ಕೊಟ್ಟೂರು ತಾಲೂಕು ಜಂಗಮ ಸಮಾಜದ ವತಿಯಿಂದ ನೇಹಾ ಹತ್ಯೆಗೈದ : ಆರೋಪಿಗೆ ಗಲ್ಲು ಶಿಕ್ಷೆಗೆ ಒತ್ತಾಯ

ಕೊಟ್ಟೂರು:  ತಾಲೂಕು ಜಂಗಮ ಸಮಾಜ ಶುಕ್ರವಾರ ಉಪ ತಹಶಿಲ್ದಾರ ಅನ್ನದಾನೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಹುಬ್ಬಳ್ಳಿ ಬಿ.ಯು.ಬಿ ಕಾಲೇಜಿನ ಎಂ.ಸಿ.ಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬ ಅನ್ಯ ಕೋಮಿನ ಸಮಾಜ ಘಾತುಕ ದುಷ್ಕರ್ಮಿ ಹಾಡು ಹಗಲಿನಲ್ಲಿಯೇ ಬರ್ಬರವಾಗಿ ಹತ್ಯೆ ಗೈದ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಡೋಣೂರ ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಈ ಕೃತ್ಯಕ್ಕೆ ಸಹಕರಿಸಿದ ಎಲ್ಲಾ ಸಹಚಾರ್ಯರಿಗೂ ಕಠಿಣ ಶಿಕ್ಷೆ ಆಗಬೇಕು, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ ಪಾಪ ಕೃತ್ಯ ಎಸಗಿದ ಆರೋಪಿಗೆ ಬೆಂಬಲಿಸಿದ ಎಂತಹ ಪ್ರಭಾವಶಾಲಿಯೇ ಆಗಿರಲಿ ಆ ರೋಪಗಳಿಗೆ ಶಿಕ್ಷೆ ಆಗಬೇಕು ಎಂದರು 

ಈ ಸಂದರ್ಭದಲ್ಲಿ ಕೊಟ್ಟೂರು ದೇವರು ಶಿವಪ್ರಕಾಶ್ ಸ್ವಾಮಿಗಳು , ಆರ್.ಎಂ ಕೊಟ್ರೇಶ್, ಅಯ್ಯನಹಳ್ಳಿ ಕೊಟ್ರಯ್ಯ ಉಪಸ್ಥಿತರಿದ್ದರು. 

ಕೊಟ್ -1

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರ್ ಹತ್ಯೆ ಗೈದ ಆರೋಪಿಗೆ ಗೆಲ್ಲು ಶಿಕ್ಷೆ ವಿಧಿಸಬೇಕೆಂದು ಸರ್ಕಾರವನ್ನು ಕೊಟ್ಟೂರು ತಾಲೂಕು ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಅಡಕಿ ಮಂಜುನಾಥಯ್ಯ, ಆಗ್ರಹಿಸಿದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ