ಕಾಂಗ್ರೆಸ್ ಸರ್ಕಾರ ರೈತ ವಿರೋಧಿಸರಕಾರ:ದತ್ತಾತ್ರಿ 2008ರಲ್ಲಿ ತಂಗಡಗಿ ಕಾಲಲ್ಲಿ ಚಪ್ಪಲಿ ಇದ್ದಿಲ್ಲ ಅಂಗಿ ಹರಿದುಕೊಂಡು ನಿಂತಿದ್ದ:ದಡೇಸ್ಗೂರು
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ : - ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು ರೈತರಿಗಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಪ್ರಕೋಸ್ಟದ ರಾಜ್ಯ ಸಂಯೋಜಕರಾದ ಎಸ್. ದತ್ತಾತ್ರಿ ಹೇಳಿದರು. ಅವರು ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎನ್ ಡಿ ಆರ್ ಎಫ್ ನಿಯಮದಂತೆ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡುತ್ತಿದೆ , ರಾಜ್ಯ ಸರ್ಕಾರ ಸಕಾಲಕ್ಕೆ ಕೇಂದ್ರಕ್ಕೆ ಸರಿಯಾದ ವರದಿ ನೀಡದೆ ಇರುವುದರಿಂದ ಪರಿಹಾರ ನೀಡುವಲ್ಲಿ ಕೇಂದ್ರದಿಂದ ವಿಳಂಬವಾಗಿದೆ .ರಾಜ್ಯ ಸರ್ಕಾರವು ಬರ ಪರಿಹಾರವನ್ನು ನೀಡಬಹುದಾಗಿತ್ತು ಆದರೆ ಬಿಟ್ಟಿ ಗ್ಯಾರಂಟಿ ಯೋಜನೆಗಳಿಗೆ ಹಣ ವಂದಿಸುವ ಉದ್ದೇಶದಿಂದ ಬರ ಪರಿಹಾರ ನೀಡಿಲ್ಲ ಈ ಹಿಂದೆ ಯಡಿಯೂರಪ್ಪ - ಬೊಮ್ಮಯಿ ನೇತೃತ್ವದ ಸರ್ಕಾರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ರಾಜ್ಯದ ಸರ್ಕಾರದ 4000 ಹಣ ನೀಡುತ್ತಿಲ್ಲ, ವಿದ್ಯಾರ್ಥಿಗಳಿಗೆ - ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಿದ್ದಾರೆ , ರೈತ ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನ ನೀಡುತ್ತಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದರೆ ಜಿಯಾದಿಗಳಿಗೆ ಮತ ಹಾಕಿದಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಸವರಾಜ ದಡೇಸ್ಗೂರು ವಿಶ್ವಕರ್ಮ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಅಸಹಕಾರ ತೋರುತ್ತಿದೆ ಕೊಪ್ಪಳ ಜಿಲ್ಲೆಯಲ್ಲಿ 70,000 ಅರ್ಜಿಗಳು ಬಂದಿದ್ದು ಕೇವಲ ಹತ್ತು ಸಾವಿರ ಅರ್ಜಿಗಳಿಗೆ ಮಾತ್ರ ಅಪ್ರವೆಲ್ ಕೊಟ್ಟು , ಉಳಿದ 60 ಸಾವಿರ ಅರ್ಜಿಗಳು ಬಾಕಿ ಉಳಿದಿವೆ , ಆದರೆ ಜಿಲ್ಲಾ ಉಸ್ತುವಾರಿ ಸಚಿವ ಅರ್ಜಿಗಳನ್ನು ಪರಿಶೀಲಿಸಿ ಕೇಂದ್ರಕ್ಕೆ ಸಲ್ಲಿಸಬೇಕಾಗಿತ್ತು. ಒಂದು ವೇಳೆ ಯೋಜನೆ ಜಾರಿಯಾದರೆ ಕೇಂದ್ರ ಸರ್ಕಾರಕ್ಕೆ ಹೆಸರು ಬರುತ್ತದೆ ಎಂಬ ದುರುದ್ದೇಶದಿಂದ ತಡೆ ಹಿಡಿದಿದ್ದಾರೆ ಎಂದರು. ಜನಾರ್ಧನ್ ರೆಡ್ಡಿಯನ್ನು ಬೆತ್ತಲೆ ಮಾಡುತ್ತೇನೆ ಎಂದು ಶಿವರಾಜ್ ತಂಗಡಿಗೆ ಹೇಳಿದ್ದಾರೆ ಅವರು ಸಚಿವನೆಂಬ ದುರಹಂಕಾರದಿಂದ ಮಾತನಾಡುತ್ತಿದ್ದಾರೆ, ಗಂಗಾವತಿಯ ಶಾಸಕರು ಕೆಟ್ಟದಾಗಿ ಮಾತನಾಡುವುದಿಲ್ಲ 2008ರಲ್ಲಿ ತಂಗಡಿಗೆ ಕಾಲಲ್ಲಿ ಚಪ್ಪಲಿ ಇದ್ದಿಲ್ಲ ಅಂಗಿ ಹರಿದುಕೊಂಡು ನಿಂತಿದ್ದ ಈಗ ಕಾಂಗ್ರೆಸ್ ಪಕ್ಷ ನನಗೆ ಸಚಿವನೆಂಬ ತಾಕತ್ತು ನೀಡಿದ್ದಾರೆ ಎನ್ನುತ್ತಾನೆ ಇಂತಹ ಮುಟ್ಟಾಳತನ ಮಾತು ನಿಲ್ಲಿಸಬೇಕು. ನಮ್ಮ ಭಾಷೆ ಸರಿಯಾಗಿರಬೇಕು ಇನ್ನೊಂದು ಸಾರಿ ಇದೇ ರೀತಿಯಲ್ಲಿ ಮಾತನಾಡಿದರೆ ಇದೇ ಬದಲಾದ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ . ಇದೇ ಸಂದರ್ಭದಲ್ಲಿ ಕರಡಿ ಸಂಗಣ್ಣವರ ಬಗ್ಗೆ ಗೌರವವಿದೆ ಅವರು ನಮ್ಮ ಪಕ್ಷದಲ್ಲಿದ್ದಾಗ ಅವರಿಗೆ ದುಡಿದಿದ್ದೇವೆ , ನಮ್ಮ ಪಕ್ಷದಲ್ಲಿದ್ದ ಗೌರವ ಕಾಂಗ್ರೆಸ್ ಪಕ್ಷದಲ್ಲಿ ಸಿಗೋದಿಲ್ಲ ಈಗ ಸಂಗಣ್ಣ ಮೋದಿ ಏನು ಕೆಲಸ ಮಾಡಿಲ್ಲ ಎಂದಿದ್ದಾರೆ ಹಾಗಾದರೆ ನೀವು ಏನು ಮಾಡಿಲ್ಲ ಎನ್ನಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗನ್ನವರ್, ರಾಜ್ಯ ವ್ಯಾಣಿಜ್ಯ - ವ್ಯಾಪಾರ ಪ್ರಕೋಸ್ಟದ ಸಂಚಾಲಕರಾದ ವಿಜಯಕುಮಾರ್ ಕುಡಿಗನೂರು, ವ್ಯಾಪಾರ-ವ್ಯಾಣಿಜ್ಯ ಪ್ರಕೋಸ್ಟದ ರಾಜ್ಯ ಸದಸ್ಯರಾದ ಶಿವ ಬಸವನಗೌಡ, ಪಕ್ಷದ ಮುಖಂಡರಾದ ನಾಗರಾಜ್ ಬಿಲ್ಗಾರ್ , ವಕ್ತಾರ ಮಹೇಶ್ ಹಾದಿಮನಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ