ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಭಾರತೀಯ ಅಂಚೆ ಇಲಾಖೆ ಹೊಂದಿದೆ:- ವಿ ಎಲ್ ಚಿತ್ ಕೋಟಿ,
ಕೊಟ್ಟೂರು:ಎರಡು ಶತಮಾನಗಳ ಹಿಂದೆ ಸಂಪರ್ಕಕ್ಕಾಗಿ ಹುಟ್ಟಿಕೊಂಡ ಅಂಚೆ ಇಲಾಖೆ ಇಂದು ನೂರಕ್ಕೂ ಹೆಚ್ಚು ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ, ಹಳ್ಳಿಯಿಂದ ದಿಲ್ಲಿಯವರೆಗೆ, ದೇಶಗಳಿಂದ ವಿದೇಶಗಳ ವರೆಗೆ ಹಬ್ಬಿರುವ ಭಾರತೀಯ ಅಂಚೆ ಇಲಾಖೆ ಸೇವೆಯಲ್ಲಿ ಕೋಟಿ ಕೋಟಿ ಗ್ರಾಹಕರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ, ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಇಲಾಖೆ ಎಂದರೆ ಅದು ನಮ್ಮ ಭಾರತೀಯ ಅಂಚೆ ಇಲಾಖೆ ಎಂದು ಬಳ್ಳಾರಿಯ ಅಂಚೆ ಅದೀಕ್ಷಕರಾದ ವಿ ಎಲ್ ಚಿತ್ಕೋಟಿಯವರು ಕೊಟ್ಟೂರು ತಾಲೂಕಿನ ಹರಾಳ ಗ್ರಾಮದಲ್ಲಿ ನಡೆದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಭಾರತ ಸರ್ಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ 1,56,000 ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಸೌಲಭ್ಯಗಳು ಸಿಗಲಿ ಎಂದು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು, " ಪೈಸೆಯಲ್ಲಿ ಕೊಟ್ಟ ರೊಕ್ಕವನ್ನು ರೂಪಾಯಿಯ ರೂಪ ದಲ್ಲಿ ಕೊಡುವ ಇಲಾಖೆ ಎಂದರೆ ಅದು ಅಂಚೆ ಇಲಾಖೆ" ಭಾರತ ಸರ್ಕಾರ ದೇಶದಲ್ಲಿ