ವಿವಿಧ ಬೇಡಿಕೆಗಳಿಗಾಗಿ ಗ್ರಾಮಸ್ಥರು ತಾ. ಪಂ ಇಓ ಅವರಿಗೆ ಮನವಿ
ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಅಂಬೇಡ್ಕರ್ ವಾದ ತಾಲ್ಲೂಕು ಸಂಚಾಲಕರಾದ ಬಸವರಾಜ ಕೋಠಾರಿ ಮಸ್ಕಿ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಂತರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಕಳೆದ ಹಲವಾರು ತಿಂಗಳಿನಿಂದ ಉದ್ಯೋಗ ಖಾತ್ರಿ ಕೆಲಸ ಇಲ್ಲ,ಕುಡಿಯುವ ನೀರಿನ ಸಮಸ್ಯೆ, ದನದ ಶೆಡ್, ಶೌಚಾಲಯ ಫಲಾನುಭವಿಗಳು ಕಟ್ಟಿಸಿದರು ಇನ್ನೂ ಬಿಲ್ ಆಗಿಲ್ಲ ಇನ್ನೂ ಮುಂತಾದ ಮೂಲಭೂತ ಸೌಲಭ್ಯಗಳ ಕುರಿತು ಧರಣಿಯನ್ನು ಮಾಡುತ್ತಿದ್ದೇವೆ ಎಂದು ತಾಲ್ಲೂಕು ಸಂಚಾಲಕರಾದ ಬಸವರಾಜ ಕೋಠಾರಿ ಮಸ್ಕಿ ರವರು ಹೇಳಿದರು. ಸ್ಥಳಕ್ಕೆ ಮಸ್ಕಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ರವರು ಭೇಟಿಮಾಡಿ ಧರಣಿ ನಿರತರ ಸಮಸ್ಯೆಗಳನ್ನು ಪರಿಶೀಲಿಸಿ ಹದಿನೈದು ದಿನಗಳಲ್ಲಿ ಬೇಡಿಕೆಗಳನ್ನು ಪರಿಹರಿಸುತ್ತೇವೆ ಎಂದು ಮನವಿ ಪತ್ರವನ್ನು ಸ್ವೀಕರಿಸಿ ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ರಾಮಣ್ಣ, ಕಾರ್ಯದರ್ಶಿ ಪರಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಚಂದಪ್ಪ ದೊಡ್ಡಮನಿ, ಅಮರೇಶ, ನಿರುಪಾದೆಪ್ಪ,ದಲಿತ ಸಂಘರ್ಷ ಸಂಘದ ಮುಖಂಡರಾದ ಆಬೇಲ್ ರಾಜ,ಬಸವಂತ ಹಿರೇ ಕಡಬೂರು, ಪರಶುರಾಮ ಉಸ್ಕಿಹಾಳ, ನಾಗಪ್ಪ ದಿನಸಮುದ್ರ,ಬಸವರಾಜ ಯದ್ದಲದಿನ್ನಿ, ಬಸವರಾಜ ಮರಕಮದಿನ್ನಿ, ಯಂಕಪ್ಪ ನಾಯಕ,ಮುಪ್ಪಿನಯ್ಯಸ್ವಾಮಿ, ಬಸವ ಹಾಲಾಪೂರ, ಲಕ್ಷ್ಮಣ ಹಾಲಾಪೂರ, ದುರಗಪ್ಪ ಸೇರಿದಂತೆ ಇತರರು ಇದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ