ದಾರಿಯ ಮೆಟ್ಲಿಂಗ್ ದುರಸ್ತಿ ಕಳಪೆ.ಬಿಲ್ ತಡೆ ಹಿಡಿಯಲು ಇಓ ಗೆ ಮನವಿ













ಮಸ್ಕಿ : ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ

ಕಾಟಗಲ್ ಗ್ರಾಮದ ರೈತರು ಹೊಲಕ್ಕೆ ಹೊಗುವ ದಾರಿಯ ಮೆಟ್ಲಿಂಗ್ ಅನ್ನು ಸರಿಯಾಗಿ ಮಾಡದೆ ಕಳಪೆಯಾಗಿದೆ

ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ರಸ್ತೆ ಕಾಮಗಾರಿಗೆಗೆ ಮಣ್ಣು ಹಾಗೂ ಕಂಕರ್ ಸರಿಯಾಗಿ ಹಾಕದೇ ಬೇಕಾ ಬಿಟ್ಟಿಯಾಗಿ ಮಾಡಿ ರೈತರ ಹೊಲಗಳಿಗೆ ದಾರಿಯನ್ನು ಬಿಡದೆ ರಸ್ತೆಯನ್ನು ಮಾಡಿದ್ದಾರೆ ಅಷ್ಟೇ ಅಲ್ಲದೆ ಚೆನ್ನಾಗಿರುವ ರಸ್ತೆಯನ್ನು ಸುಮ್ಮನೆ ತೆಗೆದು ನಾಮಕಾವಸ್ಥೆಗೆ ದಾರಿಯಮೇಲೆ ಅಲ್ಪಸ್ವಲ್ಪ ಮಣ್ಣನ್ನು ಹಾಕಿ ಬೋಗಸ್ ಬಿಲ್ ಅನ್ನು ಎತ್ತಲು 

ರಸ್ತೆಯನ್ನು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಅವರ ಬಿಲ್ ನ್ನು ತಡೆದು ಪುನಃ ಗುಣಮಟ್ಟದ ರಸ್ತೆ ಯನ್ನು ಮಾಡಬೇಕು ಎಂದು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಂಜುನಾಥ,ಲಿಂಗಣ್ಣ, ಸಾಮಯ್ಯ, ಶರಣಬಸವ, ಶೇಖರಪ್ಪ,ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ