15 ನೇ ಹಣಕಾಸು, ತೆರಿಗೆ ಸಂಗ್ರಹ ಮತ್ತು ನರೇಗಾ ಯೋಜನೆಯಡಿಯಲ್ಲಿ ಬಾರಿ ಭ್ರಷ್ಟಚಾರ : ಮನವಿ

ಮಸ್ಕಿ : ಕಾರ್ಯನಿರ್ವಾಹಕ ಅಧಿಕಾರಿಕಾರಿಗಳ ತಾಲೂಕ ಪಂಚಾಯತ ಅಧಿಕಾರಿಗಳಿಗೆ ಜಿಲ್ಲಾ ದಲಿತ ಸಂರಕ್ಷ ಸಮಿತಿ ಮನವಿ ಸಲ್ಲಿಸಿ, 15 ನೇ ಹಣಕಾಸು, ತೆರಿಗೆ ಸಂಗ್ರಹ ಮತ್ತು ನರೇಗಾ ಯೋಜನೆಯಡಿಯಲ್ಲಿ ಬಾರಿ ಭ್ರಷ್ಟಚಾರ.! ಮಾಡಿದ್ದಾರೆ ಎಂದು ಆರೋಪಿಸಿ 

ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೇಲೆ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದರು.

 ಜಿಲ್ಲಾ ಮತ್ತು ತಾಲೂಕು ದಲಿತ ಸಂರಕ್ಷ ಸಮಿತಿ ಸಂಘಟನೆ ವತಿಯಿಂದ ದಿನಾಂಕ 05/11/2024 ರಂದು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವು ದಾಗಿ ಮನವಿ ಸಲ್ಲಿಸಿದರು.

ಮಸ್ಕಿ ತಾಲೂಕ ಪಂಚಾಯತ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಗಳಾದ ಮೆದಿಕಿನಾಳ, ಅಂಕುಶದೊಡ್ಡಿ,ಪಾಮನಕಲ್ಲೂರು,ಸಂತೆಕೆಲ್ಲೂರು,ಮಟ್ಟೂರು,ತಲೇಖಾನ, ಮಾರಲದಿನ್ನಿ,ಅಡವಿಬಾವಿ ಇನ್ನಿತರ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮನಸೋ ಇಚ್ಚೆ 

15 ನೇ ಹಣಕಾಸು, ತೆರಿಗೆ ಸಂಗ್ರಹ, ನರೇಗಾ ಯೋಜನೆಯ ಅನುದಾನದಲ್ಲಿ ಬಾರಿ ಭ್ರಷ್ಟಾಚಾರ ಮಾಡಿರುವ ತಾಲೂಕ ಪಂಚಾಯತಿ ನರೇಗಾ ಅಧಿಕಾರಿಯಾದ ಶಿವಾನಂದ ರೆಡ್ಡಿ ಯವರು ತಮ್ಮ ಅಧೀನದಲ್ಲಿರುವ ಅಧಿಕಾರಿಗಳಿಗೆ ಭ್ರಷ್ಟಚಾರ ಮಾಡಲು ಕುಮ್ಮಕ್ಕು ನೀಡಿದ್ದು ಇವರಿಂದಲೇ ಬಾರಿ ಭ್ರಷ್ಟಚಾರ ನಡೆದಿರುತ್ತದೆ ಕಾರಣ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಅಮಾನತ್ತು ಮಾಡಲು ಒತ್ತಾಯಿಸಿ ಹಾಗೂ ಈಗಾಗಲೆ ಪಾಮನಕಲ್ಲೂರು ತಲೇಖಾನ, ಮಟ್ಟೂರು ಮತ್ತು ಸಂತೆಕೆಲ್ಲೂರು ಗ್ರಾಮ ಪಂಚಾಯತಿಗಳ ಮೇಲೆ ದೂರು ನೀಡಿದ್ದು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಂಘಟನೆಯ ಮೂಲಕ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಸಂರಕ್ಷ ಸಮಿತಿ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪುರ್,ಕಲ್ಬುರ್ಗಿ ವಿಭಾಗೀಯ ಸಂಚಾಲಕರು ಮೌನೇಶ ಬಳಗಾನೂರು, ಅಲ್ಪಸಂಖ್ಯಾತರ ವಿಭಾಗದ ಮಸ್ಕಿ ತಾಲೂಕ ಅಧ್ಯಕ್ಷ ಎಸ್. ನಜೀರ್ ಮಸ್ಕಿ, ಸಿದ್ದಪ್ಪ ಹೂವಿನಬಾವಿ, ಮೊಹ್ಮದ್ ಶೇಡ್ಮಿ, ಮರಿಸ್ವಾಮಿ ಬೆನಕನಾಳ್, ಅಮರೇಶ್ ಡಬ್ಬೇರಮಡು ಸೇರಿದಂತೆ  ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ