ಸರಕಾರಿ ಪ್ರೌಢ ಶಾಲೆ ಹಳೆ ವಿದ್ಯಾರ್ಥಿಳ ಸ್ನೇಹ ಸಮ್ಮೇಳನ
ಕೊಟ್ಟೂರು : ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ೧೯೭೩, ೭೪ ಮತ್ತು ೭೫ನೇ ಸಾಲಿನಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳು ೫೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಏ.೧೪ರಂದು ಸ್ನೇಹ ಸಮ್ಮೇಳನ ಹಮ್ಮಿಕೊಂಡಿದೆ ಎಂದು ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಅಧ್ಯಕ್ಷ ರೇವಣಸಿದ್ದಪ್ಪ ಹೇಳಿದರು.
ಪಟ್ಟಣದ ತುಂಗಭದ್ರ ಬಿಇಡಿ ಕಾಲೇಜಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಅವರು ಗುರುವಾರ ಮಾತನಾಡಿದರು. ೧೯೭೪ನೇ ಸಾಲಿನ ವಿದ್ಯಾರ್ಥಿಗಳ ಕಾರ್ಯಕ್ರಮ ನಡೆಸುವ ಯೋಜನೆ ರೂಪಿಸಿದಾಗ ೭೩ ಮತ್ತು ೭೫ನೇ ಸಾಲಿನವರೂ ಸೇರಿಕೊಂಡು ಒಟ್ಟಾಗಿ ಸಮಾರಂಭ ಮಾಡುವ ನಿರ್ಧಾರ ಮಾಡಿದ್ದೇವೆ. ಈಗಾಗಲೇ ಇದಕ್ಕೆ ಎಲ್ಲ ತಯಾರಿಯೂ ನಡೆದಿದೆ. ಆ ಸಾಲಿನ ಶಿಕ್ಷಕರಾದ ಕೆ.ಜಯಪ್ಪ, ಅರವರ ಗುರುಬಸಪ್ಪ, ಎಚ್.ಎಂ.ಹಾಲಯ್ಯನವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಬೆಳಗ್ಗೆ ಶಿಕ್ಷಕರೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಳ್ಳಲಾಗುವುದು. ಶ್ರೀ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದ ವೇದಿಕೆಯಲ್ಲಿ ಅಸೀನರಾಗುವ ಶಿಕ್ಷಕರಿಂದ ವಿಶಿಷ್ಟ ಕಾರ್ಯಕ್ರಮ ನಡೆಸಲಾಗುವುದು. ಮಧ್ಯಾಹ್ನ ಹಳೆ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದರು.
ಸಮಿತಿ ಕಾರ್ಯದರ್ಶಿ ಡಿ.ಚಾಮರಸ ಮಾತನಾಡಿ, ಕೇವಲ ಮೂರು ತಿಂಗಳಲ್ಲಿ ಬೇರೆಡೆ ಇದ್ದ ಸ್ನೇಹಿತರನ್ನು ಸಂಪರ್ಕಿಸಿದೆ. ಕಾರ್ಯಕ್ರಮ ಮೊದಲ ಪೂರ್ವಭಾವಿ ಸಭೆಯಲ್ಲಿ ೩೦ ಜನ ಇದ್ದೆವೆ. ಈಗ ಸಂಖ್ಯೆ ೧೦೦ ದಾಟಿದೆ. ಈ ಸಾಲಿನ ಎಲ್ಲ ವಿದ್ಯಾರ್ಥಿಗಳಿಗೆ ಮಾಹಿತಿ ಸಿಕ್ಕಿರುವುದರಿಂದ ೧೨೦ ಜನರು ಸೇರುವ ನಿರೀಕ್ಷೆ ಮಾಡಲಾಗಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ಸಿದ್ದತೆಗಳನು ಮಾಡಿಕೊಂಡಿದೆ ಎಂದರು.
ಸಮಿತಿ ಉಪಾಧ್ಯಕ್ಷರಾದ ಟಿ.ಹನುಮಂತಪ್ಪ, ಡಿ.ಗುರುರಾಜ, ಖಜಾಂಚಿ ಕಂಡಕ್ಟರ್ ಕೊಟ್ರೇಶ, ಸದಸ್ಯರಾದ ಎಸ್.ರಾಜಶೇಖರ, ಕಂಡಕ್ಟರ್ ರವಿ, ಮಹಾಂತೇಶ, ಐನಳ್ಳಿ ಪರಮೇಶ್ವರಯ್ಯ, ನಿವೃತ್ತ ಶಿಕ್ಷಕ ಮಲ್ಲಪ್ಪ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ