ಗಾಂಧೀಜಿ ಹಾಗೂ ಶಾಸ್ತ್ರೀ ರವರ ಜಯಂತಿ ಆಚರಣೆ
ಮಸ್ಕಿ : ಇಂದು ಉ. ಸ. ಹಿ. ಪ್ರಾ. ಶಾಲೆ ಹಸಮಕಲ್ ಶಾಲೆಯಲ್ಲಿ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯದಲ್ಲಿ ಸರ್ವ ಧರ್ಮ ಸಮಾನತೆ ಸಾರುವ ಎಲ್ಲಾ ಮಕ್ಕಳಿಗೆ ರಘುಪತಿ ರಾಘವ ರಾಜರಾಮ್ ಗೀತೆಯನ್ನು ಹಾಡಿಸಲಾಯಿತು.
ನಂತರ ಯಲ್ಲಮ್ಮ ಶಿಕ್ಷಕಿಯರು ಗಾಂದಿ ಹಾಗೂ ಶಾಸ್ತ್ರಿಯವರ ಜೀವನ ಚರಿತ್ರೆ ಹಾಗೂ ಸ್ವಾತಂತ್ರ್ಯ ದ ಹಾದಿ ಕುರಿತು ಮಾತನಾಡಿದರು. ಹಾಗೂ ಅತಿಥಿ ಶಿಕ್ಷಕರಾದ ಶ್ರೀಕಾಂತ ರವರು ಮಾತನಾಡಿ ಲಾಲ್ ಬಹದ್ದೂರ್ ಶಾಸ್ತ್ರೀಯ ವರು ಪ್ರದಾನ ಮಂತ್ರಿಯಾಗಿ ಸರಳ ಜೀವನ ನಡೆಸಿದರು, ಹಾಗೂ ಪ್ರಧಾನ ಮಂತ್ರಿ ಯಾಗಿ ಅತ್ಯಂತ ದೊಡ್ಡ ಮಟ್ಟದ ಆಲೋಚನೆ ಮೂಲಕ ದೇಶವನ್ನು ಮುನ್ನಡೆಸಿದರು ಎಂದು ತಿಳಿಸಿದರು.
ನಂತರ ಶಿಕ್ಷಕಿಯರಾದ ಲೈಲಾ ಇವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಆದರ್ಶ ಹಾಗೂ ಮೌಲ್ಯಗಳನ್ನು ಎಲ್ಲಾರೂ ಅಳವಡಿಸಿಕೊಂಡು ಎಲ್ಲರೊಂದಿಗೆ ಆದರ್ಶವಾಗಿ ಬದುಕೋಣ ಎಂದು ತಿಳಿಸಿದರು.
ಈ ವೇಳೆಯಲ್ಲಿ ಮುಖ್ಯೋಪಾಧ್ಯಾಯರಾದ ಅಮರೇಶ ಗುಡದೂರ. ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಹುಲಗಪ್ಪ, ಅಗ್ನಿ ಶಾಮಕ ಸಿಬ್ಬಂದಿ ಛತ್ರಪ್ಪ, ದೇವರಾಜ ಹಾಗೂ ಮುದ್ದು ಮಕ್ಕಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ