ಹನುಮಸಾಗರದಲ್ಲಿ ನೇಹಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋಲೆಯಂತ ಕೃತ್ಯಗಳನ್ನು ಯಾರೆ ಮಾಡಲಿ ಅಂತವರಿಗೆ ಎನ್ ಕೌಂಟರ್ ಕಾನೂನು ತರಲೆಬೇಕು : ಬಸವರಾಜ ದ್ಯಾವಣ್ಣವರ್
ವರದಿ- ಮಂಜುನಾಥ ಕೋಳೂರು, ಕೊಪ್ಪಳ
ಕೊಪ್ಪಳ : - ಹುಬ್ಬಳ್ಳಿಯಲ್ಲಿ ಎಂ.ಸಿ.ಎ ಓದುತ್ತಿದ್ದ ನೇಹಾ ಹಿರೇಮಠ್ ಎಂಬ ವಿಧ್ಯಾರ್ಥಿಗೆ ಫಯಾಜ್ ಎಂಬ ಮತಾಂಧ ಕೋಲೆ ಮಾಡಿದ್ದು ಹೇಯ ಕೃತ್ಯ ಖಂಡಿಸಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಕರಿಸಿದ್ಧೇಶ್ವರ ಮಠದ ಆವರಣದಲ್ಲಿ ನೇಹಾ ಅವರಿಗೆ ಎರಡು ನೀಮಿಷಮೌನಾಚರಣೆ ಮಾಡಿ ಮೇನಬತ್ತಿ ಹಚ್ಚಿ ಭಾವಪೂರ್ಣಶ್ರದ್ಧಾಂಜಲಿಅರ್ಪಿಸಲಾಯಿತು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು ಮಾತನಾಡಿ.ನಡೆದಂತ ಈ ಘಟನೆಯನ್ನು ಸರಕಾರ ಸಿ.ಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಬೆಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು. ಗ್ರಾಮ ಪ ಸದಸ್ಯರಾಧ ಬಸವರಾಜ ದ್ಯಾವಣ್ಣವರ್ ಮಾತನಾಡಿ.ಕೋಲೆ ಮಾಡಿದಂತ ಆರೋಪಿಗಳನ್ನು ಕೂಡಲೆ ಸರಕಾರ ಇಂತ ಕೃತ್ಯಗಳನ್ನು ಯಾರೆ ಮಾಡಲಿ ಅಂತವರಿಗೆ ಉತ್ತರ ಪ್ರದೇಶ ಮಾದರಿಯಲ್ಲಿ ಎನ್ ಕೌಂಟರ್ ಕಾನೂನು ತರಲೆಬೇಕು ಇಲ್ಲ ಅಂದರೆ ಹೆಣ್ಣು ಮಕ್ಕಳು ಬದುಕಿ ಬಾಳುವುದು ಕಷ್ಟ ಇದೆ ಎಂದರು. ಕಾರ್ಯಕ್ರಮದಲ್ಲಿ ಬಸವರಾಜ ಹಳ್ಳೂರು ,ರುದ್ರಗೌಡ ಗೌಡಪ್ಪನವರ್ , ಮಹಾಂತೇಶಅಗಸಿಮುಂದಿನ್ , ಶರಣಪ್ಪ ಬಾಚಲಾಪೂರು , ಡಾ.ಶರಣು ಹವಾಲ್ದಾರ್ , ಈಶಪ್ಪ ಕಣ್ಣುರು , ಮಹಾಂತಯ್ಯ ಕೂಮಾರಿ , ಶೇಖಣ್ಣ ಗಡಾದ್ , ರಮೇಶ ಬಡಿಗೇರ , ವಿರೇಶ ಈಳಗೇರ ,ಶರಣಪ್ಪ ಬೋದೂರು ,ರಾವುಲ್ ದೇವಿಸಿಂಗ್ ಮುಂತಾದವರು ಕಾರ್ಯಕ್ರಮದಲ್ಲಿ ಪಕ್ಷತೀತವಾಗಿ ಎಲ್ಲ ಮುಖಂಡರು ಬಾಗವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ