ಪೋಸ್ಟ್‌ಗಳು

ಆಗಸ್ಟ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*ಹೊಸಳ್ಳಿ ಉಜ್ಜಯಿನಿ ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ವಿ.ಸಿ ಪಾಟೀಲ್‌ ಅವರಿಗೆ ಬೀಳ್ಕೊಡುಗೆ*

ಇಮೇಜ್
ಕಾನ ಹೊಸಹಳ್ಳಿ: ಶ್ರೀ ಉಜ್ಜಿನಿ ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 23 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ವಿ.ಸಿ ಪಾಟೀಲ್‌ ಅವರನ್ನು ಶುಕ್ರವಾರ ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಈ ಶಾಲೆಯಲ್ಲಿ ಶಿಕ್ಷಣ ಪಡೆದ ಎಲ್ಲಾ ಬ್ಯಾಚಿನ ಸಹಪಾಠಿ ವಿದ್ಯಾರ್ಥಿಗಳು ಭಾಗಹಿಸಿದ್ದರು. ತಮ್ಮ ಅಚ್ಚುಮೆಚ್ಚಿನ ಗುರುವಿನ ಸೇವಾ ನಿವೃತ್ತಿಗೆ ಶುಭ ಕೋರಿ, ಹೂವಿನ ಹಾರ ಸನ್ಮಾನಿಸಿ ಗ್ರುಪ್ ಪೋಟೋ ತೆಗೆಸಿಕೊಂಡು ಸಂತಸಪಟ್ಟರು.  ಈ ವೇಳೆ ಹಳೆಯ ವಿದ್ಯಾರ್ಥಿ ಮಾಂತೇಶ್ ಮಾತನಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಇಂತಹ ಶಿಕ್ಷಕರು ನಮಗೆ ಸಿಕ್ಕಿದ್ದು ತುಂಬಾ ಅಪರೂಪ ಎಂದು ಅವರ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಎಸ್‌‌.ಎಂ ಮಂಜುನಾಥ ಮಾತನಾಡಿ ಶಿಕ್ಷಕರು ನಿವೃತ್ತಿ ಹೊಂದಿದ ನಂತರ ಶಿಕ್ಷಕರಿಗೆ ನಾವು ಕೊಡುವ ಗೌರವ, ಸನ್ಮಾನ ಅವರಿಗೆ ಉಳಿಯುತ್ತದೆ. ನಾವು ವ್ಯಾಸಂಗದ ಅವಧಿಯಲ್ಲಿ ಶಿಕ್ಷಕರು ನೀಡುವ ಸಲಹೆ, ಸೂಚನೆ ಮಾರ್ಗದರ್ಶನಗಳು ನಮ್ಮ ಜೀವನ ಪೂರ್ತಿ ನೆರವಾಗುತ್ತವೆ. ನಮಗೆ ದಾರಿ ತೋರಿದ ಶಿಕ್ಷಕರಿಗೆ ಸ್ಮರಿಸೋಣ ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಕೆ ನಾರಪ್ಪ, ಶಿಕ್ಷಕರಾದ ರೇವಣಸಿದ್ದಪ್ಪ, ಶಿವಕುಮಾರ್, ರಾಧಿಕಾ, ರಾಧಮ್ಮ ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ ದುರುಗಪ್ಪ, ಎಂ.ಎನ್ ರಾಘವೇಂದ್ರ, ಜಿ ತಿಪ್ಪೇಶ್, ಸುರೇಶ್, ಅಜ್

ಅನಾಥಾಲಯಕ್ಕೆ ಪುರಸಭೆ ನೂತನ ಅಧ್ಯಕ್ಷರು ಭೇಟಿ

ಇಮೇಜ್
ಮಸ್ಕಿ : ಪುರಸಭೆಯ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟಮೊದಲ ಕಾರ್ಯವು ಅಭಿನಂದನ್ ಸ್ಪೂರ್ತಿ ಧಾಮಕ್ಕೆ ಬೋರ್ ವೆಲ್ ವ್ಯವಸ್ಥೆ ಕಲ್ಪಿಸಿದರು. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟಮೊದಲ ಕಾರ್ಯವು ಅಭಿನಂದನ್ ಸ್ಪೂರ್ತಿ ಧಾಮಕ್ಕೆ ಬೋರ್ ವೆಲ್ ವ್ಯವಸ್ಥೆ ಕಲ್ಪಿಸುವ ಮೂಲಕ ನನ್ನ ಕಾರ್ಯವನ್ನು ಪ್ರಾರಂಭಿಸಿದ್ದೇನೆ. ನಮ್ಮ ಪುರಸಭೆಯು ಅಭಿನಂದನ್ ಸ್ಪೂರ್ತಿಧಾಮಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ.ಇದು ನನ್ನ ಅಧಿಕಾರ ಅವಧಿಯ ಮೊದಲ ಕಾರ್ಯವಾಗಿರುವುದರಿಂದ ಜೀವನದಲ್ಲಿ ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಡವರ ಉದ್ಧಾರಕ ಹಾಗೂ ನೂತನ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು. ಪುರಸಭೆಯ ಮುಖ್ಯ ಅಧಿಕಾರಿ ನರಸ ರೆಡ್ಡಿ ಮಾತನಾಡಿ ಅಭಿನಂದನ್ ಸ್ಪೂರ್ತಿಧಾಮವು ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರಿಯುತ್ತಿದ್ದು ಈ ಆಶ್ರಮದ ಮಕ್ಕಳ ಒಳಿತಿಗಾಗಿ ಹಾಗೂ ಊರಿನ ಒಳಿತಿಗಾಗಿ ಈ ಸೇವಾ ಕಾರ್ಯವನ್ನು ಮಾಡಲಾಯಿತು ಎಂದರು.  ಈ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಪುರಸಭೆಯ ಸದಸ್ಯರಾದ ಭರತ್ ಶೇಠ್, ಅಭಿನಂದನ್ ಸಂಸ್ಥೆಯ ಸದಸ್ಯರಾದ ಮಂಜುನಾಥ್ ಜೋಗಿನ್, ಜಾಫರ್ ಮಿಯಾ, ಕಿಶೋರ್,ಹಾಗೂ ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳು ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಲಕ್ಷ್ಮಿ ಪೂಜಾ ಕಾರ್ಯಕ್ರಮ

ಇಮೇಜ್
  ಮಸ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ದಂದು ರಾಯಚೂರ ಜಿಲ್ಲಾ ಮಸ್ಕಿ ತಾಲ್ಲೂಕಿನ ಮೆದಿಕಿನಾಳ ವಲಯದ ನಾಗರಬೆಂಚಿ ಗ್ರಾಮದಲ್ಲಿ ಕಾರ್ಯಕ್ಷೇತ್ರದ ಅಂತರಗಂಗಿ CSC ಸೇವಾಕೇಂದ್ರದಲ್ಲಿ ವಲಯ ಮಟ್ಟದಲ್ಲಿ ಶ್ರೀ ಲಕ್ಷ್ಮಿ ಪೂಜಾ ಕಾರ್ಯಕ್ರಮ ಜರುಗಿತು. ಪೂಜಾ ಕಾರ್ಯಕ್ರಮದಲ್ಲಿ ಊರಿನ ಗಣ್ಯರು,ನಾಗರಬೆಂಚಿ ಕಾರ್ಯಕ್ಷೇತ್ರದ ಒಕ್ಕೂಟ ಅಧ್ಯಕ್ಷರಾದ ಗವಿಯಪ್ಪಗೌಡ, ವಲಯದ ಮೇಲ್ವಿಚಾರಕರಾದ ಪ್ರಸನ್ನ, ವಲಯದ ಎಲ್ಲಾ ಸೇವಾಪ್ರತಿನಿದಿಗಳು ಹಾಗೂ CSC ಸೇವಾದಾರರು ಭಾಗವಹಿಸಿ ಶ್ರೀ ಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಸಂಘದ ಒಮ್ಮತದಿಂದ ಮಾಡುವ ಮೂಲಕ ಯಶಸ್ವಿಗೊಳಿಸಿದರು.

ಬೆಂಗಳೂರಿನಲ್ಲಿ ಶನಿವಾರ “ಶೈಕ್ಷಣಿಕ ಗ್ರಂಥಾಲಯದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ” ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಇಮೇಜ್
  ಬೆಂಗಳೂರು, ಆ, 30; ಭಾರತೀಯ ಗ್ರಾಂಥಾಲಯಗಳ ಸಂಘ ಹಾಗೂ ಶ್ರೀಲಂಕಾ ಗ್ರಂಥಾಲಯಗಳ ಸಂಘದ ಸಹಯೋಗದಲ್ಲಿ “ಶೈಕ್ಷಣಿಕ ಗ್ರಂಥಾಲಯದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ” ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಶನಿವಾರ ಶೆಷಾದ್ರಿಪುರಂ ಕಾಲೇಜಿನಲ್ಲಿ ನಡೆಯಲಿದೆ.  ಶೇಷಾದ್ರಿಪುರಂ ಸಂಜೆ ಕಾಲೇಜು ಸಭಾಂಗಣದದಲ್ಲಿ ಬೆಳಿಗ್ಗೆ 10 ಗಂಟೆಗೆ ತಜ್ಞರು ಕೃತಕ ಬುದ್ದಿಮತ್ತೆಯಿಂದ ಶೈಕ್ಷಣಿಕ ಗ್ರಂಥಾಲಯದ ಮೇಲೆ ಆಗುತ್ತಿರುವ ಗಂಭೀರ ಪರಿಣಾಮಗಳ ಕುರಿತಂತೆ ಬೆಳಕು ಚೆಲ್ಲಲಿದ್ದಾರೆ.  ಈ ವಿಚಾರ ಸಂಕಿರಣದಲ್ಲಿ ಶ್ರೀಲಂಕಾದ ಕೊಲಂಬೋ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ವಿಭಾಗದ ಮುಖ್ಯಸ್ಥರಾದ ಡಾ. ರುವಾನಾ ಸಿ.ಜಿ ಗಮಗೆ ಹಾಗೂ ಭಾರತ ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿಷಯ ತಜ್ಞರು ಭಾಗವಹಿಸುತ್ತಿದ್ದಾರೆ.  ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ ಕೃಷ್ಣ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಧರ್ಮದರ್ಶಿ ಡಬ್ಲ್ಯೂ ಡಿ ಅಶೋಕ್. ದ್ರಾವಿಡ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ದೊರೆಸ್ವಾಮಿ, ರಾಜ್ಯದ ವಿವಿಗಳ ಗ್ರಂಥಾಲಯ ಮುಖ್ಯಸ್ಥರು ಹಾಗೂ ಆಧ್ಯಾಪಕರುಗಳು ಭಾಗವಹಿಸಲಿದ್ದಾರೆ.

ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ರೇಖಾ, ಉಪಾಧ್ಯಕ್ಷರಾಗಿ ಸಿದ್ದಯ್ಯ ಅವಿರೋಧ ಆಯ್ಕೆ

ಇಮೇಜ್
  ಕೊಟ್ಟೂರು ಪಟ್ಟಣ ಪಂಚಾಯಿತಿ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು  ಕೊಟ್ಟೂರು ಹಲವು ದಿನಗಳಿಂದ ಮುಂದೂಡಲ್ಪಟ್ಟಿದ್ದ ಕೊಟ್ಟೂರು ಪಟ್ಟಣದ ಪಂಚಾಯಿತಿಯ ೨ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ತಹಸಿಲ್ದಾರ್ ನೇತೃತ್ವದಲ್ಲಿ ಶನಿವಾರ ನಡೆಯಿತು. ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜನರಲ್ ಮೀಸಲಾತಿ ನಿಗದಿಯಾಗಿತ್ತು. ಕಾಂಗ್ರೆಸ್‌ನಿಂದ ೯ ಜನ ಸದಸ್ಯರು ಆಯ್ಕೆಯಾಗಿ, ಪರಿಶಿಷ್ಟ ಜಾತಿ ಜನಾಂಗದವರಿದ್ದರೂ ಸಹ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರರಾಗಿ ಗೆದ್ದಿರುವ ರೇಖಾ ಅವರು ಆಯ್ಕೆಯಾಗುವ ಮೂಲಕ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ರೇಖಾರವರಿಗೆ ಸೂಚಕರಾಗಿ ೧೧ನೇ ವಾರ್ಡ್‌ನ ಸದಸ್ಯೆ ಕೆ.ಸಾವಿತ್ರಮ್ಮ ಸೂಚಕರಾಗಿದ್ದರೆ, ೧೫ನೇ ವಾರ್ಡ್‌ನ ಸದಸ್ಯೆ ಕೆ. ಲಕ್ಷ್ಮೀ ಅನುಮೋದಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯ ಸಿದ್ದಯ್ಯನವರಿಗೆ ೭ನೇ ವಾರ್ಡ್‌ನ ಬಿಜೆಪಿ ಸದಸ್ಯ ಕೆ.ಎಸ್. ಈಶ್ವರಗೌಡ ಸೂಚಕರಾದರೆ, ೮ನೇ ವಾರ್ಡ್ ಬಿಜೆಪಿ ಸದಸ್ಯ ಬೋರ್‌ವೆಲ್ ತಿಪ್ಪೇಸ್ವಾಮಿ ಅನುಮೋದಕರಾಗಿದ್ದರು. ಒಟ್ಟಿನಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು.  ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದು ಚುನಾವಣೆ ಪ್ರಕ್ರಿಯಲ್ಲಿ ೨೦ ಒಟ್ಟು ಸದಸ್ಯರ ಪೈಕಿ ೧೬ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು ನಾಲ್ವರು ಸದಸ್ಯರುಗಳು ಗೈರು ಹಾಜರಾಗಿದ್ದರು ಎಂದು ತಿಳಿಸಿ

ಬೆಂಗಳೂರಿನಲ್ಲಿ 150 ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವಂತೆ ಒತ್ತಾಯ

ಇಮೇಜ್
  ಬೆಂಗಳೂರು : ತೆಲಂಗಾಣ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 150 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಿಸಬೇಕು ಎಂದು ಆನೇಕಲ್ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ (ರಿ) ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆನೇಕಲ್ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ರಾಜ್ಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ ಕೃಷ್ಣಪ್ಪ, ಅಸ್ಪೃಶ್ಯತೆ, ಅಸಮಾನತೆ, ಅನ್ಯಾಯ, ಕಂದಾಚಾರ, ಮೌಢ್ಯ, ದೌರ್ಜನ್ಯ, ದಬ್ಬಾಳಿಕೆಗಳಿಂದ ತುಂಬಿ ತುಳುಕುತ್ತಿದ್ದ ಸಮಾಜಕ್ಕೆ ಸಮಾನತೆಯ ಸಂವಿಧಾನವನ್ನು ರಚಿಸಿ ಕೊಡುವ ಮೂಲಕ ಭಾರತದ ಗೌರವವನ್ನು ಎತ್ತರಿಸಿದ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲು ಸೂಕ್ತ ಜಾಗ ಗುರುತಿಸಿ ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕು ಎಂದರು.  ಡಾ.ಬಿ.ಆರ್.ಅಂಬೇಡ್ಕರ್ ಅವರ ಅಗಾಧವಾದ ಸಾಧನೆಯನ್ನು ಗುರುತಿಸಿ ತೆಲಂಗಾಣದಲ್ಲಿ 120 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇದು ಭಾರತೀಯರೆಲ್ಲರು ಹೆಮ್ಮೆ ಪಡುವ ವಿಚಾರ. ಬೆಂಗಳೂರಿನಲ್ಲಿ ಇನ್ನೂ ಎತ್ತರದ ಪ್ರತಿಮೆ ನಿರ್ಮಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಹಿಳಾ ರಾಜ್ಯಾಧ್ಯಕ್ಷರಾದ ಬೊಮ್ಮಸಂದ್ರ ರೇಣುಕಾ, ರಾಜ್ಯ ಉಪಾಧ್ಯಕ್ಷ ಮಣಿಗಾನಹಳ್ಳಿ ವಿ ಶ್ರೀನಿವಾಸ, ರಾಜ್ಯ ಪ್ರಧಾನ ಕಾರ್ಯದರ್ಶಿ, ಉದಯಕವಿ ರಾಜ್ಯ ಕಾರ್ಯಾಧ್ಯಕ್ಷರುಗಳಾದ ರವಿಚಂದ್ರ ಎಸ್, ಮೀಸೆ ರಾಮಣ್ಣ, ರಾಜ್ಯ ಮಹಿಳಾ ಗೌ. ಅಧ್ಯಕ್ಷರಾದ ಸ

*ವಚನ ಸಾಹಿತ್ಯದಲ್ಲಿ ಸಮಾನತೆಗೆ ಆದ್ಯತೆ*

ಇಮೇಜ್
ದತ್ತಿ ಉಪನ್ಯಾಸ ವಚನ ಗಾಯನ ಕಾರ್ಯಕ್ರಮ ನಮ್ಮ ಬದುಕಿನಲ್ಲಿ ಶರಣರ ಆಶಯ ಅಳವಡಿಕೆ ಅತ್ಯವಶ್ಯ  12ನೇ ಶತಮಾನದ ಶರಣ ಶರಣೆಯರ ಜೀವನ ಮತ್ತು ಸಾಗಿದ ಮಾರ್ಗ ರಚಿಸಿದ ಸಾಹಿತ್ಯ ಅದರ್ಶಮಯ .ಯುವ ಸಮುದಾಯ ಶರಣರ ಆದರ್ಶವನ್ನು ಪಾಲಿಸಿದರೆ ಸಮಾಜ ಸುಂದರವಾಗುವುದೆಂದು ಕಾರ್ಯಕ್ರಮದ ಉದ್ಘಾಟಿಸಿ ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿಯನ್ನು ರವಿಕುಮಾರ್ ಮಾತನಾಡಿ 12ನೇ ಶತಮಾನದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದು ಶರಣರು ಸಾರಿದ್ದಾರೆ. ಇತ್ತೀಚಿನ ವಾತಾವರಣ ನೋಡುತ್ತಿದ್ದರೆ ಭಯವೇ ಧರ್ಮದ ಮೂಲವಯ್ಯ ಎನ್ನುವಂತಾಗಿ ರುವುದು ನೋವಿನ ಸಂಗತಿಯಾಗಿದೆ. ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜನ್ಮದಿನದ ನಿಮಿತ್ತ ಸಂಸ್ಥಾಪನ ದಿನವನ್ನಾಗಿ ಎಲ್ಲೆಡೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರರು. ವಿಶ್ವದಲ್ಲೇ ಶ್ರೇಷ್ಠ ಧರ್ಮ ಶರಣ ಧರ್ಮ .ಶ್ರೇಷ್ಠ ಸಾಹಿತ್ಯ .ವಚನ ಸಾಹಿತ್ಯಕ್ಕೆ  ಬೌದ್ದ ಧರ್ಮಕ್ಕೆ ದೊರೆತ ರಾಜಾ ಶ್ರಯ ವಿಶ್ವ ವ್ಯಾಪ್ತಿಯನ್ನು ,ಶರಣ ಧರ್ಮಕ್ಕೆ ದೊರೆತ್ತಿದ್ದರೆ ವಿಶ್ವ ಮಾನ್ಯತೆಯನ್ನು  ಪಡೆಯುತ್ತಿತ್ತು ನುಡಿದರು .ಹೊಸಹಳ್ಳಿ ಪಟ್ಟಣದಲ್ಲಿ ನಡೆದ ಬಾಲಕಿಯರ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ಹುಲಿಕೆರೆ ಶ್ರೀಮತಿ ವಿಶಾಲಾಕ್ಷಮ್ಮ ಮತ್ತು ಷಡಕ್ಷರಿ ಎಂ ದತ್ತಿ ಉಪನ್ಯಾಸ ಕಾರ್ಯಕ್ರಮ ಕುರಿತು ವಚನ ಸಾಹಿತ್ಯದಲ್ಲಿ ವೈಚಾ

ನೂತನ ತಾ. ಪಂ ಇಒ ಅಧಿಕಾರ ಸ್ವೀಕಾರ

ಇಮೇಜ್
  ಮಸ್ಕಿ : ತಾಲೂಕು ಪಂಚಾಯತಿಯ ನೂತನ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಿ ಅಮರೇಶ್‌ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ನಂತರ ದಲಿತ ಮುಖಂಡರಾದ ರಮೇಶ್ ಉಸ್ಕಿಹಾಳ, ಖಾಸಿಂ ಮುರಾರಿ ಮಸ್ಕಿ ಇವರು ಹೂವಿನ ಹಾರ ಶಾಲು ಹಾಕಿ ಸನ್ಮಾನಿಸುವ ಮೂಲಕ ಬರಮಾಡಿಕೊಂಡರು. ಈ ವೇಳೆ ಸಹಾಯಕ ನಿರ್ದೇಶಕರಾದ ಶಿವಾನಂದರೆಡ್ಡಿ, ಸೋಮನಗೌಡ ಪಾಟೀಲ್‌, ತಾಪಂ ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ಸಿಬ್ಬಂದಿಗಳಾದ ಚಂದ್ರಶೇಖರ್‌, ಬಸವರಾಜ್‌, ಗಿರಿಯಪ್ಪ, ದುರುಗಪ್ಪ ಯಾದವ್, ಲಕ್ಷ್ಮಣ, ತಾಂತ್ರಿಕ ಸಂಯೋಜಕರಾದ ಅಶೋಕ್‌, ಟಿಎಂಐಎಸ್‌ ಮಹ್ಮದ್‌ ಯಾಸೀನ್‌, ಎನ್‌ಆರ್‌ಎಲ್‌ಎಂ ತಾಲೂಕು ಮೇಲ್ವಿಚಾರಕರಾದ ಮೌನೇಶ್‌, ವಲಯ ಮೇಲ್ವಿಚಾರಕರಾದ ಪ್ರಕಾಶ್‌ ಇತರರಿದ್ದರು.

ಲಯನ್ಸ್ ಜಯನಗರದ ಮಾನವೀಯ ಸೇವೆಗೆ ಶಾಸಕರ ಶ್ಲಾಘನೆ

ಇಮೇಜ್
  ಬೆಂಗಳೂರು, ಅಗಷ್ಟ್ 27 : “ಲಯನ್ಸ್ ಜಯನಗರವು ಕಳೆದ 42 ವರ್ಷಗಳಿಂದ ಅತ್ಯುತ್ತಮ ಮಾನವೀಯ ಸೇವೆ ಸಲ್ಲಿಸುತ್ತಾ ಬಂದಿದ್ದು, ಎಲ್ಲ ಸೇವಾ ಸಂಸ್ಥೆಗಳಿಗೂ ಮಾದರಿಯಾಗಿದೆ. ಸಂಸ್ಥೆಯು ಇದೇ ರೀತಿ ಮುಂದಿನ ದಿನಗಳಲ್ಲೂ ಅತ್ಯುತ್ತಮ ಸೇವೆ ಸಲ್ಲಿಸಲಿ. ನಾನು ಶಾಸಕನಾಗಿ ಸಂಸ್ಥೆಗೆ ಎಲ್ಲ ರೀತಿಯ ಸಹಕಾರ ನೀಡಲು ಬಯಸುತ್ತೇನೆ ಹಾಗೂ ಸಂಸ್ಥೆಯ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಬಯಸುತ್ತೇನೆ” ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಕೆ.ರಾಮಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ. ಲಯನ್ಸ್ ಕ್ಲಬ್ ಜಯನಗರ ವತಿಯಿಂದ ಜಯನಗರ ಕಲ್ಚರಲ್ ಮತ್ತು ಸಿವಿಕ್ ಅಸೋಸಿಯೇಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಜಯನಗರ ಲಯನ್ಸ್ ಸಂಸ್ಥೆಯ 43 ನೇ ಸಂಸ್ಥಾಪನ ದಿನಾಚರಣೆಯ ಸಂಭ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು.   ಈ ಕಾರ್ಯಕ್ರಮದ ವೇದಿಕೆಯಲ್ಲಿ ಜಯನಗರ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಡಾ. ಉಮೇಶ್ ಕುಮಾರ್, ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಲಯನ್ ಶ್ರೀ ಕೃಷ್ಣೇಗೌಡ, ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ಶ್ರೀ ಹೇಮಂತ್ ಕುಮಾರ್, ಲಯನ್ ಶ್ರೀಮತಿ ಪ್ರಭಮೂರ್ತಿ ಮತ್ತು ಪದಾಧಿಕಾರಿಗಳು ಹಾಗೂ ಅನೇಕ ಲಯನ್ಸ್ ಸದಸ್ಯರು ಹಾಜರಿದ್ದರು.

ಮಾದಿಗರ ರಕ್ಷಣಾ ವೇದಿಕೆಯ ಜಿಲ್ಲಾ ಕಮಿಟಿ ರಚನೆ : ಗುಡಿಮನಿ

ಇಮೇಜ್
   ವರದಿ - ಮಂಜುನಾಥ ಕೋಳೂರ ಕೊಪ್ಪಳ  ಕೊಪ್ಪಳ : - ನಗರದ ತಾಲೂಕು ಪಂಚಾಯಿತಿ ಅವರಣದಲ್ಲಿರುವ ಸಭಾಂಗಣದಲ್ಲಿ ದಿ.31 ಆಗಸ್ಟ್ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ (ಕೆ.ಎಂ.ಆರ್.ಎ) ಜಿಲ್ಲಾ ಕಮಿಟಿ ರಚಿಸಲಾಗುವುದು ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಸಂಘಟನೆಗೆ ಸೇರಬಯಸುವವರು ವೇದಿಕೆ ಸ್ವಾಭಿಮಾನ-ಸ್ವಾತಂತ್ರ್ಯ-ಸಮಾನತೆ ಸಿದ್ದಾಂತ ಬದ್ಧತೆಯಲ್ಲಿ ನಂಬಿಕೆ ಇರುವವರು ರಾಜಿ ರಹಿತ ರಾಜಕೀಯ ರಹಿತ ಅಳವಡಿಸಿಕೊಂಡು ನೋವುಂಡ ಜನರನ್ನು ಸಂಘಟಿಸಲು ಸದಸ್ಯರಾಗಬಹುದು. ಇಡೀ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದ್ದು ಮೂರು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೋಸಿತ ಮಾದಿಗರ ಸಮುದಾಯದ ಮೇಲೆ ಜಾತಿಯತೇಯಿಂದ ಹಲ್ಲೆಯಾಗಿರುವುದು ಜಿಲ್ಲೆಯಲ್ಲಿ ఎల్లరిಗುಾ ಗೊತ್ತಿರುವ - ವಿಷಯವಾಗಿದೆ. ಇತ್ತೀಚಿನ ಕೆಲವು ದಿನಗಳ ಹಿಂದೆ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ಕಟ್ಟಿಂಗ್ ವಿಷಯಕ್ಕೆ ಅಸ್ಪೃಶ್ಯತೆ ಆಚರಣೆಯಿಂದ ಗ್ರಾಮದ ಯಮನೂರಪ್ಪ ಹತ್ಯೆಯಾಗಿರುವುದು ಖಂಡಿಸುತ್ತಾ ಅಸ್ಪೃಶ್ಯತೆ ನಾಶಕ್ಕಾಗಿ ಸೌಹಾರ್ಧತೆ ನಿರ್ಮಾಣಕ್ಕಾಗಿ ಅಭಿಯಾನ ಸಾರಬೇಕಾಗಿದೆ.ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಅಸ್ಪೃಶ್ಯತೆ ನಾಶಮಾಡೋಣ ಸಮಾನತೆಗಾಗಿ ಕೈ ಜೋ

"ಪ್ರಜಾತಂತ್ರಕ್ಕೆ ಮಾರಕವಾದ ರಾಜ್ಯಪಾಲ ಹುದ್ದೆ ರದ್ದುಗೊಳಿಸಲು ಸಿಪಿಐ ಪಕ್ಷದಿಂದ ಅಗ್ರಹ "

ಇಮೇಜ್
*ಪ್ರಜಾತಂತ್ರಕ್ಕೆ ಮಾರಕವಾಗಿರುವ ರಾಜ್ಯಪಾಲರ ಹುದ್ದೆ ರದ್ದು ಗೋಳಿಸಲು ಸಿಪಿಐ ಪಕ್ಷದ  ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ ಒತ್ತಾಯಿಸಿದರು* ಕೊಟ್ಟೂರು: ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಆಗ್ರಹ ಪಡಿಸಿ ದ್ವಾರ..ಮಾನ್ಯ ತಹಶೀಲ್ದಾರರು ಮುಖಾಂತರ ಭಾರತ ಸರ್ಕಾರ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಇಲ್ಲಿಯ ಕೊಟ್ಟೂರು ಉಪ ತಹಸಿಲ್ದಾರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ಭಾರತ ಕಮ್ಯುನಿಸ್ಟ್ ಪಕ್ಷ (ಸಿ ಪಿ ಐ )ದ ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ  ಮಾತನಾಡಿ  ಕರ್ನಾಟಕ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ.ಜನತಂತ್ರ ವ್ಯವಸ್ಥೆಯಲ್ಲಿ ಜನರಿಂದ ಮತ ಪಡೆದು ಬಹುಮತದಿಂದ ಆಯ್ಕೆಯಾದ ಸರ್ಕಾರವನ್ನು ಕೇಂದ್ರ ಸರ್ಕಾರದಿಂದ ನೇಮಕವಾದ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ಪಕ್ಷದ ಕುಟಿಲ ನೀತಿ ಬಹಿರಂಗವಾಗುತ್ತಿದೆ.  ಮೂಡ ಪ್ರಕರಣದಲ್ಲಿ ಮುಖ್ಯ ಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಕಛೇರಿ ರಾಜಕೀಯ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ರಾಜ್ಯಪಾಲರ ಕಚೇರಿಗೆ ಲೋಕಾಯುಕ್ತ ಸಂಸ್ಥೆ ಇತರೆ ಪ್ರಕರಣದಲ್ಲಿ ತನಿಖೆಗೆ ಅನುಮತಿ ಕೇಳಿ ವರ್ಷಗಳೇ ಕಳೆದರೂ ಅವುಗಳ ಬಗ್ಗೆ ಯಾವುದೇ ತೀರ್ಮಾನ ಮಾಡದ ರಾಜ್ಯಪಾಲರು.ಮೂಡ ಪ್ರಕರಣದಲ್ಲಿ ತೆಗೆದುಕೊಂಡ ತೀರ್ಮಾನ ಪೂರ್ಣ ರಾಜಕೀಯ

ಬಿಜೆಪಿ ತೆಕ್ಕೆಗೆ ಮಸ್ಕಿ ಪುರಸಭೆ ಅದ್ದೂರಿ ಸಂಭ್ರಮ

ಇಮೇಜ್
ಮಸ್ಕಿ: ಪಟ್ಟಣದ ಪುರಸಭೆಯ 15 ತಿಂಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧ ಆಯ್ಕೆಯಾಗಿದ್ದಾರೆ. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕ ಚುನಾವಣಾ ಅಧಿಕಾರಿ ಡಾ.ಮಲ್ಲಪ್ಪ.ಕೆ.ಯರಗೋಳ ಅವರ ಉಪಸ್ಥಿತಿಯಲ್ಲಿ ಹಿಂದುಳಿದ ವರ್ಗ( ಎ )ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ತಂದೆ ಅಮರಪ್ಪ ವಾರ್ಡ್ 12 ಕುರುಬರ ಓಣಿ, ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗೀತಮ್ಮ ಗಂಡ ಶಿವರಾಜ ಬುಕ್ಕಣ್ಣ ವಾರ್ಡ್ 15 ಪಿಂಜಾರ ಓಣಿ ಅವಿರೋಧವಾಗಿ ಆಯ್ಕೆಯಾದರು ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಗೆ ಗೆಲುವಿನ ಪ್ರಮಾಣ ಪತ್ರ ನೀಡುವ ಮೂಲಕ ಶುಭಾಷಯ ಕೋರಿದರು. ಒಟ್ಟು 23 ಸದಸ್ಯರ ಸಂಖ್ಯಾಬಲದಲ್ಲಿ ಬಿಜೆಪಿಯ 14 ಸದಸ್ಯರ ಬಲ ಹೊಂದಿದ್ದ ಬಿಜೆಪಿಯು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ತಮ್ಮ ತೆಕ್ಕೆಗೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿತು.ಬಿಜೆಪಿ 14 ಸದಸ್ಯರ ಬಲದೊಂದಿಗೆ ಗೆಲುವು ಅನಾಯಾಸ ಎನ್ನುವಂತಾಗಿತ್ತು. ಆದರೆ, ಎಂಎಲ್ಸಿ,ಶಾಸಕರ,ಸಂಸದರ ಬೆಂಬಲ ನಿರೀಕ್ಷೆ ಇದ್ದರು ಇನ್ನು ಮೂರು ಸದಸ್ಯರ ಕೊರತೆ ಇದ್ದರಿಂದ ಕಾಂಗ್ರೇಸ್ ಬಹುಮತ ಸಿಗುವ ಸಾಧ್ಯತೆ ಕಡಿಮೆಯಾಗಿದ್ದರಿಂದ ಕಣದಿಂದ ಹಿಂದೆ ಸರಿಯುವ ಮೂಲಕ ಬಿಜೆಪಿ ಹಾದಿ ಸುಗಮವಾಯಿತು. ನಂತರ ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ

ಜವಳಗೀರಾ ಗ್ರಾ ಪಂ ಚುನಾವಣೆ.ನೂತನ ಗ್ರಾ. ಪಂ.ಅಧ್ಯಕ್ಷರಾಗಿ ನಾಗರಾಜ, ಉಪಾಧ್ಯಕ್ಷರಾಗಿ ಶರಣಬಸವ ಆಯ್ಕೆ.

ಇಮೇಜ್
  ಸಿಂಧನೂರು :-ಆ 28 ಜವಳಗೀರಾ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ.ಪಂಚಾಯಿತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮೀಸಲು ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮಿಸಲು ಕ್ಷೇತ್ರಕ್ಕೆ ಸ್ಪರ್ಧೆ ಕಛೇರಿಯಲ್ಲಿ ಚುನಾವಣಾಧಿಕಾರಿ ಚಂದ್ರಶೇಖರ ನೇತೃತ್ವದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುದುವಾರದಂದು ಚುನಾವಣೆ ಪ್ರಕ್ರಿಯೆ ನಡೆಯಿತು.  ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನಲೆ ಒಟ್ಟು 36 ಸದಸ್ಯರಲ್ಲಿ ಮೂರು ಜನ ಗೈರಾಗಿದ್ದು, 33 ಜನ ಸದಸ್ಯರ ಬೆಂಬಲದೊಂದಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ನಾಗರಾಜ ಹಾಗೂ ಉಪಾಧ್ಯಕ್ಷರಾಗಿ ಶರಣಬಸವ ಆಯ್ಕೆಗೊಂಡರು. ನೂತನ ಅಧ್ಯಕ್ಷೆ, ಉಪಾಧ್ಯಕ್ಷ- ರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿಯಾದ ಎಮ್.ಡಿ. ಸಮಾದಾನಿ.

ಇಮೇಜ್
  ಹಟ್ಟಿ ಚಿನ್ನದ ಗಣಿ :27ಹಟ್ಟಿ ಚಿನ್ನದ ಗಣಿ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇಂದು ನಡೆದಿದ್ದು ಒಟ್ಟು 13 ಸಂಖ್ಯೆ ಬಲ ಹೊಂದಿದ ಹಟ್ಟಿ ಪಟ್ಟಣ ಪಂಚಾಯಿತಿ ಈಗಾಗಲೇ ಕಾಂಗ್ರೆಸ್ ಪಕ್ಷದ 8 ಸದಸ್ಯರು ಚುನಾಯಿತ ಪ್ರತಿನಿಧಿಗಳಾಗಿದ್ದರು ಅದರಲ್ಲಿ ಇಬ್ಬರು ಸದಸ್ಯರು ಮರಣ ಹೊಂದಿದ್ದು ಒಟ್ಟು ಕಾಂಗ್ರೆಸ್ ಪಕ್ಷದ ಆರು ಸದಸ್ಯರು ಇದ್ದಾರೆ ಮೂರು ಜನ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾಗಿದ್ದು ಇಬ್ಬರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾಯಿತ ಪ್ರತಿನಿಧಿಗಳಾಗಿದ್ದರು.  ಹಟ್ಟಿ ಪಟ್ಟಣ ಪಂಚಾಯತಿಯು ಈಗ 11 ಜನ ಸದಸ್ಯರನ್ನು ಹೊಂದಿದ್ದು ಹಟ್ಟಿ ಪಟ್ಟಣ ಪಂಚಾಯತಿ ಸಾಮಾನ್ಯ ಸ್ಥಾನಕ್ಕೆ ಅಧ್ಯಕ್ಷರಾಗಲು ಅದರಲ್ಲಿ ಮ್ಯಾಜಿಕ್ ನಂಬರ್ 6 ಸದಸ್ಯರಿದ್ದರೆ ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಬಹುದು  ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಅಧಿಸೂಚಿ ಪ್ರಕಟವಾದ ಅಧ್ಯಕ್ಷ ಸ್ಥಾನ ಸಾಮಾನ್ಯ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಎಸ್ ಟಿ )ಮಹಿಳೆ ಇದು   ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ 6 ಜನ ಸದಸ್ಯರಿದ್ದು ಕಾಂಗ್ರೆಸ್ ಪಕ್ಷದಿಂದ ಸಿರಾಜುದ್ದೀನ್ ಖುರೇಷಿ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬಂದಿತ್ತು ನಂತರ ಇದರ ಚಿತ್ರಣವೇ ಬೇರೆಯಾಯಿತು. ಹಟ್ಟಿ ಪಟ್ಟಣ ಪಂಚಾಯಿತಿಗೆ ಈಗ ಪಕ್ಷೇತರ ಅಭ್ಯರ್ಥಿ ಅಧ್ಯಕ್ಷ ಆಗಿರುವುದನ್ನು ನೋಡಿದರೆ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಕಾಂಗ್

ಯಮನೂರಪ್ಪ ಹರಿಜನ ಕೊಲೆ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಲು : ಡಿ.ಎಸ್.ಎಸ್ ಮನವಿ

ಇಮೇಜ್
ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾಕ್ಟರ್ ಎನ್ ಮೂರ್ತಿ ಸ್ಥಾಪಿತ ತಾಲೂಕ ಸಮಿತಿ ವತಿಯಿಂದ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಹರಿಜನ ಇವರನ್ನು ಧಾರುಣವಾಗಿ ಕೊಲೆ ಮಾಡಿದ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ನೊಂದ ಕುಟುಂಬಕ್ಕೆ 1 ಕೋಟಿ ಪರಿಹಾರ ಹಾಗೂ ಸರಕಾರಿ ನೌಕರಿ ನೀಡಬೇಕು 4 ಎಕರೆ ಜಮೀನು ನೀಡಬೇಕು ಎಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು. ಭಾರತ ದೇಶ ಸ್ವತಂತ್ರವಾಗಿದೆ ಆದರೆ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪ್ರತಿ ಮೂರು ನಿಮಿಷಕ್ಕೆ ಎಂಬಂತೆ ದಲಿತರ ಕೊಲೆಯಾಗುತ್ತಿದೆ. 18 ನಿಮಿಷಕ್ಕೆ ಒಮ್ಮೆ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ. ದೌರ್ಜನ್ಯ, ಅತ್ಯಾಚಾರ, ಕೊಲೆ, ಜಾತಿ ನಿಂದನೆ ಪ್ರಕರಣಗಳಲ್ಲಿ ಕೇವಲ ಬೆರಳಣಿಕೆ ಎಷ್ಟು ಶಿಕ್ಷೆ ಆಗುತ್ತದೆ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಾರೆ ದಲಿತರಿಗೆ ಭಯ ಹುಟ್ಟಿಸುತ್ತಾರೆ. ಕಂಬಾಲಪಲ್ಲಿ ಯಿಂದ ಖೈರ್ಲಂಜಿ ವರೆಗೆ ಆಧುನಿಕ 21ನೇ ಶತಮಾನದಲ್ಲಿ ನಿರಂತರವಾಗಿ ದಲಿತ ಮಹಿಳೆ ಮೇಲೆ ಅತ್ಯಾಚಾರ, ಬಲತ್ಕಾರ, ಮಾನಭಂಗ ಕೃತ್ಯಗಳು ಅವಿರತವಾಗಿ ನಡೆಯುತ್ತವೆ ಇವತ್ತಿಗೂ ಕೂಡ ದಲಿತ ಜನರು ಅಪಾಯದ ಬದುಕು ಸಾಗಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವಿಲ್ಲ. ಕ್ಷೌರ ಮಾಡುವುದಿಲ್ಲ. ಗುಡಿ ಪ್ರವೇಶವಿಲ್ಲ. ಹೋಟೆಲ್ ಪ್ರವೇಶವಿಲ್ಲ ಮತ್ತು ದಲಿತರಿ

ಮಹಿಳೆ ಕಾಣೆ

ಇಮೇಜ್
  ಈ ಭಾವಚಿತ್ರದಲ್ಲಿರುವ ದೇವಮ್ಮ ಗಂಡ ಬಸವರಾಜ ಅಸಿಹಾಳ, 34 ವರ್ಷ, ಮಾದಿಗ ಜನಾಂಗ ಸಾಕಿನ್ ಕುಣೆ ಕೆಲ್ಲೂರು ಗ್ರಾಮ ಸುಮಾರು ದಿನಗಳಿಂದ ಬಸವರಾಜ ಆಸಿಹಾಳ ಈತನನ್ನು ಮದುವೆ ಮಾಡಿಕೊಂಡಿದ್ದು, ಅವರಿಗೆ ನಾಲ್ಕು ಜನ ಮಕ್ಕಳಿದ್ದು, ದಿನಾಂಕ 19- 03-2023 ರಂದು ಬೆಳಿಗ್ಗೆ 10.00 ಗಂಟೆ ನಂತರ ಸಂಜೆ 5.00 ಗಂಟೆಯ ನಡುವಿನ ಅವಧಿಯಲ್ಲಿ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದು, ಎಲ್ಲಾ ಕಡೆಗೆ ಹುಡುಕಾಡಿ ನೋಡಿದ್ದು ಎಲ್ಲಿಯೂ ಸಹ ದೇವಮ್ಮಳ ಬಗ್ಗೆ ಯಾವೂದೇ ಮಾಹಿತಿ ಪತ್ತೆ ಹತ್ತಿರುವದಿಲ್ಲಾ ಹಾಗೂ ಈ ದಿನ ದಿನಾಂಕ 24-03-2023 ರವರಿಗೆ ಸಹ ಎಲ್ಲಾ ಕಡೆಗೆ ಹುಡುಕಾಟ ನಡೆಸಿ ಪ್ರಯತ್ನಪಟ್ಟರು ಸಹ ಎಲ್ಲಿಯು ದೇವಮ್ಮಳು ಸಿಗದೆ ಹೋದ್ದರಿಂದ ಕಾಣೆಯಾದ ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಆ ಸಂಖ್ಯೆ 31/2023 ಕಲಂ ಮಹಿಳೆ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ. ಕಾರಣ ಸದ್ದಿ ಕಾಣೆಯಾದ ವ್ಯಕ್ತಿಯ ಭಾವಚಿತ್ರವುಳ್ಳ ಪ್ರಕಟಣೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿ ಪತ್ತೆಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮಸ್ಕಿ ಪೋಲಿಸ್ ಠಾಣಾ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.

ವ್ಯಕ್ತಿ ಕಾಣೆ

ಇಮೇಜ್
ಈ ಮೇಲ್ಕಾಣಿಸಿದ ಭಾವಚಿತ್ರದಲ್ಲಿರುವ ವಿರೇಂದ್ರ ಪಾಟೀಲ್ ಈತನು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸದರಿಯವರ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿ 8 ವರ್ಷಗಳ ಹಿಂದೆ ಮೃತಪಟ್ಟಿದ್ದಳು. ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಬೇಜಾರು ಮಾಡಿಕೊಂಡು ಕೆಲಸದಲ್ಲಿಯು ಸಹ ಆಸಕ್ತಿವಹಿಸದೆ ಬೇಜಾರಿನಿಂದ ದಿನಗಳನ್ನು , 26.11-10-2022 ರಂದು ವಿರೇಂದ್ರ ಪಾಟೀಲ್ ಈತನು ಬೆಂಗಳೂರಿಗೆ ಹೋಗಿ ಕಿವಿ ತೋರಿಸಿಕೊಂಡು ಬರುತ್ತೇನೆಂದು ಮನೆಯಿಂದ ಹೋಗಿ ಕಾಣೆಯಾಗಿದ್ದು ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಆ ಸಂಖ್ಯೆ 07/2023 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ. ಕಾರಣ ಸದ್ರಿ ಕಾಣೆಯಾದ ವ್ಯಕ್ತಿಯ ಭಾವಚಿತ್ರವುಳ್ಳ ಪ್ರಕಟಣೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿ ಪತ್ತೆಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮಸ್ಕಿ ಪೋಲಿಸ್ ಠಾಣಾ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.

ಭಾಷಾ ತರಬೇತಿ ಕಾರ್ಯಕ್ರಮ

ಇಮೇಜ್
ಬೆಳಗಾವಿ : ಜಿಲ್ಲಾ ಪಂಚಾಯತ್ ಬೆಳಗಾವಿ ಶಾಲಾ ಶಿಕ್ಷಣ ವಿಭಾಗ ಹಾಗೂ ಸಿ.ಕೆ ಸಂಸ್ಥೆ ಮುಂಬೈ ಇವರುಗಳ ಸಂಯುಕ್ತ ಆಶ್ರಯದಲ್ಲಿ ಟೀಚರ್ ಇನ್ನೋವೇಟರ್ ಪ್ರೋಗ್ರಾಮ್ ದಡಿ 2024- 25 ನೇ ಸಾಲಿನ ಭಾಷಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಂಜನೇಯ, ಹಿರಿಯ ಉಪನ್ಯಾಸಕರು, ಡಯಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಹಳಷ್ಟು ಸರ್ಕಾರೇತರ ಸಂಸ್ಥೆಗಳು ಸರ್ಕಾರಿ ಶಾಲೆಗಳೊಂದಿಗೆ ಕಾರ್ಯನಿರ್ವಹಿಸಲು ಮುಂದೆ ಬರುತ್ತಿದ್ದು ,ಅದರಲ್ಲಿ ಸಿ.ಕೆ ಸಂಸ್ಥೆಯು ಒಂದಾಗಿದ್ದು. ಸಿ.ಕೆ ಸಂಸ್ಥೆ ಅತ್ಯುತ್ತಮವಾದ ತರಬೇತಿಯನ್ನು ನೀಡುತ್ತಿದೆ. ಶಿಕ್ಷಕರೆಲ್ಲರೂ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.  ಸುಮಾರು 150 ಶಾಲೆಗಳ ಶಿಕ್ಷಕರು ಎರಡು ದಿನಗಳ ತರಬೇತಿ ಕಾರ್ಯಗಾರದಲ್ಲಿ ಭಾಗಿಯಾಗಿ ತರಬೇತಿಯ ಸದುಪಯೋಗ ಪಡೆದುಕೊಂಡರು. ಶ್ರೀಮತಿ ಶಿಲ್ಪಾ ದೇಸಾಯಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸದಾಶಿವ ಕಾಂಬ್ಳೆ ಡಿಸ್ಟಿಕ್ ಮ್ಯಾನೇಜರ್, ರೂಪ ತುಬಚಿ ಹಾಗೂ ಸರಿತಾ ಗೋವೇಕರ್, ಕೋಚ್ ಇವರುಗಳ ಆಯೋಗದೊಂದಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಐ.ಡಿ ಹಿರೇಮಠ, ಕ್ಷೇತ್ರ ಸಮನ್ವಯ ಅಧಿಕಾರಿಗಳು, ಬೆಳಗಾವಿ ನಗರ ವಲಯ ಶ್ರೀಮತಿ ಲಲಿತ ಕ್ಯಾಸನವರ್,ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ನಗರ ವಲಯ, ಜಯಕುಮಾರ ಹೆಬ್ಬಳಿ, ಅಧ್ಯಕ್ಷರು, ಜಿಲ್ಲಾ ಶಿಕ್ಷಕ ಸಂಘ,ಬೆಳಗಾವಿ ಹಾಗೂ ವರ್ಷಾ ಪಾರ್ಚೂ

ಪ್ರಗತಿಯ ಪಥದ ಹಾದಿಯಲ್ಲಿಬ್ಯಾಂಕ - ರಾಜಶೇಖರ ಗೌಡ ಆಡೂರ

ಇಮೇಜ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ  ಕೊಪ್ಪಳ :- ಈ ದಿನಮಾನಗಳಲ್ಲಿ ' ಸಾಕಷ್ಟು ಪೈಪೋಟಿ ಮತ್ತು ಒತ್ತಡಗಳ ನಡುವೆಯೂ ಬ್ಯಾಂಕ್ ವ್ಯವಹಾರಿಕವಾಗಿ ಉತ್ತಮ ಪ್ರಗತಿ ಪಥದ ಹಾದಿಯಲ್ಲಿ ಸಾಗುತ್ತಿದೆ . ಈ ಒಂದು ಒಳ್ಳೆ ಕಾರ್ಯಕ್ಕೆ ಗ್ರಾಹಕರ ಬೆಂಬಲವೇ ಕಾರಣ ಎಂಬುದು ಸದಾ ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ರಾಜಶೇಖರ್ ಗೌಡ ಆಡೂರ ಹೇಳಿದರು. ನಗರದಲ್ಲಿರುವ ಶಿವ ಶಾಂತವೀರ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ 91ನೇ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿ ಅವರು ಮಾತನಾಡಿದರು . ' ಗ್ರಾಹಕರೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದುವುದು ಮೊದಲ ಆದ್ಯತೆ ಆಗಬೇಕು. ಗ್ರಾಹಕರ ವಿಶ್ವಾಸ ಗಳಿಸಿ ಉತ್ತಮ ಸೇವೆ ನೀಡಲು ವಿಶೇಷ ಗಮನ ನೀಡಲಾಗುತ್ತಿದೆ. ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಬ್ಯಾಂಕ್ ವ್ಯವಹಾರ ಸೇವೆಗಳನ್ನು ನೀಡಲಾಗುತ್ತಿದ್ದು ಬ್ಯಾಂಕಿನ ಆರ್ಥಿಕ ಸಹಾಯ ಪಡೆದ ಅನೇಕ ಗ್ರಾಹಕರು ಇಂದು ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆಂದು , ಪ್ರಸಕ್ತ ವರುಷದಲ್ಲಿ ಹಲವಾರು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಗ್ರಾಹಕರ ಹಾಗೂ ಶೇರುದಾರಿಗೆ " ಕೋರ್ ಬ್ಯಾಂಕಿಂಗ್ " ಜನಪ್ರಿಯತೆ ಪಡೆದಿದ್ದು , ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕೊಪ್ಪಳದ ಆರಾಧ್ಯ ದೈವ ಶ್ರೀಗವಿಸಿದ್ದೇಶ್ವರ ಸ್ವಾಮಿ

ಹಿರೇನಗನೂರು ಗ್ರಾಮದ ಆರಾಧ್ಯ ದೈವ ಕರಿಲಿಂಗೇಶ್ವರ ಪಲ್ಲಕ್ಕಿ ಉತ್ಸವ.ಅಯ್ಯಾಳಪ್ಪ ತಾತನ ಜಾತ್ರಾ.

ಇಮೇಜ್
ಹಟ್ಟಿ ಚಿನ್ನದ ಗಣಿ:26 ಲಿಂಗಸಗೂರು ತಾಲೂಕಿನ ಹಿರೇನಗನೂರು ಗ್ರಾಮದ ಹಾಲುಮತ ಸಮುದಾಯದ ಭಕ್ತರ ಆರಾಧ್ಯ ದೈವ ಶ್ರೀಕರಿಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ಶ್ರಾವಣ ಮಾಸದ ನಾಲ್ಕನೆಯ ಸೋಮವಾರ ಗ್ರಾಮದ ಆರಾಧ್ಯ ದೈವ ಭಕ್ತರಿಗೆ ಬೇಡಿದ ವರವ ನೀಡುವ ಶ್ರೀಕರಿಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸಾಹವು ಸಡಗರ ಸಂಭ್ರಮದಿಂದ ಜರುಗಿತು. ಗ್ರಾಮದ ಹೃದಯ ಭಾಗದಲ್ಲಿರುವ ಕರಿಲಿಂಗೇಶ್ವರ ದೇವರ ಮನೆಯಲ್ಲಿ ಹಿರೇನಗನೂರಿನ ಹೋರಪೇಟಿ ಹಾಲುಮತ ಬಂಧುಗಳ ಗುರುಗಳಾದ ಶ್ರೀ ಪರಮೇಶ್ವರ ಸ್ವಾಮಿ ಗಳು ರುದ್ರಾಭಿಷೇಕ ಹಾಗೂ ಮಂಗಳಾರತಿ ಮಾಡಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.ನಂತರ ಅಗಸೆಬಾಗಲಿಯ ಮುಖಾಂತರ ಹೊರಬಂದ ಪಲ್ಲಕ್ಕಿ. ಮುಖ್ಯ ರಸ್ತೆ ಮೂಲಕ ಶ್ರೀಅಯ್ಯಾಳಪ್ಪ ತಾತನ ಗದ್ದಿಗೆವರಿಗೆ ಹೋಗಿ ಅಲ್ಲಿ ಶ್ರೀಅಯ್ಯಾಳಪ್ಪ ತಾತನ ಗದ್ದುಗೆಯಲ್ಲಿ ಪೂಜೆ ನೆರವೇರಿದವು. ಹಿರೇನಗನೂರು ಚುಕ್ಕನಟ್ಟಿ ಗ್ರಾಮದ ಸಾವಿರಾರು ಭಕ್ತರು ಮಧ್ಯದಲ್ಲಿ ಹಿರಿಯರಾದ ಸಿದ್ದಣ್ಣ ಪೂಜಾರಿ "ಎರಡು ಕಾರ್ತಿಕ ಮಳೆ ಅಂದಾನ ಅಯ್ಯಾಳ"ಬುಡುಸಿನ್ಯಾಗ ನುಚ್ಚುಇಟ್ಟೀನಿ. ಗಂಗಾದೇವಿ ಇಂದ ಆದ್ಯಾಳ.ಹೀಗೆ ಅಯ್ಯಳಪ್ಪ ತಾತನ ಹೇಳಿಕೆ ಆಯಿತು.ನಂತರ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸಿದ ಪಂಚಾಯತಿ ಸದಸ್ಯರು. ಗುರುಗಳಾದ ಪರಮೇಶ್ವರ ಸ್ವಾಮಿ. ಮಂಗಳಮುಖಿಯರು ಹಾಗೂ ಗ್ರಾಮದ ಹಿರಿಯರಿಗೆ ವಿಶ್ವಚೇತನ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ಬಸವರಾಜ ಹೊರಪೇಟೆ ಇವರಿಂದ ದಂತ ಗಂಡರಿಗೆ ಸನ್ಮಾ

ತಿರ್ಥಭಾವಿ ಅಮರೇಶ್ವರ ಹೊಂಡದಲ್ಲಿ ಮಸ್ಕಿ ಮಲ್ಲಿಕಾರ್ಜುನ ದೇವರ ಪೂಜೆ

ಇಮೇಜ್
ಮಸ್ಕಿ: ಶ್ರಾವಣಮಾಸದ ನಾಲ್ಕನೇ ಸೋಮವಾರದ ಅಂಗವಾಗಿ ಪಟ್ಟಣದ ಆರಾಧ್ಯದೈವ ಐತಿಹಾಸಿಕ ಬೆಟ್ಟದ ಶ್ರೀಮಲ್ಲಿಕಾರ್ಜುನ ದೇವರ ವಿಶೇಷ ಪೂಜಾ ಹಾಗೂ ಪಲ್ಲಕ್ಕಿ ಮೆರವಣಿಗೆ ಪಾದಯಾತ್ರೆ ಶ್ರದ್ದಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಬೆಟ್ಟದಲ್ಲಿ ಸಾಲು ಸಾಲು ಭಕ್ತರು ಶ್ರೀಮಲ್ಲಿಕಾರ್ಜುನ ದೇವರ ದರ್ಶನ ಪಡೆದರು. ವಿಶೇಷ ಪೂಜೆ ಅಭಿಷೇಕದಂತೆ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು. ನಾಲ್ಕನೇ ಸೋಮವಾರದ ವಿಶೇಷ ಪದ್ಧತಿಯಂತೆ ತಾಲ್ಲೂಕಿನ ತೀರ್ಥಬಾವಿ ಶ್ರೀಅಮರೇಶ್ವರ ದೇವಸ್ಥಾನಕ್ಕೆ ಮಲ್ಲಿಕಾರ್ಜುನ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಸಮೇತ ಆರ್ಚಕರು, ಭಕ್ತರು ಪಾದ ಯಾತ್ರೆ ಮೂಲಕ ತೆರಳಿ ತಿರ್ಥಭಾವಿ ಅಮರೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿನ ದೇವರ ಹೊಂಡದಲ್ಲಿ ಮಲ್ಲಯ್ಯಗೆ ಹಾಗೂ ಅಮರಯ್ಯನಿಗೆ ಪೂಜೆ ಸಲ್ಲಿಸಿ ಹೊಂಡದಲ್ಲಿನ ನೀರು ತುಂಬಿಕೊಂಡು ಮಲ್ಲಯ್ಯನ ಪಲ್ಲಕ್ಕಿಯ ಮೆರವಣಿಗೆ ಅಡವಿಭಾವಿ ತಾಂಡ, ಬೆಲ್ಲದಮರಡಿ ಹೀಗೆ ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆಯ ಮೂಲಕ ಮಸ್ಕಿಗೆ ಸಂಜೆ ಆಗಮಿಸಿತು. ಊರಿನ ದೈವ ಮಲ್ಲಯ್ಯನ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿ ಹಾಗೂ ಕುಂಬವನ್ನು ವಾದ್ಯಮೇಳ, ಮಹಿಳೆಯರ ಕಳಸಕನ್ನಡಿಯೊಂದಿಗೆ ಮುಖ್ಯಬಜಾರ ಮೂಲಕ ಶ್ರೀವೀರಭದ್ರೇಶ್ವರ ದೇವಸ್ಥಾನ, ಬಸವಣ್ಣ ದೇವಸ್ಥಾನದಿಂದ ತೇರಿನ ಮನೆಯತ್ತ ಬರಮಾಡಿ ಕೊಳ್ಳಲಾಯಿತು. ನಂತರ ಸಾಯಂಕಾಲ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಮೇಲಿನ ಹೂವಿನ ಹರಾಜು ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಮ

ಉಟಕನೂರು ಶ್ರೀ ಬಸವಲಿಂಗೇಶ್ವರ ಜಾತ್ರಾ ಮಹೋತ್ಸವ

ಇಮೇಜ್
  ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಇರುವ ಉಟಕನೂರು ಶ್ರೀ ಬಸವಲಿಂಗೇಶ್ವರ ಜಾತ್ರಾ ಮಹೋತ್ಸವು ಜರುಗಿತು.  ಬೆಳಿಗ್ಗೆ ಉಟಕನೂರು ಶ್ರೀ ಬಸವಲಿಂಗೇಶ್ವರ ಗದ್ದುಗೆಗೆ ರುದ್ರಾಭೀಷೇಕ,ದೇವರ ಪಠಣ ಸಹಿತ ಪಂಚಾಮೃತ ಅಭಿಷೇಕ ಶಿವಶತನಾಮವಳಿ ಮೂಲಕ ತಾತನ ಗದ್ದುಗೆಗೆ ಅಭಿಷೇಕ ಪೂಜೆಯನ್ನು ಶ್ರೀ ಬಸವರಾಜಸ್ವಾಮಿ ಕಾಳಹಸ್ತಿಮಠ ನೆರವೇರಿಸಿದರು. ತದನಂತರ ಶ್ರೀ ಬಸವಲಿಂಗೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಡೊಳ್ಳು, ಬಾಜಿ ಕುಂಭ, ಕಳಸ ಮುಖಾಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವವು ಶ್ರೀ ಬಸವಲಿಂಗೇಶ್ವರ ತಾತನವರ ಘೊಷಣಿಯನ್ನು ಭಕ್ತಿ ಭಾವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ನಂತರ ಜರುಗಿದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಉಟಕನೂರು ಶ್ರೀ ಮರಿ ಬಸವಲಿಂಗೇಶ್ವರ ತಾತನವರು ಹಾಗೂ ಜಂಗಮರಹಳ್ಳಿ ಸುಕ್ಷೇತ್ರದ ಪೂಜ್ಯರಾದ ಶ್ರೀ ದಂಡಗುಂಡಪ್ಪ ತಾತನವರು, ದೇವಸ್ಥಾನದ ಅರ್ಚಕರಾದ ಶ್ರೀ ಆದಯ್ಯಸ್ವಾಮಿ ಹಾಗೂ ಊರಿನ ಗುರುಹಿರಿಯರು,ತಾಯಂದಿರು ಉಪಸ್ಥಿತಿ ಇದ್ದರು ನಂತರ ಜಾತ್ರೆಗೆ ಬಂದಂತ ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು.

ಸಿದ್ದರಾಮಯ್ಯ ಮೇಲಿನ ಪ್ರಾಸಿಕ್ಯೂಶನ್ ಅನುಮತಿ ಖಂಡಿಸಿ ಬೃಹತ್ ಪ್ರತಿಭಟನೆ

ಇಮೇಜ್
  ಮಸ್ಕಿ : ಅಹಿಂದ ವರ್ಗಗಳ ನಾಯಕರು, ಶೋಷಿತ ಸಮುದಾಯಗಳ ನೇತಾರರು, ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ಕೇಂದ್ರ ಸರ್ಕಾರದ ಅಣತಿಯಂತೆ ಸಂವಿಧಾನ ಬಾಹಿರವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದಿಂದ ಕಾಲ್ನಡಿಗೆ ಮೆರವಣಿಗೆ ಮೂಲಕ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದ ಬಳಿ ಮಸ್ಕಿ ತಹಸೀಲ್ದಾ‌ರರಾದ ಡಾ.ಮಲ್ಲಪ್ಪ .ಕೆ.ಯರಗೋಳ ಇವರ ಮುಖಾಂತರ ರಾಷ್ಟ್ರಪತಿಯವರಿಗೆ ಮಸ್ಕಿ ತಾಲೂಕಿನ ವತಿಯಿಂದ ಕ್ಷೇತ್ರದ ಶಾಸಕರು ಹಾಗೂ ಸರ್ವ ಕಾರ್ಯಕರ್ತರ ಸಮ್ಮುಖದಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು. ಕೇಂದ್ರದ ಬಿಜೆಪಿ ಸರ್ಕಾರದ ಅಣತಿಯಂತೆ ರಾಜ್ಯಪಾಲರಾದ ಥಾವರ್‌ ಚಂದ್ ಗೆಹ್ಲೋಟ್ ಅವರು, ಅಹಿಂದ ವರ್ಗಗಳ ನಾಯಕರು, ಶೋಷಿತ ವರ್ಗಗಳ ನೇತಾರರು ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ವಿರುದ್ಧ, ಸಂವಿಧಾನ ಬಾಹಿರವಾಗಿ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿರುವುದು ಖಂಡನಾರ್ಹವಾಗಿದೆ. ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರ ನಡೆ ರಾಜಭವನಕ್ಕೆ ಅಪಮಾನವಾಗಿದೆ. ದುರುಪಯೋಗಪಡಿಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷ ಚುನಾವಣೆಯ ಸಂದರ್ಭದಲ್

ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯ : ಉದ್ಘಾಟನೆ ಭಾಗ್ಯ ಕಾಣದ ಸಮುದಾಯ ಆರೋಗ್ಯ ಕೇಂದ್ರ

ಇಮೇಜ್
  ವರದಿ : ಗ್ಯಾನಪ್ಪ ದೊಡ್ಡಮನಿ ಮಸ್ಕಿ : ಸರಕಾರ ಮಸ್ಕಿ ತಾಲೂಕು ಎಂದು ಘೋಷಣೆ ಮಾಡಿ ಆರು ವರ್ಷ ಕಳೆದರೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ ಹಾಗೂ ಖಾಯಂ ತಜ್ಞ ವೈದ್ಯರೂ, ಸಿಬ್ಬಂದಿ ವರ್ಗ ಇಲ್ಲದೇ ರೋಗಿಗಳು ಪರದಾಡುವ ಪರಿಸ್ತಿತಿ ನಿರ್ಮಾಣವಾಗಿದೆ. ತಾಲೂಕಿಗೆ ಸಾಕಷ್ಟು ಹಳ್ಳಿಗಳು, ತಾಂಡಾಗಳು ಒಳಪಡುತ್ತಿದ್ದು, ಜನರು ನಾನಾ ರೋಗರುಜಿನಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಡರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಸಿಂಧನೂರು, ರಾಯಚೂರು, ಬಾಗಲಕೋಟೆ, ಕವಿತಾಳ, ಮುದಗಲ್, ಲಿಂಗಸುಗೂರಿನ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಹೋಗುವ ದುಸ್ಥಿತಿ ಬಂದಿದೆ. ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದರಿಂದ ಬಡಮಹಿಳೆಯರಿಗೆ ಹಿಂದೆ ಪ್ರತಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸಾ ಶಿಬಿರವು ಕಳೆದ ಐದು ವರ್ಷದಿಂದ ನಡೆಯದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವಿವಿಧ ಹಳ್ಳಿಗಳಿಂದ ಮಹಿಳೆಯರು ಸಂತಾನ ಶಕ್ತಿಹರಣ ಚಿಕಿತ್ಸೆಗೆಂದು ಪಟ್ಟಣಕ್ಕೆ ಬಂದರೆ ಮರಳಿ ಸರಕಾರಿ ಸಮುದಾಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ. ಏಕೆಂದರೆ ಇಲ್ಲಿರುವುದು ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ, ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲು ಸಮುದಾಯ ಆರೋಗ್ಯ ಕೇಂದ್ರ ಬೇಕಾಗುತ್ತದೆ. ಹಾಗೂ ನುರಿತ ಎಂಬಿಬಿಎಸ್ ಕಾಯಂ ವೈದ್ಯರು ಇಲ್ಲದಿರುವುದು, ಸರಕಾರ

*ಗಣೇಶ್ ಚತುರ್ಥಿ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ*

ಇಮೇಜ್
"ಪಟ್ಟಣದ ಹರಪನಹಳ್ಳಿ ರಸ್ತೆ ಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಭಾನುವಾರ ಶಾಂತಿ ಸಭೆ ನೆಡೆಸಿದರು." ಕೊಟ್ಟೂರು : ಮಾರ್ಗಸೂಚಿ ಪಾಲನೆಯೊಂದಿಗೆ ಶಾಂತಿಯುತವಾಗಿ ಗಣೇಶೋತ್ಸವ ,ಈದ್ ಮಿಲಾದ್ ಆಚರಿಸಲು ಡಿವೈಎಸ್ಪಿ  ಮಲ್ಲೇಶ್ ಮಲ್ಲಾಪುರ ನೇತೃತ್ವದಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ನಿರ್ಧರಿಸಲಾಯಿತು. ಪೊಲೀಸ್‌ ಠಾಣೆ ಆವರಣದಲ್ಲಿ ಭಾನುವಾರ ಪೋಲಿಸ್ ಇಲಾಖೆ ಆಯೋಜಿಸಿದ ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ತಾಲೂಕಿನ ವಿವಿಧ ಸಮುದಾಯ, ಧರ್ಮಗಳ ಮುಖಂಡರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಡಿವೈಎಸ್ಪಿ  ಮಲ್ಲೇಶ್ ಮಲ್ಲಾಪುರ ಮಾತನಾಡಿ, ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಸಾಮರಸ್ಯದಿಂದ ಆಚರಿಸಬೇಕು. ಯಾವುದೇ ಅಡಚಣೆ ಆಗದಂತೆ ಎಚ್ಚರಿಕೆ ವಹಿಸಬೇಕು .ಮೂರ್ತಿ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಅನುಮತಿ ಪಡೆಯಲು ಪಟ್ಟಣ ಪಂಚಾಯಿತಿ,ಕೆಇಬಿ, ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಅವಕಾಶ ಕಲ್ಪಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಒಂದೆಡೆ ಅನುಮತಿಯನ್ನು ನೀಡುವರು. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ಸರ್ಕಾರದ ನಿಯಮದಂತೆ ಮೂರು, ಐದು, ಅನ್ನೊಂದು ದಿನಗಳ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿದೆ

ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಯವರಿಗೆ ಮಸ್ಕಿ ಅಭಿಮಾನಿಗಳಿಂದ ಸನ್ಮಾನ

ಇಮೇಜ್
  ಮಸ್ಕಿ : ಇಂದು ಸಿಂಧನೂರು ನಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಯವರಿಗೆ ಮಸ್ಕಿ ಅಭಿಮಾನಿಗಳ ಬಳಗ ದಿಂದ ಸನ್ಮಾನ ಮಾಡಲಾಯಿತು. ನಂತರ ಅಭಿಮಾನಿಯಾದ ಮೈಹಿಬೂಬು ರವರು ನಮ್ಮ ಮನೆಗೆ ಬರಬೇಕು ಎಂದು ಮನವಿ ಮಾಡಿದ್ದರು ಇದಕ್ಕೆ ಸಮಯ ಸಿಕ್ಕ ತಕ್ಷಣ ಬರುವೆ ಎಂದು ಹೇಳಿದರು ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ, ಮೈಹಿಬೂಬು ಹಣಿಗೆ,ಬಸು ವೆಂಕಾಟಾಪುರ,ಸಿದ್ದು ಮುರಾರಿ, ಮೌನೇಶ್ ಹಸ್ಮಕಲ್,ಆನಂದ ಕನಸಾವಿ ಇದ್ದರು.

ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ 100 ಮೆಡಿಕಲ್ ಕಿಟ್ ವಿತರಣೆ.

ಇಮೇಜ್
  ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ CITU ಆಫೀಸ್ ನಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಫೆಡರೇಷನ್ ಲಿಂಗಸ್ಗೂರು ತಾಲೂಕ ಸಮಿತಿ (CWFI) ಕಾರ್ಮಿಕರ ಕಲ್ಯಾಣ ಮಂಡಳಿ ನಿರೀಕ್ಷಕರು ಲಿಂಗಸ್ಗೂರು.ಇವರ ಮುಖಾಂತರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸುಮಾರು 100 ಮೆಡಿಕಲ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.ತಾಲೂಕಿನ 4 ಗ್ರಾಮ ಘಟಕದ ಕಟ್ಟಡ ಕಾರ್ಮಿಕರಿಗೆ 100 ಕಿಟ್ ಗಳನ್ನು ವಿತರಣೆ ಮಾಡಲಾಯಿತು ಇದೆ ಸಂದರ್ಭದಲ್ಲಿ ಲಿಂಗಸ್ಗೂರು ತಾಲೂಕ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರೀಕ್ಷಕರು ಆದಾ ಶಾಂತ ಮೂರ್ತಿ.ಹಾಗೂ ಮೌನೇಶ್,ಅರುಣ್ ಕುಮಾರ್,ಮತ್ತು CITU ತಾಲೂಕ ಸಂಚಾಲಕರಾದ ಕಾಂ ಮಹಮ್ಮದ್ ಹನೀಫ್, DYFI ಭಕ್ಷಸಾಬ,CWFI ತಾಲೂಕ ಪ್ರಧಾನ ಕಾರ್ಯದರ್ಶಿ ಕಾಂ ನಿಂಗಪ್ಪ ಎಂ ವೀರಾಪೂರು, ಉಪಾಧ್ಯಕ್ಷರು ನಜೀರ್ ಮಾಚನೂರು,ಜಿಲ್ಲಾ ಸಹ ಕಾರ್ಯದರ್ಶಿ ಶ್ರೀ ಗೀತಾ ನೀಲೋಗಲ್,ತಾಲೂಕ ಸಹ ಕಾರ್ಯದರ್ಶಿ, ದಾವುದ್ ಹಟ್ಟಿ,, ನಾಗರಾಜ್ ಹನಮಗುಡ್ಡ, ಹಾಜೀಬಾಬು, ಖಾಜಾಮೈನೂದಿನ್,ಮೌಲಾಸಾಬ,ಹಾಗೂ ಎಲ್ಲಾ ಗ್ರಾಮ ಘಟಕದ ಕಟ್ಟಡ ಕಾರ್ಮಿಕರು ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಗಲುವೇಷ ಕಲಾವಿದರಿಂದ ವಿಶ್ವ ಜಾನಪದ ದಿನ ಸಂಭ್ರಮಾಚರಣೆ

ಇಮೇಜ್
  ಮಸ್ಕಿ: ಜಾನಪದ ಕಲೆ ನಮ್ಮ ಪೂರ್ವಜರಿಂದ ನಮಗೆ ಬಂದ ಬಳುವಳಿ, ಇದನ್ನು ಉಳಿಸಿಕೊಂಡು ಹೋಗುವುದು ಈಗಿನ ಯುವಪೀಳಿಗೆಯ ಜವಾಬ್ದಾರಿ ಎಂದು ನಿವೃತ್ತ ಶಿಕ್ಷಕ ಚನ್ನಬಸಪ್ಪ ಅಭಿಪ್ರಾಯ ಪಟ್ಟರು.ತಾಲೂಕಿನ ಗುಡದೂರು ಗ್ರಾಮದ ಶ್ರೀ ಕೆರೆಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಹಾಗೂ ಜಾನಪದ ಸಾಂಸ್ಕೃತಿಕ ಟ್ರಸ್ಟ ಹಸಮಕಲ್ ಇವರ ಸಹಯೋಗದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜಾನಪದ ಎನ್ನುವುದು ಮೂಲತಃ ಜನರ ಮುಖಾಂತರ ನುಡಿಯಾಗಿ ಬಂದಿರುವುದೇ ಜಾನಪದ ವಾಗಿದೆ. ಈ ಜಾನಪದ ಕಲೆ ಎಂಬುದು ನಶಿಸಿ ಹೋಗಬಾರದು ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತಾಗಬೇಕು. ಜಾನಪದ ಎನ್ನುವುದು ಮನಸ್ಸಿನ ಆರೋಗ್ಯಕ್ಕೆ ಔಷಧಿ ಇದ್ದಂತೆ ಇದು ನಮ್ಮ ಜೀವನದ ಬದುಕಿನ ಒಂದು ಭಾಗ ಈ ಕಲೆಯನ್ನು ಹೀಗೆ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ನಂತರ ಹಲವು ಜಾನಪದ ಕಲಾತಂಡಗಳು ಪ್ರದರ್ಶನ ನೀಡದವು. ಇದೇ ಸಂದರ್ಭದಲ್ಲಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಚನ್ನಪ್ಪ ಸಾಹುಕಾರ, ಗ್ರಾ.ಪಂ. ಸದಸ್ಯರಾದ ಶ್ರೀ ಚಂದ್ರಗೌಡ ಪೋಲಿಸ್ ಪಾಟಿಲ್, ನೀಲಮ್ಮ ಮಾಲಿಪಾಟೀಲ್, ಲಿಂಗಮ್ಮ ಜುಮ್ಲಾಪುರ, ಬಸಪ್ಪ, ಮಾಜಿ ಸೈನಿಕರು, ಅಧ್ಯಕ್ಷರಾದ ತಿರುಪತಿ ಮಾಲಿಪಾಟೀಲ್, ಕ.ಜಾ ಅಕಾಡೆಮಿ ಸದಸ್ಯರಾದ ರಂಗಪ್ಪ ಮಾಸ್ತರ ತಡಕಲ್ ಮಾಜಿ ಕ.ಜಾ.ಅಕಾಡೆಮಿ ಸದಸ್ಯ ನಾರಾಯಣಪ್ಪ ಮಾಡಶಿರವಾರ, ಬಹುರ

ಕೋಳಿ ಉದ್ಯಮದಲ್ಲಿ ಸಾಮರ್ಥ್ಯ ವೃದ್ಧಿ, ಉದ್ಯೋಗ ಸೃಜನೆಗೆ ಕರ್ನಾಟಕ ಕೋಳಿ ಸಾಕಾಣಿಕೆ ಸಂಘ - ಅಮೆರಿಕಾ ಸಂಸ್ಥೆ ನಡುವೆ ಒಪ್ಪoದ್ದ

ಇಮೇಜ್
  ಬೆಂಗಳೂರು, ಆ, 24; ರಾಜ್ಯದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಕೋಳಿ ಸಾಕಾಣಿಕೆ ಉದ್ಯಮದಲ್ಲಿ ಮತ್ತಷ್ಟು ಉದ್ಯೋಗ ಹೆಚ್ಚಿಸಲು, ಜನರಿಗೆ ಪೌಷ್ಟಿಕ ಆಹಾರ ಪೂರೈಸುವ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯನ್ನು ವೇಗಗೊಳಿಸಲು ಕರ್ನಾಟಕ ಕೋಳಿ ಸಾಕಾಣಿಕೆದಾರರ ಸಂಘವು ಅಮೆರಿಕಾದೊಂದಿಗೆ ತಿಳುವಳಿಕ ಒಪ್ಪoದ್ದಕ್ಕೆ ಸಹಿ ಮಾಡಿದೆ.  ಈ ಒಪ್ಪಂದದ ಪಾಲುದಾರಿಕೆಯಿಂದ ಕಕ್ಕುಟೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಯುಎಸ್ಎಸ್ ಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಮ್ ಸುಟರ್ ಮತ್ತು ಅಮೆರಿಕಾದ ಸೋಯಾ ಉತ್ಕೃಷ್ಟತಾ ಕೇಂದ್ರಗಳೊಂದಿಗೆ ಸಹಯೋಗ ಹೊಂದುವ ಉದ್ದೇಶದಿಂದ ಕರ್ನಾಟಕ ಕೋಳಿ ರೈತರ ಮತ್ತು ತಳಿಗಾರರ ಸಂಘದ ಅಧ್ಯಕ್ಷ ನವೀನ್ ಪಶುಪರ್ತಿ ಒಪ್ಪಂದಕ್ಕೆ ಸಹಿ ಮಾಡಿದರು.  ಕೌಶಲ್ಯ ಭಾರತ ಯೋಜನೆಯಡಿ ಭಾರತದ ಕೋಳಿ ಉದ್ಯಮದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕೋಮರ್ಲ ನಂದು ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಂದುಸ್‌ನ ನಿರ್ದೇಶಕರರಾದ ನವೀನ್ ಪಶುಪರ್ತಿ ಇತ್ತೀಚೆಗೆ ಕರ್ನಾಟಕ ಕೋಳಿ ಸಾಕಾಣಿಕೆ ಚಟುವಟಿಕೆಯನ್ನು ಪ್ರತಿನಿಧಿಸುವ ಪ್ರಮುಖ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕೋಳಿ ಮತ್ತು ಕೋಳಿ ತಳಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಮತ್ತು ಫೆಡರಲ್ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ ಎಂದರು.  ನವೀನ್ ಪಶುಪರ್ತಿ ಎಪಿಎಸ್ ಎಜುಕೇಶನ್ ಟ್ರಸ್ಟ್‌ನ ಹೆ

ಲಯನ್ಸ್ 317 ಎಫ್ ನಿಂದ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ

ಇಮೇಜ್
  ಬೆಂಗಳೂರು ಆಗಸ್ಟ್ 24; ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ದೇವಸಂದ್ರದ ಶಿರಡಿ ಸಾಯಿ ಆಸ್ಪತ್ರೆಯಲ್ಲಿ‌ ಲಯನ್ಸ್ ಜಿಲ್ಲೆ 317ಎಫ್ ಸೇವಾ ಪ್ರತಿಷ್ಢಾನ ವತಿಯಿಂದ ಲಯನ್ಸ್ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಿದೆ. ಲಯನ್ಸ್ 317ಎಫ್ ವತಿಯಿಂದ ಸ್ಥಾಪಿಸಲಾಗಿರುವ ಹತ್ತು ಡಯಾಲಿಸಿಸ್ ಯಂತ್ರಗಳನ್ನು ಅಂತರಾಷ್ಟ್ರೀಯ ದ್ವಿತೀಯ ಉಪಾಧ್ಯಕ್ಷ ಮಾರ್ಕ್ಸ್ ಎಸ್ ಲಯಿನ್, ಲಿನ್ ಲಿಯನ್ ವಿದ್ಯುಕ್ತವಾಗಿ ಉದ್ಘಾಟಿಸಿದರು. ಲಯನ್ಸ್ 317ಎಫ್ ನ ಜಿಲ್ಲಾ ರಾಜ್ಯಪಾಲ ನಾರಾಯಣಸ್ವಾಮಿ ಮಾತನಾಡಿ,ಲಯನ್ಸ್ 317 ಎಫ್ ನಿಂದ ಬಡ ಕಿಡ್ನಿ ರೋಗಿಗಳಿಗೆ ಅನುಕೂಲವಾಗುವಂತೆ ಉಚಿತವಾಗಿ ಡಯಾಲಿಸಿಸ್ ಮಾಡಲು ಹತ್ತು ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ, ಅತೀ ಬಡವರಿಗೆ ಉಚಿತ ಹಾಗೂ ಬಡವರಿಗೆ ಅತಿ ಕಡಿಮೆ ದರದಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ವಿ.ವಿ.ಕೃಷ್ಣಾರೆಡ್ಡಿ, ವಂಶಿಧರ್ ಬಾಬು, ಜಿಲ್ಲಾ ಉಪ ರಾಜ್ಯಪಾಲರಾದ ಆಕಾಶ್ ಸುವರ್ಣ,ರಾಜು ಚಂದ್ರ ಶೇಖರ್, ಮಾಜಿ ರಾಜ್ಯಪಾಲರಾದ ಬಿ.ಎಸ್.ನಾಗರಾಜ್, ಎನ್.ಕುಮಾರ್, ದೀಪಕ್ ಸುಮನ್, ಎಚ್.ಕೆ.ಗಿರಿಧರ್ ಮತ್ತಿತರರು ಭಾಗವಹಿಸಿದ್ದರು.

*ಯುವಕ ಕಾಣೆ *

ಇಮೇಜ್
ಕಿರಣಕುಮಾರ ಎಂಬಾತನು ರಾಯಚೂರು ನಂದಿನಿ ಕಾಲೇಜ್‌ನಲ್ಲಿ GNM ವಿಧ್ಯಾಭ್ಯಾಸ ಮಾಡಿಕೊಂಡು ಅಲ್ಲಿಯೇ PGಯಲ್ಲಿ ಇರುತ್ತಿದ್ದು, ದಿನಾಂಕ 01-03-2022 ರಂದು ಕಿರಣಕುಮಾರ ಈತನು ರಾಯಚೂರಿ ನಿಂದ 371 ಜೆ ಸರ್ಟಿಪಿಕೇಟ್ ಮಾಡಿಸಿಕೊಂಡು ಹೋಗಲು ಮಸ್ಕಿಗೆ ಬಂದಿದ್ದಾಗ, ತನಗೆ GNM ವಿಧ್ಯಾಭ್ಯಾಸ ಕಠಿಣವಾಗುತ್ತಿದೆ ನಾನು ಅದನ್ನು ಓದುವುದಿಲ್ಲಾ, 2-3 ದಿನ ಬಿಟ್ಟು ಕಾಲೇಜ್‌ಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಲ್ಲಿಯೇ ಇದ್ದು, ದಿನಾಂಕ 08-03-2022 ರಂದು ಬೆಳಿಗ್ಗೆ 9.30 ಗಂಟೆ ಸುಮಾರು ಮಸ್ಕಿಯ ತನ್ನ ಮನೆಯಿಂದ ಹೋದ ಕಿರಣಕುಮಾರನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಆ ಸಂಖ್ಯೆ 40/2022 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ. ಕಾರಣ ಸದ್ರಿ ಕಾಣೆಯಾದ ವ್ಯಕ್ತಿಯ ಭಾವಚಿತ್ರವುಳ್ಳ ಪ್ರಕಟಣೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿ ಪತ್ತೆಗೆ ಸಹಕರಿಸಬೇಕಾಗಿ ವಿನಂತಿ ಎಂದು ಮಸ್ಕಿ ಪೋಲಿಸ್ ಠಾಣಾ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆ ೨೦೦ ದಿನಗಳ ಕೆಲಸ ಮತ್ತು ೬೦೦ ಕೂಲಿ ಹೆಚ್ಚಿಸಲು ಮನವಿ

ಇಮೇಜ್
  ಕೊಟ್ಟೂರು : ಭೂರಹಿತರಿಗೆ ಭೂಮಿ, ನಿವೇಶನ, ವಸತಿ ರಹಿತರಿಗೆ ಮನೆ ಸೌಕರ್ಯ, ಸರ್ಕಾರದ ಭೂಮಿ ಸಾಗುವಳಿಗೆ ಪಟ್ಟಾಕ್ಕಾಗಿ ಒತ್ತಾಯ,  ಉದ್ಯೋಗ ಖಾತ್ರಿ ಯೋಜನೆಯಲ್ಲಿ  ೨೦೦ ದಿನಗಳ ಕೆಲಸ ಮತ್ತು ೬೦೦ ಕೂಲಿ  ಹೆಚ್ಚಿಸಲು ಒತ್ತಾಯಿಸಿ  ಜಿಲ್ಲಾಧ್ಯಕ್ಷ ಹುಲಿಕಟ್ಟಿ ಮೈಲಪ್ಪ ತಾಲೂಕು ಉಪತಹಶೀಲ್ದಾರ್ ಅನ್ನದಾನೇಶ್ ಬಿ.ಪತ್ತಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.  ಶುಕ್ರವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿ ಭೂಕಬಳಿಕೆಗೆ ಸಂಬಧಿಸಿದಂತೆ ಹೇಸರಿನಲ್ಲಿ ಸಣ್ಣ ಪುಟ್ಟ ರೈತರು ತಲೆ ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲಿಸುವ ಸರ್ಕಾರದ ನಿರ್ಧಾರವನ್ನು ಅರ್ಯಲಾ ಸಂಘಟನೆಯು ಬಲವಾಗಿ ಖಂಡಿಸುತ್ತದೆ ಎಂದರು.   ನಗರಗಳಿಗೆ ಹೊಂದಿಕೊಂಡಿರುವ ಸಣ್ಣ ಪಟ್ಟಣಗಳು, ಗ್ರಾಮ ಕೇಂದ್ರಗಳಲ್ಲೂ ಭೂ ಕಬಳಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ಕಬಳಿಸುವವರನ್ನು ಕಾನೂನಿನ ವ್ಯಾಪ್ತಿಗೆ ತಂದು ಶಿಕ್ಷೆಗೆ ಗುರಿಪಡಿಸಬೇಕು  ರೈತರು ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಮೂರು ಎಕರೆವರೆಗಿನ ಒತ್ತುವರಿಯನ್ನು ತೆರವುಗೊಳಿಸದಿರುವ ನಿರ್ಧಾರವನ್ನು ರಾಜ್ಯ ಸರ್ಕಾರವು ೨೦೧೫ರಲ್ಲೇ ಕೈಗೊಂಡಿತ್ತು. ಅಂತಹ ರೈತರ ವಿರುದ್ಧ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವುದನ್ನು ತಡೆಯುವ ಅವಕಾಶ ಸರ್ಕಾರದ ಕೈಯಲ್ಲೇ ಇತ್ತು. ಈಗಲೂ, ಅಂತಹ ರೈತರ ವಿರುದ್ಧದ ಪ್ರಕರಣಗಳನ್ನಷ್ಟೇ ಕೈಬಿಡುವ ತೀರ್ಮಾನ

*ತಾಯಿಗಾಗಿ ಒಂದು ಗಿಡ ನೆಡಿ .....ಚಂದ್ರಶೇಖರ ಪಾಟೀಲ*

ಇಮೇಜ್
ಸಿಂಧನೂರು ತಾಲೂಕಿನ ದೇವರಗುಡಿ ಮಲ್ಲಾಪೂರ ರಸ್ತೆಯ ಅಕ್ಕಪಕ್ಕದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ರಾಯಚೂರು, ಸಾಮಾಜಿಕ ಅರಣ್ಯ ವಿಭಾಗ ರಾಯಚೂರು,ತಾಲೂಕು ಪಂಚಾಯತ್ ಸಿಂಧನೂರು, ಸಾಮಾಜಿಕ ಅರಣ್ಯ ವಲಯ ಸಿಂಧನೂರು ಹಾಗೂ ವನಸಿರಿ ಫೌಂಡೇಶನ್ (ರಿ)ರಾಯಚೂರು ಸಂಯುಕ್ತಾಶ್ರಯದಲ್ಲಿ ತಾಯಿ ಹೆಸರಲ್ಲಿ ಒಂದು ಗಿಡ ನೆಡಿ ಅಭಿಯಾನ ಕಾರ್ಯಕ್ರಮ ನೆರವೇರಿತು. ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ತಾಯಿಯ ಅಭಿಯಾನ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು. ಪ್ರತಿಯೊಬ್ಬ ನಾಗರಿಕರು ತಮ್ಮ ತಾಯಿಯ ಹೆಸರಲ್ಲಿ ಒಂದು ಗಿಡ ನೆಟ್ಟು ಬೆಳಸುವಂತೆ ನಮ್ಮ ದೇಶದ ಪ್ರಧಾನ ಮಂತ್ರಿಗಳ ಘೋಷವಾಕ್ಯವಾಗಿದೆ ಅದನ್ನು ಎಲ್ಲರೂ ಪಾಲಿಸುವಂತಾಗಬೇಕು ಮತ್ತು ಇಂತಹ ಕಾರ್ಯಗಳನ್ನು ವನಸಿರಿ ಫೌಂಡೇಶನ್ ನಂತಹ ಸಂಘ ಸಂಸ್ಥೆಗಳು ಮುಂಚೂಣಿಯಲ್ಲಿ ನಿಂತು ಕಾರ್ಯಗತಗೊಳಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದರು. ನಂತರ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಮಾತನಾಡಿ ದೇಶದ ಪ್ರಧಾನಮಂತ್ರಿಗಳು ಕೈಗೊಂಡ ತಾಯಿಗಾಗಿ ಒಂದು ಗಿಡ ನೆಡುವ ಅಭಿಯಾನ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬರೂ ಇಂತಹ ಕಾರ್ಯಗಳಲ್ಲಿ ಭಾಗವಹಿಸಬೇಕು ಮತ್ತು ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಲ್ಲಿ ಒಂದೊಂದು ಗಿಡನೆಟ್ಟು ಪಾಲನೆ ಪೋಷಣೆ ಮಾಡಬೇಕು ಇದರ ಮೂಲಕ ತಾಯಿಯ ಋಣ ತೀರಿಸಲು ಮುಂ