"ಇದು ಬರೀ ರಸ್ತೆಯಲ್ಲ ಗುಂಡಿಗಳ ತಾಣ"

ಜನರ ಜೀವ ಬಲಿಗಾಗಿ ಕಾದು ಕುಳಿತಿರುವ : ಉದ್ಭವ ರಸ್ತೆ ಗುಂಡಿಗಳು ನಿರ್ಮಾಣ

ಕೊಟ್ಟೂರು: ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗುವುದು ಸಹಜ. ಆದರೆ ಗುಂಡಿಗಳಲ್ಲೇ ರಸ್ತೆ ಉದ್ಭವವಾಗಿದೆ ಎನ್ನುವಷ್ಟರ ಮಟ್ಟಿಗೆ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾದರೆ ಪ್ರಯಾಣಿಕರು ಬೀಳದೇ ಸುಗಮವಾಗಿ ಸಂಚರಿಸಲು ಸಾಧ್ಯವೇ? ಈ ರೀತಿಯ ರಸ್ತೆಗಳು ಇರುವುದು ಬೇರೆಲ್ಲೂ ಅಲ್ಲ, ಶ್ರೀ ಕ್ಷೇತ್ರ ವಾದ ಕೊಟ್ಟೂರು-ಹರಪನಹಳ್ಳಿ ಹೆದ್ದಾರಿಯ ಮಧ್ಯದ  ರಸ್ತೆ. ಚಪ್ಪರದಹಳ್ಳಿ ಕೆ ಅಯ್ಯನ ಹಳ್ಳಿ, ಹಾರಳು ಯವರೆಗೂ ರಸ್ತೆಯ ತುಂಬಾ ಗುಂಡಿಗಳು ನಿರ್ಮಾಣವಾಗಿವೆ. ಅಲ್ಲದೇ ಮಧ್ಯದಲ್ಲಿ ರೈಲ್ವೆ ಬ್ರಿಡ್ಜ್ ಕೆಳಗಂತೂ ಗುಂಡಿಗಳ ತಾಣವೇ ಇದೆ. ಹಲವಾರು ಬೈಕ್ ಪ್ರಯಾಣಿಕರು ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹರಣೆಗಳು ಇದ್ದರೂ ಸಹ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸುವ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ. 

ರಾತ್ರಿ ಪ್ರಯಾಣಿಸುವ ಪ್ರಯಾಣಿಕರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಓಡಾಡುವ ಜನರ ಪರದಾಟವನ್ನು ಕೇಳುವವರೇ ಇಲ್ಲದಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಂಡೂ ಕಾಣದಂತೆ ಮೂಕಪ್ರೇಕ್ಷಕರಾಗಿದ್ದಾರೆ ವಿನಾಃ ರಸ್ತೆ ದುರಸ್ತಿಯ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಹಿಂದೆ ರಸ್ತೆ ಸರಿಪಡಿಸುವಂತೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನ ಸೆಳೆದರೂ ಸಹ ಅವರು ಕೇರ್ ಮಾಡದೇ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.ಎಂದು ಪ್ರವೀಣ್ ಕುಮಾರ್, ಮಂಜುನಾಥ್, ಅಂಜಿನಿ ಪತ್ರಿಕೆ ಮೂಲಕ ತಿಳಿಸಿದರು.

ಕೋಟ್-೧

ರಸ್ತೆಗಳಲ್ಲಿ ವಿಪರೀತ ಗುಂಡಿಗಳು ಉದ್ಭವವಾಗಿದ್ದು ಜನರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ಸವಾರರು ಯಮಯಾತನೆ ಅನುಭವಿಸುತ್ತಿದ್ದಾರೆ. ಕಾಲು ಮುರಿದು ಕೊಂಡಿರುವ ವ್ಯಕ್ತಿ  ಕುಟುಂಬ ಸಂಕಟ ತೋಡಿಕೊಂಡಿದ್ದಾರೆ .ಈ ಕೂಡಲೇ ಅಧಿಕಾರಿಗಳು ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕೆಂದು.ಚಪ್ಪರದಹಳ್ಳಿ ಕೆ ಕೊಟ್ರೇಶ ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ ಅಯ್ಯನಹಳ್ಳಿ 

ಕೊಟ್ -2

ಚಪ್ಪರದಹಳ್ಳಿ ಗ್ರಾಮದ ಮತ್ತಿಹಳ್ಳಿ ಕೊಟ್ರೇಶಪ್ಪ ಎಂಬವರು ವಾಹನದಲ್ಲಿ ಸಂಚರಿಸುವ ಸಂದರ್ಭದಲ್ಲಿ ಕೆ ಅಯ್ಯನ ಹಳ್ಳಿ ಬ್ರಿಜ್ ಬಳಿ  ಗುಂಡಿಗಳಿಗೆ ಕುಡಿದ್ದು ರಸ್ತೆ ವಾಹನ ಸಂಚಾರ ಬಿದ್ದು ಕಾಲು ಮುರಿದುಕೊಂಡಿರುವ ಘಟನೆ ನಡೆದಿದೆ  ಕುಟುಂಬದವರು ಪತ್ರಿಕೆಗೆ ಸಂಕಟ ತೋಡಿಕೊಂಡಿದ್ದಾರೆ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*