ನೇಹಾ ಹಿರೇಮಠ ಹಂತಕನನ್ನು ಗಲ್ಲಿಗೇರಿಸಿ : ಡಿವಿಪಿ ಮನವಿ
ಮಸ್ಕಿ : ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಸಮಿತಿ ಮಸ್ಕಿ ವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ದೇಶದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ, ಬಾಲಕಿಯರ ಮೇಲೆ, ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು,ಕೊಲೆಗಳು ಎಗ್ಗಿಲ್ಲದೆ ನಡೆಯುತ್ತಿರುವುದು ದುರಂತವೇ ಸರಿ. ಆದ್ದರಿಂದ ಇಂತಹ ಕ್ರೂರಿ ಕೊಲೆಗಾರರನ್ನು ಗಲ್ಲು ಶಿಕ್ಷೆ ವಿಧಿಸಬೇಕು ಎಂದು ತಹಸೀಲ್ದಾರರು ಮಸ್ಕಿ ಇವರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ದಿನಾಂಕ 18-04-2024 ಗುರುವಾರ ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನೇಹಾ ನಿರಂಜನ ಹಿರೇಮಠ ಅವರ ಭೀಕರ ಕೊಲೆ ಪ್ರಕರಣ ಹುಬ್ಬಳ್ಳಿ ಜನತೆಗೆ ಹಾಗೂ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬಾ ಅಘಾತವನ್ನು ಉಂಟು ಮಾಡಿದೆ.
ಕೊಲೆ ಮಾಡಿದ ಸಹಪಾಠಿ ಫಯಾಜ್ ನೇಹಾಳಿಗೆ ಪ್ರೀತಿಸುವಂತೆ ಹಿಂದೆ ಬಿದ್ದು ಪೀಡಿಸುತ್ತಿದ್ದ ಆಗ ಆತನ ಪ್ರೀತಿಯ ನಿರಾಕರಿಸಿದ ನೇಹಾ ಅವರ ಮೇಲೆ ಕೋಪಗೊಂಡ ಫಯಾಜ್ ಕಾಲೇಜು ಕ್ಯಾಂಪಸ್ ಒಳಗಡೆ ನುಗ್ಗಿ ನೇಹಾಳನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಈ ಕೃತ್ಯದಿಂದಾಗಿ ರಾಜ್ಯದೆಲ್ಲೆಡೆ ಪಾಲಕರು ತಮ್ಮ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸುವಲ್ಲಿ ಭಯಭೀತರಾಗಿದ್ದಾರೆ.
ಆದಕಾರಣ ಇಂತಹ ಕೃತ್ಯವನ್ನು ನಾವೆಲ್ಲರೂ ತೀವ್ರವಾಗಿ ಖಂಡಿಸುತ್ತೇವೆ, ಮತ್ತು ವಿರೋಧಿಸುತ್ತೇವೆ.
ಕೂಡಲೇ ಸರ್ಕಾರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ವಿದ್ಯಾರ್ಥಿನಿಯರ ಬಗೆಗೆ ಎಲ್ಲಾ ಕಾಲೇಜುಗಳಲ್ಲಿ ಭದ್ರತೆಯನ್ನು ಒದಗಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ್ ಸಮಿತಿ ಮಸ್ಕಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಅಮರೇಶ್ ಭೋವಿ, ಚೇತನಕುಮಾರ್ ಆಚಾರ್ಯ ಪ್ರೇಮ್ ಕುಮಾರ್, ಹುಲಿಗೇಶ ಕುಮಾರ್, ಸಚಿನ ಕುಮಾರ್, ಪ್ರಸನ್ನ ಕುಮಾರ್ ,ಮಂಜುನಾಥ್ ಕಾಟಗಲ್, ಶರಣಪ್ಪ ದಿನಸಮುದ್ರ,ಮೌನೇಶ ತುಗಲದಿನ್ನಿ, ದಲಿತ ವಿದ್ಯಾರ್ಥಿ ಪರಿಷತ್ ಮಸ್ಕಿ ಸಂಘಟನೆ ಅಧ್ಯಕ್ಷರು ಯುವ ಹೋರಾಟಗಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ