ಪೋಸ್ಟ್‌ಗಳು

ಫೆಬ್ರವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಿಜೆಪಿ ಕೊಟ್ಟೂರು ನಗರ ಘಟಕದ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ಎಲ್.ವಿಷ್ಣು ಆಯ್ಕೆ.

ಇಮೇಜ್
ಕೊಟ್ಟೂರು:- ಭಾರತೀಯ ಜನತಾ ಪಾರ್ಟಿಯ ಕೊಟ್ಟೂರು ಮಹಾಶಕ್ತಿ ಕೇಂದ್ರ ನಗರ ಘಟಕದ ಎಸ್ ಸಿ ಮೋರ್ಚಾ ಅಧ್ಯಕ್ಷರನ್ನಾಗಿ ಎಲ್.ವಿಷ್ಣು ರವರನ್ನು ದಿನಾಂಕ 27-02-2024 ರಂದು ನಗರ ಘಟಕದ ಅಧ್ಯಕ್ಷರಾದ ಶ್ರೀ ಭರಮನಗೌಡ ಪಾಟೀಲರು ಆಯ್ಕೆ ಮಾಡಿ ಆದೇಶ ಹೊರಡಿಸಿದರು.ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಎಲ್.ವಿಷ್ಣು ರವರನ್ನು ಅಧ್ಯಕ್ಷರಾದ ಶ್ರೀ ಭರಮನಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾದ ಪಂಪಾಪತಿ ಅಂಗಡಿ ರವರು ಸನ್ಮಾನಿಸಿ ಶುಭ ಹಾರೈಸಿದರು. ನೂತನವಾಗಿ ಕೊಟ್ಟೂರು ಮಹಾ ಶಕ್ತಿ ಕೇಂದ್ರ ನಗರ ಘಟಕದ ಎಸ್.ಸಿ ಮೋರ್ಚಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಎಲ್.ವಿಷ್ಣು ರವರು ನಗರ ಘಟಕದ ಅಧ್ಯಕ್ಷರಾದ ಶ್ರೀ ಭರಮನಗೌಡ ಪಾಟೀಲರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರ ಘಟಕದ ಉಪಾಧ್ಯಕ್ಷರಾದ ಪಂಪಾಪತಿ ಅಂಗಡಿ,ಕಾರ್ಯಕಾರಿಣಿ ಸದಸ್ಯ ಮಣಿಕಂಠ, ಎಸ್. ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂಜಾರ್ ಕರಿಬಸವರಾಜ್,ಯುವ ಮುಖಂಡರಾದ ಸೋಮು, ಹುಲಿಗೇಶ್,ರೋಹಿತ್,ರಮೇಶ್ ಪ್ರಸಾದ್,ಅಂಜಿನಿ,ನಿಂಗರಾಜು,ಶೇಖರ್,ಮನು,ಭರತ್,ವೀರೇಶ್,ಗಿರಿ,ಶಿವು ಇನ್ನೂ ಮುಂತಾದವರಿದ್ದರು.

ದ ಸಂ ಸ ಭಿ ಘ ಜಿಲ್ಲಾ ಸಮಿತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ.

ಇಮೇಜ್
ಸಿಂಧನೂರ ಪೆ 29 . ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಜಿಲ್ಲಾ ಸಮಿತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ.    ಮಾ.ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಜಿಲ್ಲಾ ಸಮಿತಿಯಿಂದ ಮಸ್ಕಿ, ಲಿಂಗಸೂರು, ಮಾನವಿ, ಸಿರಿವಾರ ತಾಲೂಕುಗಳ ನೂತನ ಪದಾಧಿಕಾರಿಗಳ ಮತ್ತು ಸಿಂಧನೂರು ತಾಲೂಕು ಘಟಕ ಹಾಗೂ ಗ್ರಾಮ ಘಟಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.  ಈ ಸಭೆಯ ಅಧ್ಯಕ್ಷತೆಯನ್ನು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯ ರಾಜ್ಯ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ ವಹಿಸಿ ಮಾತನಾಡಿ ಸಮಿತಿಯ ತತ್ವ ಸಿದ್ದಾಂತಗಳನ್ನು ಎಲ್ಲಾರೂ ಪಾಲಿಸಬೇಕು.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು ಮತ್ತು ಕಾಲ ಕಾಲಕ್ಕೆ ವರಿಷ್ಠರ ಮಾರ್ಗದರ್ಶನ ಪಡೆದುಕೊಳ್ಳಬೇಕು.ಎಲ್ಲಾರೂ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು ಎಂದರು. ನಂತರ ರಾಯಚೂರು ಜಿಲ್ಲಾಧ್ಯಕ್ಷರಾದ ಶಿವರಾಜ ಉಪ್ಪಲದೊಡ್ಡಿ ಮಾತನಾಡಿ ಅಗತ್ಯ ಬಿದ್ದಲ್ಲಿ ಹೋರಾಟಕ್ಕೂ ಸೈ ಎನ್ನಬೇಕು. ಇದಕ್ಕೂ ಮುನ್ನ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು, ವಿಭಾಗೀಯ ಅಧ್ಯಕ್ಷರು ಮತ್ತು ಮತ್ತು ಇನ್ನಿತರ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಹೋರಾಟಗಳನ್ನು ರೂಪಿಸಿಕೋಳ್ಳ ಬೇಕೆಂದರು.ಕಲ್ಯಾಣ ಕರ್ನಾಟಕದ ವಿಭಾಗೀಯ ಗೌರವಾಧ್ಯಕ್ಷರಾಗಿ ಮಾರೇಶ ಭಂಡಾರಿ ಇವರನ್ನು ನೇಮಕ. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ಬಾಲಸ್ವಾಮಿ ತಿಡಿಗೋಳ, ಜಿಲ್ಲಾ ಸಮಿತಿಯ ಕಾರ್ಯಧ್ಯಕ್ಷ ಸುರೇಶ ಎಲೆಕ

*ನಾಳೆ ಶ್ರೀರಾಮುಲು ರವರಿಂದ ಕೂಡ್ಲಿಗಿಯ ಬಿಜೆಪಿ ಕಾರ್ಯಕರ್ತರಿಗೆ ಔತಣ ಕೂಟ*

ಇಮೇಜ್
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ನಾಳೆ ಶುಕ್ರವಾರ ರಂದು ಬೆಳಿಗ್ಗೆ *10:30ಕ್ಕೆ ಬಣವಿಕಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಣವಿಕಲ್ಲುಯಿಂದ 1km ದೂರದಲ್ಲಿರುವ ವೀರಣ್ಣ ನವರ ತೋಟದ ಮನೆಯಲ್ಲಿ*   *ಬಿ ಶ್ರೀ ರಾಮುಲುರವರು* ಕೂಡ್ಲಿಗಿಯ ಎಲ್ಲಾ ಬಿಜೆಪಿ ಮುಖಂಡರಿಗೂ ಮತ್ತು ಪದಾಧಿಕಾರಿಗಳಿಗೂ ಹಾಗೂ ಕಾರ್ಯಕರ್ತರಿಗೆ ಔತಣ ಕೂಟವನ್ನು ಏರ್ಪಡಿಸಿದ್ದು  ಈ ಬಾರಿ 2024 ಸಾಲಿನ ಲೋಕಸಭಾ ಚುನಾವಣೆಯ ರಣತಂತ್ರ ರೋಪಿಸಲು ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಬಿ. ಶ್ರೀರಾಮುಲು ರವರು ಮುಂದಾಗಿದ್ದಾರೆ. ನೂತನವಾಗಿ ಬಿಜೆಪಿ ಪಕ್ಷದಲ್ಲಿ ಹೊಸ ಯುವಕರನ್ನು ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು ಆಯ್ಕೆ ಮಾಡಿದ್ದು ಪಕ್ಷದಲ್ಲಿ ನಿಷ್ಠೆಯಿಂದ ದುಡಿದಂತಹ ಕಾರ್ಯಕರ್ತರಿಗೂ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷದ ಹುದ್ದೆಗಳನ್ನು ನೀಡಿದ್ದು  ಈ ಬಾರಿ ಲೋಕಸಭಾ ಚುನಾವಣೆಯ ಬಿಜೆಪಿ ಪಕ್ಷ ಗೆಲ್ಲಿಸುವ ಉದ್ದೇಶದಿಂದ ತಳಮಟ್ಟದಿಂದಲೂ ಪಕ್ಷ ಸಂಘಟನೆ ಮಾಡಲು ಎಲ್ಲಾ ಕಾರ್ಯ ಕರ್ತರಿಗೆ ತಿಳಿಸಲು ಮುಂದಾಗಿದ್ದಾರೆ. ಹಾಗೆ  *ಔತಣ ಕೂಟವನ್ನು* ಆಯೋಜಿಸಿದ್ದಾರೆ. ಆದಕಾರಣ ಎಲ್ಲಾ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಈ ಔತಣಕೋಟಕ್ಕೆ ಭಾಗವಹಿಸುವಂತೆ ನೂತನ ಕೂಡ್ಲಿಗಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷರು ಬಣವಿಕಲ್ ಕೆ. ನಾಗರಾಜು ತಿಳಿಸುವುದರೊಂದಿಗೆ ಹಾಗೆ ಪಕ್ಷದ ಗೆಲುವಿನ ಬಗ್ಗೆ ಸಮಾಲೋಚನೆ ಮಾಡಲ

*ಕಡುಬಡವರಿಗೆ ಸೂರು ಒದಗಿಸಿ: ಹೆಚ್ ವೀರಣ್ಣ*

ಇಮೇಜ್
"ನಿವೇಶನ ಮತ್ತು ವಸತಿ ಕಲ್ಪಿಸುವಂತೆ ಮನವಿ ಕೊಟ್ಟೂರು: ನಿವೇಶನ  ಮತ್ತು ವಸತಿ, ತಾಲೂಕು ಸಮಿತಿ ಕೊಟ್ಟೂರು ಇವರಿಂದ ಬಸ್ ಸ್ಟಾಂಡ್ ಹತ್ತಿರದ ಬಸವಣ್ಣನ ದೇವಸ್ಥಾನದಿಂದ ಪಟ್ಟಣ ಪಂಚಾಯತಿ ಯವರಿಗೂ ಕಾರ್ಯಕರ್ತರು ಘೋಷಣೆ ಕೂಗುತ್ತಾ ಪ್ರತಿಭಟನಾ ರ್ಯಾಲಿ ನಡೆಯಿತು. ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರು ಎಚ್ ವೀರಣ್ಣ, ಮಾತನಾಡಿ ದುಡಿಯುವ ಕೈಗಳಿಗೆ ಉದ್ಯೋಗ ಉಣ್ಣಲು ಹೊಟ್ಟೆತುಂಬ ಊಟ ನೆಮ್ಮದಿಯಿದ ನಿದ್ರಿಸಲು ಸ್ವಂತದ ಒಂದು ಸೂರು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ ಇಂದು ನಮ್ಮದೇಶದಲ್ಲಿ ನಮ್ಮನ್ನು ಆಳುತ್ತಿರುವ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗವನ್ನು ನೀಡದೇ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿ, ಹಸಿವಿನಿಂದ ನರಳುತ್ತಾ, ಮಲಗಲು ಕೂಡ ಸ್ವಂತ ಮನೆ ಇಲ್ಲದ ಸ್ಥಿತಿಗೆ ಜನರನ್ನು ಸರ್ಕಾರಗಳು ದೂಡಿದೆ.ಎಂದರು ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಮಹಿಳೆ ಉಪಾಧ್ಯಕ್ಷೆ ಕೆ ರೇಣುಕಮ್ಮ, ಮಾತನಾಡಿ ಭಾರತದ ಸಿರಿವಂತ ಕಾರ್ಪೋರೇಟ್ ಕಂಪನಿಗಳ ಮಾಲೀಕರು ಮಾತ್ರ ಪ್ರಪಂಚದ ಅತಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದು. ದಿನ ನಿತ್ಯ ನಮ್ಮ ಜಲ ನೆಲ ಹಾಗೂ ಜನರಿಗೆ ಸೇರಬೇಕಾದ ಸಾರ್ವಜನಿಕ ಸಂಪತ್ತನ್ನು ಹೆಗ್ಗಿಲ್ಲದೇ ಲೂಟಿಯನ್ನು ಮಾಡುವುದಕ್ಕೆ ನಮ್ಮ ಸರ್ಕಾರಗಳು ಕಾನೂನು ಬದ್ಧ ಅವಕಾಶಗಳನ್ನು ಮಾಡಿಕೊಡುತ್ತಿದೆ.ಅದರೆ ಇಲ್ಲಿಯವರೆಗೂ ಕಡುಬಡವರಿಗೆ ಒಂದು ಸೋರು ಕಲ್ಪಿಸಿಲ್ಲ ಎಂದು

ಇಚ್ಛಾಶಕ್ತಿ ಇದ್ದರೆ ಗೆಲುವು ಖಚಿತ : ಸುಭಾಷ್ ಕೊರೇಕರ್

ಇಮೇಜ್
ಮಸ್ಕಿ; ಶಿಕ್ಷಣ ಪಡೆಯಲು ಬಡತನ ಶ್ರಿಮಂತಿಕೆ ಮುಖ್ಯವಲ್ಲ ಇಚ್ಚಾಶಕ್ತಿ ಇದ್ದರೆ ಗುರಿ ಇರಿಸಿಕೊಂಡು ಮುನ್ನಡೆದರೆ ವಿಶ್ವವನ್ನೇ ಗೆಲ್ಲಬುಹುದು ಎಂದು ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಷ್ ಕೊರೇಕರ್ ಹೇಳಿದರು.   ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜಿನ  13 ನೇ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆವಹಿಸಿಮಕ್ಕಳ ಆಸಕ್ತಿಗೆ ಅನುಗುಣವಾಗಿ ಪೋಷಕರು ವಿಷಯಗಳನ್ನು ಆಯ್ದು ಕೊಳ್ಳಲು ಸ್ವಾತಂತ್ರ್ಯ ನೀಡಬೇಕು. ಮಕ್ಕಳು ವಿಧೇಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯೆ ಸಾರ್ಥಕತೆ ಕಾಣುತ್ತದೆ ಎಂದರು. ಯಾವುದೇ ಕೆಲಸದಲ್ಲಿ ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆ ಇರಬೇಕು. ವಿದ್ಯಾರ್ಥಿಗಳು ಪರೀಕ್ಷೆಯನ್ನು ಪೂರ್ವ ಸಿದ್ಧತೆ ಯೊಂದಿಗೆ ಎದುರಿಸಿದಾಗ ಪರೀಕ್ಷಾ ಭಯ ದೂರವಾಗುತ್ತದೆ ಎಂದು ಹೇಳಿದರು.                                                                                        ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮಣ ಕರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಜೀವನದಲ್ಲಿ ಮೌಲ್ಯಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಳ್ಳುತ್ತವೆ. ವಿದ್ಯಾರ್ಥಿ ಹಂತದಲ್ಲಿಯೆ ಉತ್ತಮ ವೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಶಿಕ್ಷಣ ಇಲ್ಲದಿದ್ದರೆ ಬದುಕು ಕಷ್ಟವಾಗುತ್ತದೆ ಎ

ವಿಜೃಂಭಣೆಯಿಂದ ಜರುಗಿದ ಭರತ ಹುಣ್ಣಿಮೆ

ಇಮೇಜ್
  ಕೊಟ್ಟೂರು : ಉಜ್ಜಿನಿಯಲ್ಲಿ ನೆಡೆದ ಭರತ ಹುಣ್ಣಿಮೆಯ ಪ್ರಯುಕ್ತ ಉಜ್ಜಿನಿ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ವಿಜಯ ಯಾತ್ರೆಯು ಶುಕ್ರವಾರ ಸಂಜೆ ಆರಂಭಗೊಂಡಿತು ಉಜ್ಜಿನಿಯ ಪಾದಗಟ್ಟೆ ಪ್ರದಕ್ಷಿಣೆ ಮಾಡಿದ ನಂತರ ಸ್ವಾಮಿಯು ಒಬ್ಬತ್ತು ಪಾದಗಟ್ಟೆಗಳಿಗೆ ದಯಮಾಡಿಸಿತು. ಹೊರವಲಯದ ಸಿದ್ದನವರ್ತಿ ವಟ ವೃಕ್ಷದಲ್ಲಿ ದಯಮಾಡಿಸಿದ ನಂತರ ಬೆಳದೇರಿ , ನಾಗೇನಹಳ್ಳಿ, ಬೆನಕನಹಳ್ಳಿ, ಉಜ್ಜಿನಿಯ ಮೂಗಣ್ಣ ಗುಡ್ಡಕ್ಕೆ ತೆರಳಿ ನಂತರ ಕಾಳಾಪುರ ಗ್ರಾಮಕ್ಕೆ ದಯಮಾಡಿಸಿ ನಂತರ ನಡು ಮಾವಿನಹಳ್ಳಿ ,ಹಾರಕನಾಳು ಗ್ರಾಮಕ್ಕೆ ದಯಮಾಡಿಸಿ ನಂತರ ಸ್ವಾಮಿಯು ಉಜ್ಜಿನಿ ಹೊರ ವಲಯದ ಕಾಶಿ ಬಸಪ್ಪ ದೇವಸ್ಥಾನಕ್ಕೆ ಆಗಮಿಸಿ ಹುಣ್ಣಿಮೆ ದಿನವಾದ ಭಾನುವಾರ ಬೆಳಗ್ಗೆ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯು ಶ್ರೀ ಪೀಠಕ್ಕೆ ಆಗಮಿಸುತ್ತದೆ. ಉಜ್ಜಿನಿ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಯು ವಿಜಯ ಯಾತ್ರೆಯನ್ನು ಮುಗಿಸಿಸಿಕೊಂಡು ಉಜ್ಜಿನಿ ಪೀಠಕ್ಕೆ ಭಾನುವಾರ ಸ್ವಾಮಿಯು ದಯಮಾಡಿಸಿದಾಗ ಮಠದ ಪರಿವಾರದವರು ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಗೆ ವಿಜಯ ಯಾತ್ರೆಯಲ್ಲಿ ದೃಷ್ಟಿತಾಗಿತ್ತೆಂದು ದೃಷ್ಟಿ ನಿವಾರಣೆ ಮಾಡಲಾಯಿತು. ನಂತರ ಭಕ್ತಾದಿಗಳು ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಯ ದರ್ಶನ ಮಾಡಿ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾ ಸ್ವಾಮೀಜಿಗಳವರ ಆಶೀರ್ವಾದ ಪಡೆದರು.

ಕೊಟ್ಟೂರಿನ ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಕೆ ಮಾಡಿ - ಎ ನಸರುಲ್ಲಾ

ಇಮೇಜ್
*ಪ್ರತಿದಿನ 16 ಗಂಟೆ ಮಾತ್ರ ನೀರು ಪೂರೈಕೆ * ಕೊಟ್ಟೂರು ಪಟ್ಟಣಕ್ಕೆ ತುಂಗಭದ್ರ ನದಿಯ ಬನ್ನಿಗೋಳು ಜಾಕ್ವೆಲ್‌ನಿಂದ ಕುಡಿಯುವ ನೀರಿನ ಪೂರೈಕೆ ಆಗುತ್ತಿದ್ದು, ಸದರಿ ಸ್ಥಳದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆ ಆಗುತ್ತಿರುವುದರಿಂದ,  ಈ ಹಿಂದೆ ಪ್ರತಿದಿನ 22 ಗಂಟೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು ಆದರೆ ಹಾಲಿ ಪ್ರತಿದಿನ 16 ಗಂಟೆ ಮಾತ್ರ ನೀರು ಪೂರೈಕೆ ಆಗುತ್ತಿರುತ್ತದೆ. ಇದರಿಂದ ನೀರು ಸರಬರಾಜಿನಲ್ಲಿ ತೊಂದರೆ ಉಂಟಾಗುಲಿದ್ದು, ಸಾರ್ವಜನಿರು ನೀರನ್ನು ಮಿತವಾಗಿ ಬಳಕೆ ಮಾಡಲು ಹಾಗೂ ಕಾಯಿಸಿ, ಶುದ್ದೀಕರಿಸಿಕೊಂಡು ಕುಡಿಯಲು ತಿಳಿಸಿಸಲಾಗಿದೆ.ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸರುಲ್ಲಾ ಅವರು ಪತ್ರಿಕೆಗೆ ತಿಳಿಸಿದರು

*ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪೂರ್ವಭಾವಿ ಸಭೆ*

ಇಮೇಜ್
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿನಾಂಕ 26-02-2024 ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ 50ನೇ ವರ್ಷದ ಸಂಸ್ಥಾಪನ ದಿನದ ಸಂಭ್ರಮೋತ್ಸವಕ್ಕೆ ದುರ್ಗೇಶ್ ಜಿಲ್ಲಾ ಸಂಚಾಲಕರು ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಯಿತು. ಡಾ. ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ರಿ.ನಂ.47/74-75 ರ ಸಂಘಟನೆ ಜನವರಿ 24ನೇ ತಾರೀಕಿಗೆ 50ನೇ ವರ್ಷ ಪೂರ್ಣಗೊಳ್ಳುತ್ತದೆ ಆದ್ದರಿಂದ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 09 - 02-2024 ರಂದು 50ನೇ ವರ್ಷದ ಸಂಸ್ಥಾಪನಾ ದಿನದ ಸಂಭ್ರಮೋತ್ಸವ ದ ಪೂರ್ವಭಾವಿ ಸಭೆಯಲ್ಲಿ ದಿನಾಂಕ,ಸ್ಥಳ ಹಾಗೂ ಆ ದಿನ ನಡೆಯಬೇಕಾದ ಪೂರ್ವಸಿದ್ಧತೆಗಳನ್ನು ಚರ್ಚೆ ಮಾಡಲಾಯಿತು.  ಈ ಸಂದರ್ಭದಲ್ಲಿ ತೆಗ್ಗಿನಕೇರಿ ಕೊಟ್ರೇಶ್ ಜಿಲ್ಲಾ ಸಂಚಾಲಕರು ಜಿಲ್ಲಾ ಸಂಘಟನಾ ಸಂಚಾಲಕರಗಳಾದ ಪರಶುರಾಮ್ ಕಂದಗಲ್ಲು ತುಂಬರಗುದ್ದಿ ದುರ್ಗೇಶ್ ನಾಗರಾಜ್ ಮತ್ತು ತಾಲೂಕು ಸಂಚಾಲಕರಗಳಾದ ತೆಗ್ಗಿನಕೇರಿ ಹನುಮಂತಪ್ಪ ಮಹೇಶ್ ಕೂಡ್ಲಿಗಿ ಗಂಗಾಧರ ಹೊಸಹಳ್ಳಿ ಹಾಗೂ ತಾಲೂಕು ಸಂಘಟನಾ ಸಂಚಾಲಕರಾದ ಶಿವರಾಜ್ ಬಿ ನಗರ ಘಟಕದ ಅಧ್ಯಕ್ಷರಾದ ಪರಶುರಾಮ್ ಬಿ ಕೊಲ್ಲರಪ್ಪ ಮುಗಪ್ಪ ಕೆ ಸುರೇಶ್ ಕೊಟ್ರೇಶ್ ಕುಮಾರ್ ಮಾತನಾಡುಕು ಜಿತೇಂದ್ರ ನಾಗರಾಜ್ ಅಜಿತ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಅಧ್ಯಕ್ಷರಾಗಿ ಶರಣಬಸವರಾಜ ಆಯ್ಕೆ

ಇಮೇಜ್
ಮಸ್ಕಿ : ತಾಲೂಕ ಬಿಜೆಪಿ ಮಂಡಲದ ನೂತನ ತಾಲೂಕಾಧ್ಯಕ್ಷರನ್ನಾಗಿ ಮಸ್ಕಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ ‌ಶರಣಬಸವರಾಜ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಯಚೂರು ಜಿಲ್ಲಾಧ್ಯಕ್ಷ ಡಾ. ಶಿವರಾಜ್ ಪಾಟೀಲ್ ತಿಳಿಸಿದ್ದಾರೆ. ಅವರ ಆಯ್ಕೆಗೆ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ರವರು ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ನೂತನ ಅಧ್ಯಕ್ಷ ಶರಣಬಸವರಾಜ ಸೊಪ್ಪಿಮಠ ರವರು ಪಕ್ಷದ ಹಿರಿಯರು, ಮಾಜಿ ಶಾಸಕರು,ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಭರವಸೆಯನ್ನಿಟ್ಟು ತಾಲೂಕಾ ಮಂಡಲ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ನೀಡಿದ್ದಾರೆ.ಅದಕ್ಕೆ ಯಾವುದೇ ರೀತಿಯ ಕಪ್ಪು ಚುಕ್ಕೆ ಬಾರದಂತೆ ಕೊಟ್ಟ ಜವಾಬ್ದಾರಿಯನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಸಂವಿಧಾನ ಜಾಥಾ ಕಾರ್ಯಕ್ರಮಕ್ಕೆ ಹಾಜರಾಗದ ಶಾಲಾ ಮುಖ್ಯಶಿಕ್ಷರನ್ನು : ಅಮಾನತ್ತು ಮಾಡುವಂತ ಆಗ್ರಹ

ಇಮೇಜ್
ಕೊಟ್ಟೂರು: ಇದೇ ತಿಂಗಳ ೨೧ ರಂದು ನಡೆದ ಸಂವಿಧಾನ ಜಾಥಾ ಕಾರ್ಯಕ್ರಮಕ್ಕೆ ಶಾಲಾ ಮುಖ್ಯಶಿಕ್ಷರು ಹಾಜರಾಗದೇ ನಿರ್ಲಕ್ಷ್ಯತೆ ತೋರಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೊಟ್ಟೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಸರ್ಕಾರಿ ಕಛೇರಿಗಳ ಮುಖ್ಯಶಿಕ್ಷರು ಕಡ್ಡಾಯವಾಗಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕೆಂದು ಸರ್ಕಾರ, ಸ್ಥಳೀಯ ಆಡಳಿತವಾದ ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದ್ದರೂ ಸಹ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಸುಂಕದಕಲ್ಲು  ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೋರನಹಳ್ಳಿಯ ಎರಡೂ ಶಾಲೆಗಳ ಮುಖ್ಯಗುರುಗಳು ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಂವಿಧಾನ ಜಾಥಾ ಕಾರ್ಯಕ್ರಮಕ್ಕೆ ಹಾಜರಾಗದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಬಿಇಓ,ಸಿಆರ್ಪಿ ಅವರನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಸಂವಿಧಾನ ಜಾಥಾ ಕಾರ್ಯಕ್ರಮಕ್ಕೆ ಹಾಜರಾಗದೆ ಇರುವ ಎರಡೂ ಶಾಲೆಗಳ ಮುಖ್ಯಗುರುಗಳ ಅಮಾನತ್ತು ಮಾಡುವಂತೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಡಿ.ಎಸ್.ಎಸ್. ಮುಖಂಡ ಪ್ರವೀಣ್ , ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಅವರು ಪತ್ರಿಕೆಗೆ ತಿಳಿಸಿದ್ದಾರೆ.

*ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖಂಡರುಗಳು ಪಾದಯಾತ್ರೆ ಕೈಗೊಂಡಿರುವ ಶಿಪ್ರಾರ ಅವರಿಗೆ ಅಭಿನಂದನೆ*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಶನಿವಾರದಂದು ಶಿಪ್ರಾ ಪಾಠಾಕ್ ವಾಟರ್ ಹ್ಯೂಮನ್ ಎಂದೆ ಕ್ಯಾತೆಗೆ ಪ್ರಶಸ್ತಿ ತೆಗೆದುಕೊಂಡಂತಹ ಶಿಪ್ರಾ ಪಾಠಕ್ ರವರು ನವಂಬರ್ 27ರಿಂದ ಸರಿಸುಮಾರು ಐದು ರಾಜ್ಯಗಳ ಪಾದಯಾತ್ರೆ ಪ್ರಾರಂಭಿಸಿದ್ದು ಇವರು ರಾಮ ಮಂದಿರ ನಿರ್ಮಾಣ ವಾದ ನಂತರ ಭಾರತ ದೇಶವು ಸರ್ವ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣುವಂತೆ ಕರ್ನಾಟಕ ಉತ್ತರ ಪ್ರದೇಶ್, ಮಹಾರಾಷ್ಟ್ರ ತಮಿಳುನಾಡು ಛತ್ತೀಸಘಡ್ ಈ ಎಲ್ಲಾ ರಾಜ್ಯಗಳ ಪಾದಯಾತ್ರೆಯ ಪ್ರವಾಸದಲ್ಲಿ ಪ್ರತಿದದಿನ 30 ಕಿಲೋಮೀಟರ್ ಪಾದಯಾತ್ರೆ ಮೂಲಕ ಪ್ರವಾಸ ಕೈಗೊಂಡು ಈ ಪ್ರವಾಸದ ಉದ್ದೇಶವು ದೇಶದಲ್ಲಿ ಹರಿಯುವ ನದಿಗಳ ಶುದ್ಧೀಕರಣ ಹಾಗೂ ಪಂಚಭೂತಗಳ ಶುದ್ಧೀಕರಣಕ್ಕಾಗಿ ಭಾರತ ದೇಶದದಲ್ಲಿ ಜೀವಿಸುವಂತಹ ಪ್ರಾಣಿ ಪಕ್ಷಿಗಳ ಹಿತ ದೃಷ್ಟಿಯಿಂದ ಶ್ರೀ ರಾಮನ ನಾಮದೊಂದಿಗೆ ಪಾದಯಾತ್ರೆ ಮೂಲಕ ಕೂಡ್ಲಿಗಿಗೆ ಸರಿಸುಮಾರು 3380 ಕಿಲೋಮೀಟರ್ ಮುಕ್ತಾಯಗೊಂಡಿದ್ದು ನಂತರ ಕೂಡ್ಲಿಗಿಯಿಂದ ಪಾದಯಾತ್ರೆಯ ಮೂಲಕ ರಾಮೇಶ್ವರ ಪುಣ್ಯಕ್ಷೇತ್ರದ ಮಾರ್ಗವಾಗಿ ಪಾದಯಾತ್ರೆ ಕೈಗೊಂಡಿರುವೆ ಎಂದು ಶಿಪ್ರಾ ಪಾಠಕ್ ತಿಳಿಸಿದರು,  ಕೂಡ್ಲಿಗಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಡಾಕ್ಟರ್ ಶ್ರೀನಿವಾಸಲು ಹಾಗೂ ಅನೇಕರು ಸ್ವಾಗತಿಸಿಕೊಂಡರು ಈ ಸಂದರ್ಭದಲ್ಲಿ ಶಿಪ್ರಾ ಪಾಠಕ್ ಇವರು ವೆಂಕಟೇಶ್ವರ ದೇವರಿಗೆ ಪೂಜೆ ನಮನ ಸಲ್ಲಿಸಿ ಕೂಡ್ಲಿಗಿಯ ಹಿರಿಯ ಮುಖಂಡರಾದ ಲೋಕನ ಗೌಡರು ಮನೆಗೆ ಆಗಮಿಸಿ ಈ ಸಂದರ್ಭದಲ್ಲಿ ಕೂಡ್ಲಿಗಿ ತಾ

ಯುವ ಮೋರ್ಚಾ ಘಟಕ ವಿಜಯನಗರ ಜಿಲ್ಲೆಯ ಜಿಲ್ಲಾ ಉಪಾಧ್ಯಕ್ಷರಾಗಿ ಗುಳಗಿ ವೀರೇಶ್

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಗುಳಗಿ ವೀರೇಶ್ ಇವರನ್ನು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಘಟಕ ವಿಜಯನಗರ ಜಿಲ್ಲೆಯ ಜಿಲ್ಲಾ ಉಪಾಧ್ಯಕ್ಷರಾಗಿ ಯುವ ಮೋರ್ಚಾದ ಅಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷರುಗಳು ಮತ್ತು ಪಕ್ಷವು ಗುಳಗಿ ವೀರೇಶ್ ಇವರ ಪಕ್ಷದಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶ್ರಮವನ್ನು ಮುಖಂಡರು ಹಿರಿಯರು ಗುರುತಿಸಿ. ದಿನಾಂಕ :24-2-2024ರಂದು ಜಿಲ್ಲೆಯ ಉಪಾಧ್ಯಕ್ಷ ಸ್ಥಾನವನ್ನು ನೀಡಿರುವುದಕ್ಕೆ ಎಲ್ಲಾ ನನ್ನ ಪೂಜ್ಯ ಗುರುಗಳಿಗೂ ಹಿರಿಯ ಮುಖಂಡರಿಗಳಿಗೂ ಆತ್ಮೀಯ ಸ್ನೇಹಿತರಿಗೂ ಎಲ್ಲ ನನ್ನ ಪಕ್ಷದ ಕಾರ್ಯಕರ್ತರಿಗೂ ಹೃದಯ ತುಂಬಿ ಅಭಿನಂದಿಸುತ್ತೇನೆ

ವಿವಿಧ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ

ಇಮೇಜ್
ಮಸ್ಕಿ : ಪಟ್ಟಣದ 20ನೇ ವಾರ್ಡ ನಲ್ಲಿನ ವಿವಿಧ ಸಮಸ್ಯೆಯನ್ನು ಪರಿಹರಿಸುವಂತೆ ಸ್ಥಳ ಭೇಟಿ ನೀಡಿದ್ದ ಪುರಸಭೆ ಅಧಿಕಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮಸ್ಕಿ ತಾಲೂಕ ವತಿಯಿಂದ ಜಗದೀಶ್ ಅವರಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಬುಧವಾರ ದಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮಸ್ಕಿ ತಾಲೂಕ ಸಮಿತಿ ವತಿಯಿಂದ ವಾರ್ಡ್ 20 ರಲ್ಲಿ ಕುಡಿಯುವ ನೀರಿನ ಸಮಸ್ಯೆ,ಚರಂಡಿ ಸಮಸ್ಯೆ, ಸಿಸಿ ರಸ್ತೆ ಸೇರಿದಂತೆ ಇನ್ನಿತರೇ ಮೂಲಭೂತ ಸಮಸ್ಯೆಗಳ ಕುರಿತು ಪುರಸಭೆಯ ಜಗದೀಶ್ ಎಂಬ ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ ಸ್ಥಳ ವೀಕ್ಷಣೆ ಮಾಡಿಸಿ ಆ ವಾರ್ಡ್ ನ ವಾಸ್ತವ ಸಮಸ್ಯೆಯ ಕುರಿತು ಮನವರಿಕೆ ಮಾಡಿಸಿ ನಂತರ ಕಂದಾಯ ಅಧಿಕಾರಿ ಜಗದೀಶ್ ಅವರಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಹಾಗೇಯೇ ಮುಂದಿನ ದಿನಗಳಲ್ಲಿ ಸಮಸ್ಯೆ ಹೀಗೆಯೇ ಮುಂದುವರೆದರೆ ಕಚೇರಿಯ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೆ.ದುರಗಪ್ಪ ಮಡಿವಾಳ, ದೇವರಾಜ ಮಡಿವಾಳ, ಸಂಘಟನೆ ಪದಾಧಿಕಾರಿಗಳಾದ ಶ್ರೀಕಾಂತ ಅರಿಕೇರಿ,ಮಂಜುನಾಥತೀರ್ಥಬಾವಿ,ಶರಣಬಸವ ಮಡಿವಾಳ,ಮಣಿ ಸೇರಿದಂತೆ ಇನ್ನಿತರರು ಇದ್ದರು.

*ಅಂಬಳಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಜಾಥ*

ಇಮೇಜ್
ಕೊಟ್ಟೂರು: ತಾಲೂಕು ಅಂಬಳಿ ಗ್ರಾಮ ಪಂಚಾಯತಿಯಲ್ಲಿ 21-02-2024 ಬುಧವಾರದಂದು ಸಂವಿಧಾನ ಜಾಗೃತಿ ಜಾಥವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೊಳಲಮ್ಮ ಹನುಮಂತಪ್ಪನವರು ಮತ್ತು ಸದಸ್ಯರುಗಳೆಲ್ಲಾ ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕುವುದರ ಮೂಲಕ ಚಾಲನೆ ನೀಡಿದರು. ಎತ್ತಿನ ಗಾಡಿ ಟ್ರಾಕ್ಟರ್ ಡ್ರಂ ಸೆಟ್ ಸಮಾಳ ಮತ್ತು ತಮಟೆ ಕುಂಭ ಹೊತ್ತ ಮಹಿಳೆಯರು ಒಟ್ಟಿನಲ್ಲಿ ಸಕಲ ವಾದ್ಯಗಳೊಂದಿಗೆ ಅಂಬಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಯೊಂದು ಶಾಲೆಯ ಮಕ್ಕಳು ಸಂವಿಧಾನ ಜಾಗೃತಿ ರಥವು ಸೇರಿದಂತೆ ಯುವಕರು ನೃತ್ಯ ಮಾಡುವುದರ ಮೂಲಕ ಸಂವಿಧಾನದ ಜಾಗೃತಿಯ ಘೋಷಣೆ ಕೂಗುತ್ತಾ ಈ ಭಾಗದಲ್ಲಿ ಹೆಸರುವಾಸಿಯಾದ ಕಲ್ಲೇಶ್ವರ ದೇವಸ್ಥಾನದ ಮುಂದೆ ಸಭೆ ಸೇರಿ ಊರಿನ ಮುಖಂಡರಾದ ಭರಮರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬದ್ದಿ ಮರಿಸ್ವಾಮಿ ಪ್ರಪಂಚದಲ್ಲಿ ಅತಿ ದೊಡ್ಡದಾದ ಹಾಗೂ ಜಾತ್ಯತೀತ ಸಂವಿಧಾನ ನಮ್ಮದು ಇದನ್ನು ಜಾತಿ ಮತ ಪಂಥ ಎನ್ನದೆ ಸರ್ವ ಜನರಿಗೂ ಮಹಿಳೆಯರಿಗೂ ಮಕ್ಕಳಿಗೂ ವೃದ್ಧರಿಗೂ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಯು ಸ್ವತಂತ್ರವಾಗಿ ಬದುಕುವ ಹಕ್ಕನ್ನು ಈ ಸಂವಿಧಾನದಲ್ಲಿ ರಚಿಸಲಾಗಿದೆ.ಇಂತಹ ಸಂವಿಧಾನದ ಅಂಗೀಕಾರ ಆಗಿ 75ನೇ ವರ್ಷದ ಸಂಭ್ರಮವನ್ನು ಸಂವಿಧಾನ ಜಾಗೃತಿ ಜಾಥನಮ್ಮ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ.ಈ ಸಂವಿಧಾನ ಜಾಗೃತಿ ಜಾಥವು ಕೇವಲ ಜಾಥವಷ

ತಾಲ್ಲೂಕಿನ ವಿವಿಧ ಸರಕಾರಿ ಕಛೇರಿ ಆರಂಭ ಮಾಡಲು ಒತ್ತಾಯ

ಇಮೇಜ್
ಕೊಟ್ಟೂರು ತಾಲ್ಲೂಕು ಘೋಷಣೆಯಾಗಿ ಆರು ವರ್ಷಗಳು ಕಳೆದಿದ್ದು ಇದುವರೆಗೂ ಕೆಲವು ತಾಲ್ಲೂಕು ಮಟ್ಟದ ಕಛೇರಿಗಳನ್ನು ಆರಂಭಿಸುವಂತೆ ಸಿಪಿಐ(ಎಂಎಲ್) ಗುರುವಾರ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿತು. ಮನವಿ ಸಲ್ಲಿಸಿದ ಮಾತನಾಡಿದ ಸಿಪಿಐ(ಎಂಎಲ್) ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನರವರು ಕೊಟ್ಟೂರು ತಾಲ್ಲೂಕಿಗೆ ಇದುವರೆಗೂ ಕೋರ್ಟ್, ಉಪನೋಂದಣಿ ಕಛೇರಿ, ಬಿ.ಇ.ಓ. ಕಛೇರಿ, ಸಿಡಿಪಿಓ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಸಹಕಾರಿ ಇಲಾS, ಆಡಿಟ್ ಇಲಾಖೆ ಇನ್ನುಳಿದ ತಾಲ್ಲೂಕು ಮಟ್ಟದ ಕಛೇರಿಗಳನ್ನು ಕೂಡಲೇ ಆರಂಭಿಸಬೇಕೆಂದು ಒತ್ತಾಯಿಸಿದರು. ಅಲ್ಲದೇ ಪಟ್ಟಣದ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ವಿಪರೀತವಿದ್ದು, ಬಡ ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು. ೬-೮ ಸಾವಿರ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಊಟ ಸಿಗದೇ ಬಳಲುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಘೋಷಣೆ ಮಾಡಬೇಕು. ತಾಲ್ಲೂಕಿಗೆ ಇದುವರೆಗೂ ಪದವಿ ಕಾಲೇಜ್ ಇಲ್ಲದೇ ಇರುವುದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಪರದಾಡುವ ಸ್ಥಿತಿ ಇದೆ. ಕೊಟ್ಟೂರಿನ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಹಾಗೂ ಕಂದಾಯ ಇಲಾಖೆ ಭ್ರಷ್ಟಾಚಾರದ ಆಗರಗಳಾಗಿವೆ. ಸಾರ್ವಜನಿಕ ಕೆಲಸ ಮಾಡಲು ಲಂಚ ಮಾಮೂಲಿ ಆಗಿರುತ್ತದೆ. ಗ್ರಾಮ ಪಂಚಾಯಿತಿಗಳ ಭ್ರಷ್ಟ ಆಡಳಿತ ಕೊನೆಯಾಗಬೇಕು. ಮೈಕ್ರೋ ಫೈನಾನ್ಸ್‌ಗಳು ಜನರಿಗೆ ಸಾಲ ನೀಡಿ ವಸೂಲಾತಿ ಮಾಡಲು ಕಿರುಕುಳ ನೀಡ

ತಮಿಳು ಲಿಪಿಯ ಸಂಸ್ಕೃತ ಭಾಷೆ ಬಂಡೆಗಲ್ಲು ಶಾಸನ ಅಭಿವೃದ್ಧಿ ಮೆರೆತ ಜನ ಪ್ರತಿನಿಧಿಗಳು ಹಾಗೂ ಪುರಾತತ್ವ ಇಲಾಖೆ,

ಇಮೇಜ್
ವಿಶೇಷ ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ : ಪಟ್ಟಣದ ಹೊರವಲಯದ ಸರಕಾರಿ ಪದವಿ ಕಾಲೇಜ್ ಪಕ್ಕದ ಸುಳಿದಿಬ್ಬ ಗುಡ್ಡದಲ್ಲಿ ಜೋಳ ಅರಸರಿಗೆ ಸೇರಿದ ತಮಿಳು ಲಿಪಿಯ ಪ್ರಕಟಿತ ಬಂಡೆಗಲ್ಲು ಶಾಸನ ಪತ್ತೆಯಾಗಿ ಹದಿಮೂರು ವರ್ಷವಾಗಿದೆ ಆದರೆ ಇಲ್ಲಿಯವರೆಗೆ ಶಾಸನ ರಕ್ಷಣೆ ಮಾಡುವ ಇಲಾಖೆ ಮೌನ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಲ್ಬರ್ಗ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಪ್ರಾಧ್ಯಾಪಕ ಡಾ.ಚನ್ನಬಸಪ್ಪ ಮಲ್ಲಂದಿನ್ನಿ ಯವರು ಈ ಶಾಸನವನ್ನು ಪತ್ತೆ ಹಚ್ಚಿದರು ಈ ಶಾಸನದಲ್ಲಿ ಸಂಸ್ಕೃತ ಭಾಷೆ ಹಾಗೂ ತಮಿಳು ಲಿಪಿ ಬಳಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಚೋಳ ಅರಸರ ಮೊದಲ ಶಾಸನ ಇದಾಗಿದೆ.  ಈ ಹಿಂದೆ ಕೋಲಾರ, ಬೆಂಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಚೋಳ ಅರಸರ ಶಾಸನಗಳು ಪತ್ತೆಯಾಗಿವೆ. ಸುಳಿದಿಬ್ಬಗುಡ್ಡದಲ್ಲಿ ಪತ್ತೆಯಾದ ಶಾಸನ ಚೋಳರ ಅರಸರ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಆಧಾರವಾಗಿದೆ. ಕರ್ನಾಟಕದ ಉತ್ತರ ಭಾಗದಲ್ಲಿ ಆಡಳಿತ ನಡೆಸುತ್ತಿದ್ದ ಕಲ್ಯಾಣಿ ಚಾಲುಕ್ಯ ಅರಸ ಇಮ್ಮಡಿ ಜಯಸಿಂಹ (ಕ್ರಿ.ಶ. 1013-1043 ) ಮತ್ತು ತಮಿಳುನಾಡಿನಲ್ಲಿ ಆಳ್ವಿಕೆ ಮಾಡುತಿದ್ದ ತಂಜಾವೂರಿನ ಚೋಳ ಅರಸ ಒಂದನೇ ರಾಜೇಂದ್ರ (ಕಿ.ಶ.1014-1044 ) ಮದ್ಯ ನೆಡೆದ ಯುದ್ದವನ್ನು ಈ ಶಾಸನ ವಿವರಿಸುತ್ತದೆ.  ಉಭಯ ದೊರೆಗಳು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಮಸ್ಕಿಯಲ್ಲಿ ಕಿ.ಶ.1019-1021 ಮಧ್ಯ ಘೋರ ಯುದ್ದ ನಡೆಸಿದರು ಕಲ್ಯಾಣ ಚಾಳುಕ್ಯ

*ಕೂಡ್ಲಿಗಿ ತಾಲೂಕಿನಿಂದ ಮಹಾ ಸಮ್ಮೇಳನಕ್ಕೆ 400ಕ್ಕೂ ಸರ್ಕಾರಿ ನೌಕರು ಹೆಚ್ಚು ಭಾಗವಹಿಸಲು ಸಜ್ಜು, ಫಾಲ್ತುರ್ ಶಿವರಾಜ್*

ಇಮೇಜ್
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ್ಲಿಗಿ ಯಲ್ಲಿ ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತಾದ ಪೂರ್ವಬಾವಿ ಸಭೆ ಪ್ರವಾಸಿ ಮಂದಿರದಲ್ಲಿ ನಡೆಯಿತು.  ಸಭೆಯ ಅಧ್ಯಕ್ಷತೆ ಶಿವರಾಜ್ ತಾಲೂಕ ಅದ್ಯಕ್ಷ್ರು ವಹಿಸಿದ್ದರು, ಸಭೆಯಲ್ಲಿ ಗೌರವ ಅಧ್ಯಕ್ಷ ಹಾಗೂ ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ವೈ. ರವಿಕುಮಾರ್, ಖಜಾಂಜಿ ಆರ್ ಬಿ.ಬಸವರಾಜ, ಕಾರ್ಯದರ್ಶಿ ಅಜ್ಜನಗೌಡ, ಶಿವಕುಮಾರ ಗೌಡ, ತಿಂದಪ್ಪ,ನಾಗರಾಜ್, ನಾಗರತ್ನಮ್ಮ , ಹಾಗೂ  ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ವಿ ಸಿದ್ದಾರಾಧ್ಯ ಉಪಾಧ್ಯಕ್ಷರು ಭಾಸ್ಕರ್ ನಾಯ್ಕ , ಶಿವಾನಂದ ಸ್ವಾಮಿ, ರುದ್ರಪ್ಪ, ಹುಡ ಚಪ್ಪ , ಗುರುಬಸವರಾಜ್, ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೊಟ್ರ್ ಗೌಡ,ತಿಂದಪ್ಪ, ಮಂಜುನಾಥ, ಪ್ರಭುದೇವ್,ನರೇಶ್, ಹನುಮಂತ, ಅನಂತ, ಎನ್. ಪಿ ಎಸ್ ನೌಕರರ ಸಂಘದ ಪ್ರದೀಪ್, ಭೀಮಪ್ಪ, ಪ್ರವೀಣ್, ದೈಹಿಕ ಶಿಕ್ಷಕರು ಸಂಘದ ಭರತೇಶ,ನಾಗರತ್ನ, ಸಾವಿತ್ರೀ ಬಾಯಿ ಪುಲೆ ಸಂಘದ ಅಧ್ಯಕ್ಷ ರಾದ ವಸoತಮ್ಮ, ವಿಜಯ, ಲಕ್ಷ್ಮಿ.ಸುಮಾ. ಇನ್ನಿತರರು ಹಾಜರಿದ್ದು 7ನೆ ವೇತನ ಜಾರಿಗೆ ಎನ್ ಪಿ ಎಸ್. ರದ್ದತಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತರುವ ಮೂಲಕ ಸರ್ಕಾರ ನೌಕರರ ಹಿತ ಕಾಯಬೇಕು, ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತಾದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ಕುರಿತು ಶಿವರಾಜ್ ತಾಲೂಕ ಮಾತನಾಡಿದರು.   ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉಪಾಧ್ಯಕ್ಷರು ಕರ್ನಾ

"ತೊಲಹಳ್ಳಿ ಗ್ರಾಮದಲ್ಲಿ ಜಲಜೀವನ್ ಕಾರ್ಯಪ್ರಾರಂಭ"

ಇಮೇಜ್
ಕೊಟ್ಟೂರು ತಾಲೂಕಿನ ಉಜ್ಜಿನಿ ಸಮೀಪದ ತೊಲಹಳ್ಳಿ ಗ್ರಾಮದಲ್ಲಿ ಜಲಜೀವನ್ ನೀರನ್ನು ಪೂರೈಸಲು ಟ್ಯಾಂಕರ್ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮರಳಸಿದ್ದನಗೌಡ ಯು,ರಾಜಣ್ಣ ದೀದ್ದಗೆ, ಬಸವರಾಜ್ ಎ ಎಸ್, ವಿರೇಶ್ ಎಂ ಅಂಜಿನಪ್ಪ, ತೂಲಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಭರಮನಗೌಡ್ರು ಮತ್ತು ಸದ್ಯಸರದ ಮಹೇಶ್ ಸಲೀಮ್, ಕವಿತಮ್ಮ, ಸಿದ್ದೇಶ್, ಸಂತೋಷ ಯು, ಜೆಜೆಎಂ ಇಂಜಿನಿಯರ್ ನರೇಶ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಪ್ರಶಾಂತ್,ಕಂಟ್ರಾಕ್ಟರ್ ಸುರೇಶ ಮುದ್ದೆ, ಕಾಸಿಂ ಸಬ್ ಕಳೆರಾ ರಮೇಶ್ ಮುಂತಾದವರು ಇದ್ದರು.

* ಹಾಸ್ಯದ ರಸದೌತಣ ಉಣಿಸಿದ : ಸುದ್ದಿ ಮಿತ್ರ ಸಾಂಸ್ಕೃತಿಕ ವೇದಿಕೆ *

ಇಮೇಜ್
"ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ": ತಿಪ್ಪೇಸ್ವಾಮಿ ವೆಂಕಟೇಶ್ ಕೊಟ್ಟೂರಿನಲ್ಲಿ ಸುಮಾರು ಎರಡು ದಶಕಗಳಿಂದ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮಗಳ ನಡೆಸುತ್ತಾ ಬಂದಿರುವ ಕೆ ಎಂ ಚಂದ್ರಶೇಖರ್, ಗೌರಿಹಳ್ಳಿ ಮಂಜುನಾಥ್ ಇವರ ಸುದ್ದಿ ಮಿತ್ರ ಸಾಂಸ್ಕೃತಿಕ ವೇದಿಕೆ ಸಂಸ್ಥೆ ಇವರಿಂದ ಹಾಸ್ಯ ಸಂಭ್ರಮ ಕಾರ್ಯಕ್ರಮವನ್ನು ಭಾನುವಾರ ರಂದು ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಿಪ್ಪೇಸ್ವಾಮಿ ವೆಂಕಟೇಶ್ ಅವರು ನೆರವೇರಿಸಿ ಮಾತನಾಡಿ ಈ 21ನೇ ಶತಮಾನದ ಮುಂದಿನ 20 ಶತಮಾನಗಳ ಕಂಪ್ಯೂಟರ್ ಜಗತ್ತು  ಆಳುತ್ತಿದ್ದರು. ಇಂದಿನ ದಿನಗಳಲ್ಲಿ ಹಾಸ್ಯ ಸಂಭ್ರಮ ಉಳಿದಿರುವುದು ಕಲಾಭಿಮಾನಿ, ಕಲಾ ಪೋತ್ಸಹಕ ರಿಂದ ಹಾಸ್ಯ ಕಾರ್ಯಕ್ರಮ ಸಂಭ್ರಮಕ್ಕೆ ಮೆರುಗು ಮೂಡಿಸಿತು. "ಸಜ್ಜನರ ಸಹವಾಸ ಹೆಜ್ಜೇನು ಸವಿ ದಂತೆ"ದುರ್ಜನರ ಸಹವಾಸ ಬಚ್ಚಲು ನೀರು ಸಿಡಿದಂತೆ  ಸರ್ವಜ್ಞ" ಅದಕ್ಕೆ ಒಳ್ಳೆಯವರ ಜೊತೆಗೆ ಇರೋಣ ಎಂಬುವ ಸಂದೇಶ ಹೇಳುತ್ತಾ. ನಮ್ಮ ಕೊಟ್ಟೂರಿನಲ್ಲಿ ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಈ ಸಂಸ್ಥೆಯವರಿಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಬಲ ಸಿಗಲಿ ಎನ್ನುವುದು ನನ್ನ ಆಸೆಯ ಮತ್ತು ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಂದು ಕರೆದರು ಪಕ್ಷ ನನ್ನನ್ನು ಬಿಟ್ಟರು ಜನ ನನ್ನನ್ನು ಈಗಲೂ ಜೆಡಿಎಸ್ ಮುಖಂಡ ಎಂದು ಗುರುತಿಸುವುದು ನನ್ನ ಸೌಭಾಗ್ಯ ಎಂದು ಹೇಳಿದರು. ನಂತರ ಡಿಎಸ್ಎಸ್ ಮುಖಂಡ

*ಕೂಡ್ಲಿಗಿ:ಸಾಮಾಜಿಕ ನ್ಯಾಯ ದಿನಾಚರಣೆ*

ಇಮೇಜ್
ಫೆ20 ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ, ನ್ಯಾಯಾಂಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಸೇವಾ ಸಮಿತಿ, ಮಾಜಿ ದೇವದಾಸಿಯರ ಸಂಘ, ವಿವಿದ ಇಲಾಖೆಗಳ ಸಹಯೋಗದೊಂದಿಗೆ. ಸಾಮಾಜಿಕ ಸಾಮಾಜಿಕ ನ್ಯಾಯ ದಿನಾಚರಣೆ ಆಚರಿಸಲಾಯಿತು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ಯೋಗೇಶವರು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಪ್ಯಾನಲ್ ವಕೀಲರಾದ ಸಿ.ವಿರುಪಾಕ್ಷಪ್ಪ , ಹಾಗೂ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಗುನ್ನಳ್ಳಿ ನಾರಾಯಣಪ್ಪ. ದಿನಾಚರಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಎಮ್.ಮಲ್ಲಿಕಾರ್ಜುನಯ್ಯ, ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿಲ್ಪ, ಮಾತನಾಡಿದರು. ವಕೀಲರಾದ ಡಿಕೆಬಿ ರಾಜು, ಹೆಚ್.ವೆಂಕಟೇಶ, ರಮೇಶ ವೇದಿಕೆಯಲ್ಲಿದ್ದರು. ಮಾಜಿ ದೇವದಾಸಿಯರು ಉಪಸ್ಥಿತರಿದ್ದರು. ಸ್ನೇಹ ಸಂಸ್ಥೆ ಹಾಗೂ ವಿಮುಕ್ತಿ ಸಂಘದ ಪಾದಾಧಿಕಾರಿಗಳು, ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ ಮಾಜಿ ದೇವದಾಸಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಂವಿಧಾನ ಜಾಗೃತಿ ಜಾಥಕ್ಕೆ ಕೊಟ್ಟೂರಿನಲ್ಲಿ ಅದ್ದೂರಿ ಸ್ವಾಗತ

ಇಮೇಜ್
............................................................. * ರಕ್ತದಾನ ಶಿಬಿರ ಕಾರ್ಯಕ್ರಮ * *ಸುಮಾರು ಮೂರು ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿ * *ಬಾಲಕಿಯರ ಪ್ರಾಥಮಿಕ ಶಾಲೆ ವತಿಯಿಂದ ಮಹಾ ನಾಯಕ ಧಾರಾವಾಹಿಯ ಸಂವಿಧಾನ ಕುರಿತು ಹಾಡಿಗೆ ಹೆಜ್ಜೆ * * ಸಂವಿಧಾನ ಪೀಠಿಕೆ ಓದುವುದರ ಮೂಲಕ ಜಾಗೃತಿ * * ಮಹಿಳೆಯರಿಂದ ಕುಂಭ ಮತ್ತು ಕಳಸ ಮೆರವಣಿಗೆ * ಕೊಟ್ಟೂರು : ತಾಲೂಕಿನ ಆಡಳಿತ ಮತ್ತು ಪಟ್ಟಣ ಪಂಚಾಯಿತಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾಕ್ಕೆ ತಹಸಿಲ್ದಾರ್ ಅಮರೇಶ್ ಜಾಲಹಳ್ಳಿ ರವರು ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ನಂತರ ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಿಂದ ಜಾಥಕ್ಕೆ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು ಈ ಜಾಥದಲ್ಲಿ ಪಟ್ಟಣದ ಸುಮಾರು ಮೂರು ಸಾವಿರ ಶಾಲಾ ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದು ಕಿಲೋಮೀಟರ್ ಉದ್ದದ ಜಾಥಾ, ಎತ್ತಿನ ಬಂಡಿಗಳು ಮೆರುಗು ತಂದಿತು , ದಲಿತ ಪ್ರಮುಖ ಮುಖಂಡರು, ಯುವಕರು ಹಾಗೂ ಯುವತಿಯರು, ಭಾಗವಹಿಸಿದರು. ನಂತರ ಪ್ರಮುಖ ರಸ್ತೆಯ ಮಾರ್ಗವಾದ ಬಸ್ ಸ್ಟಾಂಡ್, ಗಾಂಧಿ ಸರ್ಕಲ್, ಉಜ್ಜಿನಿ ಸರ್ಕಲ್, ಮಾರ್ಗವಾಗಿ ಸಾಗಿದ ಜಾಥಾವು ತೆರೆದ ವಾಹನದಲ್ಲಿ ಅಂಬೇಡ್ಕರ್ ರವರ ಹಾಗೂ ಸಂವಿಧಾನ ಸ್ತಬ್ದ ಚಿತ್ರದೊಂದಿಗೆ ನಡೆಯಿತು ಪ್ರಮುಖ ರಸ್ತೆಯಲ್ಲಿ ಜಾಥಾವು ಸಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮಹಾ ನಾಯಕ ಧಾರ

ಕಾಮಗಾರಿ ಹಂತದಲ್ಲೇ ಬೀಳುತ್ತಿರುವ ಚರಂಡಿ ಸ್ಲಾಬ್ : ಸಾರ್ವಜನಿಕರ ಆಕ್ರೋಶ

ಇಮೇಜ್
ವಿಶೇಷ ವರದಿ  *ಮಸ್ಕಿ:-* ಪಟ್ಟಣದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 150 ಎ ರ ಡಿವೈಡರ್ ರಸ್ತೆ ಅಗಲೀಕರಣ ವಿಭಜಕ ನಿರ್ಮಾಣ ಕಾಮಗಾರಿಯನ್ನು ಅಮ್ಮಾಪುರ ಇನ್ಪ್ರಾಸ್ಟ್ರಕ್ಚರ್ ರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಗುತ್ತಿಗೆ ಪಡೆದು ರಸ್ತೆ ಅಗಲೀಕರಣ, ಪಾದಚಾರಿ, ಚರಂಡಿ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿದ್ದು ಈ ಕಾಮಗಾರಿಯು ಪೂರ್ಣ ಪ್ರಮಾಣದ ಕಳಪೆ ಮಟ್ಟದ ಕಾಮಗಾರಿಯಾಗಿದೆ ಹಾಗೂ ಕಾಮಗಾರಿ ಹಂತದಲ್ಲೇ ಚರಂಡಿ ಸ್ಲಾಬ್ ಬೀಳುತ್ತಿದೆ ಎತ್ತ ಸಾಗುತ್ತಿದೆ ಕಾಮಗಾರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಅನೇಕ ಸಂಘಟನಾಕಾರರು ಹಾಗೂ ಸಾರ್ವಜನಿಕರು ಸೇರಿದಂತೆ ಈ ಹಿಂದೆ ಅನೇಕ ಬಾರಿ ಹೋರಾಟ ಮಾಡಿದರೂ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಯೂ ಸಮರ್ಪಕವಾಗಿ ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಹಿರಿಯ ಅಧಿಕಾರಿ ಎ.ಜಿ ಹಾವಿನಾಳ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟ ನಿಯಂತ್ರಣ ಉಪ ವಿಭಾಗ ಹುಬ್ಬಳ್ಳಿ ಅವರು ಕಳೆದ ಅ.8 2023 ರಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಹುನಗುಂದ, ವಿಜಯಪುರ ಎನ್‌ಎಚ್ 150 A ವಿಭಾಗದ ತಪಾಸಣೆ ನಡೆಸಿ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಆದೇಶ ಹೊರಡಿಸಿದ್ದರು.ಆದರೆ ಸ್ಥಳೀಯ ಅಧಿಕಾರಿಗಳು ಹಾಗೂ ಕಾಮಗಾರಿಯ ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನೇ ಮುಂ

*ಬೇಕರಿ , ಮೊಬೈಲ್ ಶಾಪ್ ಅಗ್ನಿ ತಾಕಿ ಅವಘಡ*

ಇಮೇಜ್
ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಹತ್ತಿರ ವೆಂಕಟೇಶ್ವರ ಅಯ್ಯಂಗಾರ್ ಬೇಕರಿಗೆ ಅಗ್ನಿ ತಾಕಿ ಅವಘಡ ನಡೆದಿರುವ ಘಟನೆ ರಾತ್ರಿ 7 ಗಂಟೆಗೆ ಭಾನುವಾರ ರಂದು ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯ ನಡೆದಿದೆ. ಬೇಕರಿಯ ಪಕ್ಕದಲ್ಲಿರುವ ಮೊಬೈಲ್ ಶಾಪ್ ಸಂಪೂರ್ಣವಾಗಿ, ಬಳೆ ಅಂಗಡಿಯ ಸಾಮಗ್ರಿಗಳು  ಸುಟ್ಟಿರುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಕೊಟ್ಟೂರು ಪಿ ಎಸ್ ಐ ಗೀತಾಂಜಲಿ ಸಿಂಧೆ, ಪೊಲೀಸ್ ಇಲಾಖೆ ಅಗ್ನಿ ಶಾಮಕ ದಳ ಸಿಬ್ಬಂದಿ ವರ್ಗದವರು. ಬೆಂಕಿಯ ನಂದಿಸುವ ಕಾರ್ಯದಲ್ಲಿ  ನಿರತರಾಗಿದ್ದರು.

ರಾಜ್ಯ ಬಜೆಟ್ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿತ ನಿರಾಸೆ ಮೂಡಿಸಿದ ಬಜೆಟ್: ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು.

ಇಮೇಜ್
ಲಿಂಗಸುಗೂರು:17 ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ 2020-21ರಲ್ಲಿ 13% ,2021-22 ರಲ್ಲಿ 12.7% ,2022-23 ರಲ್ಲಿ 12.9% ,2023-24 ರಲ್ಲಿ 11% ಹಾಗೂ ಈ 2024-25 ರ ಬಜೆಟ್ ನಲ್ಲಿ 12% ಹಣ ಮೀಸಲಿಟ್ಟಿದೆ.ಕಳೆದ 4 ವರ್ಷಗಳ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದ ಪ್ರಾಧಾನ್ಯತೆ ಕಡಿಮೆಯಾಗುತ್ತಾ ಬಂದಿದೆ.44,422 ಕೋಟಿ ರೂಪಾಯಿ ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡಿದ್ದು, ಇದು ಶಿಕ್ಷಣ ಕ್ಷೇತ್ರವನ್ನು ಸರ್ಕಾರ ಕಡೆಗಣಿಸಿದ್ದು ಕಂಡುಬರುತ್ತದೆ. ಶಿಕ್ಷಣ ಕ್ಷೇತ್ರವನ್ನು ಪ್ರಾಧಾನ್ಯತೆಯಾಗಿ ತೆಗೆದುಕೊಳ್ಳಬೇಕಿದ್ದ ಸರ್ಕಾರ ಖಾಸಗಿಯವರ ಸಹಭಾಗಿತ್ವವನ್ನು ನಿರೀಕ್ಷಿಸುತ್ತಿರುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಕಾಂಗ್ರೆಸ್ ಸರ್ಕಾರ ಶಿಕ್ಷಣವನ್ನು ಗ್ಯಾರಂಟಿ ಪಟ್ಟಿಗೆ ಸೇರಿಸಬೇಕಿತ್ತು.ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ ಎಂಬುದು ಈ ಬಜೆಟ್ ನಲ್ಲಿ ಸಾಬೀತಾಗಿದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಆರೋಪಿಸಿದ್ದಾರೆ. ಎಸ್ಎಫ್ಐ ಸಂಘಟನೆ ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ಹೊಸ ಹಾಸ್ಟೆಲ್ ಮಂಜೂರು ಮಾಡಲು ಮನವಿ ಸಲ್ಲಿಸಿದ ಭಾಗವಾಗಿ ಬಜೆಟ್ ನಲ್ಲಿಂದು ಮೊರಾರ್ಜಿ ದೇಸಾಯಿ, ಅಲ್ಪಾ ಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ 345 ಹಾಸ್ಟೆಲ್ ಗಳನ್ನು ಘೋಷಣೆ ಮಾಡಿದ್ದು ಸ್ವಾಗತರ್ಹಾ ಎಂದಿದ್ದಾರೆ. ವಸತಿ ನಿಲಯ

ಪ್ರಾಥಮಿಕ ಆರೋಗ್ಯ ಕೇಂದ್ರ ಆನ್ವರಿಯಲ್ಲಿ ಬೇಟಿ ಬಚಾವ್ ಭೇಟಿ ಪಡಾವೋ ಕಾರ್ಯಕ್ರಮ.

ಇಮೇಜ್
ಹಟ್ಟಿ- ಚಿನ್ನದ ಗಣಿ ಸಮೀಪದ ಅನ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಬೇಟಿ ಬಚಾವ್ ಭೇಟಿ ಪಡಾವೋ ಕಾರ್ಯಕ್ರಮವನ್ನು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ಕುಮಾರಿ ದೇವಮ್ಮ ಎಚ್.ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶಂಕ್ರಪ್ಪ ಸಕ್ರಿ ಸರ್.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ಕುಮಾರಿ ಸುರೇಖಾ ಪಿ.ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಈರಮ್ಮ ಎಚ್.ಶಶಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು. ಬೇಟಿ ಬಚಾವ್ ಭೇಟಿ ಪಡಾವೋ ಯೋಜನೆಯು ಹರಿಯಾಣದ ಪಾಣಿಪತ್ ನಲ್ಲಿ 2015ರಲ್ಲಿ ಜನವರಿಯಲ್ಲಿ ಪ್ರಾರಂಭವಾಯಿತು. ಭಾರತದ 640 ಜಿಲ್ಲೆಗಳನ್ನು ಒಳಗೊಂಡು ಬಿಬಿಬಿಪಿ ಯ ಅಖಿಲ ಭಾರತ ವಿಸ್ತರಣೆಗೆ ಮಾರ್ಚ್ 8-2018 ರಂದು ರಾಜಸ್ಥಾನದ ಝೋಜುಮದಲ್ಲಿ ಪ್ರಾರಂಭವಾಯಿತು.ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳ ಪ್ರಯತ್ನವಾಗಿದೆ.ಭಾರತದಲ್ಲಿ ಮಕ್ಕಳ ಲೈಂಗಿಕ ಅನುಪಾತ ಕ್ಷಣಿಸುತ್ತಿದೆ.ಅದರಲ್ಲೂ ಹೆಣ್ಣುಮಕ್ಕಳ ಲೈಂಗಿಕ ಅನುಪಾತ ಕ್ಷಣಿಸುತ್ತಿದೆ.ಏಕೆಂದರೆ 1000 ಪುರುಷರಿಗೆ ಹೆಣ್ಣು ಮಕ್ಕಳು ಕಡಿಮೆ ಆಗುತ್ತಾರೆ.ಏಕೆಂದರೆ ಭಾರತ ಒಂದು ಪುರುಷ ಪ್ರಧಾನ ರಾಷ್ಟ್ರ.ಹೆಣ್ಣು ಮಕ್ಕಳ ಜನನ ಅಥವಾ ಹೆರಿಗೆಯನ್ನು ತಡೆಯಲಾಗುತ್ತದೆ ಹೆಣ್ಣು ಮಗುವಿನ ಜನನವನ್ನು ಕಡಿಮೆ ಮಾಡುತ್ತಾ