( ತುಗ್ಗಲದಿನ್ನಿ ಗ್ರಾಮದಲ್ಲಿ 92ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮ )

ಅಂಬೇಡ್ಕರ್ ಆಶಯದಂತೆ ಆಸ್ತಿ-ಸಂಪತ್ತು ರಾಷ್ಟ್ರೀಕರಣವಾಗಬೇಕು: ಬಸವರಾಜ ಎಕ್ಕಿ

ಮಸ್ಕಿ: ದೇಶದಲ್ಲಿ ಕೆಲವರಿಗೆ ಸಾವಿರಾರು ಎಕರೆ ಭೂಮಿಯಿದೆ ಆದರೆ ಇನ್ನು ಕೆಲವರಿಗೆ ತುಂಡು ಭೂಮಿಯೂ ಕೂಡ ಇಲ್ಲ. ಈ ಅಸಮಾನ ಸಂಪತ್ತಿನಿಂದಾಗಿ ಶ್ರೀಮಂತ - ಬಡವ, ಮೇಲು - ಕೀಳು ಸೃಷ್ಟಿಯಾಗಿ ಜನರ ಏಳಿಗೆಗೆ ಹಿನ್ನಡೆಯಾಗಿದೆ. ಹಾಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ದೇಶದ ಆಸ್ತಿ ಮತ್ತು ಸಂಪತ್ತು ರಾಷ್ಟ್ರೀಕರಣವಾಗಬೇಕು. ಶ್ರೀಮಂತ ಬಡವ ಎಂಬ ಬೇಧ-ಭಾವಗಳು ಕಡಿಮೆಯಾಗಿ ಸ್ವಸಹಾಯ ಪದ್ಧತಿಯಲ್ಲಿ ಜನರು ಬದುಕುವಂತಾಗಬೇಕು ಎಂದು, ಹೋರಾಟಗಾರ ಹಾಗೂ ಕಲಾವಿದ ಬಸವರಾಜ ಎಕ್ಕಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಸ್ಕಿ ತಾಲೂಕಿನ ತುಗ್ಗಲದಿನ್ನಿ ಗ್ರಾಮದ ಮಲ್ಲಮ್ಮ - ಶಾಸ್ತ್ರಿ ಅಮರಪ್ಪ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ, 92ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.

ಮಹಿಳೆಯರು ಮೌಡ್ಯಾಚರಣೆಯನ್ನು ಆಚರಣೆ ಮಾಡುವ ಅನಾಗರೀಕತೆ ಸಂಸ್ಕೃತಿಯನ್ನು ಬಿಡಬೇಕು. ವಿದ್ಯಾವಂತರಾಗಿ ವೈಜ್ಞಾನಿಕ ತಿಳುವಳಿಕೆಯಲ್ಲಿ ಜೀವಿಸಬೇಕು ಎಂದು ಸಂದೇಶ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ದಲಿತ ವಿದ್ಯಾರ್ಥಿ ಪರಿಷತ್ ರಾಯಚೂರು ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ ಮಾತನಾಡಿ, ಭಾರತ ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ ವಂಚಿತವಾದ ಶೋಷಿತ ಸಮುದಾಯಗಳ ಜನ ಅಜ್ಞಾನ, ಮೌಢ್ಯ, ಕಂದಚಾರ ಶೋಷಣೆಯಲ್ಲಿ ಬದುಕುತ್ತಿದ್ದಾರೆ. ಸಮಾನತೆಯಿಂದ ಬದುಕಲು ಮತ್ತು ಅಭಿವೃದ್ಧಿ ಹೊಂದಲು ಶೋಷಿತರಿಗೆ ಶಿಕ್ಷಣದಿಂದ ಮಾತ್ರ ಸಾಧ್ಯವಿದೆ ಎಂದರು.

ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಮಾತನಾಡಿದರು. ಮಸ್ಕಿ ದಲಿತ ವಿದ್ಯಾರ್ಥಿ ಪರಿಷತ್ತಿನ ತಾಲೂಕಾಧ್ಯಕ್ಷ ಮೌನೇಶ ತುಗ್ಗಲದಿನ್ನಿ ಅಧ್ಯಕ್ಷತೆ ವಹಿಸಿದ್ದರು. ದಲಿತ ವಿದ್ಯಾರ್ಥಿ ಪರಿಷತ್ತು ಮಸ್ಕಿ ಸದಸ್ಯ ಮಹೇಂದ್ರ ತುಗ್ಗಲದಿನ್ನಿ ನಿರೂಪಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಭೀಮಮಾಲೆ ಧರಿಸಿದ ಸೋಮನಾಥ ನಾಯಕ ಬಲ್ಲಟಗಿ, ಗ್ರಾ.ಪಂ.ಸದಸ್ಯರಾದ ಲಕ್ಷ್ಮೀ ಶಿವಪ್ಪ ಹಟ್ಟಿ, ಚನ್ನಮ್ಮ ಚನ್ನಬಸವ, ಲಕ್ಷ್ಮೀ ಶಿವಲಿಂಗ, ಲಕ್ಷ್ಮೀ ಮೌನೇಶ, ಶಿವಪ್ಪ, ಯಂಕಪ್ಪ, ಪ್ರಹ್ಲಾದ್, ಅಭಿ ತುಗ್ಗಲದಿನ್ನಿ, ಹನುಮೇಶ ಸಿಂಧನೂರು ಸೇರಿದಂತೆ ಮಕ್ಕಳು, ಮಹಿಳೆಯರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ