ಪೋಸ್ಟ್‌ಗಳು

ಮೇ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ ಭ್ರಷ್ಟಾಚಾರದಲ್ಲಿ ಪಾಲ್ಗೊಂಡವರಿಗೆ ಶಿಕ್ಷೆ ಆಗಲೇಬೇಕು : ನಿರುಪಾದಿ.ಕೆ.ಗೋಮರ್ಸಿ

ಇಮೇಜ್
ಸಿಂಧನೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದು ಬಡವರ ಕಲ್ಯಾಣಕ್ಕೆ ವಾಲ್ಮೀಕಿ ನಾಯಕ ಸಮುದಾಯದ ಜನರ ಅಭಿವೃದ್ಧಿಗೆ. ಆದರೆ ಈ ನಿಗಮದಲ್ಲಿ ಬಡವರ ಕಲ್ಯಾಣಕ್ಕೆ ಸಿಗುವ ನೂರಾರು ಕೋಟಿ ಅನುದಾನದ ಹಣವನ್ನು ಭ್ರಷ್ಟ ಅಧಿಕಾರಿಗಳು ಭ್ರಷ್ಟ ಕೆಲವು ರಾಜಕಾರಣಿಗಳ ಜೊತೆ ಸೇರಿ ಹಣವನ್ನು ಲೂಟಿ ಹೊಡೆದು ವಾಲ್ಮೀಕಿ ನಾಯಕ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ ಇದು ಖಂಡನೀಯ ಎಂದು ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ.ಕೆ.ಗೋಮರ್ಸಿ ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ  ಪತ್ರಿಕಾ ಹೇಳಿಕೆ ನೀಡಿದ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ.ಕೆ.ಗೋಮರ್ಸಿ ಅವರು  ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದು ಬಡವರ ಕಲ್ಯಾಣಕ್ಕೆ ವಾಲ್ಮೀಕಿ ನಾಯಕ ಸಮುದಾಯದ ಜನರ ಅಭಿವೃದ್ಧಿಗೆ. ಆದರೆ ಈ ನಿಗಮದಲ್ಲಿ ಬಡವರ ಕಲ್ಯಾಣಕ್ಕೆ ಸಿಗುವ ನೂರಾರು ಕೋಟಿ ಅನುದಾನದ ಹಣವನ್ನು ಭ್ರಷ್ಟ ಅಧಿಕಾರಿಗಳು ಭ್ರಷ್ಟ ಕೆಲವು ರಾಜಕಾರಣಿಗಳ ಜೊತೆ ಸೇರಿ ಹಣವನ್ನು ಲೂಟಿ ಹೊಡೆದು ವಾಲ್ಮೀಕಿ ನಾಯಕ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ ಇದು ಖಂಡನೀಯ. ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಚಂದ್ರಶೇಖರ್ ರವರಿಗೆ ಎಲ್ಲ ಮಾಹಿತಿ ಗೊತ್ತಿದ್ದರೂ ಮೌನವಾಗಿ ಉಳಿದು ಕೊನೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಹೇಡಿತನದ ಕೆ

ಮಾಜಿ ಸಚಿವ ಎಚ್.ಆಂಜನೇಯರಿಗೆ ಪರಿಷತ್ ಸ್ಥಾನ ಸಿಗಲಿ : ಸಿದ್ದು ಮುರಾರಿ

ಇಮೇಜ್
ಮಸ್ಕಿ : ವಿಧಾನ ಸಭೆಯಿಂದ ವಿಧಾನ ಪರಿಷತ್ ಅವಧಿ ಜೂನ್ 17ರಂದು 11 ವಿಧಾನ ಪರಿಷತ್ ಸದಸ್ಯರು ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಶೋಷಿತ ಸಮುದಾಯದ ಧ್ವನಿಯಾಗಿರುವ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು' ಎಂದು ಮಾದಿಗ ಸಮುದಾಯದ ಯುವ ಮುಖಂಡ ಸಿದ್ದು ಮುರಾರಿ ಯವರು ಮನವಿ ಮಾಡಿದರು. ಇದೇ ಜೂನ್ 13ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಚ್.ಆಂಜನೇಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಪಟ್ಟಣದಲ್ಲಿ ಪತ್ರಿಕೆಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. "ಎಚ್.ಆಂಜನೇಯ ಸಚಿವರಾಗಿದ್ದ ಅವಧಿಯಲ್ಲಿ ಮಾಜಿ ದೇವದಾಸಿಯರಿಗೆ ಮಾಸಾಶನ, ಅವರ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ, ಹೆಚ್ಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಲು ಪ್ರೋತ್ಸಾಹ ಧನ ಸೇರಿ ಅನೇಕ ಐತಿಹಾಸಿಕ ಯೋಜನೆ ಜಾರಿಗೆ ತಂದಿದ್ದಾರೆ ". ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣ, ಅಭಿವೃದ್ಧಿ ನಿಗಮಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್ ಅವರು ಆಂಜನೇಯ ಅವರನ್ನು ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಸಿದ್ದು ಮುರಾರಿ ದಲಿತ ಮುಖಂಡರು ಪತ್ರಿಕೆ ಹೇಳಿಕೆ ಮೂಲಕ ಒ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಹಸೀಲ್ದಾರ್ ಗೆ ಮನವಿ

ಇಮೇಜ್
ಮಸ್ಕಿ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಈಗ ಮುಂಗಾರು ಪ್ರಾರಂಭಗೊಂಡಿದ್ದು ರೈತರ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆ ಮಾಡಲು ವ್ಯವಸ್ಥೆ ಮಾಡಿಕೋಳ್ಳಬೇಕಾಗಿದ್ದು, ಇಂದಿನ ವರ್ಷ ಬರಗಾಲದಿಂದ ರೈತರ ಕೈಗೆ ಬೆಳೆ ಸಿಗದೇ ನಷ್ಟದಲ್ಲಿ ಇರುತ್ತಾನೆ. ಈಗ ರೈತರ ಬಳಿ ಬೆಳೆ ಮಾಡಲು ಹಣ ಇರುವುದಿಲ್ಲ, ಇಂದಿನ ವರ್ಷ ಬೆಳೆ ಮಾಡಲು ರೈತ ಮಾಡಿದ್ದ ಸಾಲ ಹಾಗೆ ಇರುತ್ತದೆ. ಬರಗಾಲ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಕಾಲಹರಣ ಮಾಡುತ್ತಿದ್ದು, ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ತಹಶೀಲ್ದಾರರಾದ ಸುಧಾ ಅರಮನೆ ಅವರಿಗೆ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದರು. ಈಗಾಗಲೇ ಮುಂಗಾರು ಪ್ರಾರಂಭಗೊಂಡಿದ್ದು ರೈತರ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆ ಮಾಡಲು ವ್ಯವಸ್ಥೆ ಮಾಡಿಕೋಳ್ಳಬೇಕಾಗಿದ್ದು, ಇಂದಿನ ವರ್ಷ ಬರಗಾಲದಿಂದ ರೈತರ ಕೈಗೆ ಬೆಳೆ ಸಿಗದೇ ನಷ್ಟದಲ್ಲಿ ಇರುತ್ತಾನೆ. ಈಗ ರೈತರ ಬಳಿ ಬೆಳೆ ಮಾಡಲು ಹಣ ಇರುವುದಿಲ್ಲ, ಇಂದಿನ ವರ್ಷ ಬೆಳೆ ಮಾಡಲು ರೈತ ಮಾಡಿದ್ದ ಸಾಲ ಹಾಗೆ ಇರುತ್ತದೆ. ಬರಗಾಲ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಕಾಲಹರಣ ಮಾಡುತ್ತಿದ್ದು, ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ ಅದ್ದರಿಂದ ಸರ್ಕಾರ ಕೂಡಲೇ ಎಲ್ಲಾ ರೈತರಿಗೆ ಬರಗಾಲದ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸುತ್ತದೆ. ತಪ್ಪಿದಲ್ಲಿ ರೈತರ ಒಳಗೊಂಡು ಪ್ರತಿಭಟನೆ ನಡೆಸಲಾಗುವುದೆಂದು ತಮ್ಮ ಗಮ

*ಜನಸ್ನೇಹಿ ಕಾರ್ ರೆಂಟಲ್ ಆ್ಯಪ್ ಬಿಡುಗಡೆ*

ಇಮೇಜ್
ಬೆಂಗಳೂರು:  ಬೆಂಗಳೂರಿನವರದ್ದೇ ಆದ ಕಂಪನಿ ಇದೀಗ ಜನಸ್ನೇಹಿ ಆನ್ಲೈನ್ ಕಾರು ಬಾಡಿಗೆ ಸೇವೆ ಆರಂಭಿಸಿದೆ.  ' ರೆಂಟ್ ಎನ್ ಗೋ' ಕಂಪನಿಯ ಆಪ್ಯ ಸದ್ಯ ಸೇವೆ ನೀಡುತ್ತಿರುವ ಕಂಪನಿಗಳಿಗಿಂತ ಹೆಚ್ಚು ಸರಳ ಮತ್ತು ಸುರಕ್ಷಿತವಾಗಿದೆ.   ಕಾರು ಬಾಡಿಗೆಯ ಸೇವೆಯನ್ನು 'ಶೇರಿಂಗ್' ಆಧಾರದ ಮೇಲೆ ಕೂಡ ನೀಡಬಹುದು. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಅವಧೂತರಾದ ವಿನಯ್ ಗುರೂಜಿ ಈ ನೂತನ ಸೇವೆಯನ್ನು ಲೋಕಾರ್ಪಣೆ ಮಾಡಿದರು. ಕಳೆದ ಹತ್ತು ವರ್ಷಗಳಿಂದ ಸಾರಿಗೆ ಉದ್ಯಮದಲ್ಲಿರುವ 'ಇ-ಟ್ರಾವೆಲ್ ಮೇಟ್' ಕಂಪನಿಯ ಹೊಸ ಸೇವೆ ಇದಾಗಿದ್ದು, ಇದು ಅತ್ಯಂತ ಗ್ರಾಹಕ-ಸ್ನೇಹಿಯಾಗಿದೆ ಎಂದು ವಿನಯ್ ಗುರೂಜಿ ಕಂಪನಿ ಹೇಳಿದರು. ಬೆಂಗಳೂರಿನ ತೀವ್ರ ಒತ್ತಡದ ಸಂಚಾರ ದಟ್ಟಣೆಗೆ ಈ ಆ್ಯಪ್ ಪರಿಹಾರ ನೀಡುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ವಿನಯ್ ಗುರೂಜಿ ಅಭಿಪ್ರಾಯ ಪಟ್ಟರು. ವಯಕ್ತಿಕ ಕಾರುಗಳನ್ನು ಆನ್ಲೈನ್ ಮೂಲಕ ಬಾಡಿಗೆ ನೀಡಿದಲ್ಲಿ ಸುರಕ್ಷಿತವಾಗಿ ಹಾಗೂ ಸುಲಭವಾಗಿ ಹಣ ಗಳಿಸಬಹುದು. ಇದು ನಗರ ಸಾರಿಗೆ ಒತ್ತಡ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದು ಗುರೂಜಿ ಅಭಿಪ್ರಾಯ ಪಟ್ಟರು. 'ಇ-ಟ್ರಾವೆಲ್ ಮೇಟ್' ಸಂಸ್ಥೆ ಮುಖ್ಯಸ್ಥ ಸಂತೋಷ್ ಮಾತನಾಡಿ, 'ರೆಂಟ್ ಆಂಡ್ಯ್ ಗೋ' ಆ್ಯಪ್ ಸುಲಭ ಬಳಕೆಯ ಸುರಕ್ಷಿತ ಸಾಧನವಾಗಿದೆ ಎಂದರು. ಚಾಲಕರು ತಮಗೆ ಬೇಕಾದ ರೀತಿಯಲ್ಲಿ ಮಾರ್ಗ ಬದಲಾವಣೆಗೆ ಅವಕಾಶ ಇರುವುದಿಲ್ಲ. ಜ

ಪ್ರತಾಪ್ ಗೌಡ ಪಾಟೀಲ್ ಅವರಿಗೆ MLC ಸ್ಥಾನ ನೀಡಿ : ಬಿಜೆಪಿ ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ಒತ್ತಾಯ

ಇಮೇಜ್
ಮಸ್ಕಿ :   ಮಸ್ಕಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಎಂಎಲ್ಸಿ ಸ್ಥಾನ ನೀಡಬೇಕು ಎಂದು ತಾಲೂಕಿನ ದೀನಸಮುದ್ರ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಮಸ್ಕಿ ಬಿಜೆಪಿ ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ರವರು ಒತ್ತಾಯ ಮಾಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಹಾಗೂ ಇಂದಿನ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರತಾಪ್ ಗೌಡ ಪಾಟೀಲ್ ಅವರು ಕೂಡ ಒಬ್ಬರಾಗಿದ್ದಾರೆ. ಸೋಲು ಗೆಲುವು ಎರಡನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿದ್ದಾರೆ. ನಿರಂತರವಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಪರಿಶ್ರಮವನ್ನು ಪರಿಗಣಿಸಿ ರಾಜ್ಯದ ಬಿಜೆಪಿ ನಾಯಕರು ಹಾಗೂ ವರಿಷ್ಠರು ಪ್ರತಾಪ್ ಗೌಡ ಪಾಟೀಲ್ ಅವರಿಗೆ ಎಂ.ಎಲ್ಸಿ ಸ್ಥಾನವನ್ನು ನೀಡಬೇಕು ಎಂದು ಬಸವರಾಜ ದೀನಸಮುದ್ರ ರವರ ಪತ್ರಿಕೆ ಮ‌ೂಲಕ ಒತ್ತಾಯಿಸಿದರು.

ಮುದಬಾಳ ಗ್ರಾಮದಲ್ಲಿ ಎಸ್ಸಿ ಎಸ್ಟಿ ಸಭೆ ಯಶಸ್ವಿ

ಇಮೇಜ್
ಮಸ್ಕಿ : ತಾಲೂಕಿನ ಮುದಬಾಳ ಗ್ರಾಮದಲ್ಲಿ ಮಸ್ಕಿ ಪೋಲಿಸ್ ಠಾಣೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ (ಎಸ್ಸಿ -ಎಸ್ಟಿ) ತಿಳುವಳಿಕೆ ಸಭೆಯೂ ಎ.ಎಸ್.ಐ.ಹುಲಗಪ್ಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಮುದಬಾಳ ಗ್ರಾಮದ ಸಾರ್ವಜನಿಕ ಕಟ್ಟೆಯ ಬಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ತಿಳುವಳಿಕೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್. ಐ.ಹುಲುಗಪ್ಪ ರವರು ಸಮುದಾಯಗಳಿಗೆ ಸಂಭಂದಿಸಿದ ಕಾನೂನು ಕಾಯ್ದೆ ಗಳ ಬಗ್ಗೆ ಹಾಗೂ ಪರಿಶಿಷ್ಟ ವರ್ಗಗಳ ರಕ್ಷಣೆಯ ವಿಷಯದ ಕುರಿತು ಸ್ವ ವಿಸ್ತಾರವಾಗಿ ನೆರೆದ ಸಾರ್ವಜನಿಕರ ಮನ ಮುಟ್ಟುವ ರೀತಿಯಲ್ಲಿ ಕಾನೂನು ಅರಿವು ತಿಳುವಳಿಕೆಯ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಜಡೆಯಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಹಿರಿಯರು ಹಾಗೂ ಯುವಕರು ಸೇರಿದಂತೆ ಇನ್ನಿತರರು ಇದ್ದರು.

ಹದಗೆಟ್ಟ ರಸ್ತೆ ತಗ್ಗು ಗುಂಡಿಗಳು ಸವಾರರ ಜೀವ ತೆಗೆಯಲಿಕ್ಕೆ ಸ್ವಾಗತಿಸುತ್ತೆವೆ...!

ಇಮೇಜ್
ಕೊಟ್ಟೂರು: ನಾಡಿನ ಆರಾಧ್ಯ ದೈವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪುಣ್ಯ ಕ್ಷೇತ್ರವಾದ ಕೊಟ್ಟೂರಿಗೆ ಪ್ರತಿದಿನ ನೂರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಜನಸಾಮಾನ್ಯರ ಮಧ್ಯಮ ವರ್ಗದ ಜನರ ಜೀವನಾಡಿ ಎಂದರೆ ಅದುವೇ ರೈಲು ಸಂಚಾರವಾಗಿದೆ. ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಬಂದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ. ಕೊಟ್ಟೂರಿಗೆ ರೈಲು ನಿಲ್ದಾಣ ಆಗಬೇಕೆಂದು ಈ ಭಾಗದ ಜನರ ಬಹುದಿನದ ಬೇಡಿಕೆ ಹಾಗೂ ಕೊಟ್ಟೂರು ರೈಲ್ವೆ ಸಮಿತಿ ಹೋರಾಟಗಾರರ ಶ್ರಮದ ಪ್ರತಿಫಲವೇ ಇಂದು ಕೊಟ್ಟೂರಿನಲ್ಲಿ ರೈಲು ನಿಲ್ದಾಣವಾಗಿದೆ.  ರೈಲು ನಿಲ್ದಾಣಕ್ಕೆ ಬಂದು ಇಳಿದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ. ಈ ರಸ್ತೆಯಲ್ಲಿ ಬರುವ ಪ್ರಯಾಣಿಕರು, ಭಕ್ತರು , ಬೈಕ್ ಸವಾರರು ವಿದ್ಯಾರ್ಥಿಗಳು, ಈ ಮಾರ್ಗದಲ್ಲಿ ಬರುವ ಗ್ರಾಮದ ರೈತರು  ಈ ಹದಗೆಟ್ಟಿರುವ ರಸ್ತೆಗಳ ಗುಂಡಿಗೆ ಬಿದ್ದು ಕೈ ಕಾಲು ಮುರಿದು ಕೊಂಡಿರುವ ಎಷ್ಟೋ ಪ್ರಸಂಗಗಳು ನಡೆದಿದೆ ಎಂದು ಬೈಕ್ ಸವಾರ  ಪ್ರವೀಣ್ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆ ರೈಲ್ವೆ ಸ್ಟೇಷನ್ ಗೆ ಹೋಗಬೇಕಾದರೆ ಒಂದು ಕ್ಷಣ ಭಯ ಉಂಟಾಗುತ್ತದೆ.  ಯಾಕೆ ಎಂದರೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ ಬರುವ ಭಕ್ತಾದಿಗಳು ಕತ್ತಲನಲ್ಲೇ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.  ದಿನನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತದೆ ಆದರೆ ಪಕ್ಕದಲ್ಲಿರುವ

ಓಪನ್ ಕ್ರಿಕೆಟ್ ಟೂನ್೯ಮೆಂಟ್ ಪಂದ್ಯಾವಳಿಗೆ ಚಾಲನೆ

ಇಮೇಜ್
ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ವಿ ಎಸ್ ಎಸ್ ಕ್ರಿಕೆಟ್ ಕ್ಲಬ್ ವತಿಯಿಂದ ದಿವಂಗತ ಬಸವರಾಜಪ್ಪಗೌಡ ಚೇರಮೆನ್ , ದಿವಂಗತ ಶಿವಶಂಕರಗೌಡ ಯದ್ದಲದಿನ್ನಿ, ದಿವಂಗತ ಅಮರೇಶಪ್ಪಗೌಡ ಹಾಲಾಪೂರ ಇವರ ಸ್ಮರಣಾರ್ಥವಾಗಿ ಓಪನ್ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂನ್೯ಮೆಂಟ್ ಉದ್ಘಾಟನೆಯನ್ನು ವೆಂಕಟರಡ್ಡಿ ಗೌಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ನೆರವೇರಿಸಿದರು . ನಂತರ ಮಾತನಾಡಿದ ಅವರು ಕ್ರೀಡೆಯನ್ನು ಸಹೋದರ ಮನೋಭಾವದಿಂದ ಕಾಣಬೇಕು, ಸೋಲು ಗೆಲುವು ಸಮಾನತೆಯಿಂದ ಸ್ವೀಕರಿಸಿ ಕ್ರೀಡೆಯನ್ನು ಯಶಸ್ವಿಗೊಳಿಸಬೇಕು, ಹಾಲಾಪೂರದ ಸರಕಾರಿ ಪ್ರೌಢಶಾಲೆಗೆ ನಮ್ಮ ಗ್ರಾಮದ ದಿವಂಗತ ಬಸವರಾಜಪ್ಪಗೌಡ ರು ವಿಶಾಲವಾದ ಆರು ಎಕರೆ ಭೂಮಿಯನ್ನು ದಾನವಾಗಿ ಕೊಟ್ಟು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಅವರನ್ನು ನಾವು ಯಾವಾಗಲೂ ಸ್ಮರಿಸುವ ಕೆಲಸ ಮಾಡಬೇಕು ಎಂದು ವೆಂಕಟರಡ್ಡಿಗೌಡ ಹೇಳಿದರು.  ನಂತರ ಮಾತನಾಡಿದ ಬಿ.ಕರಿಯಪ್ಪ ಕ್ರೀಡೆಯು ಮನುಷ್ಯನ ಸುಖಕರ ಆರೋಗ್ಯಕ್ಕೆ ಉತ್ತಮ ಶಕ್ತಿಯಾಗಿದ್ದು ಅದಕ್ಕಾಗಿ ನಾವೆಲ್ಲರೂ ಕ್ರೀಡೆಯನ್ನು ಸೌಹಾರ್ದವಾಗಿ ಕಾಣಬೇಕು ಎಂದು ಬಿ ಕರಿಯಪ್ಪ ಹೇಳಿದರು. ನಂತರ ಮಾತನಾಡಿದ ಸಜ್ಜಲ ಶ್ರೀ ಬ್ಯಾಂಕ್ ನ ವ್ಯವಸ್ಥಾಪಕರಾದ ಮಹಾಂತೇಶ ಪೂಜಾರಿ ಈ ಒಂದು ಕ್ರಿಕೆಟ್ ಟೂನ್೯ಮೆಂಟ್ ಪಂದ್ಯದಲ್ಲಿ ಒಟ್ಟು 32 ಪಂದ್ಯಗಳು ನೊಂದಣಿ ಮಾಡಿಸಿದ್ದಾರೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಮಾಜಿ ತಾ.ಪಂ

ಕಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲೇ ಮಳೆ ನೀರು ಸಂಗ್ರಹದ ಮೂಲಕ ಶೇ 100 ರಷ್ಟು ಶುದ್ಧ ಕುಡಿಯುವ ನೀರು ಪೂರೈಕೆ – ಇ.ಎಸ್.ಜಿ ಮುಖ್ಯಸ್ಥ ಎಲ್. ಶ್ರೀಧರ್

ಇಮೇಜ್
ಐಸಿಎಸ್ಐ ಬೆಂಗಳೂರು ಚಾಪ್ಟರ್ ನಿಂದ “ಪರಿಸರ, ಸಾಮಾಜಿಕ ಆಡಳಿತ” ಕುರಿತ ಸಮಾವೇಶ ಬೆಂಗಳೂರು; “ಪರಿಸರ, ಸಾಮಾಜಿಕ ಆಡಳಿತ”ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಾಗಿದ್ದು, ಸೂಕ್ತ ನೀಲ ನಕ್ಷೆ, ನಿರಂತರ ಪ್ರಯತ್ನಗಳ ಪರಿಣಾಮಗಳಿಂದಾಗಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಆಡಳಿತ ಜಾರಿಗೊಳಿಸಲು ಸಾಧ್ಯವಾಗಿದೆ ಎಂದು ಬಿಐಎಎಲ್ ನ ಪರಿಸರ, ಸಾಮಾಜಿಕ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಎಲ್. ಶ್ರೀಧರ್ ಹೇಳಿದ್ದಾರೆ. ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾದ ಬೆಂಗಳೂರು ಚಾಪ್ಟರ್ ಹಾಗೂ ಐಎಂಎ ನಿಂದ ಆಯೋಜಿಸಲಾದ “ಪರಿಸರ, ಸಾಮಾಜಿಕ ಆಡಳಿತ” ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2030 ರ ಎಸ್.ಡಿ.ಜಿ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಕೋವಿಡ್ ಸಂದರ್ಭದಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಯಿತು. ಇದರ ಪರಿಣಾಮ ಶೇ 100 ರಷ್ಟು ನವೀಕೃತ ಇಂಧನ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಮಳೆ ನೀರು ಸಂಗ್ರಹದ ಮೂಲಕ ಮೂರನೇ ಎರಡರಷ್ಟು ಶುದ್ಧ ಕುಡಿಯುವ ನೀರು ಬಳಕೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಮಳೆ ನೀರನ್ನೇ ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತೇವೆ. ಉದ್ಯಾನವನಗಳಿಗೆ ಎರಡು ಪಟ್ಟಿಗೂ ಹೆಚ್ಚಿನ ಪ್ರಮಾಣದ ನೀರನ್ನು ಬಳಕೆ ಮಾಡುವ ಸಾಮರ್ಥ್ಯ ವೃದ್ಧಿಸಿಕೊಂಡಿದ್ದೇವೆ. 2017 ರಿಂದಲೇ ಇಂಗಾಲ ಹೊರ ಸೂಸುವಿಕೆಯಲ್ಲಿ ವಿಮಾನ ನಿಲ್ದಾಣ ಶೂನ್ಯ ಸಹಿಷ್ಣುತೆಯನ್ನು ಅಳವಡಿಸಿಕೊಂಡಿದೆ ಎಂದರು.

ಎನ್.ಟಿ.ಪಿ.ಸಿ ಹರಾಜಿನಲ್ಲಿ ಅವಾದ ಎನರ್ಜಿ ಗೆ 1050 ಎಂಡ್ಬ್ಯೂಪಿ ಸೋಲಾರ್ ಪ್ರಾಜೆಕ್ಟ್

ಇಮೇಜ್
ಬೆಂಗಳೂರು: ಅವಾದ ಎನರ್ಜಿ, ಅವಾದ ಗ್ರೂಪ್ ನ ಅಂಗಸಂಸ್ಥೆಯಾಗಿ ಮತ್ತು ನವೀಕರಿಸಬಹುದಾದ ಶಕ್ತಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿ ಎನ್.ಟಿ.ಪಿ.ಸಿ  (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್) ಇತ್ತೀಚೆಗೆ ಬಿಡುಗಡೆ ಮಾಡಿದ ಟೆಂಡರ್‌ನಲ್ಲಿ 1050 ಎಂಡ್ಬ್ಯೂಪಿ ಶಕ್ತಿಯ ಸೋಲಾರ್ ಪ್ರಾಜೆಕ್ಟ್ ಗೆದ್ದಿರುವ ಬಗ್ಗೆ ಘೋಷಣೆ ಮಾಡುವಂತಾಗಿ ಗೌರವವನ್ನು ಅನುಭವಿಸುತ್ತಿದೆ. ಈ ಸಾಧನೆ Avaadaನ ಪರಿಣತಿಯನ್ನು ಮತ್ತು ಭಾರತದ ನವೀಕರಿಸಬಹುದಾದ ಶಕ್ತಿ ಗುರಿಗಳನ್ನು ಸಾಧಿಸುವ ಬದ್ಧತೆಯನ್ನು ಹೇರಳವಾಗಿ ತೋರಿಸುತ್ತದೆ. 1050 ಎಂಡ್ಬ್ಯೂಪಿ ಶಕ್ತಿಯ ಸೋಲಾರ್ ಪ್ರಾಜೆಕ್ಟ್ ಗೆದ್ದಿದೆ, ಇದು 25 ವರ್ಷದ ಶಕ್ತಿ ಖರೀದಿ ಒಪ್ಪಂದ ಮೇಲೆ ಸಹಿ ಹಾಕಿದ 24 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಅವಾದ ಎನರ್ಜಿ  ಯು ದೊಡ್ಡ ಪ್ರಮಾಣದ ನವೀಕರಿಸಬಹುದಾದ ಶಕ್ತಿ ಪ್ರಾಜೆಕ್ಟ್‌ಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಪೂರ್ಣಗೊಳ್ಳುವ ಬದ್ಧತೆಯನ್ನು ತೋರಿಸುತ್ತದೆ. ಈ ಪ್ರಮುಖ ಅಭಿವೃದ್ಧಿಯ ಬಗ್ಗೆ ಕಾಮೆಂಟ್ ಮಾಡುತ್ತಿರುವ ಅವಾದ ಗ್ರೂಪ್ ನ ಚೇರ್ಮನ್, ಶ್ರೀ ವಿನೀತ್ ಮಿತ್ತಲ್ ಅವರು, "ನಾವು ಎನ್.ಟಿ.ಪಿ.ಸಿ  ಯಿಂದ  ಅತ್ಯಂತ ದೊಡ್ಡ ಬಿಡ್ ಗೆದ್ದಿದ್ದಕ್ಕೆ ಅತ್ಯಂತ ಹೆಮ್ಮೆ ಹೊಂದಿದ್ದೇವೆ. ಈ ಸಾಧನೆ ದೊಡ್ಡ ಪ್ರಮಾಣದ ನವೀಕರಿಸಬಹುದಾದ ಶಕ್ತಿ ಪ್ರಾಜೆಕ್ಟ್‌ಗಳನ್ನು ಅನುಷ್ಠಾನಕ್ಕೆ ತರುವ ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ ಮಾ

ರೈತ ಸಂಪರ್ಕ ಕೇಂದ್ರದಲ್ಲಿ ಬಿಜ ವಿತರಣೆ,ಸಕಾಲಕ್ಕೆ ಮಳೆ,ರೈತ ಸಂತಸ

ಇಮೇಜ್
ಮಸ್ಕಿ  : ತಾಲ್ಲೂಕಿನ ಹಾಲಾಪೂರ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜಗಳನ್ನು ಗುರುವಾರ ಮತ್ತು ಶುಕ್ರವಾರ ರೈತರಿಗೆ ವಿತರಿಸಲಾಯಿತು.  ಈ ವರ್ಷ ಮುಂಗಾರು ಮಳೆ ಸುರಿದ ಪರಿಣಾಮವಾಗಿ ರೈತ ಭಾಂದವರು ಬಹಳಷ್ಟು ಸಂತಸವಾಗಿದ್ದು ಅದಕ್ಕಾಗಿ ರೈತರು ಬಿಡುವಿಲ್ಲದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಹಾಲಾಪೂರ ಹೋಬಳಿಗೆ ಸಂಬಂಧಿಸಿದ ಎಲ್ಲಾ ಹಳ್ಳಿಗಳ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಬೀಜಗಳ ಖರೀದಿಯಲ್ಲಿ ನಿರತರಾಗಿದ್ದಾರೆ, ಒಟ್ಟು 30 ಕ್ವಿಂಟಾಲ್ ತೊಗರಿ ಬೀಜಗಳು ಬಂದಿದ್ದು, ಐದು ಕೆಜಿ ಒಂದು ಪಾಕಿಟ್ ತೊಗರಿ ಬೀಜದ ಬೆಲೆ ಸಾಮಾನ್ಯ ರೈತರಿಗೆ ₹765 ರೂಪಾಯಿ, ಎಸ್ ಸಿ , ಎಸ್ ಟಿ ರೈತರಿಗೆ ₹703 ದರ ಇದೆ, ರೈತರು ಈ ವರ್ಷ ಮುಂಗಾರು ಮಳೆ ಈಗಾಗಲೇ ಎರಡು ಮೂರು ಸಲ ಆಗಿದೆ ಇನ್ನೂ ಮಳೆ ಬರುವಂತಹ ಲಕ್ಷಣಗಳು ಇರುವುದರಿಂದ  ರೈತರು ಚುರುಕಿನಿಂದ ಬಿತ್ತನೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವುದು ಸಂತೋಷಕರ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಪ್ರವೀಣಕುಮಾರ ಮೇಟಿ, ಮಂಜುನಾಥಸ್ವಾಮಿ ಅನುವುಗಾರ ಮುದಕಪ್ಪ ರೈತರಾದ ಆದಪ್ಪ ಹಾಲಾಪೂರ,    ಸಣ್ಣಯಂಕಪ್ಪ ರಾಮಲದಿನ್ನಿ,ಮಲ್ಲಯ್ಯ ಹಾಲಾಪೂರ,ಯಂಕನಗೌಡ,  ಸಿದ್ದನಗೌಡ ತುಗ್ಗಲದಿನ್ನಿ ಸೇರಿದಂತೆ ಇನ್ನಿತರರು ಇದ್ದರು.

ಎರಡನೇ ಹಾಜರಾತಿಗೆ ವಿರೋಧ ವ್ಯಕ್ತಪಡಿಸಿದ ನರೇಗಾ ಕಾರ್ಮಿಕರು

ಇಮೇಜ್
ಕೂಡ್ಲಿಗಿ:-ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಬಂಡೆ ಬಸಾಪುರ ತಾಂಡದ ಗ್ರಾಮದ ನರೇಗಾ ಕಾರ್ಮಿಕರು ಎರಡನೇ ಅವಧಿಯ ಹಾಜರಾತಿಯನ್ನು ನಮ್ಮ ವಿರೋಧ ಇದೆ ಎಂದು ಕಾರ್ಮಿಕರು ದೂರಿದ್ದಾರೆ. ಕಾರಣ ಮೊದಲು ನರೇಗಾ ಕೆಲಸ ಕಾರ್ಮಿಕರಿಗೆ 10 ಗಂಟೆ ಒಳಗೆ ಒಂದೇ ಬಾರಿಗೆ ಹಾಜರಾತಿ ಇತ್ತು ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಕೆಲಸದ ಸಮಯದಲ್ಲಿ ಎರಡೆರಡು ಸಲ ಜಿಪಿಎಸ್ ತಂತ್ರಜ್ಞಾನದಲ್ಲಿ ಹಾಜರಾತಿ ಹಾಕುವುದು ನಮಗೆ ತೊಂದರೆ ಉಂಟಾಗುತ್ತಿದೆ . ನಾವು ಬೆಳಗ್ಗೆ 5:30ಕ್ಕೆ ಕೆಲಸಕ್ಕೆ ಹಾಜರಿದ್ದು ಬೆಳಗಿನ ಸಮಯದಿಂದ 10 ರವರೆಗೆ ಯಾವುದೇ ಉಪಹಾರ ವಿಲ್ಲದೆ ಕೆಲಸ ಮಾಡುತ್ತಿದ್ದೇವೆ ಆದರೆ 11 ಗಂಟೆಯವರೆಗೆ ಉಪವಾಸವಿದ್ದು, ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಇದರ ಜೊತೆಗೆ ನಮ್ಮ ಕುಟುಂಬದವರು ಉಪವಾಸ ಇರಬೇಕಾಗುತ್ತದೆ.  ಈಗ ಮಳೆಗಾಲ ಬಂದಿದ್ದು ನಮಗಿರುವ ಅಲ್ಪ ಸ್ವಲ್ಪ ಭೂಮಿ ಗೆ ಬಿತ್ತನೆಗೆ ಕೆಲಸಕ್ಕೆ ಮತ್ತು ಮಕ್ಕಳ ಶಾಲೆಗೆ ಕಳಿಸಲು ಹಾಗೂ ಇನ್ನಿತರ ಕೆಲಸಗಳಿಗೆ ತೊಂದರೆ ಆಗುತ್ತಿದ್ದು ಈ ಕೂಲಿ ಕೆಲಸವನ್ನು ನಂಬಿಕೊಂಡು ನಾವು ಈ ಇದ್ದ ಹಳೆಯ ಹಾಜರಾತಿ ವ್ಯವಸ್ಥೆಯು ಚೆನ್ನಾಗಿದ್ದು ಎರಡೆರಡು ಸಲ ಜಿಪಿಎಸ್ ಹಾಜರಾತಿಗೆ ಕೈ ಬಿಡಲು ನರೇಗಾ ಕಾರ್ಮಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದರು.ಕಾರ್ಮಿಕರು ನರೇಗಾ ಕೆಲಸ ಮಾಡುವಾಗ ಕಳಳಿಯ ಮನವಿಯನ್ನು ನಮ್ಮ ಸುದ್ದಿ ವಾಹಿನಿಯ ಮೂಲಕ ಸಂಬಂಧ ಪಟ್ಟಂತ ಅಧಿಕಾರಿಗಳಿಗೆ ಕೈ ಮುಗಿತು ಮನವಿ ಮಾಡಿಕ

*ಮಧ್ಯಪಾನ ಸೇವಿಸಿದ ವೀರೇಶ್ ಇಂಜಿನಿಯರ್ ವಿರುದ್ಧ ಕ್ರಮ ಕೈಗೋಳ್ಳಿ* ಗ್ರಾಕೂಸ್ ಜಿಲ್ಲಾ ಕಾರ್ಯದರ್ಶಿ ಶೈನಜ್, ಆಕ್ರೋಶ *

ಇಮೇಜ್
ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ಮಾಜುಮಾದಹಳ್ಳಿ ಗ್ರಾಮ ಪಂಚಾಯತಿ ಮುಂದೆ ತಳಕಲ್ ಜನರ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಮಾಡಿದ ಕಾರ್ಮಿಕರಿಗೆ ಕಡಿಮೆ ಹಣ ನೀಡುತ್ತಿರುವುದರ ವಿರುದ್ಧ ಜನರು ನಾವು ಮಾಡಿದ ಕೆಲಸವನ್ನು ಸರಿಯಾದ ರೀತಿಯಲ್ಲಿ ಇಂಜಿನಿಯರ್ ಮೆಜರ್ಮೆಂಟ್ ಮಾಡದೆ ಇಲ್ಲಿನ ಇಂಜಿನಿಯರ್ ಸರಿಸುಮಾರು ರಾತ್ರಿ ಸಮಯದಲ್ಲಿ ಅಂದರೆ 7:30 ರಿಂದ 8 ಗಂಟೆಯ ಸಮಯದಲ್ಲಿ ಮೆಜರ್ಮೆಂಟ್ ಮಾಡಲಿಕ್ಕೆ ಹೋಗಿ ಜನರು ಕೂಲಿ ಮಾಡಿದ ಕೆಲಸವನ್ನು ಜನರ ಮುಂದೆ ಮೆಜರ್ಮೆಂಟ್ ಮಾಡದೆ ಬೇಕಾ ಬಿಟ್ಟಿಯಾಗಿ ವೀರೇಶ್ ಇಂಜಿನಿಯರ್ ರಾದ ಮೆಜರ್ಮೆಂಟು ಮಾಡಿಕೊಂಡು ಬಂದು ಜನರಿಗೆ ಸರಿಯಾದ ಕೂಲಿಯ ಮೆಜರ್ಮೆಂಟ್ ಮಾಡದೆ ಕಡಿಮೆ ಕೂಲಿ ಹಣ ನೀಡುವುದರ ವಿರುದ್ಧ ಧರಣಿ ಸತ್ಯಾಗ್ರಹ ಮಾಡಲಾಯಿತು.  ಈ ಸಮಯದಲ್ಲಿ ನೂರಾರು ಮಹಿಳೆಯರು ಜಮಾಯಿಸಿ ಮಾನ್ಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಾದ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು, ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯಕರ್ತರಾದ ಶೈನಜಾ ಮದ್ಯಪಾನ ಸೇವನೆ ಮಾಡಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಇಂಜಿನಿಯರ್ ವಿರುದ್ಧ ಕೂಲಿ ಕಾರ್ಮಿಕರ ಪರವಾಗಿ ಆಕ್ರೋಶ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಕೂಲಿಕಾರ್ಮಿಕರಗಳಾದ ಶಬೀರ್ ಭಾಷಾ ಹುಲಿಗೆಮ್ಮ ಪ್ರತಿನಿಧಿ ಮಹಾಬಲೇಶ, ಇಲಾಜ್ ಕೊಟ್ರೇಶ್ ಪ್ರಶಾಂತ್ ಕರಿಬಸಪ್ಪ, ಲಕ್ಷ್ಮಿ, ಮಮತಾಶ್ರೀ, ರೇಣುಕಾ,ಮಂಜುಳಾ, ವಿಜಯಲಕ್ಷ್ಮಿ,

ಸಂವಿಧಾನ ಭಾರತ ಹಾಗೂ ಧರ್ಮ ರಾಜಕಾರಣ : *ಮೇ ಸಾಹಿತ್ಯ ಮೇಳಕ್ಕೆ ಸಕಲ ಸಿದ್ಧತೆ*

ಇಮೇಜ್
 ವರದಿ - ಮಂಜುನಾಥ್ ಕೋಳೂರು ಕೊಪ್ಪಳ ಕೊಪ್ಪಳ : ಸಂವಿಧಾನ ಭಾರತ ಹಾಗೂ ಧರ್ಮ ರಾಜಕಾರಣ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಹತ್ತನೇ ಮೇ ಸಾಹಿತ್ಯ ಮೇಳಕ್ಕೆ ಸಿದ್ಧತೆಗಳು ಸಂಪೂರ್ಣಗೊಂಡಿದೆ. ಮೇ 25 ಹಾಗೂ 26ರಂದು ಶಿವ ಶಾಂತವೀರ ಮಂಗಳ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಲಡಾಯಿ ಪ್ರಕಾಶನ ಗದಗ , ಕವಿ ಪ್ರಕಾಶನ ಕವಲಕ್ಕಿ , ಚಿತ್ತಾರ ಕಲಾಬಳಗ ಧಾರವಾಡ , ಮೇ ಸಾಹಿತ್ಯ ಮೇಳ ಬಳಗ ಕೊಪ್ಪಳ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ದೇಶದ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾಹಿತಿಗಳು ಹೋರಾಟಗಾರರು ಪ್ರಗತಿಪರ ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 800 ರಿಂದ ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ನಾಡಿನ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನದೇ ಆದ ಮಹತ್ವದ ಪಾತ್ರ ನಿರ್ವಹಿಸುತ್ತಿರುವ,ಸರ್ಕಾರದಿಂದ ಯಾವ ನೆರವೂ ಪಡೆಯದೇ ಜನರಿಂದಲೇ ನಡೆಯುವ ಮೇ ಸಾಹಿತ್ಯ ಮೇಳಕ್ಕೆ ಈಗ ದಶಕದ ಉತ್ಸಾಹವಿದೆ. ರಾಜ್ಯದ ವಿವಿಧ ಭಾಗಗಳಿಂದ ಈಗಾಗಲೇ ಅತಿಥಿಗಳು ಆಗಮಿಸಿದ್ದು ಅವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ . ನಗರದ ವಿವಿಧ ವಸತಿ ಗೃಹಗಳಲ್ಲಿ ಹಾಗೂ ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ವೇದಿಕೆ-ಆವರಣ-ದ್ವಾರಗಳು- 1958 ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಿದೆ.ಡಾ.ವಿ.ಎನ್.ಲಕ್ಷ್ಮೀನಾರಾಯಣ,ಪ್ರಕಾಶ ಹಿಟ್ನಳ್ಳಿ,ರಾಜು ಬಾಗಲಿ,ಆನಂದ ಭಂಡಾರ

ಕಳಪೆ ಬೀಜ, ಗೊಬ್ಬರ ಮಾರಾಟ ಮಾಡದಂತೆ ರೈತ ಸಂಘದಿಂದ ಒತ್ತಾಯ.

ಇಮೇಜ್
ಕೊಟ್ಟೂರು : ತಾಲೂಕಿನಲ್ಲಿ ಕಳಪೆ ಬೀಜ, ಗೊಬ್ಬರವನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರ ಸಭೆ ಕರೆದು ಸೂಚಿಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಒತ್ತಾಯಿಸಿ ಈ ಸಂಬAದ ಇಲ್ಲಿನ ತಹಶೀಲ್ದಾರ್ ಅಮರೇಶ್ ಜಿ.ಕೆ ಅವರಿಗೆ ಮನವಿ ಪತ್ರ ಶುಕ್ರವಾರದಂದು ಸಲ್ಲಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಭರಮಣ್ಣ ಮಾತನಾಡಿ ಗೊಬ್ಬರ ಅಂಗಡಿ ಮಾಲೀಕರಿಗೆ ಎಂ.ಅರ್.ಪಿ. ದರಕ್ಕಿಂತ ಹೆಚ್ಚಿನ ಧರಕ್ಕೆ ಗೊಬ್ಬರ ಮತ್ತು ಬೀಜಗಳನ್ನು ಮಾರಾಟ ಮಾಡದಂತೆ ಕ್ರಮವಹಿಸಲಬೇಕು. ಮತ್ತು ತಾಲೂಕಿನಾದ್ಯಂತ ರೈತರಿಗೆ ಬೆಳೆ ಪರಿಹಾರ ಸಿಗದೇ ಇರುವ ರೈತರಿಗೆ  ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಿ ರೈತರ ನೆರವಿಗೆ ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಮೂಲಕ ಒತ್ತಾಯಿಸಿದರು. ರೈತರ ಮನವಿಯನ್ನು ಉದ್ದೇಶಿಸಿ ತಹಸಿಲ್ದಾರ್ ಅಮರೇಶ್ ಜಿ.ಕೆ. ಅವರು ಮಾತನಾಡಿ ನಿಯಮನುಸಾರವಾಗಿ ತಮ್ಮ ಮನವಿ ಪರಿಶೀಲಿಸಿನೆ ಮಾಡಿ ಬಿತ್ತನೆ ಬೀಜ,ಗೊಬ್ಬರ, ಸರ್ಕಾರದ್ದೆ ಅಗಲಿ ಖಾಸಗಿಯವರೇ ಆಗಲಿ ಹೆಚ್ಚಿನ ದರದಲ್ಲಿ ಕೊಟ್ಟಿದ್ದೆ ಆದರೆ ಸೂಕ್ತ ಕ್ರಮ ವಹಿಸುತ್ತೇನೆ. ಸಂಬAಧಿಸಿದ ಇಲಾಖೆ ಹಾಗೂ ಖಾಸಗಿ ಗೊಬ್ಬರ ಅಂಗಡಿ ಅವರಿಗೆ ಪೂರ್ವ ಬಾವಿ ಸಭೆಯನ್ನು ಕರೆಯಲಾಗಿತ್ತದೆ ಮತ್ತು ರೈತ ಸಂಘಟನೆಗಳ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತದೆ. ಬೆಳೆ ಪರಿಹಾರಕ್ಕೆ ಸಂಬAಧಿಸಿದAತೆ ಸರ್ಕಾರ ಗಮನಕ್ಕೆ ತರುತ್ತೇನೆ ಉಳಿದಂತೆ ಎಲ್ಲಾ ಬೇಡಿಕೆಗಳನ್ನು ನಿಯಮನುಸಾರವಾಗಿ ಮಾಡುತ್ತೇನೆ ಎಂದು ಹೇಳಿದರ

"ಬಿಕ್ಕಿಮರುಡಿ ದುರುಗಮ್ಮ ದೇವಿಯ ರಥೋತ್ಸವ"

ಇಮೇಜ್
ಸಂಭ್ರಮದಿಂದ ಜರುಗಿದ ರಥೋತ್ಸವಕ್ಕೆ ಕೋಳಿ ತೂರಿ ನಮಿಸಿದ ಭಕ್ತರು  ೨೩ ಕೊಟ್ಟೂರು ೦೨ ವಿಶಿಷ್ಟಾಚರಣೆಯ ಇಲ್ಲಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವವು ಬೌದ್ದಪೊರ್ಣಿಮೆಯ ದಿನವಾದ ಗುರುವಾರ ಸಂಜೆ ೬.೪೫ರ ಸುಮಾರಿನಲ್ಲಿ ಸಾವಿರಾರು ಭಕ್ತರ ಸಡಗರ ಸಂಭ್ರಮಗಳೊAದಿಗೆ ಜರುಗಿತು.ರಥಕ್ಕೆ ಚಾಲನೆ ದೊರಕುತಿದ್ದಂತೆ ದುರುಗಮ್ಮ ದೇವಿಗೆ ಹರಕೆ ಹೊತ್ತ ಕೆಲ ಭಕ್ತರು ಜೀವಂತ ೫-೬ ಕ್ಕೂ ಹೆಚ್ಚು ಕೋಳಿಗಳನ್ನು ತೂರಿ ತಮ್ಮ ಭಕ್ತಿ ಸಮರ್ಪಿಸಿದರು.  ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ಏಕೈಕ ಸಂಪ್ರದಾಯ ಕೊಟ್ಟೂರಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವದ್ದಾಗಿದ್ದು ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ದಂಡು ದಂಡಾಗಿ ಮಧ್ಯಾಹ್ನದಿಂದಲೇ ಇಲ್ಲಿನ ಕೆರೆಯ ದಂಡೆಯ ಮೇಲಿರುವ ದೇವಿಯ ಗುಡಿಯ ಬಳಿ ಜಮಾಯಿಸತೊಡಗಿದರು. ಈ ಪೈಕಿ ಹೊಸದಾಗಿ ಮದುವೆಯಾದ ದಂಪತಿಗಳ ಸಂಖ್ಯೆ ಹೆಚ್ಚಕ್ಕಿತ್ತು.  ರಥೋತ್ಸವಕ್ಕೂ ಮೊದಲು ಗುಡಿಯಿಂದ ದುರುಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯೋಂದಿಗೆ ರಥದ ಬಳಿ ತರಲಾಯಿತು.ರಥದ ಸುತ್ತಲೂ ಮೂರು ಸುತ್ತು ಪಲ್ಲಕ್ಕಿ ಮೆರವಣಿಗೆ ಪ್ರದಕ್ಷಿಣೆ ನಡೆಯಿತು.ನಂತರ ದೇವಿಯನ್ನು ಪಲ್ಲಕ್ಕಿಯಿಂದ ರಥದಲ್ಲಿ ಕೂರಿಸಲಾಯಿತು.ನಂತರ ದೇವಿಯ sಸುಂಕದಕಲ್ಲು ಮೂಗಪ್ಪ ೩೬,೧೦೧ ಸಾವಿರ ರೂಗಳಿಗೆ ಪಟಾಕ್ಷಿ ಹರಾಜು ಕೂಗಿ ತನ್ನದಾಗಿಸಿಕೊಂಡರು.  ಈ ಪ್ರಕ್ರಿಯೆ ಮುಗಿಯುತ್ತಿಂದತೆಯೇ. ಭಕ್ತರು ಜೀವಂತ ಕೋಳಿಗಳನ್ನು ತೂರಿದರು. ಕೋಳಿಗಳನ್ನು ತೊರುತ್

ಅಂಬಳಿ ಹಿರಿಯ ಪ್ರಾಥಮಿಕ ಶಾಲಾ ನೀರಿನಿಂದ ಶಾಲಾ ಆವರಣ ಜಲಾವೃತ

ಇಮೇಜ್
ಕೊಟ್ಟೂರು :ಅಂಬಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎರಡು ಮೂರು ದಿನಗಳಿಂದ ಸುರಿದ ಬಾರಿ ಮಳೆಗೆ ಎರಡು ಅಡಿ ನೀರು ನಿಂತು ಮಕ್ಕಳು ಪರದಾಟ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪ್ರತಿ ವರ್ಷ ಇದೆ ಗೋಳು ಜನಪ್ರತಿನಿಧಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರು. ಈ ಬಗ್ಗೆ ಗಮನ ಹರಿಸಿಲ್ಲಾ ಎಂದು ಅಂಬಳಿ ಪಿರ್ಕದ  ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಬಾಲನಗೌಡರ ಕಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಟ್ -1 ಮಾನ್ಯ ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮಿರಾಜ್ ನಾಯಕ ಅವರು ಸ್ಥಳ ಕ್ಕೆ ಆಗಮಿಸಿ ವಾಸ್ತವ ಪರಿಸ್ಥಿತಿಯನ್ನು ನೋಡಲಿ ಈಗ ಮಳೆಗಾಲ ಶುರವಾಗಿದೆ.ಹಾಗೂ ಮಕ್ಕಳಿಗೆ ಶಾಲೆ ರಜೆ ದಿನಗಳ ಮುಗಿಯುತ್ತಾ ಬಂದಿದೆ ಶಾಲೆಯ ಪ್ರಾರಂಭವಾಗಬೇಕಾಗಿದೆ. ವಿದ್ಯಾರ್ಥಿಗಳಿಗೆ ಮುಂದೆ ಅನಾಹುತ ಆಗುವ ಮುಂಚೆ ಇದಕ್ಕೆ ಪರಿಹಾರ ಒದಗಿಸಲಿ ಎಂದು ಅಂಬಳಿ ಸೋಮಶೇಖರ್ ಆಗ್ರಹಿಸಿದರು.

ನಿಂಬಳಗೇರಿ ಹಾಲು ಒಕ್ಕೂಟದಿಂದ ಮೇವಿನ ಬೀಜ ವಿತರಣೆ

ಇಮೇಜ್
೨೨ ಕೊಟ್ಟೂರು ೦೨ ಹಿಂದಿನ ವರ್ಷ ಮಳೆ ಇಲ್ಲದೆ ಮೇವಿನ ಕೊರತೆ ಎದುರಾಗುತ್ತಿರುವುದರಿಂದ ಹೈನುಗಾರಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು ಇದನ್ನು ಮನಗಂಡು ಕೊಟ್ಟೂರು ತಾಲ್ಲೂಕಿನ ನಿಂಬಳಗೆರೆ ಗ್ರಾಮದ ಹಾಲು ಉತ್ವಾದಕರಿಗೆ ಸಂಘದ ವತಿಯಿಂದ ಉಚಿತವಾಗಿ ಹಾಲು ಉತ್ಪಾದಕರ ಸಹಕಾರರ ಸಂಘಧ ಸದಸ್ಯರಿಗೆ ಮೆಕ್ಕೆಜೋಳದ ಬೀಜ ಒಂದು ಬಾರಿ ಕಟಾವಿಗೆ ಬಂದರೆ ಅದೆ ಜೋಳದ ಬೀಜ ಮೂರು ಬಾರಿ ಕಟಾವು ಮಾಡಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಹೈನುಗಾರಿಕೆಗೆ ಉತ್ತೇಜನ ನೀಡಲು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಗೆ ಉಚಿತವಾಗಿ ಮೇವಿನ ಬೀಜವನ್ನು ವಿತರಣೆ ಮಾಡಲಾಗಿದೆ ಹೈನುಗಾರಿಕೆಯ ರೈತರಿಗೆ ನಷ್ಟವನ್ನು ತುಂಬಲು ಹಸಿರು ಮೇವಿನ ಅವಶ್ಯಕತೆ ಇರುವುದರಿಂದ ಈ ಬೀಜಗಳನ್ನು ರೈತರಿಗೆ ಉಚಿತವಾಗಿ ಕೊಟ್ಟು ಬೀಜವನ್ನು ಬಿತ್ತನೆ ಮಾಡಿ ಬಹು ಬೇಗನೆ ಕಟಾವಿಗೆ ಬರುವುದರಿಂದ ಮತ್ತು ಹಾಲಿನ ಇಳುವರಿಯು ಕೂಡ ಹೆಚ್ಚಾಗುವುದಿಂದ ಈ ಮೇವಿನ ಬೀಜವನ್ನು ವಿತರಿಸಿ ರೈತರಿಗೆ ಅನುಕೂಲಮಾಡಿಕೊಟ್ಟಿದ್ದಾರೆ  ಈ ಒಂದು ಯೋಜನೆ ಜಾರಿಗೆ ತಂದು ಹೈನುಗಾ ಹಿತ ಕಾಪಾಡುವಲ್ಲಿ ನಮ್ಮ ನೆಚ್ಚಿನ ಕೆ ಎಂ ಎಫ್ ಅಧ್ಯಕ್ಷರು ಹಾಗೂ ರಾಯಾಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಎಸ್.ಭೀಮನಾಯ್ಕ್ ಸರ್ ಅವರಿಗೆ ರೈತರು ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದಾರೆ. ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ ಎನ್.ಜಿ ಮಲ್ಲಿಕಾರ್ಜುನ ಗೌಡ ಉಪಾಧ್ಯಕ್ಷರಾದ ಎಮ್ ಹನ

"ರಥೋತ್ಸವಕ್ಕೆ ಜೀವಂತ ಕೋಳಿ ತೂರುವ ವೈಶಿಷ್ಟ್ಯತೆ "

ಇಮೇಜ್
ಕೊಟ್ಟೂರು. : ಧಾರ್ಮಿಕ ಮಹೋತ್ಸವಗಳಲ್ಲಿ   ಒಂದಿಲ್ಲೊಂದು ವಿಶಿಷ್ಟತೆಯಿಂದಾಗಿ ಪ್ರಖ್ಯಾತಿಗೊಂಡಿರುವ ಸುಕ್ಷೇತ್ರ ಕೊಟ್ಟೂರು. ಆಗಿ ಹುಣ್ಣಿಮೆಯ ದಿನವಾದ ಮೇ 23ರ ಗುರುವಾರ ಮತ್ತೊಮ್ಮೆ ವೈಶಿಷ್ಟತೆಗೆ ಸಾಕ್ಷಿಯಾಗಲಿದೆ.  ಅದುವೇ ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ವೈಶಿಷ್ಟ ರಥೋತ್ಸವವಾಗಿದೆ. ಹೌದು ಪ್ರತೀ ವರ್ಷದ ಸಂಪ್ರದಾಯದಂತೆ ಆಗಿ ಹುಣ್ಣಿಮೆಯ ದಿನದಂದು ನಡೆಯುವ ಪಟ್ಟಣದ ಬಿಕ್ಕಿ ಮರಡಿ ದುರುಗಮ್ಮ ದೇವಿ ರಥೋತ್ಸವದಲ್ಲಿ ಭಕ್ತರು ಜೀವಂತ ಕೋಳಿಗಳನ್ನು ತೂರಿ ದೇವಿಯನ್ನು ಸಂತೃಪ್ತಪಡಿಸುವ ಪರಂಪರೆಯನ್ನು ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.  ರಥೋತ್ಸವಕ್ಕೆ ಎಲ್ಲೆಡೆ ಬಾಳೆಹಣ್ಣು ಉತ್ತುತ್ತಿಗಳನ್ನು ತೂರುವುದು ಕಾಣಬಹುದಾಗಿದ್ದರೆ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಥ ಕೊಟ್ಟೂರಿನಲ್ಲಿ ಇಂತಹ ವಿಶಿಷ್ಟ ಸಂಪ್ರದಾಯ ಈಗಲೂ ನಡೆದುಕೊಂದು ಬರುತ್ತಿದೆಯಲ್ಲದೇ ದೇವಿ ಜಾತ್ರೆಗಳಲ್ಲಿ ಕುರಿ,ಕೋಳಿ, ಬಲಿಕೊಡುವುದು ಸಾಮಾನ್ಯ. ಆದರೆ ಕೊಟ್ಟೂರಿನಲ್ಲಿ ಪ್ರಾಣಿ ಬಲಿಯಂತಹ ಹಿಂಸೆ ನಡೆಯದೇ ಜೀವಂತ ಕೋಳಿಗಳನ್ನೇ ರಥಕ್ಕೆ ತೂರಲಾಗುತ್ತದೆ.  ಪ್ರತೀ ವರ್ಷದ ಈ ದಿನದಂದು ಜರುಗುವ ಬಿಕ್ಕಿ ಮರಡಿ ದುರುಗಮ್ಮ ರಥೋತ್ಸವದಲ್ಲಿ ತೂರುವ ಕೋಳಿಗಳನ್ನು ಸಿಕ್ಕವರು ಖಂಡಿತಾ ಹತ್ಯೆ ಗೈಯ್ಯುವುದಿಲ್ಲ.  ಬದಲಾಗಿ ಮನೆಗೊಯ್ದು ಸಾಕಿ ಸಲುಹಿ ಮತ್ತೇ ಮುಂದಿನ ವರ್ಷಕ್ಕೆ ಜರುಗುವ ರಥೋತ್ಸವಕ್ಕೆ ಈ ಕೋಳಿಗಳನ್ನು ತೂರುತ್ತಾ ಬರುತ್ತಾರೆ.  ಮೇ 23ರ ಗುರುವಾರ ನಡೆಯಲಿರುವ

ಸಾಮಾಜಿಕ ಪರಿಶೋಧನೆ ಗ್ರಾಮಸಭೆ ಯಶಸ್ವಿ

ಇಮೇಜ್
ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ 2023-24 ರ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ ಯಶಸ್ವಿಯಾಗಿ ಜರುಗಿತು. ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ 2023-24 ರ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯನ್ನು ಗ್ರಾಮದ ಶ್ರೀ ಕರಿಯಪ್ಪ ತಾತನ ದೇವಸ್ಥಾನದ ಪಕ್ಕದಲ್ಲಿ ನಡೆಯಿತು, ಅಧ್ಯಕ್ಷತೆಯನ್ನು ಶಿವಗಂಗಮ್ಮ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾನ್ವಿ ಇವರು ವಹಿಸಿದ್ದರು. ನಂತರ ಲೆಕ್ಕ ಪರಿಶೋಧನೆ ಮಾಹಿತಿಯನ್ನು ಚಂದ್ರು ಪವಾರ ತಾಲ್ಲೂಕ ಕಾರ್ಯಕ್ರಮ ವ್ಯವಸ್ಥಾಪಕರು ಸಭೆಯಲ್ಲಿ ಮಾಹಿತಿಯನ್ನು ತಿಳಿಸಿದರು .  ಈ ಸಭೆಯಲ್ಲಿ ಬಸವರಾಜ ನಾಗೇಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಶೇಖ ಹುಸೇನ ಶರೀಫ್ ತಾಲ್ಲೂಕ ಕಾರ್ಯಕ್ರಮ ವ್ಯವಸ್ಥಾಪಕರು, ಅದ್ಯಕ್ಷೆ ಮಂಜಮ್ಮ ಗಂಡ ಮೌನೇಶ ತುಗ್ಗಲದಿನ್ನ, ಪಂಚಾಯತಿ ಅಭಿವೃದ್ಧಿ ಅಧಿಕಾ

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ : ಆನಂದ ವೀರಾಪುರ

ಇಮೇಜ್
ಮಸ್ಕಿ : ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್ ಅವರಿಗೆ ಬೆಂಬಲಿಸುವಂತೆ ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಆನಂದ ವೀರಾಪುರ ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಕಳೆದ ಬಾರಿ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಚಂದ್ರಶೇಖರ ಅವರು, ಕಳೆದ ಐದು ವರ್ಷದಿಂದ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಬಾರಿಯೂ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖ ಪಾಟೀಲ್ ಅವರನ್ನು ಆಯ್ಕೆ ಮಾಡಲು ಮತದಾರರು ನಿರ್ಧಾರ ಮಾಡಿದ್ದಾರೆ ಎಂದರು. 2024 ನೇ ಸಾಲಿನ ಜೂನ್ 03 ರಂದು ನಡೆಯಲಿರುವ ಈ ಚುನಾವಣೆಯಲ್ಲಿ ಮಸ್ಕಿ ತಾಲೂಕಿನ( 1523 ) ಜನ ಮತದಾರರು ಈ ಬಾರಿ ಮತದಾನ ಮಾಡಲಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿರುದ್ಯೋಗಿಗಳಿಗೆ ತಲುಪಿದೆ. ಅಲ್ಲದೇ ಪಕ್ಷದ ಕಾರ್ಯಕರ್ತರೊಂದಿಗೆ ಮತದಾರರಿಗೆ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಜಾಗೃತಿ ಮೂಡಿಸಿ ಮತಯಾಚನೆ ಮಾಡಲಾಗುತ್ತದೆ ಎಂದರು. ನಿರುದ್ಯೋಗಿ ಪದವೀಧರರು ಅತಿಥಿ ಉಪನ್ಯಾಸಕರ ಸಮಸ್ಯೆ ಸೇರಿದಂತೆ ಪದವೀಧರರ ಇತರೆ ಸಮಸ್ಯೆ ಬಗ್ಗೆ ವಿಧಾನಸೌಧದ ಹೊರಗೂ ಒಳಗೂ ಧ್ವನಿ ಎತ್ತುವ ಮತ್ತು ಪದವೀಧರರ ಜ್ವಲಂತ ಸಮಸ್ಯೆ ಪರಿಹರಿಸುವಲ್ಲಿ ಪಾಟೀಲ್ ಕೆಲಸ

ರಾಘವ ಮೆಮೋರಿಯಲ್ ಅಸೋಶಿಯೇಶನ್,

ಇಮೇಜ್
ಬಳ್ಳಾರಿ : ದಿವಂಗತ ಕಾಕರ್ಲ ತೋಟ ಕನುಗೋಲು ತಿಮ್ಮಪ್ಪ ರವರ 24ನೇ ಪುಣ್ಯತಿಥಿ ಸಮಾರಂಭ ಕಾರ್ಯಕ್ರಮ  ದಿನಾಂಕ 22-05-2024 ಬುಧವಾರ ಸಂಜೆ 6-30 ಗಂಟೆಗೆ, ಸ್ಥಳ: ರಾಘವ ಕಲಾ ಮಂದಿರ, ಬಳ್ಳಾರಿ  *ಅಂತಾ ಅಯೋ ಮಾಯಂ*ತೆಲುಗು ಸಾಮಾಜಿಕ ನಾಟಕ ರಚನೆ- ನಿರ್ದೇಶನ ಶ್ರೀ ಜಿ ಆರ್ ವೆಂಕಟೇಶಲು ನಿವೃತ್ತ ಪ್ರಾಂಶುಪಾಲರು, ಬಳ್ಳಾರಿ  ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಮನವಿ ಸರ್ ಕಲಾಭಿಮಾನಿಗಳೆಲ್ಲರಿಗೂ ಹಾರ್ದಿಕ ಸುಸ್ವಾಗತ ಇಂತಿ ನಿಮ್ಮ ಅಧ್ಯಕ್ಷರು ಮತ್ತು ಸದಸ್ಯರು ರಾಘವ ಮೆಮೋರಿಯಲ್ ಅಸೋಶಿಯೇಶನ್ ಬಳ್ಳಾರಿ

ಹಟ್ಟಿ ಸಂತೆ ಮಾರುಕಟ್ಟೆಗೆ ಲಕ್ಷಾಂತರ ರೂಪಾಯಿ ಆದಾಯ ಬಂದರು ರೈತ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಸ್ಥಳವಿಲ್ಲ.

ಇಮೇಜ್
ಲಿಂಗಸ್ಗೂರು : ತಾಲ್ಲೂಕಿನ ಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಸಂತೆ ಬಜಾರ್ ಪ್ರತಿ ಭಾನುವಾರ ನಡೆಯುವ ಸಂತೆಗೆ ಹಟ್ಟಿ ಸುತ್ತಮುತ್ತಲಿನ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳು ವ್ಯಾಪಾರ ಆಗು ವೈವಾಟು ಮಾಡುವುದಕ್ಕೆ ಪ್ರತಿ ಭಾನುವಾರ ಹಟ್ಟಿಗೆ ಬರುತ್ತಾರೆ.ಆದರೆ ಹಟ್ಟಿ ಪಟ್ಟಣ ಪಂಚಾಯತಿಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹರಾಜಿನ ರೂಪದಲ್ಲಿ ಆದಾಯ ಬರುತ್ತಿದ್ದರು ರೈತರು ಬೆಳೆದ ಬೆಳೆಯನ್ನು ತಂದು ಮಾರಾಟ ಮಾಡಲು ಭಾನುವಾರದಂದು ಹಟ್ಟಿ ಪಟ್ಟಣದ ಸಂತೆಯಲ್ಲಿ ಕುಳಿತು ವ್ಯಾಪಾರ ಮಾಡಲು ಸ್ಥಳವಿಲ್ಲದ ಪರಿಸ್ಥಿತಿಯಾಗಿದೆ. ಮಾರುಕಟ್ಟೆ ವಿಶಾಲವಾದ ಜಾಗವನ್ನು ಹೊಂದಿದ್ದರು ಮಾರುಕಟ್ಟೆಯ ಸುತ್ತಮುತ್ತ ಇರುವ ಮನೆಗಳ ಒತ್ತುವರಿ ಮತ್ತು ಎಪಿಎಂಸಿ ನಿರ್ಮಾಣ ಮಾಡಿದ ಸೆಡ್ ಅನ್ನು ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷತನದಿಂದ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ರೈತರು ವ್ಯಾಪಾರ ಮಾಡಲು ಬಂದು ಕೂಡಬೇಕಾದ ಸ್ಥಳದಲ್ಲಿ ಸುತ್ತಮುತ್ತಲಿನ ಕಾಲುವೆಯ ನೀರು ಹರಿದು ಮಾರುಕಟ್ಟೆ ಮಧ್ಯದಲ್ಲಿ ಆಯ್ದು ಹೋಗುತ್ತಿರುವುದರಿಂದ, ಮಳೆ ಬಂದರೆ ಮಾರುಕಟ್ಟೆಯಲ್ಲಿ ನಿಲ್ಲುವಂತ ಮಳೆ ನೀರುನಿಂದ ಕೆಸರುಗದ್ದೆಯಂತೆ ಆಗುತ್ತಿರುವ ಮಾರುಕಟ್ಟೆ,ಇಷ್ಟೊಂದು ಸಮಸ್ಯೆ ಇದ್ದರೂ ಹಟ್ಟಿ ಪಟ್ಟಣ ಪಂಚಾಯತಿಗೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರು ಹಟ್ಟಿ ಪಟ್ಟಣ ಪಂಚಾಯತಿಗೆ ಸಂಬಂಧಿಸಿದ ಮಾರುಕಟ್ಟೆಯ ಸ್ಥಳ ಅಭಿವೃದ್ಧಿ ಕಾಣದೆ ಹಾಗೆ ಉಳಿದಿರುವುದು ಅಧಿಕಾರಿಗಳ

ಸರ್ಕಾರಿ ಪದವಿ ಕಾಲೇಜು ಆರಂಭಿಸಲು ಮೀನಾ ಮೇಷ ಎಣಿಸುತ್ತಿರುವ ಸರ್ಕಾರ

ಇಮೇಜ್
೧೯ ಕೊಟ್ಟೂರು ೦೧ ತಾಲೂಕಿನ ಆರಾಧ್ಯ ದೈವ ಕ್ಷೇತ್ರನಾಥ ಶ್ರೀ ಗುರು ಕೊಟ್ಟೂರೇಶ್ವರರ ಸ್ವಾಮಿಯ ರಾಜ್ಯದಲ್ಲಿ  ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹÀ  ಒಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುನ್ನುಡಿ ಬರೆಯುತ್ತಿರುವ ಕೊಟ್ಟೂರು ಹೆಸರನ್ನು ರಾಜ್ಯದಲೇ ಉನ್ನತ ಮಟ್ಟದಲ್ಲಿ ವಿದ್ಯಾರ್ಥಿಗಳು ಹೆಸರು ಮಾಡುತ್ತಿದ್ದಾರೆ  ಎಂದು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ. ರೇಣುಕಮ್ಮ ಹೇಳಿದರು.  ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಕೊಟ್ಟೂರು ತಾಲೂಕಿನಲ್ಲಿ ೮ ರಿಂದ ೧೦ ಪದವಿ ಪೂರ್ವ ಕಾಲೇಜ್‌ಗಳಿದ್ದು, ಪಿಯುಸಿ ಪಾಸಾದ ನಂತರ ಪದವಿ ಸೇರಲು ಅಲೆದಾಡ ಬೇಕಾದ ಸಂಗತಿ ಒದಗಿ ಬಂದಿದೆ ಅಲ್ಲದೆ ಖಾಸಗಿ ಕಾಲೇಜುಗಳ ಶುಲ್ಕವನ್ನು ಕಟ್ಟಲಾಗದೆ. ಬೇರೆ ತಾಲೂಕುಗಳಿಗೆ ವಿದ್ಯಾರ್ಥಿಗಳು ಅಲೆಡಾಡುವಂತಾಗಿದೆ. ಕಾರಣ ನಮ್ಮ ತಾಲೂಕಿನಲ್ಲಿ ಅಂದರೆ ಕೊಟ್ಟೂರಿನಲ್ಲಿ ಸರ್ಕಾರಿ ಪದವಿ ಕಾಲೇಜು ಆದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅನೇಕ ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡಿದರೂ ಫಲಪ್ರದವಾಗಿಲ್ಲ. ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸಬೇಕು ಎನ್ನುವ ಬೇಡಿಕೆ ಹಾಗೆಯೇ ಉಳಿದಿದೆ. ಈಗಾಗಲೇ ಎರಡೂ ಬಾರಿ ಇನ್ನೇನು ಪ್ರಾರಂಭ ವಾಗಬೇಕೆಂಬುವ ಆಶಯ ಹೊತ್ತ ಕೊಟ್ಟೂರು ಹಾಗೂ ಸುತ್ತಮುತ್ತಲಿನ ತಾಲೂಕ

150 ಯಶಸ್ವಿ ವಾರಗಗಳನ್ನು ಪೂರೈಸಿದ ಅಭಿನಂದನ್ ಸಂಸ್ಥೆ

ಇಮೇಜ್
ಮಸ್ಕಿ : ಅಭಿನಂದನ್ ಸಂಸ್ಥೆಯು ಆರಂಭಿಸಿದ ಸ್ವಚ್ಛತಾ ಅಭಿಯಾನವು ಒಂದು ವಾರ ಬಿಡದಂತೆ ಸತತವಾಗಿ 150 ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರಿ ದಾಖಲೆ ಮಾಡಿ ಮುನ್ನಡೆಯುತ್ತಿದೆ. ಈ ಸಂಡೆ ಫಾರ್ ಸೋಷಿಯಲ್ ವರ್ಕ್ ಅಡಿಯಲ್ಲಿ ಈ ವಾರದ ಅಂದರೆ ಯಶಸ್ವಿ 150ನೇ ವಾರದ ಸೇವಾ ಕಾರ್ಯವನ್ನು ಮಸ್ಕಿ ತಾಲೂಕಿನ ವೆಂಕಟಾಪುರ ಗ್ರಾಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಲಾಯಿತು. ಈ ಸೇವಾ ಕಾರ್ಯದಲ್ಲಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಶಾಲೆಯ ಗೋಡೆ, ಕಂಪೌಂಡ್ ಮತ್ತು ಕಂಬಗಳಿಗೆ ಬಣ್ಣವನ್ನು ಹಚ್ಚಲಾಯಿತು. ಸೇವಾ ಕಾರ್ಯದ ನಂತರ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಶರಣೆಗೌಡ ಅವರು ಅಭಿವೃದ್ಧಿ ಹಾದಿಗೆ ದೂರವಾಗಿ ನೆನೆಗುದಿಗೆ ಬಿದ್ದಿದ್ದ ನಮ್ಮ ಶಾಲೆಗೆ ಒಂದು ಸುಂದರವಾದ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಸೇವೆಯನ್ನು ಮಾಡಿರುವ ಈ ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನಕ್ಕೆ ಮತ್ತು ಎಲ್ಲಾ ಸ್ವಯಂ ಸೇವಕರಿಗೆ ಶಾಲೆಯ ಪರವಾಗಿ ಮತ್ತು ಗ್ರಾಮದ ಪರವಾಗಿ ಧನ್ಯವಾದಗಳು. ಇವರ ಈ ಸೇವೆ ಹೀಗೆ ಮುಂದುವರೆಯಲಿ ಎಂದರು. ನಂತರ ಮಾತನಾಡಿದ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ಇಚ್ಛೆಯಿಂದ ಆರಂಭ ಆಗಿರುವ ಈ ನಮ್ಮ ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನವು ಈಗಾಗಲೇ ಒಂದು ವಾರವೂ ಬಿಡದಂತೆ ಸತತವಾಗಿ 150 ವಾರಗಳನ್ನು ಪೂರೈಸಿ ಇಂಡಿಯಾ ಬುಕ್ ಆಫ

ಅಣ್ಣ ನ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು: ಶಿವರಾಜ್ ಕನ್ನಡಿಗ

ಇಮೇಜ್
ಕೊಟ್ಟೂರು: ಪ್ರೀತಿಯ ಅಣ್ಣ! ನೀವು ಸಹೋದರನ ಪರಿಪೂರ್ಣ ಉದಾಹರಣೆ. ಮತ್ತು ಹೌದು ಸುಂದರವಾದ ಅತ್ತಿಗೆಯನ್ನು ಕರೆತಂದಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನೀವಿಬ್ಬರೂ ಮೇಡ್ ಫಾರ್ ಈಚ್ ಅದರಂತೆ ಕಾಣುತ್ತೀರಿ. ನನ್ನ ಪ್ರೀತಿಯ ಅಣ್ಣ ಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು! ನೀವು ಅಣ್ಣ ಮತ್ತು ಅತ್ತಿಗೆ ಎಂದೆಂದಿಗೂ ಸಂತೋಷದಿಂದ ಒಟ್ಟಿಗೆ ಇರುತ್ತೀರಿ . ನಾನು ನಿಮಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತೇನೆ! ನಾನು ಮದುವೆಯಾದ ನಂತರ ನನಗೆ ಯಾವುದೇ ಮದುವೆಯ ಸಲಹೆಗಳು ಬೇಕಾದಾಗ, ನಾನು ಖಂಡಿತವಾಗಿಯೂ ನಿಮ್ಮೊಂದಿಗೆ ಮಾತನಾಡುತ್ತೇನೆ. ನೀವು ನನ್ನ ಸ್ಫೂರ್ತಿ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಅಣ್ಣ ! ನೀವು ಎಂದೆಂದಿಗೂ ಸಂತೋಷ ಮತ್ತು ಪ್ರೀತಿಯನ್ನು ಕೊನೆಗೊಳಿಸಬೇಕೆಂದು ಹಾರೈಸುತ್ತೇನೆ ಅಣ್ಣ! ವಾರ್ಷಿಕೋತ್ಸವದ ಶುಭಾಷಯಗಳು! ವರದಿ: ಶಿವರಾಜ್ ಕನ್ನಡಿಗ

ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಇಮೇಜ್
ಮಸ್ಕಿ : ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್ ಸಾವಂತನನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವ ಹಾಗೂ ಮೃತಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಮಾನ್ಯ ತಹಶೀಲ್ದಾರ್ ಮಸ್ಕಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮಸ್ಕಿ ತಾಲೂಕು ಘಟಕ ಮತ್ತು ನಗರ ಘಟಕ ಗಂಗಾ ಮತಸ್ಥ ಸಮಾಜ ಸೇವಾ ಸಂಘದ ವತಿಯಿಂದ ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆಯಲ್ಲಿ ನಾಗಭೂಷಣ ಬಾರಿಕೇರಿ ಮಾತನಾಡಿ ವಿದ್ಯಾರ್ಥಿನಿ ನೇಹಾ ಹೀರೆಮಠ ಹತ್ಯೆ ಪ್ರಕರಣ ನೆನಪು ಮಾಸುವ ಮುನ್ನವೆ, ಪ್ರೀತಿ ನಿರಾಕರಣೆಯ ವಿಷಯವಾಗಿ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ನೆತ್ತರು ಹರಿದಿರುವುದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಾಗಿದೆ, ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ಎಂಬ ಯುವಕ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಬೆಳ್ಳಂ ಬೆಳ್ಳಿಗೆ, ಆಕೆಯ ಮನೆಯಲ್ಲಿ ಹತ್ಯೆ ಮಾಡಿದ್ದಾನೆ, ಅಂಜಲಿ ಕೊಲೆ ನಾಗರಿಕ ಸಮಾಜ ತಲೆ ತಗಿಸು ಕೃತ್ಯವಾಗಿದೆ ಮೃತ ಅಂಜಲಿ ಈಗಾಗಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದು ಆಕೆಯ ಕುಟುಂಬದ ಜೀವನೋಪಾಯಕ್ಕೆ ಆಶ್ರಯವಾಗಿದ್ದಳು. ಆದ ಕಾರಣ ಅಂಜಲಿ ಕುಟುಂಬಕ್ಕೆ 50,00,000 ( ಐವತ್ತು ಲಕ್ಷ ರೂಪಾಯಿ ಗಳು ) ಪರಿಹಾರ ಒದಗಿಸಬೇಕು. ಎಂದು ಈ ಮೂಲಕ ಮಸ್ಕಿ, ತಾಲೂಕು ಘಟಕ ಮತ್ತು ನಗರ ಘಟಕ ಗಂಗಾಮತ ಸಮಾಜ ಸೇವಾ ಸಂಘ (ರಿ) ಮಸ್ಕಿ, ವತಿಯಿಂದ ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಾಗಭೂಷಣ ಬಾರಕೇರ, ಬಸವರಾಜ

ಉಜ್ಜಯಿನಿ ಸದ್ದರ್ಮ ಪೀಠದಲ್ಲಿ ಸಾಮೂಹಿಕ ವಿವಾಹ

ಇಮೇಜ್
ಕೊಟ್ಟೂರು : ದಾಂಪತ್ಯ ಎನ್ನುವುದು ಗಂಡು ಹೆಣ್ಣಿನ ಬೆಸುಗೆ ಮಾತ್ರವಲ್ಲದೇ ಎರಡು ಕುಟುಂಬಗಳ ಬಾಂಧವ್ಯ ಬೆಳೆಸುವುದಾಗಿದೆ. ಗಂಡು ಹೆಣ್ಣು ಸಮನಾಗಿ ನಡೆದುಕೊಂಡು ಬಾಳಿನಲ್ಲಿ ಬೆಳಕು ಕಾಣಬೇಕು ಎಂದು ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಹೇಳಿದರು. ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವದ ೫ನೇ ದಿನದ ಕಾರ್ಯಕ್ರವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಶುಕ್ರವಾರ ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಗಳ ಮೂಲಕ ಮನೆಯಲ್ಲಿ ಮದುವೆ ಮಾಡುವುದಕ್ಕಾಗಿ ವ್ಯಯ ಮಾಡುವ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು. ತಮ್ಮ ಪೀಠ ಸೇರಿದಂತೆ ಅನೇಕ ಮಠಗಳು ಸಾಮೂಹಿಕ ವಿವಾಹ ಕಾರ್ಯಗಳನ್ನು ನಡೆಸುತ್ತಲಿವೆ. ಇಂತಹ ಕಾರ್ಯಗಳಲ್ಲಿ ದಾಂಪತ್ಯಕ್ಕೆ ಕಾಲಿರಿಸುವವರಿಗೆ ಅನೇಕ ಸ್ವಾಮೀಜಿಗಳ ಮುಖಂಡರ ಆರ್ಶೀವಾದ ಸಿಗುತ್ತದೆ ಎಂದರು. ಸಾಮೂಹಿಕ ವಿವಾಹ ಕೇವಲ ಬಡ ಹಾಗೂ ಮಧ್ಯಮ ವರ್ಗದವರಿಗೆ ಸೀಮಿತ ಎಂಬ ಭಾವನೆ ತೊಡೆದು ಹಾಕಬೇಕು. ಆಯೋಜನೆಗೊಳ್ಳುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಉಳ್ಳವರ ಮನೆಯವರೂ ಮದುವೆಯಾಗಿ ಉಳಿದವರಿಗೆ ಮಾದರಿಯಾಗಬೇಕು. ತಮ್ಮ ಪೀಠದಿಂದ ಪ್ರತಿ ವರ್ಷದ ಕಾರ್ತಿಕೋತ್ಸವ, ರಥೋತ್ಸವ ಸಂದರ್ಭಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಅನೇಕ ಮುಖಂಡರು ಸಹಕಾರ ನೀಡುತ್ತಿದ್ದಾರೆ.  ಈ ವರ್ಷದಲ್ಲಿ ಅನೇಕ ಭಾಗಗಳ ೧೬

ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮ: ಶಿವರಾಜ್ ಕನ್ನಡಿಗ ಅವರಿಗೆ ಸನ್ಮಾನ.

ಇಮೇಜ್
ಕೊಟ್ಟೂರು: ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ನಿಮಿಕ್ತವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಶ್ರೀ ಪೀಠದ ಆವರಣದಲ್ಲಿ, ಶ್ರೀ ಜಗದ್ಗುರು ಮಹಾ ಸನ್ನಿಧಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಶಿವರಾಜ್ ಕನ್ನಡಿಗ ಹಯ್ ಸೊಂಡೂರ್! ಪತ್ರಿಕೆ ಹಾಗೂ shTV ಕನ್ನಡ ಸುದ್ದಿ ವಾಹಿನಿ ವರದಿಗಾರರಿಗೆ ಸನ್ಮಾನ ಕೊಟ್ಟೂರು ತಾಲೂಕು ಕರ್ನಾಟಕ ಪತ್ರಕರ್ತರ (ರಿ )ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಶ್ರೀ ಜಗದ್ಗುರುಗಳು ಸನ್ನಿಧಿಯಲ್ಲಿ ಪಾಲ್ಗೊಂಡ ಕ್ಷಣ ಹಾಗೂ ಸನ್ಮಾನ ಮಾಡಿದ ಕ್ಷಣ

ಸರ್ಕಾರಿ ಪದವಿ ಕಾಲೇಜು ಆರಂಭಿಸಲು :ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಒತ್ತಾಯ

ಇಮೇಜ್
ಕೊಟ್ಟೂರು : ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸಬೇಕು ಎನ್ನುವ ಬೇಡಿಕೆ ಹಾಗೆಯೇ ಉಳಿದಿದೆ. ಈಗಾಗಲೇ ಎರಡೂ ಬಾರಿ ಇನ್ನೇನು ಪ್ರಾರಂಭ ವಾಗಬೇಕೆಂಬುವ ಆಶಯ ಹೊತ್ತ ಕೊಟ್ಟೂರು ಹಾಗೂ ಸುತ್ತಮುತ್ತಲಿನ ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರ  ನಿರಾಸೆಗೊಳಿಸಿತು. ಕೊಟ್ಟೂರು ತಾಲೂಕಿನಲ್ಲಿ ಹಲವು ಸಂಘಟನೆಗಳು ಪದವಿಪೂರ್ವ ಕಾಲೇಜ್ ಗೆ ಶಿಫಾರಸ್ಸು ಮಾಡಿದ್ದರೂ ಜನಪ್ರತಿನಿಧಿಗಳು ಕಾಲೇಜು ಆರಂಭಕ್ಕೆ ಮೀನಮೇಷ ಎಣಿಸುತ್ತಿದ್ದಾರೆ. ಶೀಘ್ರವೇ ಕಾಲೇಜು ಆರಂಭಿಸಬೇಕು. ತಾಲ್ಲೂಕು ಕೇಂದ್ರವಾಗಿ ಹಲವು ದಿನಗಳು ಕಳೆದರೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ನೆರೆಯ ಜಿಲ್ಲಾಗಳಿಗೆ ತೆರಳುತ್ತಿದ್ದಾರೆ.  ಅನಿವಾರ್ಯವಾಗಿ ಕೆಲ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳ ಮೊರೆ ಹೋಗಿದ್ದಾರೆ. ನಿತ್ಯ ಓಡಾಟವೇ ದಿನಚರಿ ಯಾಗಿದೆ. ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.  ಅನೇಕ ವಿದ್ಯಾರ್ಥಿ ಸಂಘಟನೆಗಳು ಕಾಲೇಜು ಮಂಜೂರಾತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನೆ ಯಾಗಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಲೇಜು ಆರಂಭ ನನೆಗುದಿಗೆ ಬಿದ್ದಿದೆ ಎಂದು ದೂರಿದರು. ಕೂಡಲೇ ಸರ್ಕಾರ ಕಾಲೇಜು ಆರಂಭಕ್ಕೆ ಮುಂದಾಗಬೇಕು. ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ  ಒತ್ತಾಯಿಸಿದರು.

"ಜನಪ್ರಿಯ ನಾಯಕ ಕೆ ನೇಮಿರಾಜನಾಯ್ಕ| ತಾಯಿ ಮಗುವಿನ ಮನಕಲಕುವ ಪರಿಸ್ಥಿತಿಗೆ ಬೇಸರ ವ್ಯಕ್ತ|ಅಧಿಕಾರಿಗಳಿಗೆ ತರಾಟೆ "

ಇಮೇಜ್
ಕೆರೆಯಂತಾದ ಕೊಟ್ಟೂರು ಬಸ್ ನಿಲ್ದಾಣಕ್ಕೆ : ಶಾಸಕ ನೇಮಿರಾಜನಾಯ್ಕ ಭೇಟಿ ನೂತನ ಬಸ್ ನಿಲ್ದಾಣಕ್ಕೆ  ಕೆಕೆಆರ್ಟಿಸಿ 3.50 ಕೋಟಿ ರೂ ಅನುದಾನ ಮಂಜೂರು : ಶಾಸಕ ಕೆ ನೇಮಿರಾಜನಾಯ್ಕ ಕೊಟ್ಟೂರು: ಪ್ರತಿಸಲ ಮಳೆ ಬಂದಾಗ ಕೊಟ್ಟೂರು ಬಸ್ ನಿಲ್ದಾಣ ನೀರು ತುಂಬಿ ಕೆರೆಯಂತಾಗಿ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಬುಧವಾರ ಕೊಟ್ಟೂರು ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಬಸ್ ನಿಲ್ದಾಣ ಸಂಪೂರ್ಣ ಜಲಾವೃತ ಆಗಿತ್ತು. ಈ ವೇಳೆ ಬಸ್ ನಿಲ್ದಾಣ ಬಳಿಯ ದೊಡ್ಡ ಚರಂಡಿಗೆ ರಭಸವಾಗಿ ಮಳೆ ನೀರು ಹರಿದು ಹೋಗುತ್ತಿತ್ತು.  ಅದೇ ಚರಂಡಿ ಪಕ್ಕದಲ್ಲಿ ನಿಧಾನವಾಗಿ ನಡೆದುಕೊಂಡು ಬರುವಾಗ ತಾಯಿ -ಮಗ ಇಬ್ಬರು ಆಯ ತಪ್ಪಿ ಬಿದ್ದಿದ್ದಾರೆ. ಒಂದು ಕೈಯಲ್ಲಿ ಮಗ, ಇನ್ನೊಂದು ಕೈಯಲ್ಲಿ ಲಗೇಜ್‌ ಹಿಡಿದು ಬರುವಾಗ ಬಿದ್ದಿದ್ದಾರೆ. ಆಚೆ – ಇಚೆ ಹೆಜ್ಜೆ ಇಟ್ಟಿದ್ದರೂ  ಚರಂಡಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೊಟ್ಟೂರು ಬಸ್ ನಿಲ್ದಾಣದಲ್ಲಿ ತಾಯಿ – ಮಗುವಿನ ಪರದಾಟದ ವಿಡಿಯೋ ಅಲ್ಲಿದ್ದ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲ ಅವ್ಯವಸ್ಥೆ ಕಂಡುಬಂದಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಹಾನಿಯಾಗಿರುವುದಿಲ್ಲ. ಬಸ್ ನಿಲ್ದಾಣದಲ್ಲಿ ಮಳೆಯಿಂದ ಅವಾಂತರದ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಸ್ಥಳಕ್ಕೆ ಶಾಸಕ ನೇಮಿರಾಜನಾಯ್ಕ ಮತ್ತು ಕೆಎಸ್ಆರ್ಟಿಸಿ ಡಿಸಿ ಜಗದೀಶ್ ಹಾಗೂ ಸಾರಿಗೆ ಇಲಾಖೆಯ ಎಂಜಿನಿಯರ್ ಸ್ಥಳಕ್ಕೆ ಗುರುವಾ