ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

(ಬಹುತೇಕ ಬಿಜೆಪಿ ಅಂಗಳ ಖಾಲಿ ಖಾಲಿ )

ಮಸ್ಕಿ : ಪಟ್ಟಣದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಸಾಯಂಕಾಲ ಸಂಗಣ್ಣ ಕರಡಿ ಸಂಸದರು, ಶಿವರಾಜ್ ತಂಗಡಗಿ ಸಚಿವರು, ಹಂಪನಗೌಡ ಬಾದರ್ಲಿ ಸಿಂಧನೂರು ಶಾಸಕರು, ಆರ್ ಬಸನಗೌಡ ತುರುವಿ ಹಾಳ ಶಾಸಕರು,

ಹೆಚ್ ಬಿ ಮುರಾರಿ,ಮಲ್ಲಿಕಾರ್ಜುನ್ ಪಾಟೀಲ್ ಯದ್ದಲ ದಿನ್ನಿ, ಸಿದ್ದನಗೌಡ ಮಾಟೂರು ಇವರ ನೇತೃತ್ವದಲ್ಲಿ ಮಸ್ಕಿ ಪಟ್ಟಣದ ಬಿಜೆಪಿ ಮುಖಂಡರಾದ ಅಂದಾನಪ್ಪ ಗುಂಡಳ್ಳಿ,ದೊಡ್ಡಪ್ಪ ಕಡಬೂರು, ಎಂ.ಅಮರೇಶ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಸ್ಕಿ,ಶ್ರೀಶೈಲಪ್ಪ ಸಜ್ಜನ್, ಬಸಪ್ಪ ಬ್ಯಾಳಿ ಮಾಜಿ ಎಪಿಎಂಸಿ ಅಧ್ಯಕ್ಷರು,ಉಮಾಪತಿ ಗೋನಾಳ,ಮಾನಪ್ಪ ಮಟ್ಟೂರು ಇವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆದರು. ಮಸ್ಕಿ ಪಟ್ಟಣದ ಹಿರಿಯ ರಾಜಕೀಯ ಮುಖಂಡರನ್ನೇ ಟಾರ್ಗೆಟ್ ಮಾಡಿ ಸೆಳೆದ ಕಾಂಗ್ರೆಸ್ ಬಹುತೇಕ ಬಿಜೆಪಿ ಅಂಗಳ ಖಾಲಿ ಖಾಲಿ ಬಣಗುಡುತ್ತಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.

ಪಕ್ಷ ಸೇರ್ಪಡೆ ನಂತರ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಜಿಲ್ಲಾಧ್ಯಕರು ಪ್ಯಾಮಯ್ಯ ಮುರಾರಿ,ತಾಲೂಕ ಸಮಿತಿ ಅಧ್ಯಕ್ಷರು ಮೈಬೂಬ್ ಸಾಬ್ ಮುದ್ದಾಪುರ,ಬಸನಗೌಡ ಪಾಟೀಲ್ ಮುದಬಾಳ,ಬಸನಗೌಡ ಪೋಲಿಸ್ ಪಾಟೀಲ್ ಮಸ್ಕಿ,ಮಲ್ಲನಗೌಡ ಸುಂಕನೂರು, ನಿರೂಪಾದೇಪ್ಪ ವಕೀಲರು, ಆನಂದ್ ವೀರಾಪುರ,ಮಲ್ಲಯ್ಯ ಮುರಾರಿ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ