ಕಲಬುರ್ಗಿವಿಭಾಗ ಮಟ್ಟದ ವಿದ್ಯಾರ್ಥಿಗಳ ಅಧ್ಯಯನ ಶಿಬಿರ - ಸಾವಿತ್ರಿ ಮುಜಮದಾರ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ. ಕೊಪ್ಪಳ. - ಕಲಬುರ್ಗಿ ವಿಭಾಗ ಮಟ್ಟದ ವಿದ್ಯಾರ್ಥಿ ಯುವ ಜನರ ಅಧ್ಯಯನ ಶಿಬಿರ"ವನ್ನು ದಲಿತ ಸಂಘರ್ಷ ರಾಜ್ಯ ಸಮಿತಿ( ಸಂಯೋಜಕ ) ಮತ್ತು ಮಾನವ ಬಂಧುತ್ವ ವೇದಿಕೆ ಸಹಕಾರದೊಂದಿಗೆ ಕುಷ್ಟಗಿ ತಾಲೂಕಿನ ತಾವರಗೇರಿಯಲ್ಲಿ ಅ.3, 4, ಮತ್ತು 5ನೇ ತಾರೀಕಿನಂದು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಸಂಘಟಕಿ, ಪತ್ರಕರ್ತೆ ಸಾವಿತ್ರಿ ಮುಜಮದಾರ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಿಂದಲೇ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಇನ್ನುಳಿದ ಜಿಲ್ಲೆಗಳಿಂದ ಅಸಂಖ್ಯಾತ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಕಾರ್ಯಕ್ರಮವನ್ನು 'ಸಂವಾದ ಪತ್ರಿಕೆ' ಸಂಪಾದಕರಾದ ಇಂದೂಧರ ಹೊನ್ನಾಪೂರ ಅವರು ಉದ್ಘಾಟಿಸಲಿದ್ದು, ರಾಜ್ಯ ಸಂಯೋಜಕರಾದ ಹೆಚ್.ಎಸ್.ಅಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ, ರಾಜ್ಯ ಸಂಸ್ಥಾಪಕ ಸಂಯೋಜಕರಾದ ವಿ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡುವರು, ಮಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಸಂಯೋಜಕರಾದ ಮಾವಳ್ಳಿ ಶಂಕರ್ , ಮಾನವ ಬಂದುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಡಾ.ರಾಮಚಂದ್ರಪ್ಪ, ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ಮೀಸಲಾತಿ ಸಂರಕ್ಷಣೆ ಸಮಿತಿಯ ಕಾರ್ಯಧ್ಯಕ್ಷರಾದ ಅನಂತ ನಾಯಕ್ ಸೇರಿದಂತೆ ಇತರ ರಾಜ್ಯಮಟ್ಟದ ಸಂಘಟನಾ ಮುಖಂಡರು, ಚಿಂತಕರು ಪಾಲ್ಗೊಳ್ಳುವರು ಎ