ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯೋಣ ತಾ.ಪಂ ಇಒ ಅಂಬರೀಶ್‌ ಕರೆ

ಮಸ್ಕಿ : ಪಟ್ಟಣದ ಅನ್ನಪೂರ್ಣ ನರ್ಸಿಂಗ್‌ ಹೋಂನ ರೋಗಿಗಳು ಮತ್ತು ಸಂಬಂಧಿಕರಿಗೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್‌ ಸೋಮವಾರ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.

ತದ ನಂತರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅಮೂಲ್ಯವಾದದ್ದು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ತಮಗೆ ಸೂಕ್ತ ಎನಿಸುವ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಸ್ವೀಪ್‌ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದರು. 

ಡಾ. ಮಲ್ಲಿಕಾರ್ಜುನ ಇತ್ಲಿ ಮಾತನಾಡಿ, ತಾಲೂಕು ಸ್ವೀಪ್‌ ಸಮಿತಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಿ, ಮತದಾನದ ಮಹತ್ವ ವಿವರಿಸುತ್ತಿರುವುದು ಸ್ತುತ್ಯಾರ್ಹ. ಚುನಾವಣಾ ಆಯೋಗದ ಆಶಯದಂತೆ ಶೇ. 100 ಮತದಾನ ಸಾಧಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ತಿಳಿಸಿದರು.

ಈ ವೇಳೆ ಮಸ್ಕಿ ತಾಪಂ ಸಹಾಯಕ ನಿರ್ದೇಶಕರಾದ (ಪಂಚಾಯತ್‌ ರಾಜ್‌) ಸೋಮನಗೌಡ ಪಾಟೀಲ್‌, ಸಿಬ್ಬಂದಿ ಗಂಗಾಧರ ಮೂರ್ತಿ, ವಿನೋದ ರಾಜ್‌, ಅರ್ಜುನ, ಪ್ರಸೂತಿ ತಜ್ಞರಾದ ತೇಜಸ್ವಿನಿ ಇತ್ಲಿ, ಶಿವರಾಜ್‌ ಇತ್ಲಿ, ಸಿದ್ದಲಿಂಗಪ್ಪ ಕನಕೇರಿ ಇತರರಿದ್ದರು. ಲಯನ್ಸ್‌ ಕ್ಲಬ್‌ ಮತ್ತು ನರ್ಸಿಂಗ್‌ ಹೋಂ ಆಶ್ರಯದಲ್ಲಿ ಪ್ರತಿ ಸೋಮವಾರದಂತೆ ಅನ್ನದಾಸೋಹ ಕಾರ್ಯಕ್ರಮದಡಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಮಧ್ಯಾಹ್ನದ ಊಟ ವಿತರಿಸಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ