ಪೆನ್ ಡ್ರೈವ್ ಪ್ರಕರಣ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಒತ್ತಾಯ
ಕೊಟ್ಟೂರು : ಹಾಸನದ ಪೆನ್ ಡ್ರೈವ್ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಆಗ್ರಹಿಸಿದ್ದಾರೆ.
ಎರಡು ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಕಾಮಕಾಂಡದಲ್ಲಿ ತೊಡಗಿ ವೀಡಿಯೊಗಳನ್ನು ಪೆನ್‌ಡೈವ್‌ಗಳ ಮೂಲಕ ಹಾಸನದ ಹಾದಿ ಬೀದಿಗಳಲ್ಲಿ ಚೆಲ್ಲಾಡಿರುವುದು ರಾಜ್ಯದಲ್ಲಿ ತಲ್ಲಣ ಉಂಟು ಮಾಡಿದೆ. ಈ ಭೀಕರ ಘಟನೆಯಲ್ಲಿ ತೊಡಗಿದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು'
ವಿಕೃತ ಮನಸ್ಥಿತಿ: ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಹೆಣ್ಣು ಮಕ್ಕಳ ವಿಚಾರದಲ್ಲಿ ಈ ರೀತಿಯಲ್ಲಿ ನಡೆದುಕೊಳ್ಳುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದು ಸಂಸದ ಪ್ರಜ್ವಲ್ ರೇವಣ್ಣನ ವಿಕೃತ ಕಾಮದ ಮನಸ್ಥಿತಿ. ಈ ಘಟನೆಯಿಂದ ಸಂತ್ರಸ್ತ ಮಹಿಳೆಯರು ಸಮಾಜದಲ್ಲಿ ಮುಖ ತೋರಿಸುವುದಕ್ಕೆ ಆಗದೇ, ಆತ್ಮಹತ್ಯೆಗೆ ಒಳಗಾಗುತ್ತಾರೆ. ಅನೇಕರು ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಕ್ಕಳ ಭವಿಷ್ಯದ ಸ್ಥಿತಿ ಸರಳವಾಗಿಲ್ಲ. ಸಂತ್ರಸ್ತರಿಗೆ ಯಾವ ಘಳಿಗೆಯಲ್ಲಿ ಏನು ಆಗುತ್ತೋ ಎನ್ನುವ ಆತಂಕ ಕಾಡುತ್ತಿದೆ. ಸಂತ್ರಸ್ತೆಯರಿಗೆ ಮನೆಗಳಲ್ಲಿಯೂಯಯ ಸಿಕ್ಕಿರುವುದಿಲ್ಲ. ಹಾಗೂ ಮಹಿಳಾ ಸಂಘಟನೆಗಳು ಸಂತ್ರಸ್ತೆಯರಿಗೆ ಧೈರ್ಯ ತುಂಬಿ, ಸಂಕಟದಿಂದ ಹೊರಗೆ ತರಬೇಕು ಮತ್ತು ಪೋಷಕರಿಗೂ ಧೈರ್ಯ ತುಂಬಬೇಕು ಎಂದು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಪತ್ರಿಕೆಗೆ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ