ಅಮಾಯಕ ಪೌರಕಾರ್ಮಿಕ ನೌಕರರ ಜೀವದ ಜೊತೆ ಚೆಲ್ಲಾಟ..!

 

*ಕೊಟ್ಟೂರು ಪಟ್ಟಣ ಪಂಚಾಯಿತಿಯ ಹಲವು ಸರಕಾರಿ ಕಛೇರಿಯ ದಿನನಿತ್ಯ ಓಡಾಡುವ ವಾಹನಗಳಿಗೆ ಇಲ್ಲ ಇನ್ಸೊರೆನ್ಸ್*

*ಪಟ್ಟಣ ಪಂಚಾಯತಿ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ | ಸರಕಾರಿ ಕಛೇರಿಯ ಹಲವು ವಾಹನಗಳಿಗಿಲ್ಲ ಇನ್ಸೂರೆನ್ಸ್ ಮೇಲಾಧಿಕಾರಿಗಳ  ಮೌನ। ಸಾರ್ವಜನಿಕರ ಆಕ್ರೋಶ*

ಕೊಟ್ಟೂರು:- ಕೊಟ್ಟೂರು ಪಟ್ಟಣ ಪಂಚಾಯತಿಯ ದಿನ ನಿತ್ಯ ಉಪಯೋಗಿಸೋ ಎಷ್ಟೋ ವಾಹನಗಳಿಗಿಲ್ಲ ಇನ್ಸೂರೆನ್ಸ್, ಕಳೆದ ವರ್ಷಗಳಲ್ಲೇ ಇನ್ಸೊರೆನ್ಸ್ ಮುಗಿದರು ಸಹ ಇನ್ನೂ ವಿಮೆ‌ ನವೀಕರಣ ಮಾಡದೇ ಅಮಾಯಕ ನೌಕರರ ಜೀವದ ಜೊತೆ ಚಲ್ಲಟವಾಡುತ್ತಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು. ಪಟ್ಟಣ ಪಂಚಾಯತಿಯಲ್ಲಿ ನಿರುಪಯೋಕ್ತವಾಗಿರುವ ವಾಹನಗಳಿಗೆ ಇನ್ಸೋರೆನ್ಸ್ ಅವಶ್ಯಕತೆ ಇಲ್ಲ ಆದರೂ ಇಂತಹ ವಾಹನಗಳಿಗೆ ಇನ್ಸೋರೆನ್ಸ್  ಮಾಡಿಸಿದ್ದಾರೆ ಎಂಬ ಬಿಸಿ-ಬಿಸಿ ಚರ್ಚೆ ಇದೀಗ ಪಟ್ಟಣದಲ್ಲಿ‌ ಚರ್ಚೆಯಾಗುತ್ತಿದೆ. ಇದಕ್ಕೆ ಅಧಿಕಾರಿಗಳೆ ಉತ್ತರ ಕೊಡಬೇಕಿದೆ.

ನಾವು ದಿನನಿತ್ಯ ಓಡಾಡುವ ವಾಹನಗಳಿಗೆ ಇನ್ಸೂರೆನ್ಸ್, ಸರಿಯಾದ ದಾಖಲೆಗಳು ಇಲ್ಲ ಕಾನೂನು ಉಲ್ಲಂಘನೆಯಾಗಿದೆ ಎಂದು ಜನ ಸಾಮಾನ್ಯನಿಗೆ ದಂಡದ ರೂಪದಲ್ಲಿ  ಕೋಟ್ಯಂತರ ಹಣ ವಸೂಲಿ‌ ಮಾಡ್ತಾರೆ. ಆದರೆ ಕಾನೂನು ಪಾಲಿಸುವ ಸರ್ಕಾರಿ ಇಲಾಖೆ ಅಧಿಕಾರಿಗಳಿಂದಲೆ ಕಾನೂನು ಉಲ್ಲಂಘನೆಯಾಗ್ತಿದೆ. ಭಾಗದಷ್ಟು ಹೊರ ಬೀಳುತ್ತದೆ ಭ್ರಷ್ಟಾಚಾರ ಹಾಗೂ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷೆ 

ಜನರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯ ಎನ್ನುವಂತಾಗಿದೆ.  ಪಟ್ಟಣ ಪಂಚಾಯತಿ ಕಛೇರಿಯ ಸಾರ್ವಜನಿಕರಿಗೆ, ಪಟ್ಟಣದ ಸ್ವಚ್ಚತೆ ಇತರೇ ಕಾರ್ಯಗಳಿಗೆ ಉಪಯೋಗಿಸುವ ಅನೇಕ ಸರ್ಕಾರಿ ವಾಹನಗಳು ವಿಮೆರಹಿತವಾಗಿವೆ. ಇಲ್ಲಿನ ಅನೇಕ ವಾಹನಗಳಿಗೆ ಕಳೆದ  ವರ್ಷದ ಹಿಂದೆಯೇ ವಾಹನ ವಿಮೆ ಮುಗಿದಿದೆ.

ಒಟ್ಟಿನಲ್ಲಿ ಸರ್ಕಾರಿ ವಾಹನಗಳಿಗೆ ಇನ್ಸುರೆನ್ಸ್ ತುಂ‌ಬುವ ಮೂಲಕ  ಜವಾಬ್ದಾರಿ ಮೆರೆಯಬೇಕಾಗಿದ್ದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು. ಸಾರ್ವಜನಿಕರು ಕೂಡ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುವಂತಾಗಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರಿ ಎಲ್ಲಾ ವಾಹನಗಳಿಗೆ ವಿಮೆ ಮಾಡಿಸುವ ಮೂಲಕ ಕಾನೂನು ಪಾಲಿಸುತ್ತಾರೋ  ಇಲ್ಲವೋ ಅನ್ನುವುದನ್ನು ಕಾದು ನೀಡಬೇಕಾಗಿದೆ.ಎಂದು ಕಿರಣ್ ಕುಮಾರ್, ಮಂಜುನಾಥ್, ಅಂಜಿನಿ, ಚಂದ್ರಶೇಖರ್ ಪತ್ರಿಕೆಗೆ ಮಾಹಿತಿ ತಿಳಿಸಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ