ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್ ಜಿಹಾದ್ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ
ದೇವದುರ್ಗ: ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್ ಜಿಹಾದ್ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತಾಲ್ಲೂಕು ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ನೇಹಾ ಹತ್ಯೆ ಖಂಡಿಸಿ ಘೋಷಣೆ ಕೂಗಿದರು. ಆರೋಪಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರೀತಿ ವಿಚಾರವಾಗಿ ನೇರಾ ಹಿರೇಮಠ ಅವರನ್ನು ಪೀಡಿಸುತ್ತಿದ್ದ ಪ್ರೀತಿ ಮಾಡಲು ತಿರಸ್ಕರಿಸಿದ್ದಕ್ಕೆ, ಲವ್ ಜೀಹಾದ್ ಕೃತ್ಯಕ್ಕೆ ಮುಂದಾಗಿ ಕಾಲೇಜಿನಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ಸಂಗತಿಯಾಗಿದೆ.
ಘಟನೆಯಿಂದಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆತಂಕ್ಕೀಡಾಗಿದ್ದಾರೆ. ಇಂಥವರನ್ನು ನಡು ರಸ್ತೆಯಲ್ಲಿ ಗಲ್ಲಿಗೇರಿಸುವ ಕಾನೂನುಗಳನ್ನು ಜಾರಿ ತರಬೇಕು ಅಂದಾಗ ಸಮಾಜದಲ್ಲಿ ಶಾಂತಿಯುತ ಹಾಗೂ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಆಕ್ರೋಶ ಅವರ ಹಾಕಿದರು.
ವೆಂಕಟೇಶ ಚಿಂತಲಕುಂಟಾ, ಶಿವನಗೌಡ ಹೂವಿನಹೆಡಗಿ, ಸೂಗಯ್ಯ ಸ್ವಾಮಿ, ಅಜಯ ವಿಶ್ವ ಕರ್ಮ, ದೇವರಾಜ, ವಿರೂಪಾಕ್ಷಿ, ಶಿವಾಜಿ, ರಂಗನಾಥ, ಬಸವರಾಜ ಕೋಪ್ಪರ ಸೇರಿದಂತೆ ವಿವಿಧ ಹಿಂದೂ ಪರ ಮುಖಂಡರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ