ಮಸ್ಕಿ ತಾಪಂ ಸ್ವೀಪ್ ಸಮಿತಿಯಿಂದ ಕಾರ್ಯಕ್ರಮ ಶಾಲಾ ವಿದ್ಯಾರ್ಥಿಗಳು ಭಾಗಿ
ಮಸ್ಕಿ : ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತಿಯ ಮುಂದೆ ಶನಿವಾರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸ್ವೀಪ್ ಕಾರ್ಯಕ್ರಮದಡಿ ರಂಗೋಲಿ ಸ್ಪರ್ಧೆ ಜರುಗಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಮ್ಮನಗೌಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಕಾರ್ಯವಾಗಿದ್ದು, ಅರ್ಹ ಮತದಾರರು ಸಂವಿಧಾನದತ್ತವಾಗಿರುವ ಹಕ್ಕನ್ನು ಚಲಾಯಿಸಬೇಕು. ಜನ ಸಾಮಾನ್ಯರಲ್ಲಿ ಮತದಾನ ದ ಮಹತ್ವ ತಿಳಿಸಲು ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಅದೇ ರೀತಿ ಗ್ರಾ.ಪಂ ಯಲ್ಲಿ ಪ್ರತಿ ನಿತ್ಯ ಸ್ವಚ್ಛ ವಾಹಿನಿ ಮೂಲಕ ಕಸ ಸಂಗ್ರಹಿಸುವುದರ ಜೊತೆಗೆ ಸ್ಥಳೀಯರಿಂದ ಸಹಿ ಪಡೆದು, ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಸ್ಥಳೀಯ ಒಕ್ಕೂಟದ ಸದಸ್ಯರು ಮತದಾನದ ಮಹತ್ವ ವಿವರಿಸುವ ರಂಗೋಲಿ ಬಿಡಿಸಿ ಗಮನ ಸೆಳೆದರು. ಇದೇ ವೇಳೆ ಕಡ್ಡಾಯವಾಗಿ ನಾನು ಮತದಾನ ಮಾಡುವೆ ಎಂಬ ವಾಗ್ದಾನದೊಂದಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ಶಾಲೆ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಪತ್ರ ಬರೆಯುವ ಮೂಲಕ ಮತದಾನಕ್ಕೆ ಕರೆ ನೀಡಿದರು.
ಸ್ಥಳೀಯ ಶ್ರೀರಾಮ್ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷೆ ಆದಮ್ಮ, ಎನ್ ಆರ್‌ಎಲ್ ಎಂ ವಲಯ ಮೇಲ್ವಿಚಾರಕರಾದ ಪ್ರಕಾಶ್, ಐಇಸಿ ಸಂಯೋಜಕರಾದ ಸತೀಶ್, ಬಿಲ್ ಕಲೆಕ್ಟರ್ ಮೌನೇಶ್, ಕಾರ್ಯದರ್ಶಿ ಸೋಮಣ್ಣ, ಆಯುಷ್ ಇಲಾಖೆ ಅಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ