ಅಸ್ಪೃಶ್ಯತಾ ಆಚರಣೆ ಅಂತ ಅನಿಷ್ಟ ಪದ್ದತಿಯನ್ನು ತೊಡೆದು ಹಾಕಲು ಎಲ್ಲರೂ ಜಾಗೃತರಾದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ : ಶಿವಕುಮಾರ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಅ 2 8 : - ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ಆದರ್ಶ ಮಾರ್ಗದ ಅಡಿಯಲ್ಲಿ ಅಸ್ಪೃಶ್ಯತಾ ಆಚರಣೆ ಅಂತ ಅನಿಷ್ಟ ಪದ್ದತಿಯನ್ನು ತೊಡೆದು ಹಾಕಲು ಎಲ್ಲರೂ ಜಾಗೃತರಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಂಘಟನೆಗೆ ಶಕ್ತಿ ಬರುತ್ತದೆ ಆಗ ಸಮಾಜ ಸುಧಾರಣೆಗೊಂಡು ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ ) ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಶಿವಕುಮಾರ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ದಲಿತ ಸಂಘರ್ಷ ಸಮಿತಿಯ (ಭೀಮವಾದ) ರಾಜ್ಯ ಸಂಚಾಲಕರಾದ ಮಾನ್ಯ ಶ್ರೀ ಡಾ. ಆರ್. ಮೋಹನ್ ರಾಜ್ ರವರ ಆದೇಶದಂತೆ ಕೊಪ್ಪಳ ಜಿಲ್ಲಾ ಸಂಘಟನೆಯ ಕಾರ್ಯಕಾರಿ ಸಭೆಯನ್ನು ಕೊಪ್ಪಳ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ದಿನಾಂಕ 23ರಂದು ಸಭೆ ನಡೆದಿದ್ದು ಸಭೆಯಲ್ಲಿ 44 ಜನ ಸಂಘಟನೆಯ ಪ್ರತಿನಿಧಿಗಳು ಭಾಗವಹಿಸಿದ್ದು .
ಈ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸಂಘಟಕರ ಹಾಗೂ ಪದಾಧಿಕಾರಿಗಳ ಅಭಿಪ್ರಾಯಗಳನ್ನು ಹಾಗೂ ಅನುಮತಿಯನ್ನು ಪಡೆದುಕೊಂಡು ಕೊಪ್ಪಳ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಭೀಮವಾದ ) ಸಂಘಟನೆಯ ಜಿಲ್ಲಾ ಸಂಚಾಲಕರಾಗಿ ಶ್ರೀ ಪ್ರಕಾಶ್. ಎಚ್ .ಹೊಳೆಪ್ಪನವರ , ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶ್ರೀ ಮಾರ್ಕಂಡಪ್ಪ. ಡಿ .ಹಲಗಿ ಕೊಪ್ಪಳ , ಶ್ರೀ ಮಂಜುನಾಥ ಕೋಳೂರು ಕೊಪ್ಪಳ, ಶ್ರೀ ಹನುಮಂತಪ್ಪ ಸೋಮನಾಳ ಕಾರಟಗಿ , ಶ್ರೀ ಮಂಜುನಾಥ ಆರತಿ ಗಂಗಾವತಿ, ಶ್ರೀ ಮೈಲಪ್ಪ ಇಂದರಗಿ ಕೊಪ್ಪಳ, ಶ್ರೀ ಯಲ್ಲಪ್ಪ ದೇವರಮನಿ ಕೊಪ್ಪಳ, ಜಿಲ್ಲಾ ಖಜಂಚಿಯಾಗಿ ಶ್ರೀ ಮಂಜುನಾಥ ಪೂಜಾರ್ ಕೊಪ್ಪಳ ಹಾಗೂ ಜಿಲ್ಲಾ ಮಹಿಳಾ ಘಟಕದ ಸಂಚಾಲಕರಾಗಿ ಶ್ರೀಮತಿ ಶಶಿಕಲಾ ಮಠದ , ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶ್ರೀಮತಿ ಸಲೀಮಾ ಇವರುಗಳನ್ನು ಹೊಸ ಜಿಲ್ಲಾ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಸಂಘಟನೆಯ ಜಿಲ್ಲೆಯ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಡಾ. ಬಿ.ಆರ್. ಅಂಬೇಡ್ಕರ್ ಅವರಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟನೆಯನ್ನು ಬಲಪಡಿಸಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಇನ್ನೋರ್ವ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀಹನುಮಂತಪ್ಪ ದೊಡ್ಮನಿ , ರಾಜ್ಯ ಸಂಘಟನೆಯ ಮುಖಂಡರುಗಳಾದ ಶ್ರೀ ನರಸಪ್ಪ ಹಾಸಗಲ್, ಶ್ರೀಪಾಮಣ್ಣ ಅರಳಿಗನೂರ ಕನಕಗಿರಿ, ಸಂಘಟನೆಯ ಮುಖಂಡರುಗಳಾದ ಶ್ರೀಭಾಷಾ ಹನವಾಳ , ಶ್ರೀರಾಮಚಂದ್ರಪ್ಪ ಕುಷ್ಟಗಿ, ಶ್ರೀ ದುರ್ಗೇಶ್ ನವಲಹಳ್ಳಿ, ಶ್ರೀ ಗಾಳೆಪ್ಪ ಪೂಜಾರ್ ಹೂವಿನಾಳ , ಶ್ರೀ ಪರಶುರಾಮ್ ಕೊರ್ಲಹಳ್ಳಿ, ಶ್ರೀ ಯಮನೂರಪ್ಪ ದೊಡ್ಮನಿ ಬೂದುಗುಂಪ , ಶ್ರೀ ಮೈಲಪ್ಪ ಹೊಸಮನಿ ಹಲವಾಗಲಿ , ಶ್ರೀ ಯಮನೂರಪ್ಪ ದನಕನದೊಡ್ಡಿ ಹಾಗೂ ಸಂಘಟನೆಯ ಅನೇಕ ಮುಖಂಡರು ಭಾಗವಹಿಸಿದ್ದರು .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ