ಪೋಸ್ಟ್‌ಗಳು

ಕೊಟ್ಟೂರಿನಲ್ಲಿ ಎರಡು ಗಂಟೆಗಳ ಕಾಲ| ಟ್ರಾಫಿಕ್ ಜಾಮ್ ನಿಂದ| ಶಾಲಾ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಕಿರಿಕಿರಿ

ಇಮೇಜ್
ಕೊಟ್ಟೂರು :ಪಟ್ಟಣದ ಬಸ್ ನಿಲ್ದಾಣದ ಹತ್ತಿರ  ಬರಬೋರಿ ಗುರುವಾರ ರಂದು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಪೊಲೀಸ್ ಇಲಾಖೆ ಪೇದೆ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ. ಸಂಘಟನೆ ಮುಖಂಡರು ಪೊಲೀಸ ಇಲಾಖೆಗೆ ತಿಳಿಯಪಡಿಸಿದರು. ಕೊಟ್ಟೂರು ಪಟ್ಟಣ ಅತೀ ವೇಗವಾಗಿ ಬೆಳೆಯುವ ಪಟ್ಟಣಗಳಲ್ಲಿ ಒಂದಾಗಿದೆ .ಕೊಟ್ಟೂರು ಪ್ರಮುಖ ರಸ್ತೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಜಾಮ್ ಆಗುವುದು. ಪಾದಚಾರಿಗಳಿಗೆ ತೊಂದರೆ ಕಂಡು ಬಂದಿದ್ದು ಸಣ್ಣಪುಟ್ಟ ಆಕ್ಸಿಡೆಂಟ್ ಗಳು ಇತ್ತೀಚೆಗೆ ಕಂಡುಬರುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಶಾಲಾ ಕಾಲೇಜುಗಳ ಬಿಡುವ ಸಮಯದಲ್ಲಿ ಅತಿ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುವುದರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ತೊಂದರೆ ಉಂಟಾಗುತ್ತದೆ. ಇದನ್ನು ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆಯು ಎಷ್ಟೇ ಕಾರ್ಯನಿರ್ವಹಿಸಿದರು ಟ್ರಾಫಿಕ್ ಆಗುವುದನ್ನು ತಡೆಗಟ್ಟುವ ಕಾರ್ಯ ಮಾಡುತ್ತಿಲ್ಲ. ಎಂದು ಸಾರ್ವಜನಿಕರು ಆರೋಪಿಸಿದರು. ಈ ಹಿಂದೆ ಮುಂದಾಲೋಚನೆಯಿಂದ ಊರಿನ ಹೊರವಲಯದಿಂದ  ಹೈವೇ ರಸ್ತೆ ಜೋಡವಣೆ ಇದ್ದಿದ್ದು. ಈಗಲಾದರೂ ಜಾರಿಗೆ ತಂದರೆ ಟ್ರಾಫಿಕ್ ಜಾಮ್ ಪರಿಹಾರ ದೊರಕಿದಂತಾಗುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳು ,ರೈತ ಮುಖಂಡರು ಚಂದ್ರಶೇಖರ್ , ಮಂಜುನಾಥ್, ಮಧು ನಾಯಕ, ಕೊಟ್ರೇಶ್,ಪ್ರತಿಭಟನೆ ಮಾಡುತ್ತೇವೆ‌.ಎಂದರು  ಕೊಟ್ -1 ಕೊಟ್ಟೂರಿನ ಬಸ್ಟಾಂಡ್ ಹತ್ತಿರ ಹರಪನಹಳ್ಳಿ ರಸ್ತೆ ಕೂಡ್ಲಿಗಿ ರಸ್ತೆ ಹಾಗು ಇಟಗಿ ರಸ್ತೆ ಸುಮ

ತಾಲೂಕು ಕ.ಸಾ.ಪ.ದಿಂದ 62ನೇ ಕನ್ನಡ ರಾಜ್ಯೋತ್ಸವ

ಇಮೇಜ್
ಕೊಟ್ಟೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನ.೨೫ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಲ್ಲಿನ ಡಾ.ಎಚ್.ಜಿ.ರಾಜ್ ಭವನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಸಿದ್ಧರಾಮ ಕಲ್ಮಠ ಉದ್ಘಾಟಿಸುವರು. ಹ.ಬೊ.ಹಳ್ಳಿಯ ಉಪನ್ಯಾಸಕ ಅಕ್ಕಿ ಬಸವೇಶ ಅವರು, ಕನ್ನಡ ನಾಡು ನುಡಿ ಹಾಗೂ ಕರ್ನಾಟಕ ನಾಮಕರಣದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದು, ತಹಸೀಲ್ದಾರ ಜಿಕೆ ಅಮರೇಶ, ಕಲಾಕೇಂದ್ರ ಅಧ್ಯಕ್ಷ ಎಂಎAಜೆ ಸತ್ಯಪ್ರಕಾಶ, ಜಿಪಂ ಮಾಜಿ ಸದಸ್ಯ ಎಂಎAಜೆ ಹರ್ಷವರ್ಧನ ಇತರರು ಅತಿಥಿಗಳಾಗಿ ಆಗಮಿಸುವರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಕಾರ್ಯಕ್ರಮಕ್ಕೂ ಮೊದಲು ನಡೆಯುವ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಬಿಇಒ ಪದ್ಮನಾಭ ಕರಣಂ, ವರ್ತಕ ಪಿ.ಶ್ರೀಧರಶೆಟ್ಟಿ ಚಾಲನೆ ನೀಡುವರು ಎಂದು ಅವರು ತಿಳಿಸಿದ್ದಾರೆ.

ನಾಲ್ಕೆ ತಿಂಗಳಲ್ಲಿ ಕಿತ್ತುಹೋದ ರಸ್ತೆ ಶಾಸಕರೇ ಇತ್ತ ನೋಡಿ

ಇಮೇಜ್
   ಮಸ್ಕಿ : ಸರಕಾರಿ ಕೆಲಸ ದೇವರ ಕೆಲಸ ಎಂದು ವಿಧಾನಸೌಧ ಮುಂಭಾಗದಲ್ಲಿ ಹಾಕಲಾಗಿದೆ. ಆದರೆ ತಾಲೂಕಿನಲ್ಲಿ ಈ ಮಾತು ಅಕ್ಷರ ಸಹ ವಿರುದ್ಧವಾಗಿದ್ದು ಗ್ರಾಮೀಣ ರಸ್ತೆಗೆ ಕೋಟಿ ಕೋಟಿ ಅನುದಾನ ಬಂದರು ನಾಲ್ಕೆ ತಿಂಗಳಲ್ಲಿಯೇ ರಸ್ತೆ ಹಾಳಾಗಿ ತನ್ನ ಮೊದಲಿನ ಸ್ವರೂಪದಲ್ಲಿ ಕಾಣತೊಡಗಿದೆ. ತಾಲೂಕು ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಇದ್ದರೂ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುವುದೇ ಅಪರೂಪ.ತಾಲೂಕಿನಲ್ಲಿ ರಸ್ತೆ ಮೇಲೆ ಸಂಚರಿಸುವುದೆಂದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತೋರಣ ದಿನ್ನಿಯಿಂದ ಮಲ್ಲದಗುಡ್ಡದ ವರಿಗೆ 7 ಕಿಮೀ ರಸ್ತೆ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಗುತ್ತಿಗೆದಾರರು ಸಹ ಕಾಮಗಾರಿ ಪೂರ್ಣಗೊಳಿಸಿ ಕೇವಲ ನಾಲ್ಕೇ ತಿಂಗಳು ಕಳೆಯುವುದರೊಳಗೆ ರಸ್ತೆಗೆ ಹಾಕಿರುವ ಡಾಂಬರ್ ಕಿತ್ತಿಹೋಗಿದೆ ಗುಂಡಿಗಳ ಹಾವಳಿ ಹೆಚ್ಚಾಗಿವೆ ಕಲ್ಲುಗಳು ರಸ್ತೆ ತುಂಬ ಕಾಣತೊಡಗಿವೆ. ಇದೀಗ ಈ ರಸ್ತೆಯ ಮೇಲೆ ದ್ವಿಚಕ್ರ ವಾಹನ ಸಹ ಸಂಚರಿಸದಂತಾಗಿದ್ದು ಸ್ವಲ್ಪ ಯಾಮಾರಿದರೂ ಕಲ್ಲುಗಳು ಹಾಗೂ ಗುಂಡಿ ತಪ್ಪಿಸಲು ಹೋಗಿ ಬೀಳುವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿಗೆ ಅಭಿವೃದ್ಧಿ ಯೋಜನೆಗಳು ಬರುವುದೇ ಅಪರೂಪ. ಬಂದ ಅನುದಾನವಾದರೂ ಸಮರ್ಪಕವಾಗಿ ಅನುಷ್ಠಾನಗೊಂಡು ಉತ್ತಮ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನು ಮಾಡಿಕೊಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪದ

ಹಿರೇನಗನೂರು ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ.ಹಾಗೂ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸನ್ಮಾನ.

ಇಮೇಜ್
ಹಟ್ಟಿ ಚಿನ್ನದ ಗಣಿ-ಹಟ್ಟಿ ಪಟ್ಟಣ ಸಮೀಪದ ಸರಕಾರಿ ಪ್ರೌಢಶಾಲೆ(ಆರ್ ಎಮ್ಎಸ್ಎ) ಹಿರೇನಗನೂರಿನಲ್ಲಿ ಇಂದು ಮಕ್ಕಳ ದಿನಾಚರಣೆ ಮತ್ತು ಜವಾಹರಲಾಲ ನೆಹರು ರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳಾದ ಬಸವರಾಜಪ್ಪ ಕುರುಗೋಡು.ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಂತ ಸಮಾಜ ಸೇವಕ.ಶಿಕ್ಷಣ ಪ್ರೇಮಿ.ಮೌನುದ್ದೀನ್ ಬೂದಿನಾಳ ಇವರನ್ನು ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿದ್ದರು. ಕಾರ್ಯಕ್ರಮದ ಪ್ರಥಮವಾಗಿ ಜವಾಹರ್ ಲಾಲ್ ನೆಹರು ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಪ್ರಾರ್ಥನಾ ಗೀತೆಯನ್ನು ಸಹಶಿಕ್ಷಕರಾದ ರಾಘವೇಂದ್ರ ಸರ್ ಹಾಡಿದರು.  ನಂತರ ಶಶಿಕಲಾ.ಸುಸನ್ನ.ಹುಲಿಗೆಮ್ಮ.ಹುಚ್ಚರೆಡ್ಡಿ.ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತು ಮಾತನಾಡಿದರು.ಶ್ರೀಮತಿ ಸುರೇಖಾ ಸ ಶಿ ಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ವತಃ ತಾವೇ ಮಾಡಿದ ಇಂಗ್ಲೀಷ್ ವಿಷಯದ ಮಾದರಿಗಳು ಗಮನ ಸೆಳೆದವು. ಒಂದು ವಾರದಿಂದ ದಿನವೂ ಒಂದೊಂದು ಚಟುವಟಿಕೆ ಹಾಗೂ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು.ಮತ್ತು ಎಲ್ಲಾ ವಿಷಯಗಳಲ್ಲಿ ರಸಪ್ರಶ್ನೆ ಚಿತ್ರಬಿಡಿಸುವುದು ಪ್ರಮೇಯ.ಗ್ರಾಫ್ ರಚನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಸರಳ ಜೀವಿ.ಸ

ಭಾರತೀಯ ಮಹಿಳಾ ಒಕ್ಕೂಟದ ವತಿಯಿಂದ ತಾಲೂಕು ಸಮ್ಮೇಳನದ ಕಾರ್ಯಕ್ರಮ

ಇಮೇಜ್
ಕೊಟ್ಟೂರು ತಾಲೂಕು ಪಟ್ಟಣದ ಹ್ಯಾಳ್ಯ ರಸ್ತೆ ಅಂಬೇಡ್ಕರ್ ನಗರದ ಸಮುದಾಯ ಭವನದಲ್ಲಿ ಸಿಪಿಐ ಪಾರ್ಟಿ ತಾಲೂಕು ಕಾರ್ಯದರ್ಶಿ ರೇಣುಕಮ್ಮ ಹಾಗೂ ಕಾರ್ಯಕರ್ತರು ತಾಲೂಕು ಸಮ್ಮೇಳನದ ಕಾರ್ಯಕ್ರಮ ಸಭೆಯನ್ನು ಮಂಗಳವಾರದಂದು ಮಾಡಲಾಯಿತು. ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿ ಸಂವಿಧಾನದ ಸಂರಕ್ಷಣೆಗಾಗಿ ಮಹಿಳೆಯರ ಸಮಾನ, ಸ್ವಾಭಿಮಾನಿ. ಘನತೆಯ ಬದುಕಿನ ಹಕ್ಕುಗಳ ರಕ್ಷಣೆಗಾಗಿ, ಭಾರತೀಯ ಮಹಿಳಾ ಒಕ್ಕೂಟ (NFIW) ದ 5ನೇ ರಾಜ್ಯ ಸಮ್ಮೇಳನ 2023 ಡಿಸೆಂಬರ್ 2 ಮತ್ತು 3, ರಂದು ದಾವಣಗೆರೆಯಲ್ಲಿ ನಡೆಯುವ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು  ತಿಳಿಸುವುದರ ಮೂಲಕ  ರಾಜ್ಯ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಗಮನಕ್ಕೆ ತರಲಾಗುವುದು ಎಂದು ತಾಲೂಕು ಕಾರ್ಯದರ್ಶಿ ರೇಣುಕಮ್ಮ ಹೇಳಿದರು. ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಕಾರ್ಯಕರ್ತರಾದ ಬದ್ದಿ ರೇಣುಕಮ್ಮ, ಕಂದಗಲ್ ತಿಮ್ಮಪ್ಪ, ಕಂದಗಲ್ ರಾಜು ಗೌಡ, ಮಹಿಳೆಯರು, ಉಪಸ್ಥಿತರಿದ್ದರು

ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೈತರಿಗೆ ಅರ್ಥಿಕ ನೆರವು

ಇಮೇಜ್
ಕೊಟ್ಟೂರು:ನಿಂಬಳಗೇರೆ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಹಾಕುವ ಸಕ್ರಿಯ ಸದಸ್ಯರಾದ ಟಿ ಎಂ ಶಿವಮೂರ್ತಿಯ್ಯ ಇವರು ಮರಣ ಹೊಂದಿರುವುದರಿಂದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ರೂಂ 20000 ಸಾವಿರ ರೂಪಾಯಿಗಳನ್ನು ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರಿಂದ ವಿತರಿಸಲಾಯಿತು ಹಾಗೂ ಸಂಘದ ಸದಸ್ಯರಾದ ಟಿ ಬಸವರಾಜ ಇವರು ಬಣಿವೆ ಸುಟ್ಟು ಹೋಗಿರುವುದರಿಂದ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ರೂಂ 10000 ರೂಪಾಯಿಗಳನ್ನು ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರಿಂದ ವಿತರಿಸಲಾಯಿತು.

ನಕಲಿ ವೈದ್ಯ ಜಗದೀಶ್ ನನ್ನು ಜೈಲಿಗೆ ಕಳುಹಿಸಿದ:ತಾಲೂಕು ವೈದ್ಯಾಧಿಕಾರಿ ಪ್ರದೀಪ್ ಕುಮಾರ್

ಇಮೇಜ್
"ನಕಲಿ ವೈದ್ಯ ಜಗದೀಶ್ ವಿರುದ್ಧ ಪ್ರಕರಣ ದಾಖಲು" ಕೊಟ್ಟೂರು: ಪಟ್ಟಣದ ಮಯೂರ್ ಹೋಟೆಲ್ ಮುಂಬಾಗದಲ್ಲಿರುವ ಅಪೂರ್ವ ಕ್ಲಿನಿಕ್ ನ ವೈದ್ಯ ವೃತ್ತಿ ನಡೆಸುತ್ತಿದ್ದ ಜಗದೀಶ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಡಿಎಚ್ಓ ಅವರ ಆದೇಶದ ಮೇರೆಗೆ ಕೂಡ್ಲಿಗಿಯ ಪ್ರಭಾರಿ ತಾಲೂಕು ವೈದ್ಯಾಧಿಕಾರಿಯಾದ ಪ್ರದೀಪ್ ಕುಮಾರ್ ಹಾಗೂ ಬಸವೇಶ್ವರ ಹಿರೇಮಠ ವೈದ್ಯಾಧಿಕಾರಿಗಳು,ನೇತೃತ್ವದಲ್ಲಿ ದಾಳಿ ನಡೆಸಿ ನಕಲಿ ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿಯಾದ ಜಗದೀಶ್ ನನ್ನು ಹಿಡಿದು ಪೋಲಿಸರ ವಸಕ್ಕೆ ಒಪ್ಪಿಸಿ. ಕ್ಲಿನಿಕ್ ನಲ್ಲಿದ್ದ ಸ್ಟೆಥೋ ಸ್ಕೋಪ್, ಸಿರೆಂಜ್, ಸಿರಪ್, ಮಾತ್ರೆಗಳು ಇತ್ಯಾದಿ ಔಷಧಿಗಳನ್ನು ಕ್ರಮಬದ್ಧ ಪಂಚನಾಮೆಯ ಮೂಲಕ ಜಪ್ತಿ ಪಡೆದುಕೊಂಡು.   ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಅಧಿನಿಯಮಗಳ ಕಾಯ್ದೆ ಮತ್ತು ನಿಯಮ 2007 ಮತ್ತು 2009ರ ಅನ್ವಯ ನೋಂದಣಿಯಾಗದೇ, ಪದವಿ ಪಡೆಯದೇ ರೋಗಿಗಳಿಗೆ ಮಾತ್ರೆ ಮತ್ತು ಇಂಜೆಕ್ಷನ್ ನೀಡಿದರೆ ಜೀವಕ್ಕೆ ಅಪಾಯವಾಗುವ ಸಂಭವವಿದೆ ಎಂದು ತಿಳಿದು ಸಾರ್ವಜನಿಕರಿಗೆ ತಾನು ವೈದ್ಯ ಎಂದು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ ಜಗದೀಶನ ವಿರುದ್ಧ ಕಲಂ 420, 328 ಐಪಿಸಿ ಮತ್ತು ಕಲಂ 19(1) ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಗಳ ಕಾಯ್ದೆ 2009ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ . ನೀಡಿದ ದೂರಿನ ಮೇರೆಗೆ ಪ್ರಕರ ಣವನ್ನು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.