ಪೋಸ್ಟ್‌ಗಳು

ಪೌರ ಕಾರ್ಮಿಕರು ಸರಕಾರಿ ಸೌಲಭ್ಯಗಳನ್ನು ಪಡೆಯಿರಿ: ಮುಖ್ಯಾಧಿಕಾರಿ ಎ ನಸ್ರುಲ್ಲಾ

ಇಮೇಜ್
ಕೊಟ್ಟೂರು : ರಾಜ್ಯದ ಪೌರಕಾರ್ಮಿಕರಿಗೆ ಸರಕಾರ ವಿಷೇಶ ಸೌಲಭ್ಯಗಳನ್ನು ನೀಡುತ್ತಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕೊಟ್ಟೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎ ನಸ್ರುಲ್ಲಾ ಹೇಳಿದರು. ಅವರು ಪಟ್ಟಣ ಪಂಚಾಯತಿಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರ ಸೇವಾ ಸಂಘದಿಂದ ಸೋಮವಾರ ಹಮ್ಮಿಕೊಂಡ ಪೌರ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪೌರ ಕಾರ್ಮಿಕರ ನಿವೇಶನ ಸೌಲಭ್ಯಕ್ಕಾಗಿ ಸರಕಾರದಿಂದ 7.50 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ಒದಗಿಸಲಾಗುವುದು ಹಾಗೂ ಪ್ರತಿ ವರ್ಷ ಪೌರ ಕಾರ್ಮಕರ ಕಲ್ಯಾಣ ನಿಧಿಗೆ ಶೇ.20 ಹಣ ಮೀಸಲಿರಿಸಲಾಗಿರುತ್ತದೆ. ಪೌರ ಮಕ್ಕಳ ಶಿಕ್ಷಣಕ್ಕೆ ನೇರ ಸೌಲಭ್ಯಗಳು ಹಾಗೂ ಇನ್ನೂ ಹತ್ತು ಹಲವಾರು ಸೌಲಭ್ಯಗಳಿದ್ದು ಅದರ ಸದುಪಯೋಗ ಪಡಿಸಿಕೊಳ್ಳಿ ಎಂದರು  ಎಲ್ಲಾ ಪೌರಕಾರ್ಮಿಕ ಅಂಗವಾಗಿ ಆರೋಗ್ಯ ತಪಾಸಣೆ ಪೌರಕಾರ್ಮಿಕರಿಗೆ ಮಾಡಿಸಲಾಯಿತು, ವಿಶೇಷ ಭತ್ಯೆರೂ:7000.00 ಗಳನ್ನು ನೀಡಲಾಯಿತು,ಎಂದು ಹೇಳಿದರು. ನಂತರ ಪಟ್ಟಣ ಪಂಚಾಯತಿ ಅಧ್ಯಕ್ಷೆ ಬಿ ರೇಖಾ ಮಾತನಾಡಿ ನಮ್ಮ ಪಟ್ಟಣ ಇಷ್ಟೊಂದು ಆರೋಗ್ಯ ಪೂರ್ಣವಾಗಿರಲು ಪೌರ ಕಾರ್ಮಿಕರ ಪರಿಶ್ರಮದಿಂದ ಸಾಧ್ಯವಾಗಿದೆ. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಪೌರ ಕಾರ್ಮಿಕರು ಗ್ರಾಮದ ಸ್ವಚ್ಚತೆ ಕೈಗೊಂಡು ಗ್ರಾಮವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂದಿನ ದಿನಗಳಲ್ಲಿ ಏಷ್

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಲತಾ ಪ್ರಕಾಶ್ ಮಸ್ಕಿ

ಇಮೇಜ್
  ಮಸ್ಕಿ : ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆರಂಭ ಮಾಡಿರುವ ನಿರಂತರವಾದ ಸೇವೆ ಯಾವುದೇ ಒಂದು ವಾರವನ್ನೂ ಬಿಡದೆ 168ನೇ ವಾರವನ್ನು ಪೂರೈಸಿದ್ದು ಈ ವಾರದ ಸೇವಕಾರವನ್ನು ಅಭಿನಂದನ ಸ್ಪೂರ್ತಿಧಾಮದ ಆವರಣದಲ್ಲಿ ಸಸಿಗಳನ್ನು ಹಚ್ಚುವ ಮೂಲಕ ಸೇವ ಕಾರ್ಯವನ್ನು ನೆರವೇರಿಸಲಾಯಿತು  ಈ ಸೇವ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಲತಾ ಪ್ರಕಾಶ್ ಮಸ್ಕಿ ಪ್ರತಿ ರವಿವಾರವು ಒಂದಿಲ್ಲ ಒಂದು ವಿಶೇಷವಾದ ಸೇವೆಗಳ ಮೂಲಕ ನಮ್ಮ ಭಾಗದಲ್ಲಿ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಇಂತಹ ಸೇವಾ ಸಂಸ್ಥೆಗೆ ನಾವೆಲ್ಲರೂ ಸಹಕಾರವನ್ನು ನೀಡಬೇಕು ಎಂದರು ವಿಶೇಷವಾಗಿ ನಮ್ಮ ಮಸ್ಕಿಯು ಬಯಲು ವಾತಾವರಣವನ್ನು ಹೊಂದಿದ್ದು ಈ ಭಾಗದಲ್ಲಿ ಪರಿಸರ ಸಂರಕ್ಷಣೆ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಗೀತಾ ಶಿವರಾಜ್, ನಿವೇದಿತಾ ಇತ್ಲಿ, ವಿದ್ಯಾವತಿ ವನಕಿ, ನಿಷಾದ ಅಪ್ರೂಜ್, ಚಂದ್ರಕಲಾ ದೇಶಮುಖ್, ಶಾರದಾ ಸಜ್ಜನ್, ಶೃತಿ ಹಂಪರಗುಂದಿ ಇತರರು ಉಪಸ್ಥಿತರಿದ್ದರು

ತಜ್ಞರ ವರದಿಯ ಆಧಾರದ ಮೇಲೆ ಗೇಟ್ ಗಳ ನಿರ್ವಹಣೆ

ಇಮೇಜ್
ಕೊಪ್ಪಳ : ಸೆಪ್ಟೆಂಬರ್ -22:  ತಜ್ಞರ ವರದಿಯ ಆಧಾರದ ಮೇಲೆ ಗೇಟ್ ಗಳ ನಿರ್ವಹಣೆ ಮಾಡಲಾಗುವುದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕೊಪ್ಪಳದ ಗಿಣಿಗೇರಾ ಏರ್ ಸ್ಟ್ರಿಪ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕ್ರಸ್ಟ್ ಗೇಟ್ ಗಳ ಕಾಲಕಾಲಕ್ಕೆ ದುರಸ್ತಿ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು 50 ವರ್ಷಕ್ಕೆ ಗೇಟ್ ಗಳನ್ನು ಬದಲಿಸಬೇಕು. 70 ವರ್ಷಗಳಿಂದ ಗೇಟ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ  70 ವರ್ಷ ಕೆಲಸ ಮಾಡಿದೆ. ಪ್ರಸ್ತುತ ತಜ್ಞರ ಸಮಿತಿ  ರಚನೆಯಾಗಿದ್ದು ವರದಿ ನೀಡಬೇಕಿದೆ ಎಂದರು. *ಹಿಂಗಾರಿನ ಎರಡನೇ ಬೆಳೆಗೆ ನೀರು ಲಭ್ಯವಾಗಬಹುದು* ತುಂಗಭದ್ರ ಜಲಾಶಯ ಮತ್ತೆ ತುಂಬಿದೆ. 101.77 ಟಿ.ಎಂ.ಸಿ ನೀರು ಲಭ್ಯವಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ.ಕೊಚ್ಚಿಹೋಗಿದ್ದ 19 ನೇ ಕ್ರಸ್ಟ್ ಗೇಟ್ ನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ , ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್ ಅವರು ಸ್ಥಳದಲ್ಲಿಯೇ ಇದ್ದು ಗೇಟ್ ದುರಸ್ತಿ ಗೆ ಕ್ರಮ ವಹಿಸಿದರು. ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಇಂಜಿನಿಯರಿಂಗ್  ಹಾಗೂ  ಇಂಜಿನಿಯರ್ ಗಳು, ಅಧಿಕಾರಿಗಳು  ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ತ್ವರಿತವಾಗಿ  ಗೇಟ್ ಅಳವಡಿಸಲು ಸಾಧ್ಯವಾಯಿತು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು

ಬೆಂಗಳೂರಿನಲ್ಲಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದಿಂದ ಸಂಸ್ಕೃತ ಭಾಷೆ ಕಲಿಕೆಗೆ “ಸಂಸ್ಕೃತ ಪ್ರಚಾರ ಪಥ” ಸಂಚಲನ ಕಾರ್ಯಕ್ರಮಕ್ಕೆ ಚಾಲನೆ

ಇಮೇಜ್
  ಬೆಂಗಳೂರು; ಜನರಿಂದ ದೂರವಾಗುತ್ತಿರುವ ಸಂಸ್ಕೃತ ಭಾಷೆಗೆ ಮತ್ತೆ ಘನತೆ, ಗೌರವ ತಂದುಕೊಡಲು ಬೆಂಗಳೂರು ನಗರದಲ್ಲಿ “ಸಂಸ್ಕೃತ ಪ್ರಚಾರ ಪಥ” ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿದೆ.  ಸಂಸ್ಕೃತ ದೇವನಾಗರಿ ಭಾಷೆ. ಸನಾತನ ಕಾಲದ ದೈವ ಬಾಷೆ. ಎಲ್ಲಾ ಭಾರತೀಯ ಭಾಷೆಗಳಿಗೂ ಸಂಸ್ಕೃತವೇ ಮೂಲ. ಜರ್ಮನ್ ನಂತಹ ವಿದೇಶಿ ಭಾಷೆಗಳು ಸಹ ಸಂಸ್ಕೃತವನ್ನು ಆಧರಿಸಿವೆ. ಈ ಹಿನ್ನೆಲೆಯಲ್ಲಿ ಸಂಸ್ಕೃತದ ವೈಭವವನ್ನು ಮರಳಿ ತರಲು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಜಯಗರದ ಶ್ರೀ ವಾಸವಿ ವೇದ ಪಾಠಶಾಲೆ ಪ್ರಾಚಾರ್ಯರಾದ ನರೇಂದ್ರ ಮತ್ತು ಸಂಸ್ಥೆಯ ಅಧ್ಯಕ್ಷ ಡಾ.ವಿಷ್ಣು ಭರತ್ ಆಲಂಪಳ್ಳಿ ನೇತೃತ್ವದಲ್ಲಿ ಬೆಂಗಳೂರಿನಾದ್ಯಂತ “ಸಂಸ್ಕೃತ ಪ್ರಚಾರ ಪಥ” ಸಂಚರಿಸಲಿದೆ.  ಈ ಕುರಿತು ಜಯನಗರದಲ್ಲಿ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು, ಮಕ್ಕಳಿಗೆ ಭಾಷೆಯ ಬಗ್ಗೆ ಆಸಕ್ತಿ, ಸ್ಮರಣೆ ಶಕ್ತಿ, ಗ್ರಹಣ ಶಕ್ತಿ, ಜೀವನದಲ್ಲಿ ಸಾಧಿಸುವ ಗುಣಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ್ ಸಂಸ್ಕೃತದ ಮಹತ್ವ ಕುರಿತಾದ ಉಪನ್ಯಾಸ ನೀಡಿದರು. ಈ ಸಂಸ್ಥೆಯು ಕಳೆದ 45 ವರ್ಷಗಳಿಂದ ವೇದ,ಉಪನಿಷತ್,ಸಂಸ್ಕೃತ ಕುರಿತಾದ ಕಾರ್ಯಕ್ರಮಗಳನ್ನೂ ನೆಡೆಸುತ್ತಾ ಬಂದಿದೆ.  ಸಂಸ್ಥೆಯು ದಕ್ಷಿಣ ಭಾರತದಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ವಸತಿ, ವೈದ್ಯಕೀಯ ಸೌಲಭ್ಯ, ಪಠ್ಯ ಪುಸ್ತಕ, ವಸ್ತ್ರ ಮುಂತಾದ ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಾ ಬಂದ

"ಕುಟುಂಬದ ವಂಶವೃಕ್ಷಗಳ ಪಟ್ಟಿಯನ್ನು ಪಟಪಟಾಂತ ಹೇಳುವ ಹೆಳವರು"

ಇಮೇಜ್
ಕೊಟ್ಟೂರು: ಇವರನ್ನು ನೋಡಿದ ತಕ್ಷಣವೆ ಇವರು ಹೆಳವರು ಎಂದು ಗುರುತಿಸ ಬಹುದಾದಷ್ಟು ಚಿರಪರಿಚಿತ ಲಕ್ಷಣ ಹೊಂದಿದ ವ್ಯಕ್ತಿಗಳೇ ಹೆಳವರು.ಬಗಲಿಗೆ ದೊಡ್ಡದಾದ ಕೆಂಬಣ್ಣದ ಶಾಲು, ಜೋಳಿಗೆ’ ತಲೆಗೆ ರುಂಬಾಲು ಬಿಳಿಯ ಧೋತರ, ಉದ್ದದ ನಿಲುವಂಗಿ, ಬಗಲಿನಲ್ಲಿ ಹೊತ್ತಿಗೆ ಹಿಡಿದ, ವಿಶಿಷ್ಟ ಲಕ್ಷಣ ಹೊಂದಿದವರು ಹೆಳವರು. ಇವರದು ಉದ್ದೋಗವೆಂದರೆ ಉದ್ಯೋಗವಲ್ಲ, ಸೇವೆ ಅಂದರೆ ಸೇವೆಯೂ ಅಲ್ಲ, ಇದು ಧರ್ಮವೂ ಹೌದು ಕರ್ಮವು ಹೌದು ಅನ್ನುವ ಅನಿವಾರ್ಯ ಕಾಯಕವಾಗಿದೆ. ಇವರಿಂದ ನಮಗೆ ಗೊತ್ತಿಲ್ಲದ ಎಷ್ಟೋ ಐತಿಹಾಸಿಕ ಕೌಟುಂಬಿಕ ಸತ್ಯಗಳು ಬಯಲಾಗಬಹುದು. ನಮಗೆ ನಮ್ಮ ಕುಟುಂಬದ ಎಷ್ಟು ತಲೆಮಾರುಗಳ ಬಗ್ಗೆ ಗೊತ್ತು.ಅಜ್ಜ, ಮುತ್ತಜ್ಜ, ಮುಂದೆ ಕೇಳಿದರೆ ನಮಗೆ ಗೊತ್ತಿರುವದಿಲ್ಲ. ಆದರೆ ಈ ಹೆಳವರಲ್ಲಿ ನಮ್ಮ ಮನೆತನದ 10-11 ತಲೆಮಾರಿನ ವಂಶಾವಳಿಯ ಮಾಹಿತಿ, ಹೊತ್ತಿಗೆಯಲ್ಲಿ ದೊರೆಯುತ್ತದೆ.ಈ ಹೊತ್ತಿಗೆ ಹಿಡಿದು ಊರೂರು ಅಲೆಯುತ್ತಾ “ಒಂದ ಆಕಳಾ ಹೊಡಿಯ ನನ್ನವ್ವ, ನಿನ ಒಂದ ಸೀರಿ ಕೊಡಾ ತಾಯವ್ವ, ನಾಕು ಸೇರು ಜ್ವಾಳ ಹಾಕ ನಮ್ಮವ್ವ” ಎಂದು ಕೇಳುತ್ತಾ ಊರೂರು ಅಲೆಯುತ್ತಾ ಜೀವನ ನಡೆಸುವ ಕಾಣಿಕೆ ಪಡೆಯುವಿ ಹಾಡು :“ತೂಗು ತೊಟ್ಟಿಲಾಗಲಿ, ಬೆಳ್ಳಿ ಬಟ್ಟಲಾಗಲಿ, ಮನೆಯ ಸಿರಿಸಂಪತ್ತ ಬೆಳೆಯಲಿ, ಯವ್ವಾ, ನೀನು ಕೊಡುವ ಬಗಸಿ ಜೋಳ ಬ್ಯಾಡ. ಕಟ್ಟಿಮ್ಯಾಗಿನ ಜೋಳದ ಚೀಲ ಬಿಚ್ಚಿ ಜೋಳಿಗೆ ತುಂಬಾ ಕೊಡು. ಹಕ್ಕ್ಕಾಗಿನ ಆಕಳ ಮತ್ತು ಕರು ಕೊಡು, ಎಂದು ಹಾಡುತ್ತಾ, ಕಾಡುತ್ತಾ ‘ಕುಟುಂಬದ ವಂಶವ

ಸುಂಕನೂರು ಕ್ಯಾಂಪ್ : ನೂತನ ಗ್ರಾಮ ಘಟಕ ಪದಾಧಿಕಾರಿಗಳ ನೇಮಕ

ಇಮೇಜ್
  ಮಸ್ಕಿ : ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೂತನ ಗ್ರಾಮ ಘಟಕದ ಪದಾಧಿಕಾರಿಗಳನ್ನು ಅನಿತಾ ಬಸವರಾಜ್ ಮಂತ್ರಿ ಇವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಶನಿವಾರ ಮಸ್ಕಿ ತಾಲೂಕಿನ ಹೀರೆ ದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕನೂರು ಕ್ಯಾಂಪ್ ಗ್ರಾಮದ ಗ್ರಾಮ ಘಟಕವನ್ನು ಉದ್ಘಾಟಿಸಿ ನಂತರ ಜಿಲ್ಲಾ ಅಧ್ಯಕ್ಷರಾದ ಅನಿತಾ ಬಸವರಾಜ್ ಮಂತ್ರಿ ರವರ ಮುಂದಾಳತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಈ ಕೆಳಗೆ ತಿಳಿಸಿರುವಂತೆ ಆಯ್ಕೆ ಮಾಡಲಾಯಿತು. ಹನುಮಂತ ಅಧ್ಯಕ್ಷರು ಸುಂಕನೂರು ಕ್ಯಾಂಪ್, ಗೌರವಾಧ್ಯಕ್ಷರನ್ನಾಗಿ ಕರಿಯಪ್ಪ ಮರಕಮದಿನ್ನಿ, ಬಸವಲಿಂಗಪ್ಪಸುಂಕನೂರು ಕ್ಯಾಂಪ್ ,ಉಪಾಧ್ಯಕ್ಷರನ್ನಾಗಿ ರಮೇಶ್ ಮರಕಮ ದಿನ್ನಿ, ಮಣ್ಣ ಬಸಪ್ಪ ಸುಂಕನೂರು ಕ್ಯಾಂಪ್, ಬಾಲಪ್ಪ ಕಾರ್ಯದರ್ಶಿ ಮರಕಮ ದಿನ್ನಿ,ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಸುಂಕನೂರು ಕ್ಯಾಂಪ್,ರುದ್ರಯ್ಯ ಸ್ವಾಮಿ ಖಜಾಂಚಿ,ಸದಸ್ಯರುಗಳಾದ ಮೌನೇಶ್ ಸುಂಕನೂರು,ಅಮರೇಶ್,ಬಸವರಾಜ್,ರಂಗಪ್ಪ,ದೇವಪ್ಪ, ದೇವಣ್ಣ,ದೇವಣ್ಣ, ಬಿ.ಶ್ರೀನಿವಾಸ ಇವರನ್ನು ಸಂಘದ ಒಮ್ಮತದಿಂದ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬಸವರಾಜ್ ಕೆ.ವೈ ಜಿಲ್ಲಾಧ್ಯಕ್ಷರು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ, ವೀರೇಶ್ ನಾಯಕ ಜಿಲ್ಲಾ ಗೌರವ ಅಧ್ಯಕ್ಷರು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಹೊಳೆಯಪ್ಪ ಉಟಕನೂರು ತಾಲೂಕಾಧ್ಯಕ್ಷರು,ರವಿಕುಮಾರ್ ಸದಸ್ಯರು, ಮರಿಬಸವ ಸದಸ್ಯರು,ಬಸವಲಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿ

ಸಿಜೆ ಮತ್ತು ಜೆಎಂಎಫ್ ಸಿ, ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪಿಸಲು : ಎನ್ ಟಿ ಶ್ರೀನಿವಾಸ್ ಶಾಸಕರಿಗೆ ಮನವಿ

ಇಮೇಜ್
  ಕೊಟ್ಟೂರು : ತಾಲೂಕು ವಕೀಲರ ನ್ಯಾಯಾಲಯ ಹೋರಾಟ ಸಮಿತಿ ಪದಾಧಿಕಾರಿಗಳು ಕೊಟ್ಟೂರು ಪಟ್ಟಣದಲ್ಲಿ ಸಿಜೆ ಮತ್ತು ಜೆಎಂಎಫ್ ಸಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪಿಸಲು ಸರ್ಕಾರದ ಕಾನೂನು ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಗೆ ಬುಧವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ವಕೀಲರ ನ್ಯಾಯಾಲಯ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಎಂ.ಗುರುಸಿದ್ದನ ಗೌಡ ಮಾತನಾಡಿ, ಕೊಟ್ಟೂರು ತಾಲೂಕು ಹಿಂದುಳಿದ ಮತ್ತು 60 ಕ್ಕಿಂತ ಹೆಚ್ಚು ಹಳ್ಳಿಗಳ ಒಳಗೊಂಡ ತಾಲೂಕಾಗಿದೆ. ಕೊಟ್ಟೂರು ತಾಲೂಕು ರಚನೆಯಾಗಿ ಈಗಾಗಲೇ 7 ವರ್ಷಗಳಾಗಿದ್ದು, ಕೊಟ್ಟೂರು ತಾಲೂಕಿನಲ್ಲಿ ಈಗಾಗಲೇ ಸುಮಾರು 2,500 ಪ್ರಕರಣಗಳು ಕೂಡ್ಲಿಗಿ ನ್ಯಾಯಾಲಯದಲ್ಲಿವೆ. ಅಲ್ಲದೆ ಅಂದಾಜು 80 ಕ್ಕೂ ಹೆಚ್ಚು ವಕೀಲರು ಕೊಟ್ಟೂರಿನಲ್ಲಿ ಇದ್ದು, ನಿತ್ಯವು ಕೂಡ್ಲಿಗಿ ನ್ಯಾಯಾಲಯಕ್ಕೆ ಹೋಗಿ ಬರಬೇಕಾದ ಅನಿವಾರ್ಯತೆ ಇದೆ. ಅದರ ಜತೆ ಕಕ್ಷಿದಾರು ವೃತಾ ಅಲೆದಾಡುವ ಸ್ಥಿತಿ ಇದೆ. ಈ ಬಗ್ಗೆ ಹಲವಾರು ಬಾರಿ ಮನವಿಗಳನ್ನು ನೀಡಿದ್ದೇವೆ. ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳು ಉಚ್ಚ ನ್ಯಾಯಾಲಯ ಬೆಂಗಳೂರು ಇವರಿಗೂ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿ ಒಪ್ಪಿಗೆಯ ಭರವಸೆ ನೀಡಿದ್ದರು. ಈಗಾಗಲೇ ಕೂಡ್ಲಿಗಿ ನ್ಯಾಯಾಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದರಿಂದ ಸದರಿ ಪ್ರಕರಣಗಳನ್ನು ಇತ್ಯರ