ಕೊಟ್ಟೂರಿನಲ್ಲಿ ಮುಸ್ಲಿಂರಿAದ ಸಡಗರ ಸಂಭ್ರಮದೊAದಿಗೆ ರಂಜಾನ್

 ಕೊಟ್ಟೂರು :  ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿನ ಮುಸ್ಲಿಂ ಭಾಂದವರು ಗುರುವಾರ ಸಡಗರ ಸಂಭ್ರಮಗಳೊAದಿಗೆ ಆಚರಿಸಿದರು, ಇಲ್ಲಿನ ಆರು ಪ್ರಮುಖ ಮಸೀದಿಗಳಲ್ಲಿ ಹಬ್ಬದ ನಿಮಿತ್ತವಾಗಿ ಮುಸ್ಲಿಂ ದೈವ ಅಲ್ಲಾಹುವಿನ ನಾಮಸ್ಮರಣೆ ಬೆಳೆಗ್ಗೆ ೯ ರಿಂದಲೇ ಮಾರ್ದನಿಸಿದವು. 

 ಪಟ್ಟಣದ ಬಿಲಾಲ್, ಉಸ್ಮಾನಿಯ, ಜಾಮೀಯ, ಮುಬಾರಕ್, ಇಲಾಹಿ, ತೋಹಿಬಾ ಮಸೀದಿಗಳಿಂದ ಮುಸ್ಲಿಂ ಜನಾಂಗದವರು ನೂರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡು ಪಾದಯಾತ್ರೆಯ ಮೆರವಣಿಗೆ ಕೈಗೊಂಡರು. ನಂತರ ಇಲ್ಲಿನ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿನ ಖಬರ್‌ಸ್ಥಾನದಲ್ಲಿ ಕೂಡಿಕೊಂಡು ಸಾಮೂಹಿಕ ಪ್ರಾರ್ಥನೆ ಕೈಗೊಂಡರು. ಧರ್ಮಗುರು ಮುಕ್ತಿಮಹಮ್ಮದ್ ಯಾಸೀನ್ ನೆರೆದಿದ್ದ ಭಾಂದವರಿಗೆ ಧರ್ಮೊಪದೇಶ ನೀಡಿ ಪ್ರಾರ್ಥನೆಯನ್ನು ಭೋದಿಸಿದರು. ಇವರ ಅಜ್ಞಾನುಸಾರ ಜನಾಂಗದ ಭಾಂದವರು ರಾಗಬದ್ದವಾಗಿ ಅಲ್ಲಾಹುನನ್ನು ಸ್ಮರಿಸಿ ನಮಸ್ಕರಿಸಿದರು. ನಂತರ ಪರಸ್ಪರ ಒಬ್ಬರನ್ನು ಒಬ್ಬರು ಆಲಂಗಿಸಿಕೊAಡು ಈದ್-ಮುಬರಕ್ ಹೇಳಿಕೊಂಡರು.

 ಸ್ಥಳಿಯ ಮುಖಂಡರಾದ ಅಯೂಬ್ ಖಾನ್, ಯಾಸೀನ್ ನಾಗೇನಹಳ್ಳಿ, ನಜೀರ್ ಸಾಬ್, ಸಾಲಾಮ್ ಸಾಬ್, ಬಾಗಳಿ ಭಾಷಾ ಸಾಬ್, ರೆಹಮತ್ ಸಾಬ್, ಕೆ.ಎಂ. ಸಲೀಂ ಸಾಬ್, ಸಲಾಂ ಸಾಬ್, ಸೈಪುಲ್ಲಾ, ಅಬ್ಬಾಸ್, ಮತ್ತಿತರರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*