144 ನೇ ಸಂಡೆ ಫಾರ್ ಸೋಷಿಯಲ್ ವರ್ಕ್ ಸೇವಾ ಕಾರ್ಯ

ಮಸ್ಕಿ : ಅಭಿನಂದನ್ ಸಂಸ್ಥೆಯ ಮೂಲಕ ಆರಂಭ ಮಾಡಲಾಗಿರುವ ಸ್ವಚ್ಛತಾ ಅಭಿಯಾನ ಸಂಡೆ ಫಾರ್ ಸೋಷಿಯಲ್ ವರ್ಕ್ ಇಲ್ಲಿವರೆಗೆ ಅಂದರೆ ಒಂದು ವಾರವೂ ಸಹ ಬಿಡದೆ ನಿರಂತರವಾಗಿ ಸಾಗುತ್ತಾ ಪ್ರಸ್ತುತ 144 ವಾರಗಳನ್ನು ಪೂರೈಸಿದೆ. ಕೇವಲ ಮಸ್ಕಿಗೆ ಸೀಮಿತ ಆಗದೆ ಬೇರೆ ಬೇರೆ ತಾಲೂಕು, ಜಿಲ್ಲೆ ಹಾಗೂ ಆಂಧ್ರ ಪ್ರದೇಶದಲ್ಲಿಯೂ ಸಹ ತನ್ನ ಕಾರ್ಯವನ್ನು ಕೈಗೊಂಡು ಯಶಸ್ವಿಯಾಗಿ ಸಾಗುತ್ತಿದೆ. ಈ ವಾರದ 144 ನೇ ಸಂಡೆ ಫಾರ್ ಸೋಷಿಯಲ್ ವರ್ಕ್ ಸೇವಾ ಕಾರ್ಯದಲ್ಲಿ ಮಸ್ಕಿ ತಾಲೂಕಿನ ಹಳೇ ಹುಲ್ಲೂರಿನ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಅದಕ್ಕೆ ಬಣ್ಣವನ್ನು ಹಚ್ಚಿ ಸುಂದರಗೊಳಿಸಲಾಯಿತು.

ಇದೆ ಸಂದರ್ಭದಲ್ಲಿ ಮಾತನಾಡಿದ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ಅಭಿನಂದನ್ ಸಂಸ್ಥೆಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ, ಇವುಗಳಲ್ಲಿ ಪ್ರತಿ ಭಾನುವಾರ ನಮ್ಮ ಸಂಸ್ಥೆಯ ಮೂಲಕ ಭಾನುವಾರದ ರಜೆಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವ ಇಚ್ಛೆಯಿಂದ ಆರಂಭವಾಗಿರುವುದೇ ಈ ಸಂಡೆ ಫಾರ್ ಸೋಷಿಯಲ್ ವರ್ಕ್. ಸ್ವಚ್ಛ ಭಾರತದ ಕನಸನ್ನು ನನಸಾಗಿ ಮಾಡುವ ಪ್ರಯತ್ನದಲ್ಲಿ ನಾವುಗಳು ಈ ಅಭಿಯಾನದ ಮೂಲಕ ಕಾರ್ಯನಿರತರಗಿದ್ದೇವೆ. ಸ್ವಚ್ಛ ಭಾರತವೇ ಸಂಡೆ ಫಾರ್ ಸೋಷಿಯಲ್ ವರ್ಕ್ ನ ಮೂಲ ಮಂತ್ರವಾಗಿದೆ. ಒಂದು ವಾರವೂ ಬಿಡದೇ ಇಲ್ಲಿವರೆಗೆ 144 ವಾರಗಳ ಸೇವಾ ಕಾರ್ಯವನ್ನು ನಾವು ಕೈಗೊಂಡಿದ್ದೇವೆ. ಇದು ನಿತ್ಯ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ನಿಮ್ಮ ಭಾಗದಲ್ಲಿ ಯಾವುದಾದರು ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ, ದೇವಸ್ಥಾನ, ಬಸ್ ನಿಲ್ದಾಣ, ಸಾರ್ವಜನಿಕ ಉದ್ಯಾನವನ ಮತ್ತಿತರರ ಜನರಿಗೆ ಉಪಯುಕ್ತ ಆಗುವ ಸಾರ್ವಜನಿಕ ಸ್ಥಳಗಲ್ಲಿ ಸ್ವಚ್ಛತೆಯ ಕಾರ್ಯವಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಕರೆ ನೀಡಿದರು.

ಈ ಸೇವಾ ಕಾರ್ಯದಲ್ಲಿ ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳಾದ ಜಾಫರಮೀಯ, ಮಲ್ಲಿಕಾರ್ಜುನ ಬಡಿಗೇರ, ಬಸಲಿಂಗಪ್ಪ ಬಾದರ್ಲಿ,ಅಮಿತ್ ಕುಮಾರ್ ಪುಟ್ಟಿ, ಕಿಶೋರ್ ಹಾಗೂ ಊರಿನ ಯುವಕರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ