11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿ : ಡಾ. ಅರ್ಜುನ್ ಗೊಳಸಂಗಿ ಮನವಿ
ಮಸ್ಕಿ : ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ಮಂಗಳವಾರ ಮಸ್ಕಿ ತಾಲೂಕ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಡಿಸೆಂಬರ್ 14 ಮತ್ತು 15 ರಂದು ರಾಯಚೂರಿನ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಪ್ರಚಾರ ಸಭೆ ನಡೆಯಿತು.
ಇದೇ ವೇಳೆ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಅರ್ಜುನ್ ಗೊಳಸಂಗಿ ರಾಜ್ಯ ಅಧ್ಯಕ್ಷರಾದ ಅವರು ಮಾತನಾಡಿ ಡಿಸೆಂಬರ್ 14 -15 ರಂದು ರಾಯಚೂರಿನ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಜರುಗುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಪೂರ್ವಭಾವಿ ಪ್ರಚಾರ ಸಭೆಯಲ್ಲಿ ಸಾಹಿತ್ಯ ಅಭಿಮಾನಿಗಳು ಹಾಗೂ ಯುವಕರು - ಯುವತಿಯರು ಸೇರಿದಂತೆ ಇನ್ನಿತರರು ತಮ್ಮ ತನ -ಮನ ಧನದಿಂದ ಸಹಕಾರ ನೀಡಿ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಭೆಯಲ್ಲಿ ಸಮ್ಮೇಳನದ ಯಶಸ್ವಿಗೆ ಸಹಕಾರಕ್ಕಾಗಿ ಹಾಗೂ ವಿವಿಧ ಉಪಸಮಿತಿಗಳ ರಚನೆಗಾಗಿ ಸಮ್ಮೇಳನ ಯಶಸ್ವಿಗಾಗಿ ಚರ್ಚಿಸಲಾಯಿತು.
ಈ ವೇಳೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ್ ಗೊಳಸಂಗಿ,ದಲಿತ ಸಾಹಿತಿ ಹಾಗೂ ಹಿರಿಯ ಮುಖಂಡ ದಾನಪ್ಪ ಶ್ರೀ ನಿಲೋಗಲ್,ರಾಜ್ಯ ಖಜಾಂಚಿಗಳಾದ ಡಾ.ಸುಭಾಷ್ ಹೊದ್ಲೂರ್,ಸಹ ಸಂಯೋಜಕರಾದ ಡಾ. ಹುಸೇನಪ್ಪ ಅಮರಾಪುರ,ದಸಾಪ ನ ರಾಯಚೂರು ಜಿಲ್ಲಾ ಯುವ ಘಟಕದ ಅಧ್ಯಕ್ಷ ಪಾರ್ಥ ಸಾರಥಿ ಸಿರವಾರ,ದಸಾಪ ಅಧ್ಯಕ್ಷ ಶ್ರೀ ನಾಗೇಶ ಜಂಗಮರಹಳ್ಳಿ,ದಸಾಪ ದ ಯುವ ಘಟಕದ ಅಧ್ಯಕ್ಷ ಹುಲಗಪ್ಪ ಗೋನಾಳ,ದಸಾಪ ದ ಉಪಾಧ್ಯಕ್ಷರುಗಳಾದ ಸಿದ್ದಪ್ಪ ಸೆಳ್ಳೆದ್ ಉದ್ಬಾಳ,ಹನುಮಂತ ನಾಯಕ,ಪ್ರಧಾನ ಕಾರ್ಯದರ್ಶಿಗಳಾದ ಹನುಮಂತ ಚಿಕ್ಕಕಡಬೂರು,ಪರಪ್ಪ ಭಂಡಾರಿ,ಪತ್ರಿಕಾ ಸಲಹೆಗಾರರರಾದ ಸಿದ್ದಯ್ಯ ಹೆಸರೂರು,ಗ್ಯಾನಪ್ಪ ದೊಡ್ಮನಿ ಮೆದಿಕಿನಾಳ, ಶಾಂತಪ್ಪ ಸೋಮನಮರಡಿ ನಗನೂರು, ಸೋಮನಾಥ ನಾಯಕ ಜಿನ್ನಾಪೂರು,ಪ್ರಶಾಂತ ಇಂಡಿ ಮಸ್ಕಿ,ಸಿದ್ದಪ್ಪ ಗೋನಾಳ,ಮುದುಕಪ್ಪ ಪರಾಪೂರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ