು ಅಗಲಿದ್ದಾರೆ  ಅವರು ನಮ್ಮ ಜೊತೆಗೆ ಇಲ್ಲದಿದ್ದರೂ ನಮ್ಮ ಜೊತೆಗೆ ಕಳೆದ ಸಮಯಗಳನ್ನು ನೆನಪುಗಳನ್ನು ಸ್ಮರಿಸಿಕೊಳ್ಳುತ್ತಾ  ಅವರ ಹೆಸರಿನಲ್ಲಿ ಒಳ್ಳೆ ಕೆಲಸಗಳನ್ನು ಮಾಡೋಣ ಹೇಳಿದರು.

ಈ ಸಂದರ್ಭದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆಯ   ಗಂಗೋತ್ರಿ ಶಾಲೆಯ ಮುಖ್ಯ ವ್ಯವಸ್ಥಾಪಕರಾದ  ಚಟ್ರಿಕಿ  ಬಸವರಾಜ್, ಹಿರಿಯ ಪತ್ರಕರ್ತರಾದ  ಪರಶುರಾಮ್  ಸುಲಾಖೆ, ನಿವೃತ್ತಿ  ಕನ್ನಡ ಉಪನ್ಯಾಸಕರಾದ  ಕೊಟ್ರೇಶ್,    ಸರ್ವ ಸದಸ್ಯರುಗಳಾದ  ಪತ್ತಿಕೊಂಡ  ಪ್ರಶಾಂತ್ ಕುಮಾರ್,  ಸೋಮಶೇಖರ್, ಮಂಡಕ್ಕಿ  ಪ್ರಕಾಶ್,  ರೇವಡಿ ನಾಗರಾಜ್, ಸತೀಶ್ ಪಾಟೀಲ್, ದೇವರಮನಿ ಸಿದ್ದೇಶ್, ಚೇತನ್ ಜೈನ್, ವಿಜಯ್, ಕೃಷ್ಣ ಸಿಂಗ್, ಅಜಯ್, ನವೀನ್ ಕುಮಾರ್, ದ್ಯಾಮನಗೌಡ್ರು, ಡಾ. ರಾಕೇಶ್, ದೊಡ್ಡ ಕೊಟ್ರೇಶ್, ಹಾಗೂ ಹಸಿರು ಹೊನಲು ಮಹಿಳೆ ತಂಡದ ಸರ್ವ ಸದಸ್ಯರು  ಉಪಸ್ಥಿರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ