ಮತದಾನದ ಸಲುವಾಗಿ ಗುಳೆ ಹೊದ ಪಾಲಕರಿಗೆ ಶಾಲಾ ವಿದ್ಯಾರ್ಥಿಗಳಿಂದ ಪಾಲಕರಿಗೆ ಭಾವನಾತ್ಮಕ ಪತ್ರ.
ಮಸ್ಕಿ : ತಾಲೂಕಿನ ಉದ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಪತ್ರ ಬರೆಯುವ ಮೂಲಕ ಮತದಾನದ ಮಹತ್ವ ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಮಾತನಾಡಿ, ಶ್ರೀ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ವಿನೂತನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಅದೇ ರೀತಿ ವಿದ್ಯಾರ್ಥಿಗಳಿಂದ ಪಾಲಕರಿಗೆ ಪತ್ರ ಬರೆಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ತದ ನಂತರ ನರೇಗಾ ಯೋಜನೆಯ ಮಹತ್ವ ತಿಳಿಸುವ ವಲಸೆ ಯಾಕ್ರಿ? ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನದಡಿ ಸ್ಥಳೀಯ ಕೂಲಿಕಾರರಿಂದ ಕೆಲಸದ ಬೇಡಿಕೆ ಸ್ವೀಕರಿಸಲಾಯಿತು.
ಗ್ರಾಪಂ ಮುಂದೆ ರಂಗೋಲಿ ಸ್ಪರ್ಧೆ ಜರುಗಿತು. ಈ ವೇಳೆ ಎನ್ಆರ್ ಎಲ್ಎಂ ತಾಲೂಕು ವ್ಯವಸ್ಥಾಪಕರಾದ ಮೌನೇಶ್, ವಲಯ ಮೇಲ್ವಿಚಾರಕರಾದ ಪ್ರಕಾಶ್, ಎಲ್ಸಿಆರ್ಪಿ ರೇಣುಕಮ್ಮ, ಎಂಬಿಕೆ ಸತ್ಯವೇಣಿ, ಕೃಷಿ ಸಖಿ ಪವಿತ್ರಾ, ಶ್ರೀ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಶಂಕರಮ್ಮ, ಬಿಆರ್ಪಿ ಭವಾನಿ, ಶ್ರೀದೇವಿ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ