ಜನಾರ್ಧನ ರೆಡ್ಡಿ ಏಕಾಂಗಿ?
ತವರು ಸೇರಿ ದಿನಗಳು ಉರುಳುತ್ತಿದ್ದರೂ ಎಡತಾಕದ ಬೆಂಬಲಿಗರು!
ಬಳ್ಳಾರಿ: ಬೇಲ್ ಮೇಲೆ ಬಿಡುಗಡೆಗೊಂಡ ಮಾಜಿ ಸಚಿವ ಅಕ್ರಮ ಗಣಿಗಾರಿಕೆ ಆರೋಪಿ ಗಾಲಿ ಜನಾರ್ಧನ ರೆಡ್ಡಿ ಬಳ್ಳಾರಿ ನಗರ ಪ್ರವೇಶ ಮಾಡಿ ದಿನಗಳು ಉರುಳುತ್ತಿದ್ದರೂ ಪಕ್ಷದ ನಾಯಕರು ಎಡಬಲ ತಾಕದೆ ಇರುವುದು ಅವರಿಗೆ ಪಕ್ಷದಲ್ಲಿ ವರ್ಚಸ್ಸು ಕುಂದಿದೆ ಎಂಬುದನ್ನು ತೋರಿಸುತ್ತದೆ.
ಸ್ವಂತಹ ಸಹೋದರರಾದ ಜಿ. ಸೋಮಶೇಖರ ರೆಡ್ಡಿ, ಜಿ. ಕರುಣಾಕರ ರೆಡ್ಡಿಯವರು ಸಹ ಜನಾರ್ಧನ ರೆಡ್ಡಿ ಬಳಿ ಸುಳಿಯುತ್ತಿಲ್ಲ. ಸೋಮಶೇಖರ ರೆಡ್ಡಿ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಗುಮೊಗದಲ್ಲಿ ಅಣ್ಣನೊಂದಿಗೆ ಪುಷ್ಪ ಮಾಲೆ ಹಾಕಿಸಿಕೊಂಡರೂ ಮನಸ್ಸುಗಳ ನಡುವಿನ ಅಂತರ ದೂರಾಗಿಲ್ಲ ಎಂಬುದು ಅವರು ವೇದಿಕೆಯಲ್ಲಿ ಒಟ್ಟಾಗಿ ಕುಳಿತುಕೊಳ್ಳದಿರುವುದೇ ಸಾಕ್ಷಿ.
ಇನ್ನು ಆಪ್ತಮಿತ್ರ ಬಿ. ಶ್ರೀರಾಮುಲು ಸಹ ರೆಡ್ಡಿಯ ಮೇಲಿನ ಭರವಸೆಯನ್ನು ಕಳೆದುಕೊಂಡAತೆ ಇದೆ. ಇನ್ನೊಂದು ಮೂಲದ ಪ್ರಕಾರ ಇಬ್ಬರ ಮಧ್ಯೆ ಸಂಬAಧ ಸುಧಾರಿಸುವ ಮಾತಿರಲಿ, ವೈಮನಸ್ಸು ದೂರಾಗುವುದೇ ಅನುಮಾನ ಎಂಬAತಹ ಸ್ಥಿತಿ ನಿರ್ಮಾಣ ಆಗಿದೆ ಅಂತೆ. ಅತ್ಯಾಪ್ತ ವಲಯದ ಮೂಲಗಳು ಹೇಳುವಂತೆ ರಾಮುಲು ಅವರೊಂದಿಗೆ ಜನಾರ್ಧನ ರೆಡ್ಡಿ ಆಸ್ತಿ ವಿಷಯದಲ್ಲಿ ವೈಮನಸ್ಸು ಇದೆ ಅಂತೆ. ರಾಮುಲು ಅವರ ನಿವಾಸಕ್ಕೆ ಸಂಬAಧಿಸಿದAತೆ ಜನಾರ್ಧನ ರೆಡ್ಡಿ ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.
ಇನ್ನು ಉಳಿದಂತೆ ಪಕ್ಷದ ನಾಯಕರಲ್ಲಿ ದೊಡ್ಡ ಖುಷಿಯ ಬದಲು ಪಕ್ಷಕ್ಕೆ ಇನ್ನಷ್ಟು ಹಿನ್ನಡೆ ಆಗಬಹುದೆಂಬ ಆತಂಕದಲ್ಲಿ ಇದ್ದಾರೆ ಎಂಬುದನ್ನು ಕೆಲ ನಾಯಕರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷದ ಹೈ ಕಮಾಂಡ್, ರಾಜ್ಯ ನಾಯಕರು ಜನಾರ್ಧನ ರೆಡ್ಡಿ ಕುರಿತು ಯಾವುದೇ ಒಲವನ್ನು ಹೊಂದಿಲ್ಲ. ರೆಡ್ಡಿ ಈ ಹಿಂದೆ ಯಡಿಯೂರಪ್ಪ ಅವರ ಜೊತೆ ನಡೆದುಕೊಂಡಿದ್ದನ್ನು ನೆನಪಲ್ಲಿ ಇಟ್ಟುಕೊಂಡಿರುವ ನಾಯಕರು ರೆಡ್ಡಿಯನ್ನು ಅಷ್ಟಾಗಿ ನಂಬುವ ಮಟ್ಟಕ್ಕೆ ಇಲ್ಲ ಎಂಬ ಮಾತುಗಳು ಬಿಜೆಪಿ ಪಡಸಾಲೆಯಿಂದ ಕೇಳಿಬರುತ್ತಿವೆ.
ಸಂಡೂರು ಚುನಾವಣೆ ಸಂಬAಧ ಜನಾರ್ಧನ ರೆಡ್ಡಿ ಪುಂಖಾನುಪುAಖವಾಗಿ ಮಾತನಾಡುತ್ತಿರುವುದು ಒಂದು ರೀತಿಯ ಅಚ್ಚರಿಗೆ ಕಾರಣ ಆಗಿದೆ. ಎಸ್‌ಟಿ ಮೀಸಲು ಕ್ಷೇತ್ರದ ರಾಜಕಾರಣಕ್ಕೆ ರಾಮುಲು ಬಿಟ್ಟು ಏನೇ ಸಭೆ ಮಾಡಿದರೂ ಅದು ವ್ಯರ್ಥ ಎಂಬುದು ಅವರ ಅರಿವಿಗೆ ಬರದೇ ಹೋಯಿತೆ? ಎಂಬ ಪ್ರಶ್ನೆ ಸಹಜವಾಗಿದೆ.
ಕಳೆದ ಚುನಾವಣೆಯಲ್ಲಿ ರಾಮುಲು ಸೋಲಿಗೆ ಪರೋಕ್ಷವಾಗಿ ಜನಾರ್ಧನ ರೆಡ್ಡಿ ಸಹ ಕಾರಣ ಎಂಬ ನಂಬಿಕೆಯೋ, ಅಪನಂಬಿಕೆಯೋ ನಾಯಕ ಸಮಾಜದಲ್ಲಿ ಮೂಡಿಬಟ್ಟಿದೆ. ರಾಮುಲು ತಮ್ಮ ಮಾಜಿ ಆಪ್ತ ಮಿತ್ರ ಜನಾರ್ಧನ ರೆಡ್ಡಿಯಿಂದ ದೂರ ಕಾಪಾಡಿಕೊಳ್ಳುತ್ತಿರುವುದು ಇದಕ್ಕೆ ಪುಷ್ಠಿ ನೀಡುವಂತೆ ಇದೆ!
ಒಟ್ಟಾರೆ ಜನಾರ್ಧನ ರೆಡ್ಡಿ ಬಳ್ಳಾರಿಗೆ ವಾಪಸ್ ಬಂದಿರುವುದು ಬಿಜೆಪಿಗೆ ಹರ್ಷ ಎನ್ನಬೇಕೋ, ಬೇಡವೋ ಎಂಬ ಗೊಂದಲ ಸಹಜವಾಗಿಯೇ ರಾಜ್ಯ ನಾಯಕರಲ್ಲಿ ಮೂಡಿದೆ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ