ಎಲ್ಲರೂ ಸೇರಿ ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲಿಸೋಣ ಮಸ್ಕಿ ತಾಪಂ ಇಒ ಅಂಬರೀಶ್ ಸಲಹೆ / ಸೈಕಲ್ ಜಾಥಾ
ಮಸ್ಕಿ : ತಾಲೂಕಿನ ಗೌಡನಬಾವಿ ಗ್ರಾಮ ಪಂಚಾಯತಿಯ ಸಾಗರ್ ಕ್ಯಾಂಪ್ ಮತ್ತು ಬುದ್ದಿನ್ನಿಯಲ್ಲಿ ಸೋಮವಾರ ಸ್ವೀಪ್ ಕಾರ್ಯಕ್ರಮದಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ, ಲೊಯೋಲಾ ಸಂಸ್ಥೆಯ ಆಶ್ರಯದಲ್ಲಿ ಮತದಾನ ಜಾಗೃತಿ ಜಾಥಾ, ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಜರುಗಿತು.
ಮಸ್ಕಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಕಾರ್ಯವಾಗಿದ್ದು, ಸಂವಿಧಾನದತ್ತವಾಗಿರುವ ಮತದಾನ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು. ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 21 ಗ್ರಾಪಂಗಳಲ್ಲಿ ನಿರಂತರವಾಗಿ ಸ್ವೀಪ್ ಕಾರ್ಯಕ್ರಮ ಏರ್ಪಡಿಸಿ, ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಸಖಿ ಮತಗಟ್ಟೆ, ಯುವ ಮತಗಟ್ಟೆ, ವಿಶೇಷ ಚೇತನರ ವಿಶೇಷ ಮತಗಟ್ಟೆ ಹೀಗೆ ವಿವಿಧ ಮಾದರಿಯಲ್ಲಿ ಮತಗಟ್ಟೆಗಳನ್ನು ಸಿದ್ದಪಡಿಸಿ, ಮತದಾರರನ್ನು ಸೆಳೆಯಲು ಕ್ರಮಕೈಗೊಳ್ಳಲಾಗುವುದು ಎಂದರು.
ಸಾಗರ್ ಕ್ಯಾಂಪ್‌ನಿಂದ ಬುದ್ದಿನ್ನಿವರೆಗೆ ಸೈಕಲ್ ಜಾಥಾ ಜರುಗಿತು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಸಂತ ಗೀತಾ, ಎನ್ಆರ್ ಎಲ್ ಎಂನ ತಾಲೂಕು ವ್ಯವಸ್ಥಾಪಕ ರಾದ ಮೌನೇಶ್, ವಲಯ ಮೇಲ್ವಿಚಾರಕರಾದ ಪ್ರಕಾಶ್, ಐಇಸಿ ಸಂಯೋಜಕರಾದ ಸತೀಶ್, ಲೊಯೋಲಾ ಸಂಸ್ಥೆಯ ಸಂಯೋಜಕರಾದ ರವೀಂದ್ರ, ಬಸವರಾಜ್, ಪ್ರಕಾಶ್, ವಿಜಯ ಲಕ್ಷ್ಮೀ, ಅನ್ನಮ್ಮ, ಬಿಲ್ ಕಲೆಕ್ಟರ್ ಷಣ್ಮುಖಪ್ಪ, ಬಿಎಫ್ಟಿ ಅಯ್ಯಣ್ಣ, ನಂದಿನಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀ, ಎಂಬಿಕೆ ಸುಮಿತ್ರಾ, ಪಶು ಸಖಿ ಗೀತಾ, ಪದಾಧಿಕಾರಿಗಳಾದ ಶ್ರೀದೇವಿ, ಲಕ್ಷ್ಮೀ ಇತರರಿದ್ದರು.
ಬೂತ್‌ಗಳಿಗೆ ಭೇಟಿ : ಉದ್ಬಾಳ ಮತ್ತು ಗೌಡನಬಾವಿ ಗ್ರಾಪಂಯ ಸಾಗರ್ ಕ್ಯಾಂಪ್‌ನ ಬೂತ್‌ಗಳಿಗೆ ತಾಪಂ ಇಒ ಅಂಬರೀಶ್ ಭೇಟಿ ನೀಡಿ ಸೌಕರ್ಯ ಪರಿಶೀಲಿಸಿದರು. ತದ ನಂತರ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ, ಪರಿಶೀಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ