ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯೋಣ ಎಆರ್‌ಒ ಜಗದೀಶ್‌ ಸಲಹೆ

ಮಸ್ಕಿ : ಪಟ್ಟಣದ ಗಾಂಧೀ ನಗರದಿಂದ ಕನಕ ವೃತ್ತದವರೆಗೆ ಮಂಗಳವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ (ಮ್ಯಾರಥಾನ್) ಸಹಾಯಕ ಚುನಾವಣಾಧಿಕಾರಿಗಳಾದ ಜಗದೀಶ್‌ ಗಂಗಣ್ಣನವರ ಚಾಲನೆ ನೀಡಿದರು.

ನಂತರ ಮಾತನಾಡಿ, ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಜಾರಿಗೆ ಬಂದ ನಂತರ ಪ್ರಜೆಗಳೇ ಈ ದೇಶದ ಶಕ್ತಿಯಾಗಿದ್ದಾರೆ. ಮತದಾನ ಪವಿತ್ರವಾಗಿದ್ದು, ಮೇ 7 ರಂದು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಸೂಕ್ತ ಅಭ್ಯರ್ಥಿಗೆ ಮತದಾನ ಮಾಡಿ, ಸಂವಿಧಾನದತ್ತವಾಗಿರುವ ವಿಶೇಷ ಹಕ್ಕನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದರು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್‌ ಮಾತನಾಡಿ, ಮತದಾನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅಕ್ಷರಸ್ಥರು ತಮ್ಮ ಮನೆಯ ಸುತ್ತ ಮತದಾನದ ಮಹತ್ವ ಕುರಿತು ತಿಳಿಸಿ, ಅವರನ್ನು ಮತಗಟ್ಟೆಗೆ ಕರೆ ತರಬೇಕು ಎಂದರು. 

ಹಾಗೇಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಗಾಂಧೀ ನಗರದಿಂದ ಆರಂಭಗೊಂಡ ಜಾಥಾ ಹಳೆ ಬಸ್‌ ನಿಲ್ದಾಣ ಮೂಲಕ ಕನಕ ವೃತ್ತ ತಲುಪಿತು. ತದ ನಂತರ ಮಾನವ ಸರಪಳಿ ನಿರ್ಮಿಸಲಾಯಿತು. ಸಹಾಯಕ ಚುನಾವಣಾಧಿಕಾರಿ ಜಗದೀಶ್‌ ಗಂಗಣ್ಣನವರ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ವೇಳೆ ತಹಸೀಲ್ದಾರ್‌ರಾದ ಅರಮನೆ ಸುಧಾ, ಗ್ರೇಡ್‌ 2 ತಹಸೀಲ್ದಾರ್‌ ರಾಘವೇಂದ್ರ, ಜೆಸ್ಕಾಂ ಎಇಇ ವೆಂಕಟೇಶ್‌, ಶಾಖಾಧಿಕಾರಿ ಶ್ರೀಶೈಲ್‌ ಪಾಟೀಲ್‌, ಲಯನ್ಸ್‌ ಕ್ಲಬ್‌ ಅಧ್ಯಕ್ಷರಾದ ಡಾ.ಶಿವರಾಜ್ ಇತ್ಲಿ, ಅಶೋಕ ಲಾನ್‌ ಟೆನ್ನಿಸ್‌ ಅಸೋಸಿಯೇಷನ್‌ನ ಡಾ. ಮಲ್ಲಿಕಾರ್ಜುನ ಇತ್ಲಿ, ಡಾ.ವಿನೋದ್‌ ಅಂಗಡಿ, ರಜತ್‌ ರಾಯ್ಕರ್‌, ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಮಹಾಂತೇಶ ಬ್ಯಾಳಿ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಕೆ.ಮಲ್ಲಯ್ಯ, ಬಾಲಸ್ವಾಮಿ, ಪಂಪಾಪತಿ ಹೂಗಾರ್‌, ಕಳಕಪ್ಪ ಹಾದಿಮನಿ, ರಾಜಾಸಾಬ್‌, ಶಿವರಾಜ ಜ್ಯೋತಾನ್‌, ತಾಪಂ ಸಿಬ್ಬಂದಿ ಗಂಗಾಧರ ಮೂರ್ತಿ, ಬಸವರಾಜ್‌, ಚಂದ್ರಶೇಖರ್‌, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಮೌನೇಶ್‌, ಪ್ರಕಾಶ್‌, ಅರ್ಜುನ, ಮಲ್ಲಿಕಾರ್ಜುನ, ಅಂಗನವಾಡಿ ಮೇಲ್ವಿಚಾರಕರಾದ ಶಿವಲೀಲಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಎನ್‌ಯುಎಲ್‌ಎಂ ಸದಸ್ಯರು, ಪುರಸಭೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ