ಪೋಸ್ಟ್‌ಗಳು

ಮೂಲಸೌಕರ್ಯಗಳ ಬೇಡಿಕೆಗೆ ಸ್ಪಂದಿಸುವಂತೆ |ದಕ್ಷಿಣ ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕ| ಮನೀಶ ಅಗರವಾಲಗೆ ಮನವಿ

ಇಮೇಜ್
ಮೂಲಸೌಕರ್ಯಗಳ ಬೇಡಿಕೆಗೆ ಸ್ಪಂದಿಸುವಂತೆ | ಮನೀಶ ಮನೀಶ ಅಗರವಾಲಗೆ  ಮನವಿ ರಾಯಚೂರ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳು, ಕೋವಿಡ್ ಸಂದರ್ಭದಲ್ಲಿ ಸ್ಥಗೀತಗೊಂಡ ರೈಲುಗಳ ಓಡಾಟ ಮತ್ರು ವಿಸ್ತರಣಾ ರೈಲುಗಳ ಬೇಡಿಕೆಗೆ ಸ್ಪಂದಿಸುವಂತೆ ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಅವರು ದಕ್ಷಿಣ ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮನೀಶ ಅಗರವಾಲಗೆ ಮನವಿ ಪತ್ರ ನೀಡಿದರು.ಅಗರವಾಲ್ ಅವರು ರಾಯಚೂರ ರೈಲ್ವೆ ನಿಲ್ದಾಣದ ವೀಕ್ಷಣೆಗೆ ಬಂದಿದ್ದಾಗ,ಬಾಬುರಾವ್ ಮನವಿ ಪತ್ರ ನೀಡಿ,ರಾಯಚೂರ ಕಾಕಿನಾಡ್ ವಾರದ ವಿಶೇಷ ರೈಲು ಕೋವಿಡ ಕಾರಣದಿಂದ ಓಡಾಟ ನಿಲ್ಲಿಸಿದ್ದು ಇನ್ನೂ ಆರಂಭವಾಗಿಲ್ಲ.ಇದರಿಂದ ಇಲ್ಲಿ ವಾಸವಿರುವ ಆಂಧ್ರದ ಗೋದಾವರಿ ಕರಾವಳಿ ಮತ್ತು ಗುಂಟೂರ, ಕೃಷ್ಣ ಪ್ರಕಾಸಂ ಜಿಲ್ಲೆಯ , ರೈತರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ಗಮನಕ್ಕೆ ತಂದರು. ಲಿಫ್ಟ ಸೌಕರ್ಯದತ್ತ ನಿಗಾಯಿಡುವುದು, ಪ್ರಯಾಣಿಕರ ಅನುಕೂಲಕ್ಕೆ ಕ್ಯಾಂಟಿನ್ ಆರಂಭಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಮನವಿ ಪತ್ರ ನೀಡಿದರು.

ಸುಸ್ಥಿರ, ಸಮಾನತೆ, ಜ್ಞಾನವಂತ ಸಮಾಜ ನಿರ್ಮಾಣ ರಾಷ್ಟಿçÃಯ ಶಿಕ್ಷಣ ನೀತಿಯ ಮೂಲ ಉದ್ದೇಶ: ವಿಜಯಕುಮಾರ

ಇಮೇಜ್
ಮೂರನೇ ವರ್ಷದ ರಾಷ್ಟಿçÃಯ ಶಿಕ್ಷಣ ನೀತಿಯ ವಾರ್ಷಿಕೋತ್ಸವ ಸಮಾರಂಭ ರಾಯಚೂರು,ಜು.೨೯:- ಭಾರತದೇಶವನ್ನು ಸುಸ್ಥಿರವಾಗಿ ಸಮಾನತೆ ಮನೋಧರ್ಮದ ಹಾಗೂ ಸ್ಪಂದನಶೀಲ ಜ್ಞಾನ ಸಮಾಜವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಭಾರತೀಯ ಅಸ್ಮಿತೆಯ ಮೇಲೆ ಆಧಾರಗೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ಸಾಕರಗೊಳಿಸುವುದು ಈ ರಾಷ್ಟೀಯ ಶಿಕ್ಷಣ ನೀತಿಯ ಮಹಾನ್ ಉದ್ದೇಶವಾಗಿದೆ ಹಾಗೂ ಪ್ರತಿಯೊಬ್ಬರಿಗೂ ಉನ್ನತ ಮಟ್ಟದ ಶಿಕ್ಷಣವನ್ನು ದೊರಕಿಸಿ ಕೊಡುವುದರ ಮೂಲಕ ಈ ಕನಸನ್ನು ನನಸಾಗಿಸಬಹುದು ಎಂದು ಹಟ್ಟಿಯ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ವಿಜಯಕುಮಾರ ಅವರು ಹೇಳಿದರು.  ಅವರು ಜು.೨೮ರ(ಶುಕ್ರವಾರ) ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮೂರನೇ ವರ್ಷದ ರಾಷ್ಟಿçÃಯ ಶಿಕ್ಷಣ ನೀತಿಯ ವಾರ್ಷಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಕೇಂದ್ರೀಯ ವಿದ್ಯಾಲಯ ಸಂಸ್ಥೆಗಳು ರಾಷ್ಟಿçÃಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಕ್ರಮ ಮತ್ತು ಭೋಧನಾಕ್ರಮಗಳು ವಿದ್ಯಾರ್ಥಿಗಳಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ಸಂವಿಧಾನಾತ್ಮಕ ಮೌಲ್ಯಗಳು ಇವುಗಳ ಬಗ್ಗೆ ಆಳವಾದ ಗೌರವಾಧಾರಗಳನ್ನು ಹುಟ್ಟುಹಾಕುವಂತಾಗಬೇಕೆAಬ ಗುರಿಯನ್ನು ಹೊಂದಿವೆ ಎಂದು ತಿಳಿಸಿದರು. ಇದೇ ವೇಳೆ ರಾಯಚೂರು ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಶಿಕ್ಷಕ ಡಿ.ದಿನೇಶ್ ಕುಮಾರ್ ಅವರು ಶಾಲಾ ಶಿಕ್ಷಣದ ವಿನ್ಯಾಸದ ಬಗ್ಗೆ ಮಾಹಿತಿ ನೀಡಿ, ಭೋಧನಾಕ್ರಮ ಹಾಗೂ ಶಿಕ್ಷಣಕ್ರಮಗಳನ್ನು ಮರು ವಿನ್ಯಾಸ ಮಾಡಲಾಗಿದೆ. ಹೊಸ ಭೋಧನಾ

ಪತ್ರಕರ್ತರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡಬೇಕು| ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಲಹೆ

ಇಮೇಜ್
ಮಂಡ್ಯ : ಪೂರ್ವಾಗ್ರಹ ಪೀಡಿತರಾಗಿ, ದ್ವೇಷದ ರಾಜಕಾರಣವನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಮುಖ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಾದವರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಲಹೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕೆ.ವಿ. ಶಂಕರಗೌಡರ ಶತಮಾನೋತ್ಸವ ಭವನದಲ್ಲಿ ನಡೆದ ಸಾಧನೆಗೈದ ಪತ್ರಕರ್ತರಿಗೆ ಅಭಿನಂದನೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದು ಕೇವಲ ಎರಡು ತಿಂಗಳಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಎಲ್ಲ ಕಾರ್ಯಕ್ರಮಗಳಿಗೂ ವೇಗ ನೀಡಲಾಗುತ್ತಿದೆ. ಇದಕ್ಕೆ ಕೆಲವರು ಅಪಸ್ವರ ಎತ್ತುತ್ತಿರುವುದು ಸರಿಯಲ್ಲ. ಕೆಲಸ ಮಾಡಿದರೂ ಅಪವಾದ, ಮಾಡದಿದ್ದರೂ ಅಪವಾದ ಎಂಬಂತೆ ಬಿಂಭಿಸುವುದು ಸರಿಯಲ್ಲ ಎಂದು ಹೇಳಿದರು. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇನಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಹೆದ್ದಾರಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳನ್ನು ನೀಡದೆ ಸಾರ್ವಜನಿಕ ಸೇವೆಗೆ ಆತುರಾತುರವಾಗಿ ಲೋಕಾರ್ಪಣೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಯಾವುದೇ ಯೋಜನೆ ರೂಪಿಸಬೇಕಾದರೂ ಅದಕ್ಕೆ ಸಂಬಂಧಿಸಿದ ಎಲ್ಲ  ಕಾರ್ಯಕ್ರಮಗಳನ್ನೂ ಪೂರ್ಣಗೊಳಿಸಿದ ಬಳಿಕವಷ್ಟೇ ಸಾರ್ವಜನಿಕ ಸೇವೆಗೆ ಅರ್ಪಿಸಬೇಕು. ಈ ಬಗ್ಗೆ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು. ಈ ಹೆದ್ದಾರಿಯಲ್ಲಿ ಬರುವ 5ನಗರ ಮತ್ತು ಪಟ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ |ಕೂಡ್ಲಿಗಿ ತಾಲೂಕು ಘಟಕದಿಂದ |ಜುಲೈ 31ರಂದು ಪತ್ರಿಕಾ ದಿನಾಚರಣೆ....

ಇಮೇಜ್
  ಕೂಡ್ಲಿಗಿ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲೂಕು ಘಟಕದಿಂದ ಜುಲೈ 31 ಸೋಮವಾರ ರಂದು ಪಟ್ಟಣದ ಹಿರೇಮಠ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಸಂಘದ ತಾಲೂಕು ಅಧ್ಯಕ್ಷ ಮಂಜು ಮಯೂರ ತಿಳಿಸಿದ್ದಾರೆ. ಕಾರ್ಯಕ್ರಮವು ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದ್ದು ಶಾಸಕರಾದ ಡಾ" ಎನ್ ಟಿ ಶ್ರೀನಿವಾಸ್ ಉದ್ಘಟಿಸುವರು.  ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಷ" ಬ್ರ" ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು. ಮತ್ತು ಶ್ರೀ ಐಮಾಡಿ ಶರಣಾರ್ಯರು. ವಹಿಸುವರು. ಮುಖ್ಯ ಅತಿಥಿಗಳಾಗಿ ಮೊಳಕಾಲ್ಮೂರು ಶಾಸಕರಾದ ಎನ್ ವೈ ಗೋಪಾಲಕೃಷ್ಣ ಹಾಗೂ ವಿಜಯನಗರ ಜಿಲ್ಲಾ ಕಾನಿಪ ಅಧ್ಯಕ್ಷ ಸತ್ಯನಾರಾಯಣ. ಪ್ರಧಾನ ಕಾರ್ಯದರ್ಶಿ ಕೆ ಲಕ್ಷ್ಮಣ. ರಾಜ್ಯ ಸಮಿತಿ ಸದಸ್ಯ ಪಿ ವೆಂಕೋಬನಾಯಕ. ಟಿ ಜಗದೀಶ್ ತಹಸೀಲ್ದಾರರು. ವೈ ರವಿಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯಿತಿ. ಮಲ್ಲೇಶಪ್ಪ ಮಲ್ಲಾಪುರ ಡಿವೈಎಸ್ಪಿ. ವಸಂತ್ ಅಸೋದೆ ಸಿ ಪಿ ಐ. ಫಿರೋಜ್ ಖಾನ್ ಮುಖ್ಯ ಅಧಿಕಾರಿ ಪಟ್ಟಣ ಪಂಚಾಯಿತಿ. ಪಿ ಪ್ರದೀಪ್ ಕುಮಾರ್ ತಾಲೂಕು ವೈದ್ಯಾಧಿಕಾರಿ. ಪಿ ಶಿವರಾಜ್ ತಾಲೂಕು ಅಧ್ಯಕ್ಷರು ಕ.ರಾ.ಸ.ನೌ. ಸಂಘ. ಇತರರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ...

ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಮೊಹರಂ ಆಚರಣೆ

ಇಮೇಜ್
ಕೊಟ್ಟೂರಿನಲ್ಲಿ ಭಾವೈಕ್ಯತೆಯೊಂದಿಗೆ ಹಿಂದೂಗಳಿಂದ ಮೊಹರಂ ಆಚರಣೆ ಕೊಟ್ಟೂರು:ಮೊಹರಂ ಹಬ್ಬವನ್ನು ಇಲ್ಲಿನ ಮುಸ್ಲಿಂರಿಗಿಂತ ಅನ್ಯಕೋಮಿನ ಜನರು ಶ್ರದ್ದ ಭಕ್ತಿಗಳೊಂದಿಗೆ ಶನಿವಾರ ಆಚರಿಸಿದರು. ಇದರ ಅಂಗವಾಗಿ ಪೀರಲ ದೇವರುಗಳನ್ನು ಪಟ್ಟಣದ ನಾಲ್ಕೈದು ಮಸೀದಿಗಳಿಂದ ಮೆರವಣಿಗೆ ಮೂಲಕ ತಂದು ಮುಸ್ಲಿಂ ಬಳಗದವರನ್ನು ವೈಭವದ ಮೆರವಣಿಗೆ ಮೂಲಕ ಕೊಂಡು ಒಯ್ಯಲಾಯಿತು. ಮೆರವಣಿಗೆಯುದ್ದಕ್ಕೂ ಪಾಲ್ಗೊಂಡಿದ್ದ ಭಕ್ತರು ಕ್ಯಾಹುಸೇನ್-ಬೌಸೇನ್ ಎಂಬ ಘೋಷಣೆಗಳನ್ನು ಕೂಗಿದರಲ್ಲದೇ ನೃತ್ಯ ಮಾಡುತ್ತ ಉದ್ದಕ್ಕೂ ಸಾಗಿದರು. ಮೆರವಣಿಗೆ ಗಾಂಧಿ ವೃತ್ತದ ಬಳಿ ಬರುತ್ತಿದ್ದಂತೆ ಹರಿಜನ ಮಹಿಳೆಯರು ಸೇರಿದಂತೆ ಇತರರು ನೆಲಕ್ಕೆ ಮಲಗಿ ಪೀರ್ಲದೇವರನ್ನು ಹೊತ್ತವರು ತಮ್ಮನ್ನು ತುಳಿದು ಸಾಗಲೀ ಎಂದು ಬಯಸಿದರು.       ಹೀಗೆ ಮಾಡುವುದರಿಂದ ತಮಗೆ ಒಳಿತಾಗುತ್ತದೆ ಎಂಬ ನಂಬಿಕೆ ಅವರಲ್ಲಿ ಮನೆ ಮಾಡಿದ್ದು ಈ ಕಾರಣಕ್ಕಾಗಿ ಮೆರವಣಿಗೆ ಸಾಗುವ ಕೆಲ ಪ್ರದೇಶಗಳಲ್ಲಿ ಇದೇ ತೆರನಾದ ನೆಲಕ್ಕೆ ಮಲಗುವ ಭಕ್ತರು ಕಂಡುಬಂದರು.   ಮೆರವಣಿಗೆ ಪಟ್ಟಣ ಹೊರಪ್ರದೇಶದಲ್ಲಿನ ಕೆರೆಗೆ ತೆರಳಿ ಪೀರ್ಲ ದೇವರುಗಳನ್ನು ವಿಸರ್ಜಿಸಿದರು ನಂತರ ದೇವರ ಮೂರ್ತಿಗಳನ್ನು ಅವುಗಳನ್ನು ಪೆಟ್ಟಿಗೆಯಲ್ಲಿ ಇರಿಸಿ ತಲೆಯ ಮೇಲೆ ಹೊತ್ತುಕೊಂಡು ವಿದಾಯ ಗೀತೆಯನ್ನು ರಾಗಬದ್ದವಾಗಿ ಹಾಡುತ್ತ ಪಟ್ಟಣದ ಮಸೀದಿಗಳ ಬಳಿ ಬಂದರು ಮೊಹರಂ ಹಬ್ಬದ ನಿಮಿತ್ತ ಪೋಲಿಸರು ಬಿಗಿ ಬಂದೋಬಸ್ತ ನಿಯೋಜನೆಗೊಂಡಿತ್ತು.

ಕೃಷಿ ವಿವಿಯ ಹನ್ನೆರಡನೇ ಘಟಿಕೋತ್ಸವ ಸಮಾರಂಭ

ಇಮೇಜ್
  ಕೃಷಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶದ ಹಿತಕ್ಕೆ ಶ್ರಮಿಸಿ: ಥಾವರ್ ಚಂದ್ ಗೆಹ್ಲೋಟ್ ರಾಯಚೂರು,ಜು.೨೮:- ಭಾರತವು ಕೃಷಿ ಪ್ರಧಾನ ರಾಷ್ಟçವಾಗಿದ್ದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕೃಷಿ ಶಿಕ್ಷಣ ಪಡೆದು ಸ್ವಹಿತ, ಜನ ಹಿತ ಹಾಗೂ ದೇಶದ ಹಿತಕ್ಕೆ ಶ್ರಮಿಸಬೇಕೆಂದು ರಾಜ್ಯಪಾಲರೂ ಹಾಗೂ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಅವರು ಹೇಳಿದರು.  ಅವರು ಜು.೨೮ರ(ಶುಕ್ರವಾರ)ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹನ್ನೆರಡನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕ ಭಾಗದ ಕೃಷಿ ಅಭಿವೃದ್ಧಿಗೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಕಲಿತಂತ ವಿದ್ಯಾರ್ಥಿಗಳು ರೈತರ ಆದಾಯವನ್ನು ಮತ್ತು ಕೃಷಿ ಚಟುವಟಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಮತ್ತು ವಿಶ್ವಿದ್ಯಾಲಯದಿಂದ ಪಡೆದ ಜ್ಞಾನವನ್ನು ದೇಶ ಹಾಗೂ ಸಮಾಜಹದ ಹಿತಕ್ಕಾಗಿ ಸಮರ್ಪಿಸಬೇಕು ಎಂದು ತಿಳಿಸಿದರು.  ಭಾರತ ದೇಶವು ಕೃಷಿ ಪ್ರಧಾನ ರಾಷ್ಟçವಾಗಿದ್ದು, ಭಾರತದ ಆರ್ಥಿಕತೆಗೆ ಕೃಷಿಯು ಮಹತ್ವಪೂರ್ಣವಾಗಿದೆ. ಕೃಷಿಯ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಕೃಷಿಕರು ಈ ಯೋಜನೆಗಳನ್ನು

ದಾನಿಗಳಿಂದ ಹೊಸರೂಪ ಪಡೆದ ಸರ್ಕಾರಿ ಶಾಲೆ

ಇಮೇಜ್
ಗುಡೇಕೋಟೆ: ಸರಕಾರಿ ಶಾಲೆಗಳು ಅಂದರೆ ಜನರು ನೋಡುವ ದೃಷ್ಟಿಕೋನವೇ ಬೇರೆ. ಇದಕ್ಕೆ ಕಾರಣ ಇತ್ತೀಚೆಗೆ ಖಾಸಗಿ ಶಾಲೆಗಳ ಕಡೆಗಿನ ಒಲವು ಹೆಚ್ಚಾಗಿದೆ. ಆದರೂ ಕೆಲವೊಂದು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿ ಇರುತ್ತವೆ. ಅಂತಹ ಶಾಲೆಗಳ ಪಟ್ಟಿಯಲ್ಲಿ ಇಲ್ಲೊಂದು ಶಾಲೆ ಕೂಡ ಸೇರ್ಪಡೆಯಾಗಲಿದೆ. ತಾವು ಕಲಿತ ಶಾಲೆ ಎನ್ನುವ ಅಭಿಮಾನದಿಂದ ಮಾಡಿದ ಕಾರ್ಯದಿಂದ ಈ ಶಾಲೆಯಲ್ಲಿ ಓದುವ ಹಂಬಲವಿರುವ ಮಕ್ಕಳನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗೆದ್ದಲಗಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಅಭಿವೃದ್ಧಿಯತ್ತ ಸಾಗುತ್ತಿದೆ. ಒಂದು ಕ್ಷಣ ನೋಡಿದರೆ ಸಾಕು ಶಾಲೆಯನ್ನು ಮತ್ತೆ ಮತ್ತೆ ನೋಡಬೇಕೆನ್ನಿಸುವ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಶಾಲೆ ಕಪೌಂಡ್​ಗೆ ಲೇಪಿಸಿದ ಬಣ್ಣ, ಬರೆದ ಬರಹಗಳು, ಚಿತ್ರಗಳು ಆಕರ್ಷಿಸುತ್ತವೆ. ಜೊತೆಗೆ ಶಾಲೆಯ ಕಟ್ಟಡಗಳು ಬಣ್ಣದಿಂದ ಕಂಗೊಳಿಸುತ್ತಿವೆ. ಹಾಗಂತ ಈ ಶಾಲೆಗೆ ಸರಕಾರದಿಂದ ವಿಶೇಷ ಅನುದಾನ ಬಂದಿಲ್ಲ.ಇಷ್ಟೆಲ್ಲ ಅಭಿವೃದ್ಧಿ, ಅಂದ ಚೆಂದಕ್ಕೆ ಕಾರಣ ಉಚಿತವಾಗಿ ವರ್ಲಿ ಬಣ್ಣವನ್ನು ಶಾಲೆಗೆ ಉಚಿತ ನೀಡಿದ ಕೂಡ್ಲಿಗಿಯ ಕೊಟ್ರೇಶ್, ಮತ್ತು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು,ಗ್ರಾಮದ ಎಲ್ಲಾ ಮುಖಂಡರು, ಎಸ್ಡಿಎಂಸಿ ಅಧ್ಯಕ್ಷ ಸರ್ವ ಸದಸ್ಯರು.ಇತರರು. ತಾವು ಕಲಿತ ಶಾಲೆ ಮೊದಲು ಬಹಳ ಅಧೋಗತಿಗೆ ತಲುಪಿತ್ತು. ಜನರು ಮನಬಂದಂತೆ ವರ್ತ