ಬದುಕಿನಲ್ಲಿ ವಿಫಲವಾರಾದಾಗ ಧೃತಿಗೆಡಬಾರದು ತಹಶಿಲ್ದಾರ್ ಡಾ.ಮಲ್ಲಪ್ಪ ಕೆ

 

ಮಸ್ಕಿ : ಶಿಸ್ತು ಸಂಯಮ ಕ್ರಮಬದ್ಧವಾದ ಜೀವನವನ್ನು ನೆಡಸಬೇಕು ನಾವು ಬದುಕಿನಲ್ಲಿ ವಿಫಲವಾರಾದಾಗ ಧೃತಿಗೆಡದೆ ಬಂದ ಕಷ್ಟಗಳನ್ನು ಎದುರಿಸಬೇಕು ಎಂದು ತಹಶಿಲ್ದಾರರಾದ ಡಾ ಮಲ್ಲಪ್ಪ ಕೆ ಯರಗೋಳ ರವರು ಶಬಿರಾರ್ಥಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪ ಆವರಣದಲ್ಲಿ ನೆಡೆದ ಮಸ್ಕಿ ತಾಲ್ಲೂಕು ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಅಖಿಲ ಕರ್ನಾಟಕದ ಜನ ಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಸಹಯೋಗದಲ್ಲಿ ನೆಡೆದ ಕಾರ್ಯಕ್ರಮ ದಲ್ಲಿ ಮಾತನಾಡಿ ಪುಣ್ಯದ ಸ್ಥಳದಲ್ಲಿ ಪುಣ್ಯದ ಕಾರ್ಯಕ್ರಮ ಒಂದು ಮಾದರಿ 67 ಜನ ಮದ್ಯ ವ್ಯಸನ ಶಿಬಿರಾರ್ಥಿಗಳಿಗೆ ಸಾಧ್ಯವಾಗದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮಾಡಿದೆ ಮುಂದೆ ಯಾರೂ ಕೂಡ ವ್ಯಸನಕ್ಕೆ ಬಲಿಯಾಗದ ನಮಗೆ ಹಾಗೂ ಪೋಲಿಸ್ ಇಲಾಖೆಗೆ ಹೊರೆಯಾಗದಂತೆ ಕುಡಿತದ ಚಟವನ್ನು ಬಿಟ್ಟರೆ ಗ್ರಾಮ,ನಗರ, ಕುಟುಂಬ ಸಂತೋಷವಾಗಿ ಇರುತ್ತದೆ ಎಂದರು.

ಶಿಬಿರಾರ್ಥಿಗಳು ಪರಿವರ್ತನೆ ಆಗುತ್ತಾರೆ ಎಂಬ ಭರವಸೆ ನಮಗಿದೆ.ಇಂದಿನಿಂದ ಚಟವನ್ನು ಬಿಟ್ಟು ಉತ್ತಮ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿ ಯಾಗಿ ಎಂದು ಎಚ್ ಬಿ ಮುರಾರಿ ರವರು ಹೇಳಿದರು.

ಸಾವಿರ ಸುಳ್ಳು ಹೇಳಿ ಮದುವೆ ಮಾಡುತ್ತದೆಯೋ ಹಾಗೆಯೇ ಒಂದು ಕುಟುಂಬ ಒಳ್ಳೆಯದು ಆಗುತ್ತೆ ಎಂದರೆ ನಿಮ್ಮನ್ನು ಸುಳ್ಳು ಹೇಳಿ ನಿಮಗೆ ಲೋನ್ ಕೊಡುತ್ತೇವೆ ಎಂದು ಕರೆಸಿ ಮದ್ಯ ವ್ಯಸನ ಮುಕ್ತಗೊಳಿಸಲು ನಾವು ಮಾಡುವ ಕಾರ್ಯ ನಿರ್ವಹಿಸುತ್ತವೆ ಎಂದು ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ್ ಹೇಳಿದರು.

ಗಚ್ಚಿನ ಶ್ರೀ ಗಳು, ಅಬ್ದುಲ್ ಖಾದರ್ ಖಾಜಿ ಮುಸ್ಲಿಂ ಧರ್ಮಗುರುಗಳು,ಬಿ. ಹೆಚ್ ದಿವಟರ್,ಶಶಿಕಲಾ ಬೋವಿ, ರವರು ಕಾರ್ಯಕ್ರಮ ಕುರಿತು ಮಾತನಾಡಿದರು.

ಈ ವೇಳೆಯಲ್ಲಿ ಅಂದಾನಪ್ಪ ಗುಂಡಳ್ಳಿ ಬಸವನಗೌಡ ಪೊಲೀಸ್ ಪಾಟೀಲ, ಎಂ ಅಮರೇಶ್,ಪ್ರಕಾಶ ದಾರಿವಾಲ,ಬಸವನಗೌಡ ಮುದವಾಳ, ಸಿದ್ದಲಿಂಗಯ್ಯ ಸೊಪ್ಪಿಮಠ,ಶಾಲನಿ ಜಿ,ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ