ಕಾಂಗ್ರೆಸ್ ಪಕ್ಷದ ಸಮಾಲೋಚನಾ ಸಭೆ ಯಶಸ್ವಿ
ವರದಿ ಗ್ಯಾನಪ್ಪ ದೊಡ್ಡಮನಿ
ಮಸ್ಕಿ: ಪಟ್ಟಣದ ಗ್ರೀನ್ ಸಿಟಿಯಲ್ಲಿ ಭಾನುವಾರ ಮಧ್ಯಾಹ್ನ ದಲ್ಲಿ 2024 ರ ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ತ ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಮೊದಲಿಗೆ ವೇದಿಕೆಯ ಗಣ್ಯರಿಂದ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಕುರಿತುಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಪ್ರಾಸ್ತಾವಿಕ ಭಾಷಣವನ್ನು ಸ್ವ - ವಿಸ್ತಾರವಾಗಿ ನಡೆಸಿಕೊಟ್ಟರು.
ಹಂಪನಗೌಡ ಬಾದರ್ಲಿ ಸಿಂಧನೂರು ಶಾಸಕರು ಮಾತನಾಡುತ್ತಾ ದೇಶದಲ್ಲಿ ಅಗರ್ಭ ಶ್ರೀಮಂತರು ಇದ್ದಾರೆ. ಕಪ್ಪು ಹಣ ಗಳಿಸಿಕೊಂಡ ಹಣವನ್ನು ತಂದು ದೇಶದ ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ಅನ್ನು ನಿಮ್ಮ ನಿಮ್ಮ ಖಾತೆಗೆ ಹಾಕುತ್ತೇವೆ ಎಂದರು.
ನಂತರ ಸರ್ಜಿಕಲ್ ಸ್ಟ್ರೈಕ್,ಈಗ ರಾಮ ಮಂದಿರ ಮೇಲೆ ರಾಜಕೀಯ ಮಾಡಲು ಭಾರತೀಯ ಜನತಾ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ.ಕಾಂಗ್ರೇಸ್ ನ 60 ವರ್ಷದ ಆಡಳಿತದ ಸಿದ್ಧಾಂತಕ್ಕೂ,10 ವರ್ಷದ ಬಿಜೆಪಿ ಪಕ್ಷದ ಮೋದಿ ಯವರ ಸಿದ್ಧಾಂತಕ್ಕೂ ಬಹಳ ವ್ಯತ್ಯಾಸವಿದೆ ಆದ್ದರಿಂದ ಇದನ್ನು ಮನಗಂಡು ತಾವೆಲ್ಲ ಯೋಜನೆಯಡಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಆಯ್ಕೆ ಮಾಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ದಿಂದಲೇ ನಾವು ರಾಜಕೀಯದಲ್ಲಿ ಅಸ್ತಿತ್ವದಲ್ಲಿ ಇರುವುದು. ಸಿದ್ದರಾಮಯ್ಯ ರವರಿಂದಲೆ ನಮ್ಮ ಸರಕಾರ ಗಟ್ಟಿಯಾಗಿದೆ. ತಾವೆಲ್ಲ ಕಾರ್ಯಕರ್ತರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರೆ ನಮ್ಮ ಕೊಪ್ಪಳ ಲೋಕಸಭಾ ಚುನಾವಣೆಯ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ರವರನ್ನು ಗೆಲ್ಲಿಸಿ ತರಬೇಕು ಎಂದರು.
ಭಾರತೀಯ ಜನತೆಯ ಮನದಲ್ಲಿ ದ್ವೇಷದ ರಾಜಕಾರಣ ತುಂಬುದನ್ನು ಹಾಗೂ ಜಾತಿ ಜಾತಿಯ ನಡುವೆ ಜಗಳ ಇಡುವುದನ್ನು ಬಿಟ್ಟರೇ ಬಿಜೆಪಿ ಯವರೂ ದೇಶಕ್ಕೆ ಕೊಟ್ಟ ಕೊಡುಗೆ ಏನು .? ಬೇರೆಯವರ ಬಗ್ಗೆ ಬೇಡ ಈ ವೇದಿಕೆಯ ಮೇಲೆ ನನ್ನನ್ನು ವರುತುಪಡಿಸಿ ಈ ವೇದಿಕೆಯ ಮೇಲೆ ಇರುವ ಎಲ್ಲರೂ ಹಿಂದೂಗಳೇ ಅಲ್ವಾ, ನಾನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರು ಎಸ್ಸಿ ಅಲ್ವಾ,ಶಿವರಾಜ್ ತಂಗಡಗಿ ಭೋವಿ ಸಮುದಾಯಕ್ಕೆ ಸೇರಿದವರು, ಹೀಗೆ ವೇದಿಕೆಯ ಪ್ರಮುಖ ಗಣ್ಯರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರು ಹಾಗಾಗಿ ನಾವು - ನೀವು ಭೇದಭಾವ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ನಾವೆಲ್ಲ ಒಂದೇ ಎಂದು ಒಮ್ಮತದಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡಬೇಕು ಎಂದು ನೂತನ ಕಾಡಾ ಅಧ್ಯಕ್ಷರರಾದ ಹಸನ ಸಾಬ್ ದೋಟಿಹಾಳ ಕರೆ ನೀಡಿದರು.
ಈ ಹಿಂದೆ ನಮ್ಮ ಸರಕಾರಎಐಸಿಸಿ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರ ನೇತೃತ್ವದಲ್ಲಿ ತರಲಾದ 371 (ಜೆ) ಕಾಲಂ ಇಂದು ಮುಂದೆಯೂ ಜಾರಿಯಲ್ಲಿ ಇರಬೇಕೆಂದರೆ ಕಾಂಗ್ರೇಸ್ ಪಕ್ಷದ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆದ ರಾಜಶೇಖರ್ ಹಿಟ್ನಾಳ್ ರವರಿಗೆ ಮತ ನೀಡಿ ಎಂದುಶರಣೇಗೌಡ ಬಯ್ಯಾಪುರ ವಿಧಾನಪರಿಷತ್ ಸದಸ್ಯರು ಕರೆ ನೀಡಿದರು.
2024 ರ ಲೋಕಸಭಾ ಚುನಾವಣೆ ಯು ಸುಳ್ಳು ಮತ್ತು ಸತ್ಯದ ನಡುವೆ ನಡೆಯುತ್ತಿರುವ ಚುನಾವಣೆ ಹಾಗೂ 2014 ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ 3 ತಿಂಗಳಲ್ಲೇ 15 ಲಕ್ಷ ಹಣ ಹಾಕುತ್ತೇವೆ ಹಾಗೂ ನಿರುದ್ಯೋಗ ಯುವಕರಿಗೆ ವರ್ಷಕ್ಕೆ 2 ಕೋಟಿ ಹುದ್ದೆ ನೀಡುತ್ತೇವೆ ಎಂದರು ಇಂದಿಗೆ 10 ವರ್ಷ ಆಡಳಿತದ ಅವದಿಗೆ 20 ಕೋಟಿ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿಯ ಪ್ರಧಾನಿ ಮೋದಿ ಹೇಳಿದ್ದರು ಇವೆಲ್ಲಾ ಈಡೇರಿತೇ..? ದೇಶದಲ್ಲಿ ನೂರು ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುತ್ತೇವೆ ಎಂದರು ಎಲ್ಲಿದೆ 100 ಸ್ಮಾರ್ಟ್ ಸಿಟಿ..?ಮಾತು ಎತ್ತಿದರೆ 3 ಮಂತ್ರ ಇಂಡಿಯಾ - ಪಾಕಿಸ್ತಾನ,
ಹಿಂದೂ - ಮುಸ್ಲಿಂ, ರಾಮ ಮಂದಿರ ಇವುಗಳೇ ಅವರುಗಳ ಅಭಿವೃದ್ದಿ,ಮಾತು ಎತ್ತಿದರೆ ಸಂವಿಧಾನ ಬದಲಾವಣೆ ಮಾಡಲೆಂದೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಅನ್ನುತ್ತಾರೆ ಆದರೆ ಮಾಧ್ಯಮದಲ್ಲೇ ಮಾತ್ರ ಬಿಜೆಪಿ ಪಕ್ಷದ ಹವಾ ಹಳ್ಳಿಗಳಲ್ಲಿ ಮಾತ್ರ ನಮ್ಮ ಕಾಂಗ್ರೇಸ್ ಹವಾ ಎಂದು ಶಿವರಾಜ್ ಎಸ್ ತಂಗಡಗಿ ಹೇಳಿದರು.
ಕೊನೆಯದಾಗಿ 2024 ರ ಕೊಪ್ಪಳ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಮಾತನಾಡಿ ಮಸ್ಕಿ ವಿಧಾನಸಭಾ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರಲ್ಲ ಒಬ್ಬೊಬ್ಬ ಕಾರ್ಯಕರ್ತರು ರಾಜಶೇಖರ್ ಹಿಟ್ನಾಳ್ ಅಭ್ಯರ್ಥಿ ಎಂದೇ ಪ್ರಚಾರ ಮಾಡಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಹೇಳುವ ಮಾತು ಕೇಳಿದರೆ ನೀವೆಲ್ಲ ನನ್ನ ಮತ್ತುವೋಕ್ಷದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಅಭಾರಿಯಾಗಿರುತ್ತೇನೆ ಎಂದರು.
ಕಾರ್ಯಕ್ರಮದ ಕುರಿತು ಆರ್.ಬಸನಗೌಡ ತುರುವಿಹಾಳ, ಎ ವಸಂತ ಕುಮಾರ್ ಕೆಪಿಸಿಸಿ ರಾಜ್ಯ ಕಾರ್ಯಧ್ಯಕ್ಷರು ಮಾತನಾಡಿದರು.
ಕೊನೆಯದಾಗಿ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆದರು.
ಇದೇ ಸಂದರ್ಭದಲ್ಲಿ ರಾಘವೇಂದ್ರ ಹಿಟ್ನಾಳ್ ಶಾಸಕರು ಕೊಪ್ಪಳ,ಶಿವರಾಜ್ ತಂಗಡಗಿ ಸಚಿವರು, ಎ ವಸಂತ ಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷರು ಬೆಂಗಳೂರು, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ಹನುಮಂತಪ್ಪ ಮುದ್ದಾಪುರ, ಹೆಚ್. ಬಿ ಮುರಾರಿ, ಎಂ ಈರಣ್ಣ ಹಾಲುಮತದ ರಾಜ್ಯಾಧ್ಯಕ್ಷರು, ಪಾಮಯ್ಯ ಮುರಾರಿ ಗ್ಯಾರಂಟಿ ಜಿಲ್ಲಾಧ್ಯಕ್ಷರು ರಾಯಚೂರು, ಮೈಬೂಬ್ ಸಾಬ್ ಗ್ಯಾರಂಟಿ ತಾಲೂಕಾ ಅಧ್ಯಕ್ಷರು, ಬೇಗಂ ಮಸ್ಕಿ ಮಹಿಳಾ ಘಟಕದ ಅಧ್ಯಕ್ಷೆ, ಸರಸ್ವತಿ ಪಾಟೀಲ್ ಜಿಲ್ಲಾ ಉಪಾಧ್ಯಕ್ಷರು ಮಹಿಳಾ ಘಟಕ ರಾಯಚೂರು,ರತ್ನಾ ಕಟ್ಟಿಮನಿ ತಾಲೂಕ ಘಟಕದ ಗ್ಯಾರಂಟಿ ಸದಸ್ಯರು, ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ