ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ 51 ಜೋಡಿ ಸಾಮೂಹಿಕ ವಿವಾಹ,
ಮೇ 10 ರಂದು ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಉಚಿತ ಸಾಮೂಹಿಕ ವಿವಾಹ
ಸಿಂಧನೂರು ನಗರದ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ದಲಿತ ಸಂಘಟನೆ ಸಮಿತಿ ಭೀಮ ಘರ್ಜನೆ ಜಿಲ್ಲಾ ಸಮಿತಿ ವತಿಯಿಂದ ಮೇ 10 ರಂದು ಉಚಿತ ಸಾಮೂಹಿಕ ವಿವಾಹ.
ಸಿಂಧನೂರು: ಭಗವಾನ್ ಬುದ್ಧ , ವಿಶ್ವಗುರು ಬಸವಶ್ವರ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ದಲಿತ ಸಂಘಟನೆ ಸಮಿತಿ ಭೀಮ್ ಘರ್ಜನೆ ಜಿಲ್ಲಾ ಸಮಿತಿ ವತಿಯಿಂದ 51 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪಾನಾಳ ಹೇಳಿದರು.
ಹೌದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಲಘು ಮೋಟರ್ ವಾಹನ ಚಾಲಕರ ಸಂಘದ ಕಚೇರಿ ಪಕ್ಕದ ದಲಿತಪರ ಸಂಘಟನೆ ಕಾರ್ಯಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಇಂದಿನ ದಿನಮಾನಗಳಲ್ಲಿ ಮದುವೆ ಕಾರ್ಯಕ್ರಮಗಳಿಗೆ ಹೆಚ್ಚಿನ ರೀತಿಯಲ್ಲಿ ದುಂದು ವೆಚ್ಚ ಮಾಡಲಾಗುತ್ತಿದ್ದು ಇದರಿಂದ ತಮ್ಮ ಮಕ್ಕಳಿಗೆ ಮದುವೆ ಮಾಡಿಸುವಂತ ನಾಗರಿಕರಿಗೆ ಕಷ್ಟಕರವಾಗುತ್ತಿದ್ದು ಇದನ್ನು ಅರಿತು ನಮ್ಮ ಸಂಘಟನೆ ವತಿಯಿಂದ ಭಗವಾನ್ ಬುದ್ಧ ಗುರು ಬಸವೇಶ್ವರ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿಯ ಅಂಗವಾಗಿ 51 ಜೋಡಿಗಳಿಗೆ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು ಈ ಸಮೂಯಕ ವಿವಾಹ ಕಾರ್ಯಕ್ರಮವನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು ಈಗಾಗಲೇ ಹಲವಾರು ಜನರು ನೋಂದಣಿ ಮಾಡಿಕೊಂಡಿದ್ದು ಏಪ್ರಿಲ್ 30ರ ದಿನಾಂಕದ ವರಿಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು ಮೇ 10 ರಂದು ಗೋಶಾಲೆ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ಎಂದು ತಿಳಿಸಿ ಕರ ಪತ್ರವನ್ನು ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ ಕಲ್ಬುರ್ಗಿ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರು, ಬಾಲಸ್ವಾಮಿ ತಿಡಿಗೋಳ ಜಿಲ್ಲಾ ಜಿಲ್ಲಾಧ್ಯಕ್ಷರು, ಶಿವರಾಜ್ ಉಪ್ಪಲದೊಡ್ಡಿಜಿಲ್ಲಾ ಗೌರವ್ಯಾದ್ಯಕ್ಷರು, ಯಮನೂರಪ್ಪ ಪರಾಪೂರು, ಜಿಲ್ಲಾ ಕಾರ್ಯಧ್ಯಕ್ಷರು ಸುರೇಶ್ ಎಲೆಕೂಡ್ಲಿಗಿ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಪರಶುರಾಮ ಬನ್ನಿಗಿಡ್ಡ,ತಾಲೂಕ ಅಧ್ಯಕ್ಷರು ದುರುಗೇಶ್ ಕಲಮಂಗಿ, ತಾಲೂಕ ಗೌರವ ಅಧ್ಯಕ್ಷರು ಹುಲುಗಪ್ಪ ಹುಲಿಯಾರ್,ತಾಲೂಕ ಮಹಾ ಪ್ರಧಾನ ಕಾರ್ಯದರ್ಶಿಗುರುನಾಥ ಗದ್ರಟಗಿ,ತಾಲೂಕ ಪ್ರಧಾನ ಕಾರ್ಯದರ್ಶಿಜಂಬಣ್ಣ ಉಪ್ಪಲದೊಡ್ಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ