ಪೋಸ್ಟ್‌ಗಳು

ಮಸ್ಕಿ ತಾಪಂ ಸ್ವೀಪ್‌ ಸಮಿತಿಯಿಂದ ಕಾರ್ಯಕ್ರಮ ಶಾಲಾ ವಿದ್ಯಾರ್ಥಿಗಳು ಭಾಗಿ

ಇಮೇಜ್
ಮಸ್ಕಿ : ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತಿಯ ಮುಂದೆ ಶನಿವಾರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸ್ವೀಪ್‌ ಕಾರ್ಯಕ್ರಮದಡಿ ರಂಗೋಲಿ ಸ್ಪರ್ಧೆ ಜರುಗಿತು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಮ್ಮನಗೌಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಕಾರ್ಯವಾಗಿದ್ದು, ಅರ್ಹ ಮತದಾರರು ಸಂವಿಧಾನದತ್ತವಾಗಿರುವ ಹಕ್ಕನ್ನು ಚಲಾಯಿಸಬೇಕು. ಜನ ಸಾಮಾನ್ಯರಲ್ಲಿ ಮತದಾನ ದ ಮಹತ್ವ ತಿಳಿಸಲು ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಅದೇ ರೀತಿ ಗ್ರಾ.ಪಂ ಯಲ್ಲಿ ಪ್ರತಿ ನಿತ್ಯ ಸ್ವಚ್ಛ ವಾಹಿನಿ ಮೂಲಕ ಕಸ ಸಂಗ್ರಹಿಸುವುದರ ಜೊತೆಗೆ ಸ್ಥಳೀಯರಿಂದ ಸಹಿ ಪಡೆದು, ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಸ್ಥಳೀಯ ಒಕ್ಕೂಟದ ಸದಸ್ಯರು ಮತದಾನದ ಮಹತ್ವ ವಿವರಿಸುವ ರಂಗೋಲಿ ಬಿಡಿಸಿ ಗಮನ ಸೆಳೆದರು. ಇದೇ ವೇಳೆ ಕಡ್ಡಾಯವಾಗಿ ನಾನು ಮತದಾನ ಮಾಡುವೆ ಎಂಬ ವಾಗ್ದಾನದೊಂದಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ಶಾಲೆ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಪತ್ರ ಬರೆಯುವ ಮೂಲಕ ಮತದಾನಕ್ಕೆ ಕರೆ ನೀಡಿದರು.  ಸ್ಥಳೀಯ ಶ್ರೀರಾಮ್‌ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷೆ ಆದಮ್ಮ, ಎನ್‌ ಆರ್‌ಎಲ್‌ ಎಂ ವಲಯ ಮೇಲ್ವಿಚಾರಕರಾದ ಪ್ರಕಾಶ್, ಐಇಸಿ ಸಂಯೋಜಕರಾದ ಸತೀಶ್‌, ಬಿಲ್ ಕಲೆಕ್ಟರ್ ಮೌನೇಶ್‌, ಕಾರ್ಯದರ್ಶಿ ಸೋಮಣ್ಣ, ಆಯುಷ್‌ ಇಲಾಖೆ ಅಧಿಕಾರಿಗಳು

ದಾರಿಯ ಮೆಟ್ಲಿಂಗ್ ದುರಸ್ತಿ ಕಳಪೆ.ಬಿಲ್ ತಡೆ ಹಿಡಿಯಲು ಇಓ ಗೆ ಮನವಿ

ಇಮೇಜ್
ಮಸ್ಕಿ : ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕಾಟಗಲ್ ಗ್ರಾಮದ ರೈತರು ಹೊಲಕ್ಕೆ ಹೊಗುವ ದಾರಿಯ ಮೆಟ್ಲಿಂಗ್ ಅನ್ನು ಸರಿಯಾಗಿ ಮಾಡದೆ ಕಳಪೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ರಸ್ತೆ ಕಾಮಗಾರಿಗೆಗೆ ಮಣ್ಣು ಹಾಗೂ ಕಂಕರ್ ಸರಿಯಾಗಿ ಹಾಕದೇ ಬೇಕಾ ಬಿಟ್ಟಿಯಾಗಿ ಮಾಡಿ ರೈತರ ಹೊಲಗಳಿಗೆ ದಾರಿಯನ್ನು ಬಿಡದೆ ರಸ್ತೆಯನ್ನು ಮಾಡಿದ್ದಾರೆ ಅಷ್ಟೇ ಅಲ್ಲದೆ ಚೆನ್ನಾಗಿರುವ ರಸ್ತೆಯನ್ನು ಸುಮ್ಮನೆ ತೆಗೆದು ನಾಮಕಾವಸ್ಥೆಗೆ ದಾರಿಯಮೇಲೆ ಅಲ್ಪಸ್ವಲ್ಪ ಮಣ್ಣನ್ನು ಹಾಕಿ ಬೋಗಸ್ ಬಿಲ್ ಅನ್ನು ಎತ್ತಲು  ರಸ್ತೆಯನ್ನು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಅವರ ಬಿಲ್ ನ್ನು ತಡೆದು ಪುನಃ ಗುಣಮಟ್ಟದ ರಸ್ತೆ ಯನ್ನು ಮಾಡಬೇಕು ಎಂದು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಂಜುನಾಥ,ಲಿಂಗಣ್ಣ, ಸಾಮಯ್ಯ, ಶರಣಬಸವ, ಶೇಖರಪ್ಪ,ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮತದಾನದ ಸಲುವಾಗಿ ಗುಳೆ ಹೊದ ಪಾಲಕರಿಗೆ ಶಾಲಾ ವಿದ್ಯಾರ್ಥಿಗಳಿಂದ ಪಾಲಕರಿಗೆ ಭಾವನಾತ್ಮಕ ಪತ್ರ.

ಇಮೇಜ್
ಮಸ್ಕಿ : ತಾಲೂಕಿನ ಉದ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಪತ್ರ ಬರೆಯುವ ಮೂಲಕ ಮತದಾನದ ಮಹತ್ವ ತಿಳಿಸಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಮಾತನಾಡಿ, ಶ್ರೀ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ವಿನೂತನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಅದೇ ರೀತಿ ವಿದ್ಯಾರ್ಥಿಗಳಿಂದ ಪಾಲಕರಿಗೆ ಪತ್ರ ಬರೆಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ತದ ನಂತರ ನರೇಗಾ ಯೋಜನೆಯ ಮಹತ್ವ ತಿಳಿಸುವ ವಲಸೆ ಯಾಕ್ರಿ? ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನದಡಿ ಸ್ಥಳೀಯ ಕೂಲಿಕಾರರಿಂದ ಕೆಲಸದ ಬೇಡಿಕೆ ಸ್ವೀಕರಿಸಲಾಯಿತು.  ಗ್ರಾಪಂ ಮುಂದೆ ರಂಗೋಲಿ ಸ್ಪರ್ಧೆ ಜರುಗಿತು. ಈ ವೇಳೆ ಎನ್ಆರ್ ಎಲ್ಎಂ ತಾಲೂಕು ವ್ಯವಸ್ಥಾಪಕರಾದ ಮೌನೇಶ್, ವಲಯ ಮೇಲ್ವಿಚಾರಕರಾದ ಪ್ರಕಾಶ್, ಎಲ್ಸಿಆರ್ಪಿ ರೇಣುಕಮ್ಮ, ಎಂಬಿಕೆ ಸತ್ಯವೇಣಿ, ಕೃಷಿ ಸಖಿ ಪವಿತ್ರಾ, ಶ್ರೀ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಶಂಕರಮ್ಮ, ಬಿಆರ್ಪಿ ಭವಾನಿ, ಶ್ರೀದೇವಿ ಇತರರಿದ್ದರು.

ಹೋರಾಟಕ್ಕೆ ಸ್ಪಂದಿಸಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಂದು ಸಭೆ

ಇಮೇಜ್
ಸಿಂಧನೂರು : ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯದ ಕಾರ್ಮಿಕ ಸಿಬ್ಬಂದಿಗಳ ಬಾಕಿ ವೇತನ ಪಾವತಿಗಾಗಿ ನಿನ್ನೆಯ ದಿನ ಮಹಾಶಕ್ತಿ ಮಹಿಳಾ ಸಂಘಟನೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಜಂಟಿಯಾಗಿ ಪ್ರತಿಭಟನೆ ಮಾಡಿ ಸಮಾಜ ಇಲ್ಯಾಣ ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರ ಭಾಗವಾಗಿ ಇಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ನೆನ್ನೆಯ ಹೋರಾಟದ ವಿಷಯದ ಭಾಗವಾಗಿ ಇಂದು ಸಿಂಧನೂರಿನ ಗಂಗಾವತಿ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸಭೆ ಏರ್ಪಡಿಸಿದರು. ಪ್ರಾಸ್ತಾವಿಕವಾಗಿ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಮತಿ ವಿಜಯರಾಣಿ ಅವರು ಮಾತನಾಡಿ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಬಾಕಿ ವೇತನವು 11 ತಿಂಗಳು ಹಾಗೂ ಕೆಲವು 09 ತಿಂಗಳು ಬಾಕಿ ವೇತನವು ಪಾವತಿ ಮಾಡುವಲ್ಲಿ ತಮ್ಮ ಇಲಾಖೆ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು. ಹಾಗೆಯೇ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಮೌನೇಶ ಜಾಲವಾಡಗಿ ಮಾತನಾಡಿ ವಸತಿ ನಿಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ತಮ್ಮ ಇಲಾಖೆ ಕೈಗೊಂಡಿರುವ ಕ್ರಮಗಳೇನು ಹಾಗೂ ಪಿಎಫ್ ಹಾಗೂ ಇಎಸ್ಐ ಸೌಲಭ್ಯಗಳನ್ನು ಒದಗಿಸಲು ಕಾರ್ಮಿಕರಿಗೆ ತಮ್ಮ ಇಲಾಖೆಯು ಕೈಗೊಂಡ ಸಂಪೂರ್ಣ ನಿಯಮಾವಳಿಗಳನ್ನು ಮತ್ತು ಕ್ರಮಗಳನ್ನು ವಿವರಿಸಬೇಕೆಂದರು. ನಂತರದಲ್ಲಿ ಮುಖಂಡರ ಪ್ರಶ್ನೆಗೆ ಉತ್ತರಿಸ

ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸಲು, ಸಾಮೂಹಿಕ ಸಂಘಟನೆಗಳಿಂದ ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಮನವಿ

ಇಮೇಜ್
ಕೊಟ್ಟೂರು: ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಕೃತ್ಯಗಳನ್ನು ಬಯಲಿಗೆಳೆದು, ವರದಿ ಮಾಡಿ ಸಮಾಜವನ್ನು ಎಚ್ಚರಗೊಳಿಸುತ್ತಿರುವ ಪತ್ರಕರ್ತರ ಮೇಲೆ ಸುಳ್ಳು ಆರೋಪ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಹಾಗೂ ಪತ್ರಕರ್ತರಿಗೆ ಜೀವ ಬೆದರಿಕೆ ಇದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗುರುವಾರ ಸಾಮೂಹಿಕ ಸಂಘಟನೆಗಳ ಪದಾಧಿಕಾರಿಗಳು ಪೊಲೀಸ್ ಉಪ ಆರಕ್ಷಕರಿಗೆ ಮನವಿ ಸಲ್ಲಿಸಿದರು.  ಕೊಟ್ಟೂರಿನಲ್ಲಿ ಇತ್ತೀಚೆಗೆ ದೋ ನಂಬರ್ ವ್ಯವಹಾರ, ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ಆಡುವವರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದ್ದು, ಈ ಬಗ್ಗೆ ದಾಖಲೆಗಳ ಸಮೇತ ಪತ್ರಿಕೆಯಲ್ಲಿ ಕೊಟ್ಟೂರು ಪತ್ರಕರ್ತರು ಯಾವುದೇ ಮುಲಾಜಿಲ್ಲದೇ, ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ವಸ್ತುನಿಷ್ಠವಾಗಿ ವರದಿ ಮಾಡಿ, ತಪ್ಪಿತಸ್ಥರನ್ನು ಬಯಲಿಗೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇಂತಹ ದುಷ್ಕೃತ್ಯಗಳಲ್ಲಿ ತೊಡಗಿರುವವರು ತಮ್ಮ ಹೆಸರನ್ನು ಬಹಿರಂಗಗೊಳಿಸಿ ನಮಗೆ ಕುತ್ತು ತರುತ್ತಿದ್ದಾರೆ ಎಂಬ ಭೀತಿಯಿಂದ ಪತ್ರಕರ್ತರ ಮೇಲೆ ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಹೊರಿಸಿ ಜೀವ ಬೆದರಿಕೆ ಒಡ್ಡುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಆದ್ದರಿಂದ ಪತ್ರಕರ್ತರಿಗೆ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ಹಾಗೂ ಇಂತಹ ಸುಳ್ಳು ಆರೋಪಗಳನ್ನು ಹೊರಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟೂರು ಸಿಪಿ

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಇಮೇಜ್
"ಕ್ರಿಕೆಟ್ ಬೆಟ್ಟಿಂಗ್ ದಂಧೆ ಕಿಂಗ್ ಪಿನ್ ಅಟವಾಳಿಗಿ ಸಂತೋಷ್" *ವರದಿ ಫಲಶೃತಿ ನಮ್ಮ ಪ್ರಜಾ ಸಾಕ್ಷಿ ವರದಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ * ಕೊಟ್ಟೂರು ತಾಲ್ಲೂಕು ವ್ಯಾಪ್ತಿಯಲ್ಲಿ ಇತ್ತೀಚೆಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಿಪರೀತವಾಗಿ ಹೆಚ್ಚಾಗಿದ್ದು, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಎಲ್ ಹರಿಬಾಬು ಹಾಗೂ ಕೂಡ್ಲಿಗಿ ಡಿವೈಎಸ್ಪಿ ಆದೇಶದ ಮೇರೆಗೆ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರನ್ನು ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಶಿಂಧೆ ರವರು ಹಲವು ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ದಂಧೆಕೋರರ ಮೇಲೆ, ಮಾಹಿತಿ ಮೇರೆಗೆ ಕ್ರೈಂ ನಂಬರ್ 0054/2024 ಪ್ರಕರಣ ದಾಖಲು ಮಾಡಿ, ದಂಧೆಕೋರರ ಎಡೆಮುರಿ ಕಟ್ಟಿದ್ದಾರೆ.  "ಕ್ರಿಕೆಟ್ ಬೆಟ್ಟಿಂಗ್ ದಂಧೆ ಕಿಂಗ್ ಪಿನ್ ಅಟವಾಳಿಗಿ ಜಗದೀಶ್ " ಕೊಟ್ಟೂರು ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‌ಪಿನ್ ಆಗಿ ಹಲವು ವರ್ಷಗಳಿಂದ ಮೆರೆಯುತ್ತಾ, ರಾಜಕೀಯ ಪ್ರಭಾವಿ ವ್ಯಕ್ತಿಗಳ ಪ್ರಭಾವವನ್ನು ಬಳಸಿಕೊಂಡು ನುಣುಚಿಕೊಳ್ಳುತ್ತಿದ್ದರು. ಖಡಕ್ ಅಧಿಕಾರಿಗಳ ನೇತೃತ್ವದಲ್ಲಿ ಎ7 ಅಟವಾಳಗಿ ಸಂತೋಷ್, ಎ8 ಅಟವಾಳಗಿ ಜಗದೀಶ್ ಇವರ  ವಿರುದ್ಧ  ಪ್ರಕರಣ ದಾಖಲಿಸಿ, ಕ್ರಮ ಕೈಗೊಂಡಿರುವುದು ಸಾರ್ವಜನಿಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಯುವಕರು ತಮ್ಮ ಮನೆಯ ಪರಿಸ್ಥಿತಿಗಳನ್ನು ಲೆಕ್ಕಿಸದೇ ಹಣ ಕಟ್ಟಿ ತಮ್ಮ ಜೀವನ ಮತ್ತು ಅವರ ಮನೆಯ ವಾತಾವ

ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ 51 ಜೋಡಿ ಸಾಮೂಹಿಕ ವಿವಾಹ,

ಇಮೇಜ್
ಮೇ 10 ರಂದು ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಉಚಿತ ಸಾಮೂಹಿಕ ವಿವಾಹ ಸಿಂಧನೂರು ನಗರದ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ದಲಿತ ಸಂಘಟನೆ ಸಮಿತಿ ಭೀಮ ಘರ್ಜನೆ ಜಿಲ್ಲಾ ಸಮಿತಿ ವತಿಯಿಂದ ಮೇ 10 ರಂದು ಉಚಿತ ಸಾಮೂಹಿಕ ವಿವಾಹ. ಸಿಂಧನೂರು: ಭಗವಾನ್ ಬುದ್ಧ , ವಿಶ್ವಗುರು ಬಸವಶ್ವರ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ದಲಿತ ಸಂಘಟನೆ ಸಮಿತಿ ಭೀಮ್ ಘರ್ಜನೆ ಜಿಲ್ಲಾ ಸಮಿತಿ ವತಿಯಿಂದ 51 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪಾನಾಳ ಹೇಳಿದರು. ಹೌದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಲಘು ಮೋಟರ್ ವಾಹನ ಚಾಲಕರ ಸಂಘದ ಕಚೇರಿ ಪಕ್ಕದ ದಲಿತಪರ ಸಂಘಟನೆ ಕಾರ್ಯಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಇಂದಿನ ದಿನಮಾನಗಳಲ್ಲಿ ಮದುವೆ ಕಾರ್ಯಕ್ರಮಗಳಿಗೆ ಹೆಚ್ಚಿನ ರೀತಿಯಲ್ಲಿ ದುಂದು ವೆಚ್ಚ ಮಾಡಲಾಗುತ್ತಿದ್ದು ಇದರಿಂದ ತಮ್ಮ ಮಕ್ಕಳಿಗೆ ಮದುವೆ ಮಾಡಿಸುವಂತ ನಾಗರಿಕರಿಗೆ ಕಷ್ಟಕರವಾಗುತ್ತಿದ್ದು ಇದನ್ನು ಅರಿತು ನಮ್ಮ ಸಂಘಟನೆ ವತಿಯಿಂದ ಭಗವಾನ್ ಬುದ್ಧ ಗುರು ಬಸವೇಶ್ವರ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿಯ ಅಂಗವಾಗಿ 51 ಜೋಡಿಗಳಿಗೆ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು ಈ ಸಮೂಯಕ ವಿವಾಹ ಕಾರ್ಯಕ್ರಮವನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು ಈಗಾಗಲೇ ಹಲವಾರು ಜನರು ನೋಂದಣಿ ಮಾಡಿಕೊಂಡಿದ್ದು ಏಪ್ರಿಲ್ 30ರ ದಿನಾಂಕದ ವರಿಗೂ ನೋಂ