ಕುಮಾರಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಜಂಗಮ ಸಮಾಜ ಪ್ರತಿಭಟನೆ.

ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಕುಮಾರಿ ನೇಹಾ ಹಿರೇಮಠ ವಿದ್ಯಾರ್ಥಿನಿಯ ಬರ್ಬರ ಕಗ್ಗೋಲೆ ಮಾಡಿದ ಆರೋಪಿಗೆ ಕಾನೂನು ಅಡಿಯಲ್ಲಿ ಗಲ್ಲು ಶಿಕ್ಷೆ ನೀಡಬೇಕು ಎಂದು ಮಸ್ಕಿ ತಾಲೂಕ ಜಂಗಮ ಸಮಾಜ ಸಂಸ್ಥೆ ಯುವ ಘಟಕ ವತಿಯಿಂದ ಗೌರವಾನ್ವಿತ ರಾಜ್ಯಪಾಲರು ರಾಜ ಭವನ, ಬೆಂಗಳೂರು ಇವರಿಗೆ ಮಾನ್ಯ ಮಸ್ಕಿ ತಾಲೂಕ ತಹಶೀಲ್ದಾರರ ಮುಂಖಾಂತರ ಮನವಿಯನ್ನು ಸಲ್ಲಿಸಿದರು.

ಈ ವೇಳೆ, ತಾಲ್ಲೂಕು ಅಧ್ಯಕ್ಷ ಘನಮಠದಯ್ಯ ಸ್ವಾಮಿ ಮಾತನಾಡಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ಹಾಡು ಹಗಲೇ ಕುಮಾರಿ ನೇಹಾ ತಂದೆ ನಿರಂಜನ ಹಿರೇಮಠ ಇವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ನೀಚ ಕೃತ್ಯವೆಸಗಿರುವುದು ವಿಷಾದನೀಯ.

ಈ ಘಟನೆಯಿಂದಾಗಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶಾಲಾ-ಕಾಲೇಜುಗಳಿಗೆ ತೆರಳಲು ಹಿಂದೆ ಮುಂದೆ ನೋಡುವಂತಾಗಿದೆ. ಭಯದ ಛಾಯೆ ಎಲ್ಲೆಡೆಗೂ ವ್ಯಾಪಿಸಿದೆ. ಇಡೀ ಸಮಾಜವೆ ಇಂದು ದುಃಖದ ಮಡುವಿನಲ್ಲಿದೆ. ಸಾಮಾಜಿಕ ಸಾಮರಸ್ಯ ಬಯಸುವ ಜನರ ಮಧ್ಯದಲ್ಲಿ ಕ್ರೂರ ಮನಸ್ಸಿನವರು ಶಾಂತಿಯನ್ನು ಹಾಳುಮಾಡುತ್ತಿದ್ದಾರೆ. 

 ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಗೌರವ ಮತ್ತು ಸೂಕ್ತವಾದ ಭದ್ರತೆ ಇಲ್ಲದಂತಾಗಿದೆ,

ಧಾರ್ಮಿಕ ಚೌಕಟ್ಟಿನೊಳಗೆ ಬದುಕುವವರು ನೇಹಾ ಅವರ ಹತ್ಯೆ ನೋಡಿದರೆ ಜೀವನದಲ್ಲಿ ಬದುಕುವುದು ಹೇಗೆ. ಈ ಕೊಲೆ ಪ್ರಕರಣದಿಂದ ಇಡೀ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಆಘಾತವನ್ನು ಉಂಟು ಮಾಡಿದೆ. ಅದೇ ರೀತಿ ಯಾದಗಿರಿ ನಗರದಲ್ಲಿ ದಲಿತ ಯುವಕನನ್ನು ಕೊಲೆ ಮಾಡಲಾಗಿದೆ ಇಂತಹ

ಈ ಕೃತ್ಯವನ್ನು ಮಸ್ಕಿ ತಾಲೂಕ ಜಂಗಮ ಸಮಾಜ ಸಂಸ್ಥೆ ತೀರ್ವವಾಗಿ ಖಂಡಿಸುತ್ತದೆ. ಇಂತಹ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿಬೇಕು ಎಂದು ಆಗ್ರಹಿಸುತ್ತೇವೆ. ಈ ಪ್ರಕರಣವನ್ನು ಉನ್ನತಮಟ್ಟದಲ್ಲಿ ತನಿಖೆ ಮಾಡಿ ತಕ್ಷಣವೆ ಆರೋಪಿಯಾದ ಫಯಾಜ್‌ ಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತೇವೆ. ಮೃತಪಟ್ಟಿರುವ ನೇಹಾಳ ಕುಟುಂಬಕ್ಕೆ ಹಾಗೂ ದಲಿತ ಯುವಕ ರಾಕೇಶ್ ಕುಟುಂಬಕ್ಕೆಸೂಕ್ತವಾದ ನ್ಯಾಯವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ,ಜಂಗಮ ಸಮಾಜದ ಪ್ರಮುಖ ಮುಖಂಡರು ಯುವಕರು ಮಹಿಳೆಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ