ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣ ಸುರಕ್ಷಿತವಾಗಿ ವಾಪಸ್ ಗೆ ಕುಂಭದ ಚೀಟಿ ಹರಕೆ ಹೊತ್ತ ಭಕ್ತ

 

ಮಸ್ಕಿ : ಸುನಿತಾ ವಿಲಿಯಮ್ಸ್ ಇದೇ ವರ್ಷದ ಜೂನ್‌ ತಿಂಗಳಲ್ಲಿ ಬೋಯಿಂಗ್‌ ಸ್ಟಾರ್‌ ಲೈನರ್ ನೌಕೆ ಮೂಲಕ, ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣ ತಲುಪಿದ್ರು. ಸುನಿತಾ ವಿಲಿಯಮ್ಸ್ ಅವರ ಜೊತೆಗೆ ಬುಚ್‌ ವಿಲ್ಮೋರ್ ಕೂಡ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಹೀಗೆ ಹೋದವರು ವಾಪಸ್ ಬರಬೇಕು ಅಂತಾ ಸಿದ್ಧತೆ ನಡೆಸಿದ್ದಾಗಲೇ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆ ಉಂಟಾಗಿತ್ತು!

ಕಾರಣ ಕ್ಕೆ ಸುನಿತಾ ವಿಲಿಯಮ್ಸ್ & ಬುಚ್ ವಾಪಸ್ ಭೂಮಿಗೆ ಬರಲು ತಾಂತ್ರಿಕ ದೋಷ ಅಡ್ಡಿಯಾದ ಹಿನ್ನೆಲೆ ಆತಂಕ ಮನೆಮಾಡಿತ್ತು. ಈ ಕಾರಣಕ್ಕೆ 'ನಾಸಾ' ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳು ಸಮಸ್ಯೆ ಸರಿ ಮಾಡಲು ಪ್ರಯತ್ನಿಸಿದ್ದರು. ಇದೆಲ್ಲಾ ವರ್ಕೌಟ್ ಆಗದೇ ಕೊನೆಗೆ 'ಸ್ಪೇಸ್ ಎಕ್ಸ್' ನೌಕೆ ಇದೀಗ ಆಕಾಶಕ್ಕೆ ಹಾರಿದೆ. ಸ್ಪೇಸ್‌ ಎಕ್ಸ್‌ ಬಾಹ್ಯಾಕಾಶ ಸಂಸ್ಥೆಯ ಡ್ಯ್ರಾಗನ್‌ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಶಸ್ವಿಯಾಗಿ ತಲುಪಿದೆ.ಮುಂದಿನಿಂದ ಆದರೆ ನೌಕೆ ದಿಢೀರ್ ಸುನಿತಾ ವಿಲಿಯಮ್ಸ್ & ಬುಚ್‌ ವಿಲ್ಮೋರ್ ಅವರನ್ನು ಭೂಮಿಗೆ ಕರೆದುಕೊಂಡು ಬರಲ್ಲ. ಯಾಕಂದ್ರೆ ಇದಕ್ಕೆ ಒಂದಷ್ಟು ಸಮಯ ಬೇಕಿದ್ದು, ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅವರು ಭೂಮಿಗೆ ವಾಪಸ್ ಬರುವ ನಿರೀಕ್ಷೆ ಇದೆ.

ಕೊನೆಯ ಸಾರಿ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ,ನಮ್ಮ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ನೆಚ್ಚಿನ ಬಾಹ್ಯಾಕಾಶ ವಿಜ್ಞಾನಿ ಆರಾಮವಾಗಿ ಭೂಮಿಗೆ ವಾಪಸ್ ಬರಲಿ ಅಂತಾ ಮಸ್ಕಿ ಪಟ್ಟಣದ ಸಿದ್ದಯ್ಯ ಹಿರೇಮಠ ರವರು ಮಸ್ಕಿ ಪಟ್ಟಣದ ಶ್ರೀ ಭ್ರಮರಾಂಬ ದೇವಿಯ ರಥೋತ್ಸವ ಹಾಗೂ ಜಂಬು ಸವಾರಿ ಕಾರ್ಯಕ್ರಮ ಅಂಗವಾಗಿ ಕುಂಭ ಮೆರವಣಿಗೆ ಪ್ರಯುಕ್ತ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಬರುವಂತೆ ಹರಕೆ ಹೊತ್ತು ಚೀಟಿ ಪಡೆಯುವ ಮೂಲಕ ದೇಶಪ್ರೇಮ, ಪರಿಸರಪ್ರೇಮ ಮೆರೆದಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ