ಸಾರ್ವಜನಿಕರು ಕಂಗಾಲು : ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸ್ರುಲ್ಲಾ ದರ್ಬಾರ್.?

 

ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಇಲ್ಲಿಯ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಂದ ಸಾರ್ವಜನಿಕರನ್ನು ಅಲೇದಾಡಿಸುತ್ತಿರುವುದು ಆಕ್ರೋಶ ವ್ಯಕ್ತವಾಗಿದೆ 

ಕಸ ಗುಡಿಸುವ ಮತ್ತು ಚರಂಡಿ ಸ್ವಚ್ಛತೆ ಮಾಡುವ ಪೌರಕಾರ್ಮಿಕರ ಕೆಲಸ ಬಿಟ್ಟು ಬಾಡಿಗಾರ್ಡ್ ಕೆಲಸ ನಿರ್ವಹಿಸುತ್ತಿದ್ದಾರೆ.ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಯಾರು ಬೇಕಾದರೂ ಅವರಿಗೆ ಇಷ್ಟವಾದ ಕೆಲಸ ನಿರ್ವಹಿಸಬಹುದು ನಾಳೆಯಿಂದ ಪೌರಕಾರ್ಮಿಕರು ಕಛೇರಿಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸು ಬಹುದು ಈ ಬಾಡಿಗಾರ್ಡ್ ಜವಾನ್ ಸಾರ್ವಜನಿಕರು ಕುಂದು ಕೊರತೆಗಳನ್ನು ಅಧಿಕಾರಿಗಳ ಹತ್ತಿರ ಹೇಳಲಿಕ್ಕೆ ಹೋದರೆ ಯಾರು ಹೋಗಬಾರದು ಅಂತ ಅಧಿಕಾರಿ ಹೇಳಿದ್ದಾರೆ.?

ಅದೇ ರಾಜಕಾರಣಿಗಳು ಬಂದ ತಕ್ಷಣಕ್ಕೆ  ಒಳಗಡೆ ಬಿಟ್ಟು ಬಿಡುತ್ತಾನೆ. ಪಟ್ಟಣ ಪಂಚಾಯತಿ ಜನಪ್ರತಿನಿಧಿಗಳು ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಸಾರ್ವಜನಿಕರನ್ನು ಹೊರಗಡೆ ಕಾಯುತ್ತಾ ಕಂಗಾಲು ಆಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು.

ಮುಖ್ಯ ಅಧಿಕಾರಿ ಚೇಂಬರಿನಲ್ಲಿ ಮತ್ತು ರಾಜಕಾರಣಿಗಳ ಅವ್ಯವಹಾರಗಳನ್ನು ನಡೆಯುವುದಕ್ಕೆ ಒಳಗಡೆ ಬಿಡದಂತೆ  ವೀರಭದ್ರ ರೀತಿಯಲ್ಲಿ ದ್ವಾರಬಾಗಲಿನಲ್ಲಿ ಕಾಯುತ್ತಾನೆ.

ಇಲ್ಲಿ ಒಬ್ಬ ಮುಖ್ಯ ಅಧಿಕಾರಿಯು ಕೆಲಸದಲ್ಲಿ  ಕಾರ್ಯ ನಿಷ್ಠೆ   ತೋರಿಸುವುದನ್ನು ಬಿಟ್ಟು ಬಾಡಿಗಾರ್ಡ್  ನಿಂದ ಸಾರ್ವಜನಿಕರಿಗೆ ದರ್ಪ ಅಹಂಕಾರ ತೊರಸತ್   ಇರುವುದು ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದೆ . ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮರೆತಿದ್ದಾರೆ.

ಈ ಬಾಡಿಗಾರ್ಡ್ ಬಂದ ಸಾರ್ವಜನಿಕರಿಗೆ ಸಂಜೆ 4:30 ನಂತರ ಸಾಹೇಬರನ್ನು ಕಾಣಬೇಕು ಈಗ ಯಾರನ್ನು ಕಾಣುವುದಕ್ಕೆ ಬಿಡುವುದಿಲ್ಲ ಎಂದು  ಬೇಜವಾಬ್ದಾರಿತನದಿಂದ ವರ್ತಿಸುವ ಮೂಲಕ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರಣವಾಗಿದೆ.ಎಂದು ಸಾರ್ವಜನಿಕರಾದ ಆನಂದ, ಕುಮಾರ, ಅಂಜಿನಪ್ಪ ಅವರು ಆಕ್ರೋಶವನ್ನು ಪತ್ರಿಕೆಗೆ ತಿಳಿಸಿದ್ದಾರೆ.

ಕೊಟ್ -1

ಇಲ್ಲಿಯ ಪಟ್ಟಣ ಪಂಚಾಯಿತಿ ಕಚೇರಿಗೆ ಬರುವ ಸಾರ್ವಜನಿಕರು ಅಲೆದಾಟ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಂಜೆ 4.30ಕ್ಕೆ ಕಾಣಬೇಕು ಎಂದು ಬಂದ ಸಾರ್ವಜನಿಕರಿಗೆ  ದರ್ಪ ಅಹಂಕಾರ ತೋರಿಸುವ ಇಂತಹ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಅವ್ಯವಹಾರಗಳು ಹೊರ ಬೀಳುತ್ತೆ ಎಂಬುವ ಭೀತಿ ಎದುರಾಗಿದೆ.ಆರ್ ಟಿ ಐ ಕಾರ್ಯಕರ್ತ ಮಂಜುನಾಥ್ ಹೇಳಿದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ