ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯುತ್ತಿರುವ ಕಸದ ಗಾಡಿಗಳು.!!
ಕೊಟ್ಟೂರು : ಕೊಟ್ಟೂರು ಪಟ್ಟಣದ ಕಸ ಸಂಗ್ರಹಿಸುವ ಕಸದ ಗಾಡಿಗಳು ತುಕ್ಕು ಹಿಡಿದು, ಮೂಲೆ ಸೇರುತ್ತಿವೆ. ಆದರೆ ಈ ಗಾಡಿಗಳು ಕಣ್ಣಿಗೆ ಕಂಡರೂ ಅವುಗಳನ್ನು ಮುಖ್ಯಾಧಿಕಾರಿಗಳು ಸರಿಯಾಗಿ ಬಳಸಿಕೊಳ್ಳದೇ ಬೇಕಾಬಿಟ್ಟಿಯಾಗಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಸ ಸಂಗ್ರಹಿಸಲು ಆಸರೆಯಾಗಬೇಕಿದ್ದ ಪಟ್ಟಣ ಪಂಚಾಯತಿ ಕಸದ ಗಾಡಿಗಳು ಮೂಲೆ ಗುಂಪಾಗಿವೆ. ಕಳೆದ ವರ್ಷಗಳಿಂದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಜಂಗು ಹಿಡಿಯುತ್ತಿವೆ. ಕೆಟ್ಟು ವರ್ಷವಾಗುತ್ತಾ ಬಂದರೂ ರಿಪೇರಿ ಕೆಲಸ ಮಾಡಿಸದೇ ಅವುಗಳನ್ನು ಹಾಗೇ ಬಿಟ್ಟಿದ್ದಾರೆ. ಮಳೆ, ಗಾಳಿ ಬಿಸಿಲಿಗೆ ತುಕ್ಕು ಹಿಡಿದು ಯಾವ ಕೆಲಸಕ್ಕೂ ಬರದಂತಾಗಿವೆ. ಇದಕ್ಕೆಲ್ಲಾ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಹೇಳಿದರು.
ಸರ್ಕಾರದಿಂದ ಕಾಲಕಾಲಕ್ಕೆ ಖರೀದಿಸುವ ಕಸದ ಗಾಡಿಗಳು ಒಮ್ಮೆ ಕೆಟ್ಟುಹೋದ ಕೂಡಲೇ ಈ ರೀತಿಯಾಗಿ ನಿರ್ಲಕ್ಷ್ಯ ವಹಿಸಿದರೆ, ಸರ್ಕಾರದ ಹಣ ವೃಥಾ ಪೋಲಾಗುತ್ತಿದೆ. ಈ ಹಣ ಎಲ್ಲಿ ಹೋಗುತ್ತಿದೆ ಎಂದು ಹೇಳಿದರು. ಇದಕ್ಕೆಲ್ಲಾ ಅಧಿಕಾರಿಗಳು ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಕಸದ ಗಾಡಿಗಳಿಗೆ ಹಾಕಿಸುವ ಡೀಸೆಲ್ ಇಂಧನದಲ್ಲಿ, ಜೆ.ಸಿ.ಬಿ. ಕಸದ ವಾಹನಗಳ ರಿಪೇರಿ ಹಾಗೂ ಖರ್ಚು ವೆಚ್ಚದಲ್ಲಿಯೂ ಸಹ ಅವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.
ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈಗಿರುವ ಮುಖ್ಯಾಧಿಕಾರಿಗಳು ನಾಯಕನಹಟ್ಟಿಗೆ ಹೆಚ್ಚುವರಿಯಾಗಿ ಮೂರು ತಿಂಗಳು ಹೋದ ಸಂದರ್ಭದಲ್ಲಿ ಗೋಕಾಕ್‌ನ ಅರಬಾವಿ ಮುಖ್ಯಾಧಿಕಾರಿಗಳು ತುಕರಾಮ್ ಮಾದರ್‌ರವರು ಬಂದ ಸಾರ್ವಜನಿಕರಿಗೂ, ಪತ್ರಕರ್ತರಿಗೂ ಡೀಸೆಲ್‌ನ ೬.೦೦ ಲಕ್ಷ ಬಿಲ್ ಕಟ್ಟಿರುವುದಿಲ್ಲ ಬಾಕಿ ಇದೆ. ಪಟ್ಟಣ ಪಂಚಾಯಿತಿಯಲ್ಲಿ ಅನುದಾನವಿಲ್ಲ? ಎಂದು ಹೇಳಿದ್ದರು. ಈ ವಿಷಯವನ್ನು ಗಂಭೀರವಾಗಿ ಸಂಘಟನೆಗಳು ಆರ್.ಟಿ.ಐ. ಕಾರ್ಯಕರ್ತರು ಪಟ್ಟಣ ಪಂಚಾಯಿತಿಯ ಆಡಳಿತ ವೈಖರಿ ನೋಡಿ ಅವ್ಯವಹಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎನ್ನುತ್ತಿದ್ದಾರೆ.ಎಂದು ರಮೇಶ್ ಮಂಜುನಾಥ್ ,ಚಂದ್ರಶೇಖರ್ ಹಾಗೂ ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಹೇಳಿದರು.
ಕೋಟ್-1
ಇದೀಗ ಪಟ್ಟಣ ಪಂಚಾಯತಿ ಕಸದ ಗಾಡಿಗಳು ತುಕ್ಕು ಹಿಡಿಯುತ್ತಿರುವುದು ದುರದೃಷ್ಟಕರ ಕಸ ಸಂಗ್ರಹಿಸುವ ಗಾಡಿಗಳು ಗ್ಯಾರೇಜ್ ಸೇರುವುದಕ್ಕೆ ಅಧಿಕಾರಿಗಳ ಕರ್ತವ್ಯನಿರ್ಲಕ್ಷ್ಯವೇ ಕಾರಣ.ಪ್ರವೀಣ್ ಕುಮಾರ್ ಮಾನವ ಹಕ್ಕು ಕಾರ್ಯಕರ್ತ
ಕೋಟ್-2
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪಟ್ಟಣ ಪಂಚಾಯತಿ ಘನತ್ಯಾಜ್ಯ ವಾಹನ ಚಾಲಕರು ಹಾಗೂ ಸುಪ್ರೈಸರ್ ಜೆಸಿಬಿ ಡ್ರೈವರ್ ಸೇರಿ ಪೌರ ಕಾರ್ಮಿಕರಿಗೆ ಪಟ್ಟಣ ಪಂಚಾಯತಿ ಅಧಿಕಾರಿಗಳು ವೇತನ ನೀಡದೇ ಸತಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪೌರಕಾರ್ಮಿಕರ ಸಂಘಟನೆಗೆ ತಿಳಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಹೆಸರೇಳಲಿಚ್ಛಸದ ಪೌರಕಾರ್ಮಿಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ