ಗಾಳಿ ಮಳೆಯ ಅವಾಂತರ ಕೊಟ್ಟೂರಿನ ಜನ ಜೀವನ ಅಸ್ತವ್ಯಸ್ತ
ಕೊಟ್ಟೂರು : ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಮತ್ತೆ ವರುಣನ ಅಬ್ಬರ ಗಾಳಿ ಮಳೆಯ ಅವಾಂತರ ದಿಂದ ಸಾರ್ವಜನಿಕ ಗ್ರಂಥಾಲಯದ ಮುಂಭಾಗದಲ್ಲಿರುವ ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಮತ್ತು ಕುಡಿಯುವ ನೀರಿನ ಘಟಕದ ಬಳಿ ದೊಡ್ಡ ಮರವು ಬಿದ್ದಿದೆ.ಯಾವುದೇ ಅಪಾಯವಾಗಿಲ್ಲ. ಸಮುದಾಯ ಆರೋಗ್ಯ ಕೇಂದ್ರ ದಲ್ಲಿಯೂ ಮಳೆ ನೀರು ನುಗ್ಗಿದ್ದರಿಂದ ಚಿಕಿತ್ಸೆಗೆ ಬಂದಿದ್ದ ಜನತೆಗೆ ತೊಂದರೆ ಉಂಟಾಯಿತು. ಗಾಳಿಯ ಹೊಡೆತಕ್ಕೆ ಕೆಲವು ಕಡೆ ಮರಗಳು ವಿದ್ಯುತ್ ಕಂಬಗಳು ತಂತಿಗಳು ಉರುಳಿದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿರುವುದು ಬಿಟ್ಟರೆ ಇತರ ದೊಡ್ಡ ಅನಾಹುತ ಸಂಭವಿಸಿಲ್ಲ. ಈ ಸಂಬಂಧಪಟ್ಟ ಇಲಾಖೆಗಳು ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಜರೂರಾಗಿ ಗಾಳಿ ಮಳೆಗೆ ಧರೆಗೆ ಉರುಳಿರುವ ಮರಗಳು, ರಸ್ತೆ ಸಂಚಾರ, ವಿದ್ಯುತ್ ಕಂಬಗಳು, ವಿದ್ಯುತ್ ವ್ಯತ್ಯಯವನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್, ಪ್ರವೀಣ್, ಕೊಟ್ರೇಶ್,ಕೋರಿದರು.