ಪೋಸ್ಟ್‌ಗಳು

ಬಂಗಾರದ ಮಡಿಲಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬ ಆಚರಣೆ

ಇಮೇಜ್
ಹಟ್ಟಿ ಚಿನ್ನದ ಗಣಿ : ಭಾರತ ದೇಶದಲ್ಲಿ ಚಿನ್ನವನ್ನು ಉತ್ಪಾದಿಸುವ ಕೆಲವೇ ಕೆಲವು ಕಂಪನಿಗಳು ಇವೆ. ಅದರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಅತ್ಯಧಿಕ ಚಿನ್ನವನ್ನು ಉತ್ಪಾದಿಸುವ ಚಿನ್ನದ ಗಣಿ ಇದಾಗಿದೆ. ಬಂಗಾರವನ್ನು ತಯಾರಿಸುವ ಕಾರ್ಮಿಕರ ಶ್ರಮ ಬಹಳ ಮುಖ್ಯ ಅದರಲ್ಲೂ ಮಶಿನರಿ (ಆಯುಧ) ಸಾಮಾನುಗಳು ಬಂಗಾರ ತೆಗೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಇಂಥ(ಆಯುಧ)ಮಶಿನರಿ ಸಾಮಾನುಗಳಿಗೆ ಪೂಜಾ ಸಲ್ಲಿಸುವುದೇ ಆಯುಧ ಪೂಜೆ. ಬುಧವಾರ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಂಪನಿ ಆಡಳಿತದ ಆದೇಶದ ಮೇರೆಗೆ ಕಂಪನಿಯ ಶಾಫ್ಟ್ ಗಳಾದ ವಿಲೈ ಶಾಫ್ಟ್,ಮಲ್ಲಪ್ಪ ಶಾಫ್ಟ್, ಸೆಂಟ್ರಲ್ ಶಾಫ್ಟ್, ಹಾಗೂ ಸರ್ಕ್ಲರ್ (ಸರಕೆಲರ್)ಶಾಫ್ಟ್, ಈ ಎಲ್ಲ ಕಡೆಗಳಲ್ಲಿ ಕಾರ್ಮಿಕರು ದೇವಿ ಪೂಜೆ ಮಾಡಿ ನಂತರ ತಮ್ಮ ತಮ್ಮ ಸೆಕ್ಷನ್ ಗಳಾದ ಸಾಗ್&ಬಾಲ್ ಮಿಲ್,ಸೈನೆಡ್ ಸೆಕ್ಷನ್,ಬ್ಯಾಟರಿ ಸೆಕ್ಷನ್,ಎಂ ಎಸ್ ಸಿಂಕಿ ಸೆಕ್ಷನ್, ಎಲ್ ಡಿ ಬಿ ಎಚ್ ಸೆಕ್ಷನ್,ಝೆಡ್.ಐ.ಬಿ.ಸ್ಯಾಂಡ್ ಸ್ಟಾವಿಂಗ್,ಭೂ ಅನ್ವೇಷಣೆ ವಿಭಾಗ, ಲ್ಯಾಬ್,ರಿಫೈನರಿ ಸೆಕ್ಷನ್,ವಿ ಟಿ ಸೆಂಟ್ರಲ್ ತರಬೇತಿ ಕೇಂದ್ರ, ಹಣಕಾಸು ವಿಭಾಗ,ಮಾನವ ಸಂಪನ್ಮೂಲ ವಿಭಾಗ,ಆಸ್ಪತ್ರೆ ವಿಭಾಗ,ವರ್ಕ್ ಶಾಪ್,ಪ್ಲಾಂಟ್ ಸೆಕ್ಷನ್,ಲೋಡರ್ ಸೆಕ್ಷನ್,ಎಲೆಕ್ಟ್ರಿಕಲ್ ಸೆಕ್ಷನ್,ಅಡುಗೆ ವಿಭಾಗ,ಕ್ರೀಡಾ ಸಂಸ್ಥೆ,ಇನ್ನು ಬೇರೆ ಬೇರೆ ಸೆಕ್ಷನ್ ಗಳಲ್ಲಿ ದೇವಿ ಫೋಟೋ ಪ್ರತಿಷ್ಠಾಪಿಸಿ ನಂತರ ತಮ್ಮ ತಮ್ಮ ಸೆಕ್ಷನ್ ಗಳಲ್ಲಿ ಮಶಿನರಿ ಸಾಮಾನುಗಳನ್ನು

ದೇಶ ಒಡೆಯುವವರ ಬಗ್ಗೆ ಎಚ್ಚರ ವಹಿಸಿರಿ:ಮೋದಿ

ಇಮೇಜ್
ಬ್ಯುರೊ:ಜಾತಿ, ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ, ತಾರತಮ್ಯ ಬಿತ್ತುವವರಿಂದ ದೂರ ಮತ್ತು ಎಚ್ಚರದಿಂದ ಇರಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆನೀಡಿದ್ದಾರೆ ದೆಹಲಿಯ ದ್ವಾರಕದಲ್ಲಿ ಹಮ್ಮಿಕೊಂಡಿದ್ದ ದಸರಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಶತಮಾನಗಳಿಂದ ಕಾದು ನಾವು ಇಂದು ರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ಇದು ಭಾರತೀಯರಾದ ನಮಗೆ ಇರುವ ತಾಳ್ಮೆಯ ಸಂಕೇತ ಆಗಿದೆ ಎಂದರು. ನಾವು ಆಯುಧಗಳನ್ನು ಮರ್ಯಾದೆಗಾಗಿ(ರಾಮನ ಹಾಗೆ) ಮಾತ್ರ ಬಳಸಬೇಕು. ನಮ್ಮ ಗಡಿ, ನಮ್ಮವರ ರಕ್ಷಣೆಗೆ ಬಳಸಬೇಕು ಎಂಬುದನ್ನು ಅರಿತಿದ್ದೇವೆ. ಯಾರನ್ನೂ ಸೋಲಿಸಲು ಅಲ್ಲ ಎಂಬುದು ನಮಗೆ ಮನವರಿಕೆ ಆಗಿದೆ ಎಂದರು. ಮುಂದಿನ ವರ್ಷದ ದಸರ ರಾಮಮಂದಿರದಲ್ಲೇ ನಡೆಯಲಿದೆ. ರಾಮನ ಆಶೀರ್ವಾದ ಇಡೀ ಜಗತ್ತಿಗೆ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ರಾಮಚರಿತ ಮಾನಸದಲ್ಲಿ ಹೇಳಿದ ಹಾಗೆ ಇದು ರಾಮನ ಆಗಮನದ ಸಮಯ ಎಂದರು. ಹಾಲಿ ಭಾರತ ಪ್ರಪಂಚದ ೫ನೇ ದೊಡ್ಡ ಆರ್ಥಿಕತೆ ಆಗಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿ ಹೊರಹೊಮ್ಮಿದೆ. ನಾವು ಮುಂದಿನ ೨೫ ವರ್ಷಗಳಲ್ಲಿ ರಾಮ ಕಂಡ ರಾಜ್ಯದ ಪರಿಕಲ್ಪನೆಯನ್ನು ವಾಸ್ತವದಲ್ಲಿ ತರಬೇಕಿದೆ ಎಂದರು.

*ಸರ್ಕಾರದ ಆದೇಶ ಗಾಳಿಗೆ ತೂರಿದ -ಸರಸ್ವತಿ*

ಇಮೇಜ್
ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕು ಕಂದಗಲ್ಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸರ್ಕಾರದ ಆದೇಶ ಗಾಳಿಗೆ ತೂರಿದ ಸರಸ್ವತಿ ಪ್ರಭಾರಿ ಪ್ರಾಂಶುಪಾಲರು ರಾಷ್ಟ್ರಕ್ಕಾಗಿ ಹೋರಾಟ ಮಾಡಿದ ಮಹಿಳೆ ಕಿತ್ತೂರಾಣಿ ಚೆನ್ನಮ್ಮ ಜಯಂತಿ ಸಮಯಕ್ಕೆ ತಕ್ಕಂತೆ ಮಾಡುವುದು ಬಿಟ್ಟು ಅವರಿಗೆ ಮನಸ್ಸಿಗೆ ಬಂದಂತೆ ಮಧ್ಯಾಹ್ನ 1:15 ಗಂಟೆಗೆ ಅವರ ಪೂಜೆ ತಡವಾಗಿ ಮಾಡಿದ್ದಾರೆ.  ದೇಶಪ್ರೇಮದಿಂದ ಹೋರಾಡಿದ ಮಹಿಳೆ ಕಿತ್ತೂರ್ ರಾಣಿ ಚೆನ್ನಮ್ಮ ಜಯಂತಿಯನ್ನು ಮಾಡದೆ ಅವರಿಗೆ ಅಗೌರವ ತೋರಿದ ಸರ್ಕಾರಿ ಅಧಿಕಾರಿಗಳು ಇವರಿಗೆ ಕೇವಲ ಸರ್ಕಾರಿ ಸಂಬಳ ಮಾತ್ರ ಬೇಕು ಸರ್ಕಾರದ ಸುತ್ತೋಲೆಗಳು ಬೇಕಿಲ್ಲ ಎಂಬುದು ಒಂದು ಮಧ್ಯಾಹ್ನ ಗಂಟೆ ನಂತರ ಎರಡು ಗಂಟೆಗೆ ಪೂಜೆ ಸಲ್ಲಿಸಿದ್ದನ್ನು ನೋಡಿದರೆ ಸಾರ್ವಜನಿಕ ಕೆಲಸಗಳು ಹೇಗೆ ನಡೆಯಬಹುದು ಅದಲ್ಲದೆ ಮಕ್ಕಳಿಗೆ ಶಿಕ್ಷಣ ಹೇಗೆ ದೊರೆಯುತ್ತದೆ ಇವರ ಸೌಲಭ್ಯಗಳ ಬಗ್ಗೆ ಹೇಗಿರಬಹುದು ಎಂಬುದು ಮೇಲೆನೇ ತಿಳಿದು ಬರುತ್ತದೆ ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಬೇಕೆಂದು ಸರ್ಕಾರದ ಸುತ್ತೋಲೆಯನ್ನು ಗಾಳಿಗೆ ತೂರಿ ಮನಬಂದಂತೆ ನನಗೆ ಮನೆಯಲ್ಲಿ ಪೂಜೆ ಇತ್ತು ಅದು ಮುಗಿಸಿಕೊಂಡು ಬಂದು ಈಗ ಪೂಜೆ ಮಾಡಿದ್ದೀನಿ ನನ್ನಿಂದ ತಪ್ಪಾಗಿದೆ ಇನ್ನು ಮುಂದೆ ನಾನು ತಪ್ಪು ಮಾಡುವುದಿಲ್ಲ ಎಂದು ಸರಸ್ವತಿ ಪ್ರಾಂಶುಪಾಲರು ತಿಳಿಸಿದರು. ಈ ಕಂದಗಲ್ಲು ಮುರಾರ್ಜಿ ವಸತಿ ಶಾ

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ನಿವೃತ್ತಿ ಇಂಜಿನಿಯರ್‌ಗೆ ೨.0೩ ಕೋಟಿ ಲಕ್ಷ ಪಂಗನಾಮ ಹಾಕಿದ ವಂಚಕರು

ಇಮೇಜ್
ಕೊಟ್ಟೂರು: ಕಳೆದ ವಿಧಾನ ಸಭೆ ಚುನಾವಣೆಯ ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲಾತಿ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ಎಂಬವರಿಗೆ ಬರೊಬ್ಬರಿ ೨.೩ ಕೋಟಿ ರೂಪಾಯಿಗಳು ವಂಚನೆಗೊಳಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಪ್ರಕರಣವು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿಗಳಾದ ಬೆನಕನಹಳ್ಳಿ ರೇವಣಸಿದ್ದಪ್ಪ ಹಾಗೂ ಪುತ್ತೂರಿನ ಎನ್.ಪಿ. ಶೇಖರ ಇವರಿಬ್ಬರ ವಿರುದ್ಧ ದೂರು ದಾಖಲಾಗಿರುತ್ತದೆ. ಆದರೆ ಈ ಪ್ರಕಣದಲ್ಲಿ ಇನ್ನೂ ಅನೇಕ ವ್ಯಕ್ತಿಗಳ ಹೆಸರುಗಳು ಸಹ ಕೇಳಿ ಬಂದಿದ್ದು ಬೆಳಕಿಗೆ ಬರೋವುದು ಬಾಕಿ ಇದೆ. ಈ ಪ್ರಕಣದಲ್ಲಿ ಮೊದಲ ಆರೋಪಿಯಾಗಿರುವ ಬೆನಕನಹಳ್ಳಿ ರೇವಣಸಿದ್ದಪ್ಪನು ಹಾಲಿ ವಿಜಯನಗರ ಜಿಲ್ಲೆಯ ಜನಾರ್ದನ ರೆಡ್ಡಿಯ ನೂತನ ಪಕ್ಷದ ಜಿಲ್ಲಾಧ್ಯಕ್ಷನಾಗಿರುತ್ತಾನೆ. ಇನ್ನೊಂದು ಪಕ್ಷದ ಟಿಕೆಟ್ ಕೊಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರಾದ ಪ್ರದೀಪ್ ಪ್ರಶ್ನೆಸಿದರು. ಕೋಟ್-೦೧:  ಈ ವಂಚನೆ ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದ್ದು, ಆರೋಪಿಗಳಿ ಪತ್ತೆಗಾಗಿ ತಂಡವನ್ನು ರಚಿಸಿದ್ದು, ಅತಿ ಶೀಘ್ರದಲ್ಲಿ ವಂಚಕರನ್ನು ಬಂದಿಸುತ್ತೇವೆ. ಜಿಲ್ಲಾ ವರಿಷ್ಠಾಧಿಕಾರಿಗಳು, ವಿಜಯನಗರ ಜಿಲ್ಲೆ. ಕೋಟ್-೦೨  ನನಗಾದ ವಂಚನೆಯ ಪ್ರಕರಣವನ್ನು ಕೊಟ್ಟೂರು ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿರುತ್ತೇನೆ. ಆದ್ದರಿಂದ ಅತಿ ಶೀಘ್ರದಲ್ಲಿ ವಂಚಕರನ್ನು ಪತ್ತೆ ಮಾಡಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಅಧಿಕ

"ನಡಗರ ಸಂಭ್ರಮದಿಂದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ "

ಇಮೇಜ್
  "ಶ್ರೀ ಗುರು ಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಮಹೋತ್ಸವವದೊಂದಿಗೆ ವೈಭವದ ದಸರಾ ತೆರೆ " ಕೊಟ್ಟೂರು: ಶ್ರದ್ಧಾ ಭಕ್ತಿಗಳೊಂದಿಗೆ ಆಚರಣೆಗೊಂಡ ವಿಜಯದಶಮಿ ಹಬ್ಬ ಆರಾಧ್ಯ ದೈವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿಯ ಪಲ್ಲಕ್ಕಿ ಮಹೋತ್ಸವವದೊಂದಿಗೆ ವೈಭವದಿಂದ ಮಂಗಳವಾರ ಸಂಜೆ ಅಂತಿಮ ತೆರೆಕಂಡಿತು. ದಸರಾ ನಿಮಿತ್ಯ ಪಟ್ಟಣದಲ್ಲಿನ ಕೋಟೆ ಬಾಗದ ಊರಮ್ಮನ ದೇವಸ್ಥಾನ, ಕಾಳಮ್ಮದೇವಿ ದೇವಸ್ಥಾನ, ಬನಶಂಕರಿ, ನೇಕಾರ ಕಾಲೋನಿಯ ಚೌಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶ್ರೀರಾಮ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದಿನಂಪ್ರತಿ ವಿವಿಧ ಬಗೆಯ ಅಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಸಾಗಿದ್ದವು. ಕೊನೆಯ ದಿನವಾದ ಮಂಗಳವಾರ ರಂದು ದಸರಾ ಹಬ್ಬದ ಅಂಗವಾಗಿ ಶ್ರೀ ಗುರು ಬಸವೇಶ್ವರ ಸ್ವಾಮಿಯ ಬೆಳ್ಳಿ  ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಸಾಗಿತು. ಅಕ್ಟರ್ ಬಾದುಷಹ ನೀಡಿದ್ದ ಖಡ್ಗವನ್ನು ಪಲ್ಲಕ್ಕಿಯಲ್ಲಿ ಇರಿಸಲಾಗಿತ್ತು. ಕ್ರಿಯಾಮೂರ್ತಿಗಳಾದ ಆರ್.ಎಂ.ಪ್ರಕಾಶ್ ಸ್ವಾಮಿ  ಕೊಟ್ಟೂರು ದೇವರು ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ಹಿರೇಮಠದಿಂದ ಮಂಗಳವಾರ ಸಂಜೆ 4.30ಕ್ಕೆ ಆರಂಭಗೊಂಡಿತು. ಈ ದಸರಾ ಮಹೊತ್ಸವು ತೇರು ಬಜಾರ್ ಮೂಲಕ ಸಾಗಿ ಹ್ಯಾಳ್ಯಾ ರಸ್ತೆಯಲ್ಲಿನ ಬನ್ನಿಕಟ್ಟೆಗೆ ತಲುಪಿ ಬನ್ನಿ ಮಹಾಕಾಳಿ ದೇವತೆಗೆ ಪೂಜೆಯು ನೆರವೇರಿಸಿ  ಸಾವಿರಾರು ಭಕ್ತರು ಪಲ್ಲಕ್ಕಿಯಲ್ಲಿರುವ ಶ್ರೀ ಗುರು ಬಸವೇಶ್ವರ ಸ್ವಾಮಿಯ ದರ್ಶನ ಪಡೆದು ಬನ್

ವಿಶ್ವ ಅಯೋಡಿನ್ ಕೊರತೆ ನಿವಾರಣಾ ಸಪ್ತಾಹ

ಇಮೇಜ್
ಮಾನ್ವಿ: ತಾಲೂಕಿನ ನಕ್ಕುಂದಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆವತಿಯಿಂದ ನಡೆದ ವಿಶ್ವ ಅಯೋಡಿನ್ ಕೊರತೆ ನಿವಾರಣಾ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರಾಷ್ಟ್ರೀಯ ಬಾಲ ಸ್ವಾಸ್ಥ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಶ್ರೀಧರ ಇಲ್ಲೂರು ಮಾತನಾಡಿ ಅಯೋಡಿನ್ ನಮ್ಮ ದೇಹಕ್ಕೆ ಬೇಕಾಗುವ ಒಂದು ಸೂಕ್ಷ್ಮ ಪೋಷಕಾಂಶವಾಗಿದು ಅಯೋಡಿನ್ ಕೊರತೆಯಿಂದ ಹುಟ್ಟುವ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ವಿಕಲತೆ ಕಂಡುಬರುತ್ತದೆ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಮತ್ತು ಕಲಿಕೆಯಲ್ಲಿ ಹಿಂದುಳಿಕೆ ಕಂಡುಬರುತ್ತದೆ ಗರ್ಭಣಿಯರಲ್ಲಿ ಅಯೋಡಿನ್ ಕೊರತೆ ಉಂಟಾದಲ್ಲಿ ನಿರ್ಜೀವ ಮಗು ಜನನವಾಗುವ ತೊಂದರೆ ಉಂಟಾಗುತ್ತದೆ ವಯಸ್ಕರಲ್ಲಿ ನಿಶಕ್ತಿ ಜಡತ್ವ ಗಳಗಂಡ ರೋಗ ಥೈರಾಯ್ಡ್ ಗ್ರಂಥಿಯ ಊತ ಕಂಡುಬರುತ್ತದೆ ಆದ್ದರಿಂದ ೦ ದಿಂದ ೦೧ ವರ್ಷದ ಮಕ್ಕಳಿಗೆ ೫೦ ಮೈಕ್ರೊ ಗ್ರಾಂ ೧೨ ರಿಂದ ೫೯ ತಿಂಗಳು ಮಕ್ಕಳಿಗೆ ೯೦ ಮೈಕ್ರೊ.ಗ್ರಾಂ. ಶಾಲಾ ವಯಸ್ಸಿನ ಮಕ್ಕಳಿಗೆ.೧೨೦ ಮೈಕ್ರೊ ಗ್ರಾಂ ಗರ್ಭಿಣಿಯರಿಗೆ ಹಾಗೂ ವಯಸ್ಕರಿಗೆ ೨೦೦ ಮೈಕ್ರೋ ಗ್ರಾಂ ನಷ್ಟು ಅಯೋಡಿನ್ ಸೇವನೆ ಅಗತ್ಯವಾಗಿರುತ್ತದೆ ಬೇಕಾಗಿರುತ್ತದೆ. ಅದ್ದರಿಂದ ನಾವು ಪ್ರತಿನಿತ್ಯ ಸೇವಿಸುವ ಉಪ್ಪಿನಲ್ಲಿ ಅಯೋಡಿನ್ ಸೇರಿಸಿರುವುದರಿಂದ ನೀವು ಅಯೋಡಿನ ಕೊರತೆಯನ್ನು ನಿಗಿಸಲು ಪ್ರತಿದಿನ ಆಹಾರದಲ್ಲಿ ಅಯೋಡಿನ್ ಇರುವ ಉಪುನ್ನೆ ಬಳಸಬೇಕು ಎಂದು

ಮತ್ತೆ ಚಿರತೆ ಪ್ರತ್ಯಕ್ಷ:ಜನರಲ್ಲಿ ಹೆಚ್ಚಿದೆ ಆತಂಕ

ಇಮೇಜ್
ಮಾನವಿ:-ಅ,24, ಯರಮಲದೊಡ್ಡಿ ಜಮೀನಿನಲ್ಲಿ ಚಿರತೆಯೊಂದು ಕೃಷ್ಣ ಮೃಗದ ಮೇಲೆ ದಾಳಿ ಮಾಡಿ ಕೊಂದ ಘಟನೆಯಿಂದ ಜನರಲ್ಲಿ ಆತಂಕ ಹೆಚ್ಚಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಜಾಗೃತಿ ಮೂಡಿಸುತ್ತಿಲ್ಲ ಎಂಬುದು ಸ್ಥಳೀಯರ ಸುತ್ತಮುತ್ತಲ ಗ್ರಾಮಸ್ಥರ ಅಸಮಾಧಾನವಾಗಿದೆ. ತಾಲೂಕಿನ ಯರಮಲದೊಡ್ಡಿ ಗ್ರಾಮದ ಹೊಲದಲ್ಲಿ, ಚಿರತೆ ದಾಳಿ ಮಾಡಿ ಕೃಷ್ಣಮೃಗವನ್ನು ಹೊಂದಿದ್ದು ಜನರು ಭಯಪಡುತ್ತಿದ್ದಾರೆ. ಇತ್ತೀಚೆಗೆ ಬೆಳಗಿನ ಪೇಟೆಯಲ್ಲಿ ಕಳೆದ ಶನಿವಾರ ಮೇಕೆಯೊಂದನ್ನು ಕೊಂದಿತ್ತು ಈ ಘಟನೆಯಿಂದ, ಸ್ಥಳೀಯರು ತಮ್ಮ ಜಮೀನುಗಳಿಗೆ ತೆರಳಲು ಭಯ ಪಡುತ್ತಿದ್ದಾರೆ. ಕೃಷ್ಣ ಮೃಗವನ್ನು ಬೇಟೆಯಾಡಿ ಹೊತ್ತೊಯ್ಯಲಾಗದೆ, ಜಮೀನಿನಲ್ಲಿಯೇ ಬಿಟ್ಟು ಹೋಗಿರುವುದನ್ನು ಸುತ್ತಮುತ್ತಲಿನ ರೈತರು ಕಂಡು ರೈತರು ಅರಣ್ಯಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅಗಮಿಸಿದ ವಲಯ ಅರಣ್ಯಾಧಿಕಾರಿ ಸುರೇಶ ಭೇಟಿ ನೀಡಿ ಪರಿಸೀಲನೆ ನಡೆಸಿ, ಮೃತ ಕೃಷ್ಣ ಮೃಗವನ್ನು ತಮ್ಮ ಸುರ್ಪದಿಗೆ ಪಡೆದುಕೊಂಡು, ಸರಕಾರಿ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದು, ಪಶು ವೈದ್ಯರು ನೀಡಿದ ವರದಿಯ ಆಧಾರದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನೂ ಸುತ್ತಮತ್ತಲ ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.