ತಾ.ಪ‌ಂ ಇಒ ವಿವಿಧ ಗ್ರಾಪಂಗಳ ಭೇಟಿ

 

ಮಸ್ಕಿ : ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಬುಧವಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಅವರು ಭೇಟಿ ನೀಡಿ ವಿವಿಧ ಕಡತಗಳು, ಕೂಸಿನ ಮನೆಗಳನ್ನು ವೀಕ್ಷಿಸಿದರು.

ಕನ್ನಾಳ ಗ್ರಾಮ ಪಂಚಾಯತಿಯ ಮೂಡಲದಿನ್ನಿ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಪ್ರತಿ ನಿತ್ಯ ಮಕ್ಕಳಿಗೆ ವಿತರಿಸುವ ಆಹಾರದ ಮೆನು ಪರಿಶೀಲಿಸಿದರು. ಮಕ್ಕಳಿಂದ ಮಾಹಿತಿ ಪಡೆದರು. ತದ ನಂತರ ಮೆದಕಿನಾಳ ಗ್ರಾಮದ ಕೂಸಿನ ಮನೆ, ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ತದ ನಂತರ ಹಾಲಾಪುರ ಗ್ರಾಪಂಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ವಹಿ, ನರೇಗಾ ಕಾಮಗಾರಿಗಳ ಕಡತ ವೀಕ್ಷಿಸಿದರು. ತದ ನಂತರ ತೋರಣದಿನ್ನಿ ಗ್ರಾಪಂಯ ಕೂಸಿನ ಮನೆಗೆ ಭೇಟಿ ನೀಡಿದರು. ಎರಡು ಮೂರು ತಿಂಗಳಲ್ಲಿ ನರೇಗಾ ಸಮುದಾಯ ಆಧಾರಿತ ಕಾಮಗಾರಿಗಳಿಗೆ ಬೇಡಿಕೆ ಬರಲಿದ್ದು, ಕ್ರಿಯಾ ಯೋಜನೆ ಅನುಸಾರ ಕೆಲಸ ಒದಗಿಸಬೇಕು. ಕೂಸಿನ ಮನೆಗಳನ್ನು ಸಕ್ರಿಯವಾಗಿಸಿ ತಾಯಂದಿರು, ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಈ ವೇಳೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ, ತಿಮ್ಮಣ್ಣ ಭೋವಿ, ರಾಮಣ್ಣ ನಡಗೇರಿ, ತಿಮ್ಮಪ್ಪ ನಾಯಕ, ಗ್ರಾ.ಪಂ ಸಿಬ್ಬಂದಿ ಉಪಸ್ಥಿತಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ