*ಇಂಜಿನೀಯರಿಂಗ್ ಹಾಗೂ ವಾಸ್ತುಶಿಲ್ಪ ವಿಶ್ವಕರ್ಮರ ಕೊಡುಗೆ - ಡಾ.ಉಮೇಶ್ ಕುಮಾರ್*
ಚಿತ್ರದುರ್ಗ : ಇಂದು ನಾವು ಸುಂದರ ಜಗತ್ತನ್ನು ನೋಡುತ್ತಿದ್ದೇವೆ ಅಂದರೆ ಅದಕ್ಕೆ ಮುಖ್ಯ ಕಾರಣ ವಿಶ್ವಕರ್ಮರು” ಎಂದು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ವಿಶ್ವಕರ್ಮ ನಾಡೋಜ ಡಾ.ಬಿ.ಎಂ. ಉಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಹಿರಿಯೂರು ತಾಲೂಕು ವಿಶ್ವಕರ್ಮ ಸಮಾಜದವರು ಏರ್ಪಡಿಸಿದ್ದ “ಶ್ರೀ ಭಗವಾನ್ ವಿಶ್ವಕರ್ಮ ಜಯಂತೋತ್ಸವ”ದಲ್ಲಿ ಗಣ್ಯರೊಡನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. “ವಿಶ್ವಕರ್ಮರು ಸುಂದರ ಜಗತ್ತಿನ ನಿರ್ಮಾಣಕ್ಕೆ ಕಾರಣವಾದವರು. ಅಷ್ಟೇ ಅಲ್ಲದೆ ಅನಾದಿ ಕಾಲದಿಂದಲೂ ತಾಂತ್ರಿಕತೆಯಲ್ಲಿ ಅಪಾರ ನೈಪುಣ್ಯತೆಯನ್ನು ಸಾಧಿಸಿದವರು ಈ ಜಗತ್ತಿಗೆ ಇಂಜಿನಿಯರಿಂಗ್ ಹಾಗೂ ವಾಸ್ತುಶಿಲ್ಪವನ್ನು ಪರಿಚಯಿಸಿದವರು ವಿಶ್ವಕರ್ಮರು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ವಿಗ್ರಹ-ದೇವಸ್ಥಾನಗಳ ಗಾತ್ರ, ಅಳತೆಯನ್ನು ವೈಜ್ಞಾನಿಕವಾಗಿ ಸಮೀಕರಿಸಿ ಕೆತ್ತನೆಯ ಕೆಲಸವನ್ನು ಮಾಡುತ್ತಿದ್ದರು. ವಿಜ್ಞಾನ ತಂತ್ರಜ್ಞಾನದಲ್ಲಿ ಆ ಕಾಲಕ್ಕೆಅವರು ಪರಿಣಿತಿಯನ್ನು ಸಾಧಿಸಿದ್ದರು. ಈ ನೈಪುಣ್ಯತೆಯನ್ನು ನಾವೆಲ್ಲಾ ಪೋಷಿಸಿ ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ” ” ಎಂದು ಉಮೇಶ್ ಕುಮಾರ್ ತಿಳಿಸಿದರು.
ಈ ವೇಳೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಡಿ.ಟಿ ಶ್ರೀನಿವಾಸ್,ಹಿರಿಯೂರು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣಚಾರ್,
ಸ್ವರ್ಣಕಾರರು ಸಂಘದ ಅಧ್ಯಕ್ಷ ಕೃಷ್ಣಾಚಾರ್, ನಗರಸಭಾ ಅಧ್ಯಕ್ಷರಾದ ಅಜಯ್ ಕುಮಾರ್ ಉಪಾಧ್ಯಕ್ಷರು ಅಂಬಿಕಾ ಆರಾಧ್ಯ, ಬಾಲಕೃಷ್ಣ, ವಿಶ್ವಕರ್ಮ ಸೇವಾ ಸಮಿತಿ ಮಧುಸೂದನ್, ಚಳಕೆರೆ ಆರ್ ಪ್ರಸನ್ನ ಕುಮಾರ್, ಶಂಕರ್ ಮೂರ್ತಿ, ಟಿ ಸಂಜಯ್ ಕುಮಾರ್, ಸುನಿಲ್ ಸಿ, ಪದ್ಮಾವತಿ, ಸತೀಶ್ ಕುಮಾರ್, ಸತ್ಯನಾರಾಯಣ ಮತ್ತು ಅನೇಕ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ