ಪೋಸ್ಟ್‌ಗಳು

ಗಣಿತವು ಮಾನವನ ಜೀವನಕ್ಕೆ ಪ್ರಮುಖವಾಗಿದೆ:ಡಾ. ಎಂ ರವಿಕುಮಾರ್

ಇಮೇಜ್
ಕೊಟ್ಟೂರು: ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಗಣಿತ ಶಾಸ್ತ್ರದ ವಿಭಾಗದಿಂದ ಗಣಿತಶಾಸ್ತ್ರಜ್ಞರಾದ ಶ್ರೀನಿವಾಸ್ ರಾಮಾನುಜನ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರೀಯ  ಗಣಿತ ದಿನಾಚರಣೆಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮಾನ್ಯ ಸಿದ್ದರಾಮ ಕಲ್ಮಠ ಶುಭ ಕೋರಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ರವಿಕುಮಾರ್ ಸರ್ ಮಾತನಾಡಿ ರಾಮಾನುಜನ್ ರವರ ಜೀವನದ ಕುರಿತು ಹಾಗೂ ಗಣಿತಶಾಸ್ತ್ರಕ್ಕೆ ರವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಗಣಿತ ವು ಜನಸಾಮಾನ್ಯರಲ್ಲಿ ಹೇಗೆ ಉಪಯೋಗವಾಗುತ್ತದೆ ಹಾಗೂ ಅದರ ಪ್ರಾಮುಖ್ಯತೆಯನ್ನು ಮತ್ತು ಗಣಿತ ಇಲ್ಲದೆ ಯಾವುದೇ ವ್ಯವಹಾರಿಕ ಜೀವನ  ನಡೆಯುವುದಿಲ್ಲ ಹಾಗಾಗಿ ಗಣಿತವು ಮಾನವನ ಜೀವನಕ್ಕೆ ಪ್ರಮುಖವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀ ಸಿ ಬಸವರಾಜ್ ಮಾತನಾಡಿ ಗಣಿತವು ಎಲ್ಲಾ ವಿಜ್ಞಾನ ವಿಷಯಗಳಿಗೆ ಅಡಿಪಾಯವಾಗಿದೆ. ಹಾಗೂ ಕಂಪ್ಯೂಟರ್ ಯುಗಕ್ಕೆ  ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. ಡಾ. ಸಿದ್ದನಗೌಡ ಡಾ. ಚೇತನ್ ಚೌಹಾನ್ ಅನೇಕ ವಿದ್ಯಾರ್ಥಿಗಳು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣಪ್ಪ ಭೌತಶಾಸ್ತ್ರದ ಮುಖ್ಯಸ್ಥರು. ಕುಮಾರಿ ಪೂಜಾ ಗಣಿತಶಾಸ್ತ್ರದ ಮುಖ್ಯಸ್ಥರು.ಕುಮಾರಿ ರೂಪ ಹಾಗೂ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ವರ್ಗ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ

ಮಹಿಳೆಯರು ಸ್ವಾವಲಂಬನೆಯಿಂದ ಬದುಕಿ : ಈಶಪ್ಪ ವಕೀಲ

ಇಮೇಜ್
ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮದಲ  ಶ್ರೀ ವಾಲ್ಮೀಕಿ ಭವನದಲ್ಲಿ  ಕಾಮದೇನು ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದಿಂದ ಲಿಂಗತ್ವ ದೌರ್ಜನ್ಯ ಅಭಿಯಾನ ಕಾರ್ಯಕ್ರಮ ನಡೆಯಿತು.  ಈ ವೇಳೆ, ಈಶಪ್ಪ ದೇಸಾಯಿ ವಕೀಲರು  ಮಾತನಾಡಿ ಇಂದಿನ ಮಹಿಳೆಯರು ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಬೇಕು ಅದಕ್ಕಾಗಿ ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ಹಲವಾರು ಕಾನೂನು ಇದ್ದು ಸರಿಯಾಗಿ ಬಳಕೆ ಮಾಡಿಕೊಳ್ಳಿ,ಮಹಿಳೆಯರಿಗೆ ಆರ್ಥಿಕ , ಶಿಕ್ಷಣ , ಸಾಮಾಜಿಕ ಸ್ವಾತಂತ್ರ್ಯ ಪಡೆದುಕೊಂಡ ಸಮಾಜದಲ್ಲಿ ಉನ್ನತವಾದ ಹುದ್ದೆ ಅಲಂಕರಿಸಿ ಎಂದು ಈಶಪ್ಪ ವಕೀಲರು ಹೇಳಿದರು.  ಅದೇ ರೀತಿಯಲ್ಲಿ ಉಪನ್ಯಾಸಕ ಸಿದ್ದಾರ್ಥ ಪಾಟೀಲ್ ಮಾತನಾಡುತ್ತಾ ಇಂದು ಮಹಿಳೆಯರಿಗೆ ಸರಕಾರದಿಂದ ವಿಶೇಷವಾಗಿ ಅನೇಕ ಸೌಲಭ್ಯ, ಸೌಕರ್ಯಗಳು ಇದ್ದು ಅವುಗಳನ್ನು ಪಡೆದು ಸಮಾಜದಲ್ಲಿ ಮುಂಚೊಣಿಗೆ ಬರಬೇಕು, ಮುಖ್ಯವಾಗಿ  ಹೆಣ್ಣುಮಕ್ಕಳಿಗೆ ಶಿಕ್ಷಣ ಪ್ರಧಾನವಾಗಿ ಕೊಡಿಸದಾಗ ಮಾತ್ರ ನಿಜವಾದ ಸ್ವಾವಲಂಬನೆ ಸಿಗುತ್ತದೆ ಎಂದರು. ಪ್ರಕಾಶ ವಲಯ ಮೇಲ್ವಿಚಾರಕರು ಮಾತನಾಡಿ  ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ನಮ್ಮ ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುತ್ತವೆ ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಪ್ರಕಾಶ ಮಸ್ಕಿ ವಲಯ ಮೇಲ್ವಿಚಾರಕ ಹೇಳಿದರು.  ಈ ಸಂದರ್ಭದಲ್ಲಿ ಭವಾನಿ ಬಿ.ಆರ್. ಪಿ, ಜ್ಯೋತಿ ಖಜಾಂಚಿ, ಸಿಂಧೂ ಕೆ ಎಚ್.ಪಿ ಟಿ, ರೇಣುಕಾ ಎಮ್ ಬಿ.ಕೆ. ಗದ್ದೆಮ್ಮ,ಗಂಗಮ್ಮ,ಅಶ್ವಿನಿ, ಶ್ರೀದೇವಿ, ಹಾಗೂ ಗ್ರಾಮ ಪಂಚಾಯತ

ಕಾಟಾಚಾರಕ್ಕೆ ನಡೆಸಿದ ಕುಂದು ಕೊರತೆ ಸಭೆ ; ಶರಣಬಸವ ಸೊಪ್ಪಿಮಠ

ಇಮೇಜ್
ಮಸ್ಕಿ : ತಾಲ್ಲೂಕಿನ ಬಸವೇಶ್ವರ ನಗರದ ತಹಶೀಲ್ದಾರರ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಶಾಸಕರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಅಹವಾಲು ಸಭೆಯು ಕಾಟಾಚಾರದ ಸಭೆ ಎಂದು ಶರಣ ಬಸವ ಸೊಪ್ಪಿಮಠ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಸೀಲ್ದಾರರ ಕಚೇರಿ ಭೇಟಿ ನಂತರ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಇದ್ದಾರೆ ಹೊರೆತು ಸಾರ್ವಜನಿಕರು ಯಾರು ಇಲ್ಲದಂತಾಗಿತ್ತು. ತಾಲ್ಲೂಕಿನಲ್ಲಿ ದೂರು ಸಲ್ಲಿಸಲು ಸಮಸ್ಯೆಗಳೇ ಇಲ್ಲವೇ ಅಥವಾ ಸಾರ್ವಜನಿಕರು ಸಭೆಗೆ ಬರುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಗೃತಿ ಮೂಡಿಸುವಲ್ಲಿ ಎಡವಿದ್ದಾರೆಯೋ..??? ಎನ್ನುವ ಅನುಮಾನವು ಸಾರ್ವಜನಿಕರಲ್ಲಿ ಮೂಡಿದೆ. ತಾಲ್ಲೂಕಿನ ಗೋನಾಳ ಗ್ರಾಮದ ಆಲಂಬಾಷ ಎನ್ನುವರು ಗೋನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಸ್ಮಶಾನ ಒತ್ತುವರಿಯಾಗಿದ್ದು ಅದನ್ನು ಸರಿಪಡಿಸುವಂತೆ ಮನವಿ ಮಾಡಿದರು, ಅದೇ ರೀತಿ ಸುರೇಶ್ ಬ್ಯಾಳಿಯವರು ಪಟ್ಟಣ ಸೇರಿ ತಾಲೂಕಿನಾದ್ಯಂತ ಎಗ್ಗಿಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದು ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮರಳು ತಪಾಸಣಾ ಘಟಕಗಳನ್ನು ಸ್ಥಾಪಿಸಲು ಮೌಖಿಕವಾಗಿ ಮನವಿ ಮಾಡಿದರು.  ನಂತರ ತಾಲೂಕಿನ ಭೋವಿ ಸಮಾಜದ ರವಿ ಚಿಗರಿ ಅವರು ಮಸ್ಕಿ ತಾಲೂಕಿನ ಭೋವೇರ್, ರಾಜಭೋವಿ ಎಂದು ನಕಲಿ ದಾಖಲೆ ಸಲ್ಲಿಸಿ ಭೋವಿ ಎಂಬ

67ನೇ ಮಹಾ ಪರಿನಿಬ್ಬಣ ಅಂಗವಾಗಿ ಬೃಹತ್ ಜಾಗೃತಿ ಸಮಾವೇಶ --ಪರಶುರಾಮ್ ಕೆರೆಹಳ್ಳಿ

ಇಮೇಜ್
ವರದಿ -- ಮಂಜುನಾಥ ಕೋಳೂರು, ಕೊಪ್ಪಳ  ಕೊಪ್ಪಳ ಡಿ- 21 : -- ದೇಶದಲ್ಲಿ ಆರ್ಯರ ಕುತಂತ್ರದಿಂದ ಭಾರತದ ಮೂಲ ನಿವಾಸಿಗಳಾದ ಅಸ್ಪೃಶ್ಯರಿಗೆ ವಿದ್ಯೆ ,ಸಂಪತ್ತು ,ಆಯುಧ ಹೊಂದುವ ಅಧಿಕಾರ ನಿರಾಕರಿಸಿ ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಿದ್ದ ಅಸ್ಪೃಶ್ಯರ ಬದುಕಿಗೆ ಬೆಳಕಾಗಿ ಬಂದ ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ಅವರು ಮನುವಾದಿಗಳ ವಿರುದ್ಧ ಹೋರಾಡಿ ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಪರಿಕಲ್ಪನೆ ಯೊಂದಿಗೆ ಮಾನವೀಯ ಸಂವಿಧಾನ ರಚಿಸಿ ಈ ದೇಶದ ಶೋಷಿತರಿಗೆ ಹಕ್ಕು ಅವಕಾಶ ಗಳನ್ನು ಪಡೆದು ಈ ದೇಶದ ಶೋಷಿತರಿಗೆ ಹಕ್ಕು ಅವಕಾಶಗಳನ್ನು ಕಲ್ಪಿಸಿಕೊಟ್ಟು ನನ್ನ ಜನ ಸಂವಿಧಾನಿಕ ಹಕ್ಕು ಅವಕಾಶಗಳನ್ನು ಪಡೆದು , ಈ ದೇಶವನ್ನುಆಳುವುದನ್ನು ನಾನು ಕಣ್ಣಾರೆ ನೋಡಬೇಕೆಂಬ ಅವರ ಬಹುದೊಡ್ಡ ಕನಸು ಈಡೇರುವ ಮೊದಲೇ ಡಿಸೆಂಬರ್ -೦6 - 1956 ರಲ್ಲಿ ಪರಿನಿಬ್ಬಣ ಹೊಂದಿದರು. ಎಂದು ಕರ್ನಾಟಕ ದಲಿತ ಸಂಘ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಕೆರೆಹಳ್ಳಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಈ ಕನಸು ನನಸಾಗೇ ಉಳಿಯಿತು . ಅಂಬೇಡ್ಕರ್ ಅವರ ಪರಿಶ್ರಮದಿಂದ ಹಕ್ಕು ಅವಕಾಶಗಳನ್ನು ಪಡೆದು ಕಟ್ಟಾ ಅನುಯಾಯಿಗಳು ಅಂಬೇಡ್ಕರ್ ತೋರಿಸಿದ ಗುರಿಯನ್ನೆ ಮರೆತ ಪರಿಣಾಮ ದೇಶದಲ್ಲಿ ದಲಿತರ ಒಂದು ಪ್ರಬಲ ರಾಜಕೀಯ ಶಕ್ತಿಯಾ

" ಪರಸ್ಪರ ಪ್ರೇಮಿಗಳು ಎಚ್ ಹಾಲೇಶ್ ಹಾಗೂ ನೇತ್ರಾ ವಿವಾಹ "

ಇಮೇಜ್
ಕೊಟ್ಟೂರು ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮ ವಾಸಿಯಾಗಿದ್ದು ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸಿರುವ ಪ್ರೇಮಿಗಳು ಎಚ್ ಹಾಲೇಶ್ ಮತ್ತು ನೇತ್ರಾ ಕೊಟ್ಟೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇಬ್ಬರು ಸಮ್ಮತಿ ಮೇರೆಗೆ ಪ್ರೀತಿಯಿಂದ ಮದುವೆಯ ಕಾರ್ಯ ಯಶಸ್ವಿಯಾಗಿ ಬುಧವಾರ ನಡೆಸಲಾಯಿತು. ಬಡ ಜನರಿಗೆ ಧ್ವನಿಯಾಗಿ ಕಮ್ಯುನಿಸ್ಟ್ ಪಾರ್ಟಿ ಸಂಘಟನೆಯ ನೇತೃತ್ವದಲ್ಲಿ ಪ್ರೇಮಿಗಳಿಗೆ ಹೊಂದಾಣಿಕೆ ಯಶಸ್ವಿ ನಡೆದಿದೆ. ಈ ಸಂದರ್ಭದಲ್ಲಿ ಸಿಪಿಎಂಎಲ್ ಲಿಬ್ರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್, ಮರೂರು ಕೊಟ್ರೇಶಪ್ಪ, ದೂಪದಹಳ್ಳಿ ಅಂಜನಪ್ಪ, ಕೆ ಅಯ್ಯನಹಳ್ಳಿ ಬುಲ್ಲಪ್ಪ, ಪರಸಪ್ಪ, ಮಹೇಶಪ್ಪ, ಮಂಜುನಾಥ, ಎಸ್ ಬಿ ಮಲ್ಲಪ್ಪ, ಪ್ರೊಫೆಸರ್ ಶರಬಣ್ಣ, ಬೋಪಲಾಪುರ ಪರಸಪ್ಪ, ಬಸಲಿಂಗಪ್ಪ , ಹುಣಸಿಕಟ್ಟೆ ಆನಂದಪ್ಪ,ಹಾಗೂ ಉಪಸ್ಥಿತರಿದ್ದರು.

ಗ್ರಾಮ ಆಡಳಿತಾಧಿಕಾರಿ ತಾಲೂಕ ಸಂಘದ ಅಧ್ಯಕ್ಷರಾಗಿ ಮಾಂತೇಶ ಮುರಾರಿ ಆಯ್ಕೆ

ಇಮೇಜ್
ಮಸ್ಕಿ: ಮಸ್ಕಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ನೂತನ ತಾಲೂಕ ಅಧ್ಯಕ್ಷರ ಆಯ್ಕೆ ಸಂಬಂಧ ಬುಧವಾರದಂದು ನಡೆದ ತಾಲೂಕ ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ನೂತನ ತಾಲೂಕ ಅಧ್ಯಕ್ಷರಾಗಿ ಮಸ್ಕಿ ತಾಲೂಕಿನ ಮಾಂತೇಶ ಮುರಾರಿ ಇವರು ಸರ್ವ ಸದಸ್ಯರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.  ಸಭೆಯ ಅಧ್ಯಕ್ಷತೆಯನ್ನು ನಿಕಟ ಪೂರ್ವ ಅಧ್ಯಕ್ಷರಾದ ಅಮರೇಶ ನಾಯಕ ಇವರು ವಹಿಸಿದ್ದರು. ನೂತನ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ್ ಮುರಾರಿ ಮಾತನಾಡಿ ಇಲಾಖೆಯ ಸಹೋದ್ಯೋಗಿಗಳ ಹಿತ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಸದಾ ನೌಕರರ ಧ್ವನಿಯಾಗಿರುತ್ತೇನೆ ಎಂದರು. ಗೌರವಾಧ್ಯಕ್ಷರಾದ ಸೋಮನಗೌಡ ಇವರು ಸಂಘಟನೆಗಾಗಿ ಹಗಲು ಇರುಳು ಎನ್ನದೆ ಶ್ರಮಿಸಬೇಕು ಎಲ್ಲಾ ನೌಕರರ ಹಿತ ಕಾಪಾಡಬೇಕೆಂದು ಸಲಹೆ ನೀಡಿದರು. ಪದಾಧಿಕಾರಿಗಳ ಆಯ್ಕೆ ಗೌರವ ಅಧ್ಯಕ್ಷರಾಗಿ- ಸೋಮನ ಗೌಡ, ಅಧ್ಯಕ್ಷರಾಗಿ ಮಾಂತೇಶ ಮುರಾರಿ, ಉಪಾಧ್ಯಕ್ಷರಾಗಿ -ದುರ್ಗಪ್ಪ,ಕಾರ್ಯದರ್ಶಿಯಾಗಿ- ಲಿಂಗಪ್ಪ,ಖಜಾಂಚಿಯಾಗಿ - ಗಂಗಪ್ಪ, ಇವರನ್ನು ತಾಲೂಕಿನ ಸರ್ವ ಗ್ರಾಮ ಆಡಳಿತ ಅಧಿಕಾರಿಗಳ ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಚರಂಡಿ ನೀರನ್ನು ನೇರವಾಗಿ ಹಳ್ಳಕ್ಕೆ ಹರಿಸಲು ಮನವಿ

ಇಮೇಜ್
ಮಸ್ಕಿ : ಪುರಸಭೆ ವ್ಯಾಪ್ತಿಯಲ್ಲಿನ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗೆ ಚರಂಡಿ ಕಾಮಗಾರಿಯನ್ನು ನೇರವಾಗಿ ಹಳ್ಳಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಮನವಿ ಮಾಡಲಾಯಿತು. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆ ಪ್ರಾಧಿಕಾರದಿಂದ ಕೈಗೊಂಡಿರುವ ಚರಂಡಿ ಕಾಮಗಾರಿಯನ್ನು ಮಾಡುತ್ತಿದ್ದು ಚರಂಡಿ ಕಾಮಗಾರಿ ಯಿಂದ ಬಹುತೇಕ ವಾರ್ಡ್ ಗಳು ಚರಂಡಿ ನೀರು ಮತ್ತು ಮಳೆ ನೀರು ಮನೆಯೊಳಗೆ ನುಗ್ಗಿ ಮುಳುಗುವ ಭೀತಿಯಲ್ಲಿವೆ ಏಕೆಂದರೆ ರಸ್ತೆ ಚರಂಡಿ ಅವೈಜ್ಞಾನಿಕ ವಾಗಿದೆ. ಎಂದು ಸಂಘಟನೆಗಳಿಂದ ಹೋರಾಟಮಾಡಿ ಮನವಿ ಸಲ್ಲಿಸಿದರು ಆದರೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಸ್ಪಂಧಿಸುವ ಮನೋಭಾವನೆ ಮರೆತಂತೆ ಕಾಣುತ್ತದೆ.  ಆದ್ದರಿಂದ ಸಂಭಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ನಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಿ ಪಟ್ಟಣ ಅಭಿವೃದ್ಧಿ ಹಾಗೂ ಗುಣಮಟ್ಟದ ಚರಂಡಿ ಕಾಮಗಾರಿಯನ್ನು ನಿರ್ಮಾಣ ಮಾಡಿ ಹಳೇಚರಂಡಿಗಳಿಗೆ ಸಂಪರ್ಕ ಕಲ್ಪಿಸದೆ ನೇರವಾಗಿ ಹಳ್ಳದ ಚರಂಡಿಗೆ ನೀರನ್ನು ಬೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ, ಎಲ್ಲಾ ವಾರ್ಡಗಳ ನಿವಾಸಿಗಳು ಹಾಗೂ ಸಾರ್ವಜನಿಕರು ಇದ್ದರು.