" ಬಿಸಿಲಿನ ತಾಪಕ್ಕೆ ತತ್ತರಿಸಿದ ಬಯಲು ಸೀಮೆಯ ಜನರು "

*ತಂಪು, ಪಾನೀಯ, ಕಲ್ಲಂಗಡಿ ಹಣ್ಣು ,ಹಣ್ಣಿನ ಜ್ಯೂಸ್ ವ್ಯಾಪಾರ ಜೋರು *

ಕೊಟ್ಟೂರು : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ತತ್ತರಿಸಿರುವ ಕೊಟ್ಟೂರು ಪಟ್ಟಣದ ನಾಗರಿಕರು ತಂಪು ಪಾನೀಯದತ್ತ ಮೊರೆ ಹೋಗುತ್ತಿದ್ದಾರೆ.

ಕೊಟ್ಟೂರು ತಾಲೂಕಿನದ್ಯಾಂತ ದಿನೇ ದಿನೇ ಬಿಸಿಲಿನ ತಾಪವು  40 ಡಿಗ್ರಿ ಸೆಲ್ಸಿಯಸಿಗೆ ಬಿಸಿಲಿನ ಪ್ರಖರತೆ ತಲುಪಿದೆ . ವಿಜಯನಗರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣ ಪಂಚಾಯತಿ ಅವರಿಂದ ಮೈಕ್ ನಲ್ಲಿ ಅನೌನ್ಸ್ಮೆಂಟ್ ಮಧ್ಯಾಹ್ನ 12:00 ಯಿಂದ ಸಂಜೆ 5:00 ಗಂಟೆಯವರೆಗೂ ಬಿಸಿಲಿನ ತಾಪ ಹೆಚ್ಚಾಗುವುದರಿಂದ ಸಾರ್ವಜನಿಕರಿಗೆ ಹೊರಗಡೆ ಬರದಂತೆ ಹಾಗೂ ಅತಿ ಹೆಚ್ಚು ನೀರು ಕುಡಿಯುವಂತೆ ಸಾರ್ವಜನಿಕರಿಗೆ ತಿಳಿಸಲಾಯಿತು.

ಬೆಳ್ಳಿಗೆ 10 -12 ಗಂಟೆಗೆ ವಿಪರೀತ ಬಿಸಿಲಿನ ಝಳ ಆರಂಭವಾಗುತ್ತದೆ. ಇದರ ಜೊತೆಗೆ ಬಿಸಿಯಾದ ಗಾಳಿ ಮುಖಕ್ಕೆ ತಾಗುವುದರಿಂದ ಮುಖವೆಲ್ಲ ಸುಟ್ಟ ಅನುಭವ ಆಗುತ್ತದೆ.

ಇದರಿಂದಾಗಿ ಸದಾ ವಾಹನಗಳು ಮತ್ತು ಜನರಿಂದ ಗಿಜಿಗುಡುತ್ತಿದ್ದ  ಬಸ್ ನಿಲ್ದಾಣ, ಗಾಂಧಿ ಸರ್ಕಲ್  ವಿವಿಧ ರಸ್ತೆಗಳು ಮಧ್ಯಾಹ್ನ ಆಗುತ್ತಿದ್ದಂತೆ ಸಂಚರಿಸುವ ಸಂಚರಿಸುವವರ ಸಂಖ್ಯೆ ತೀರ ಇಳಿಮುಖವಾಗಿದೆ. 

ಬೇಸಿಗೆ ಬಿರು ಬಿಸಿಲು ಆರಂಭವಾಗುತ್ತಿದ್ದಂತೆ ಪಟ್ಟಣದ ರಸ್ತೆ ಬದಿ ಜನಸಂದಣಿ ಪ್ರದೇಶದಲ್ಲಿ ತಂಪು ಪಾನೀಯ ಮತ್ತು ಎಳೆನೀರು ಅಂಗಡಿಗಳು ಎಲ್ಲೆಂದರಲ್ಲಿ ತಲೆಯೆತ್ತಿವೆ. ಬೇಸಿಗೆ ಬಿಸಿಲಿನಿಂದ ತತ್ತರಿಸಿದ ಜನರು ಹಣ್ಣು ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿರುವುದರಿಂದ    ಎಳೆನೀರು, ಕಲ್ಲಂಗಡಿ, ಕಬ್ಬಿನ ಹಾಲಿನ ವ್ಯಾಪಾರ ಜೋರಾಗಿದೆ. ಜೊತೆಗೆ ಹಣ್ಣಿನ ಜ್ಯೂಸ್  ನಿಂಬೆ ರಸ ಮಜ್ಜಿಗೆ ಮಾರಾಟ ಭರಾಟೆದಿಂದ ಸಾಗಿದೆ.  ಇದರಿಂದ ಜನರು ಅಣ್ಣನ ರಸ ಕುಡಿಯುವುದಕ್ಕಾಗಿ ಜ್ಯೂಸ್ ಸೆಂಟರ್ ಮುಂದೆ ದಾವಿಸುತ್ತಿದ್ದಾರೆ.

ಕಲ್ಲಂಗಡಿ ಕರಬೂಜ ಹಣ್ಣುಗಳಿಗೆ ಜನರು ಮುಗಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ಪ್ರತಿ ವಾರ ಹತ್ತಾರು  ಗಾಡಿಗಳಲ್ಲಿ ಕಲ್ಲಂಗಡಿ ಕರಬೂಜ ದ್ರಾಕ್ಷಿ ಹಣ್ಣುಗಳು ತುಂಬಿಕೊಂಡು ಪಟ್ಟಣಕ್ಕೆ ಬರುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ದಾಸ್ತಾನು ಬಂದಿದೆ  ಇದರಿಂದ ದರದಲ್ಲೂ ಸರಾಸರಿ ಪ್ರತಿ ಕೆಜಿಗೆ 30 ಇದೆ . ಆಂಧ್ರಪ್ರದೇಶ ಬಿಜಾಪುರ ಸೇರಿದಂತೆ ಕರ್ನಾಟಕದ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು,  ಹರಪನಹಳ್ಳಿ ತಾಲೂಕುಗಳಿಂದ ಕಲ್ಲಂಗಡಿ ಹಣ್ಣು ವ್ಯಾಪಾರ ಬಲು ಜೋರು ನಡೆಯುತ್ತಿದೆ ಎಂದು ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಸಂತೋಷ್ ಬಳ್ಳಾರಿ ಬೆಳಗಾಯಿತು ಪತ್ರಿಕೆಯೊಂದಿಗೆ ಹಂಚಿಕೊಂಡರು.

ಬಿಸಿಲಿನ ಪ್ರಮಾಣ 40 ಸೆಲ್ಸಿಯಸ್  ಮೇಯದಲ್ಲಿ ನಾಗರೀಕರ ಸ್ಥಿತಿ  ಏನಾಗಬಹುದೆಂದು ಆಟೋ ಚಾಲಕ  ಅಜ್ಜಯ್ಯ  , ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ